Saturday, 24th March 2018  

Vijayavani

Breaking News

ಮನೆಗೆ ಬರಲಿ ಅಷ್ಟೈಶ್ವರ್ಯ

Wednesday, 02.08.2017, 3:00 AM       No Comments

ಹಿಳೆಯರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುವ ವರಮಹಾಲಕ್ಷ್ಮೀ ಹಬ್ಬದಲ್ಲಿ ಚಿನ್ನ ಖರೀದಿಗೂ ಅಷ್ಟೇ ಮಹತ್ವವಿರುತ್ತದೆ. ಮನೆಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಲಕ್ಷ್ಮೀಯ ಸಿಂಗಾರಕ್ಕೆ ಹಾಗೂ ಮಹಿಳೆಯರು ಧರಿಸಲು ಹೊಸ ಆಭರಣಗಳನ್ನು ಖರೀದಿಗೆ ಇಷ್ಟಪಡುತ್ತಾರೆ. ಹೀಗಾಗಿ ಮಳಿಗೆಗಳಲ್ಲಿಯೂ ಹಬ್ಬಕ್ಕಾಗಿ ಹೆಚ್ಚು ಸಂಗ್ರಹಗಳು ಮಾರಾಟಕ್ಕೆ ಲಭ್ಯವಿವೆ.

ಲಕ್ಷ್ಮೀ ಪೂಜೆ ನೆರವೇರಿಸಿ ಚಿನ್ನವನ್ನು ಖರೀದಿಸುವುದು ಉತ್ತಮ ಎಂಬ ನಂಬಿಕೆಯಿರುವುದರಿಂದ ಜನ ಚಿನ್ನಾಭರಣ ಖರೀದಿಗೆ ಉತ್ಸುಕರಾಗಿರುತ್ತಾರೆ. ಲೈಟ್​ವೇಟ್, ಆಂಟಿಕ್ ಆಭರಣಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದ್ದು, ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸಲೇಬೇಕು ಎನ್ನುವವರಿಗಾಗಿ ತರಹೇವಾರಿ ಚಿನ್ನ, ಬೆಳ್ಳಿ ನಾಣ್ಯಗಳು ಸಹ ಜ್ಯುವೆಲರಿ ಶಾಪ್​ಗಳಲ್ಲಿ ರಾರಾಜಿಸುತ್ತಿವೆ. ಜಿಎಸ್​ಟಿ ಜಾರಿ ನಂತರ ಚಿನ್ನದ ಮಾರಾಟ ಹೇಗೆ ಎಂಬ ಮಾರಾಟಗಾರರ ಚಿಂತೆಯನ್ನು ಸಹ ವರಮಹಾಲಕ್ಷ್ಮೀ ಹಬ್ಬ ದೂರಗೊಳಿಸಿದೆ. ಒಟ್ಟಾರೆ ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಮಾರಾಟದ ಭರಾಟೆ ಜೋರಾಗಿದೆ.

ಟ್ರೆಂಡ್ ಆಗಿದೆ ಲೈಟ್​ವೇಟ್: ಕಡಿಮೆ ತೂಕದ ಚಿನ್ನಾಭರಣಗಳು ಇತ್ತೀಚಿನ ಟ್ರೆಂಡ್​ಗಳಲ್ಲಿ ಒಂದಾಗಿದೆ. ಆಕರ್ಷಕ ವಿನ್ಯಾಸದ ಇಂಥ ಆಭರಣಗಳನ್ನು ಧರಿಸಲು ಮಹಿಳೆಯರು ಹೆಚ್ಚು ಇಷ್ಟಪಡುತ್ತಾರೆ. ಲೈಟ್​ವೇಟ್ ಆಭರಣ ಆಧುನಿಕ ವಿನ್ಯಾಸಗಳಲ್ಲಿ ಹೆಚ್ಚು ಲಭ್ಯವಿವೆ. ಇವುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುವ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಸಹ ಇಂತಹದೇ ಆಭರಣಗಳಿಗೆ ಆದ್ಯತೆ ನೀಡಿದ್ದಾರೆ.

ಬೆಳ್ಳಿ ಪೂಜೆಗಷ್ಟೇ ಅಲ್ಲ

ಪೂಜೆಗೆ ಸೀಮಿತವಾಗಿರುತ್ತಿದ್ದ ಬೆಳ್ಳಿ ವಸ್ತುಗಳು ಅಲಂಕಾರಿಕ ವಸ್ತುವಾಗಿಯೂ ಹೆಚ್ಚು ಬಳಕೆ ಆಗುತ್ತಿವೆ. ಇತ್ತೀಚೆಗೆ ಬೆಳ್ಳಿ ಬ್ರೇಸ್​ಲೇಟ್, ಕಡಗಗಳಿಗೆ ಯುವ ಪೀಳಿಗೆ ಹೆಚ್ಚು ಆಸಕ್ತಿ ತೋರುವುದರಿಂದಾಗಿ ಅದರಲ್ಲಿ ವಿಭಿನ್ನ ವಿನ್ಯಾಸಗಳನ್ನೂ ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ. ಆಮದು ಮಾಡಿಕೊಂಡ ‘ರ್ಸrಂಗ್’ ಸಿಲ್ವರ್​ನಿಂದ ಸಿದ್ಧಪಡಿಸಲಾದ ಆಭರಣಗಳು ಮಾರುಕಟ್ಟೆಯಲ್ಲಿವೆ. ಇನ್ನು ಚಿನ್ನಕ್ಕೆ ಇದ್ದಂತೆ ಬೆಳ್ಳಿಗೂ ಕೆಲವು ಮಳಿಗೆಗಳಲ್ಲಿ ಹಾಲ್​ವಾರ್ಕ್ ಲಭ್ಯವಿದೆ.

ಲಕ್ಷ್ಮೀಹಾರ, ಅಷ್ಟಲಕ್ಷ್ಮೀ ತಂಬಿಗೆ ಸೇರಿ ಇತರೆ ಆಭರಣಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ. ಜಿಎಸ್​ಟಿ ಜಾರಿಯಾದ ಮೊದಲ ವಾರ ಕೊಂಚ ಏರುಪೇರು ಕಂಡು ಬಂದಿತು. ಇದೀಗ ಸ್ಥಿರವಾಗಿದ್ದು, ಹಬ್ಬದ ವ್ಯಾಪಾರವೂ ತೃಪ್ತಿ ತಂದು ಕೊಟ್ಟಿದೆ.

| ಟಿ. ಎ. ಸೆಂಥಿಲ್ ಶ್ರೀಸಾಯಿ ಜ್ಯುವೆಲ್ ಪ್ಯಾಲೇಸ್ ಮಾಲೀಕ

Leave a Reply

Your email address will not be published. Required fields are marked *

Back To Top