Wednesday, 20th June 2018  

Vijayavani

ಐಟಿ ದೂರಿನಲ್ಲಿದೆ ಸ್ಫೋಟಕ ಮಾಹಿತಿ - ಎಐಸಿಸಿಗೆ ಕೋಟಿ ಕೋಟಿ ಕೊಟ್ಟಿದ್ರಾ ಡಿಕೆಶಿ - ಹವಾಲಾ ವ್ಯವಹಾರದಲ್ಲಿ ಡಿಕೆಶಿ ಹೆಸರು        ಉಪ್ಪು-ಹುಳಿ, ಖಾರ ಇಲ್ಲದ ಊಟ - ನಾನ್​ ವೆಜ್​​ನಿಂದ ದೂರ ದೂರ - ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ದು ಫುಲ್ ಸಸ್ಯಹಾರಿ        ಕಾಶ್ಮೀರದಲ್ಲಿ ಯೋಧನ ಕಿಡ್ನಾಪ್​​​, ಹತ್ಯೆ ಪ್ರಕರಣ - ಮೃತನ ಮನೆಗೆ ರಕ್ಷಣಾ ಸಚಿವ ಭೇಟಿ - ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಿರ್ಮಲಾ ಸೀತಾರಾಮನ್​​        ರೈತ ಎಂದರೆ, ರಕ್ತ, ಬೆವರು ಸುರಿಸುವ ಅನ್ನದಾತ - ದೇಶದ ಅಭಿವೃದ್ಧಿಗೆ ದೇಶದ ರೈತರ ಕೊಡುಗೆ ಆಪಾರ - ರೈತರ ಜತೆ ಪ್ರಧಾನಿ ಮೋದಿ ಸಂವಾದ        ಬಿಸಿಲು ಬರೋವರೆಗೂ ಬಯಲಲ್ಲೇ ಪಾಠ - ಕುಸಿಯುತ್ತಿರೋ ಶಾಲೆಯಲ್ಲೇ ವಿದ್ಯಾರ್ಥಿಗಳ ನರಳಾಟ - ದಾವಣಗೆರೆಯ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ        ಕಣಿವೆ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಹಿನ್ನೆಲೆ - ಮೈತ್ರಿ ಮುರಿದ ಬೆನ್ನಲ್ಲೇ ರಾಜ್ಯಪಾಲರ ಆಡಳಿತ ಜಾರಿ- ಮಧ್ಯಾಹ್ನ 2:30ಕ್ಕೆ ಅಧಿಕಾರಿಗಳ ಸಭೆ ಕರೆದ ಗವರ್ನರ್       
Breaking News

ಮಧ್ಯರಾತ್ರಿ ಹೊಳೆದ ಸೇಡಿನ ಕಥೆ

Friday, 12.01.2018, 3:02 AM       No Comments

ಸಿನಿಮಾ ಕಥೆ ಹೊಳೆಯಲು ಇಂಥದ್ದೇ ಜಾಗ ಆಗಬೇಕೆಂದೇನೂ ಇಲ್ಲ. ಗಂಟೆಗಟ್ಟಲೇ ಕೂತು ಆಲೋಚಿಸಿದರೂ ಹೊಳೆಯದ ಕಥೆ, ಎಲ್ಲಿಯೋ ಒಮ್ಮೆ ಥಟ್ಟನೆ ಹೊಳೆದು ಸಿನಿಮಾ ಆದ ನಿದರ್ಶನಗಳೂ ಇವೆ. ಅದೇ ರೀತಿ ರಾತ್ರಿ ನಿದ್ರೆ ಬರದಿದ್ದಾಗ ಹೊಳೆದ ಕಥೆಯೊಂದು ಈಗ ಚಿತ್ರ ಆಗುವ ಹಂತಕ್ಕೆ ಬಂದು ನಿಂತಿದೆ. ಹಾಗಿದ್ದರೆ ಯಾವುದು ಆ ಚಿತ್ರ? ‘ನಾಕು ಮುಖ’. ಸಿನಿಮಾ ಮಾಡಬೇಕೆಂಬ ಹಂಬಲದಲ್ಲಿದ್ದರು ಕುಶಾನ್ ಗೌಡ. ಆದರೆ ಕಥೆ ಹೊಳೆದಿರಲಿಲ್ಲ.

ಒಂದು ರಾತ್ರಿ ನಿದ್ರೆ ಬರದಿದ್ದಾಗ ಕಥೆಯ ಎಳೆಯೊಂದು ಹೊಳೆದಿದೆ, ಅದನ್ನೇ ಸೋದರ ಸಂಬಂಧಿ ದರ್ಶನ್ ರಾಘ್ ಬಳಿ ಹೇಳಿಕೊಂಡಾಗ, ‘ಈ ಚಿತ್ರಕ್ಕೆ ಬೇರೆ ನಿರ್ವಪಕರನ್ನು ಹುಡುಕುವುದು ಬೇಡ. ನಾನೇ ಬಂಡವಾಳ ಹಾಕುತ್ತೇನೆ’ ಎಂದಿದ್ದಾರೆ. ಇದು ‘ನಾಕು ಮುಖ’ ಚಿತ್ರ ಆರಂಭವಾದ ಬಗೆ ಎಂದು ಮಾಹಿತಿ ಬಿಚ್ಚಿಟ್ಟರು ನಿರ್ದೇಶಕರು. ‘ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಒಂದು ಹುಡುಗಿ ಮೇಲೆ ಅತ್ಯಾಚಾರವಾಗುತ್ತದೆ. ನಂತರ ಆಕೆ ಕೊಲೆಯಾಗುತ್ತಾಳೆ. ಹೀಗೆ ಹತ್ಯೆಯಾದವಳ ಗೆಳತಿ ದುಷ್ಟರ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಎಂಬುದು ಕಥೆಯ ತಿರುಳು. ಚಿತ್ರ ಥ್ರಿಲ್ ನೀಡುವುದರ ಜತೆಗೆ ಸಮಾಜಕ್ಕೆ ಒಂದು ಸಂದೇಶವನ್ನೂ ನೀಡಲಿದೆ.

ಇಲ್ಲಿ ಕಥೆಯೇ ಹೀರೋ’ ಎಂಬುದು ಕುಶಾನ್ ಮಾತು. ನಿರ್ದೇಶನದ ಜತೆಗೆ ಚಿತ್ರದಲ್ಲಿ ಪತ್ರಕರ್ತನ ಪಾತ್ರವನ್ನೂ ನಿಭಾಯಿಸಿದ್ದಾರೆ ಕುಶಾನ್. ಪೊಲೀಸ್ ಪಾತ್ರಕ್ಕೆ ನಿರ್ವಪಕ ದರ್ಶನ್ ರಾಘ್ ಬಣ್ಣ ಹಚ್ಚಿದ್ದಾರೆ. ‘ಸಿಂಹ ಹಾಕಿದ ಹೆಜ್ಜೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಅಮೃತಾ ಅಯ್ಯಂಗಾರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜ.18ರಿಂದ ಮಡಿಕೇರಿಯಲ್ಲಿ ಶೂಟಿಂಗ್ ಆರಂಭಿಸಲು ಚಿತ್ರ ತಂಡ ನಿರ್ಧರಿಸಿದೆ. ಚಿತ್ರದ ಕಥೆಗೆ ಮಡಿಕೇರಿ ಸರಿಯಾದ ಜಾಗ ಎಂಬ ಕಾರಣಕ್ಕೆ ಬಹುತೇಕ ಶೂಟಿಂಗ್ ಅಲ್ಲಿಯೇ ನಡೆಯಲಿದೆಯಂತೆ. ಒಟ್ಟು 21 ದಿನಗಳ ಕಾಲ ಶೂಟ್ ಮಾಡಲು ಪ್ಲಾ್ಯನ್ ಹಾಕಿಕೊಂಡಿದೆ ಚಿತ್ರತಂಡ. ಮೂರು ಹಾಡುಗಳಿರಲಿದ್ದು, ಶೀರ್ಷಿಕೆ ಗೀತೆಯನ್ನು ಇತ್ತೀಚೆಗೆ ನಿರ್ದೇಶಕ ಸುನಿ ಬಿಡುಗಡೆ ಮಾಡಿದ್ದಾರೆ.

Leave a Reply

Your email address will not be published. Required fields are marked *

Back To Top