Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಮಧ್ಯಪ್ರಾಚ್ಯದಲ್ಲಿ ಕದನ ಕಾರ್ಮೋಡ

Monday, 13.11.2017, 3:04 AM       No Comments

ದೊರೆ ಮೊಹಮ್ಮದ್ ಬಿನ್ ಸಲ್ಮಾನ್​ನ ಆಕ್ರಮಣಕಾರಿ ಆಡಳಿತದಿಂದ ಸದ್ದು ಮಾಡುತ್ತಿರುವ ಸೌದಿಯಲ್ಲಿ ಲೆಬನಾನ್ ಪ್ರಧಾನಿ ಸಾದ್ ಹ್ಯಾರಿರಿ ನಿಗೂಢವಾಗಿ ನಾಪತ್ತೆಯಾಗಿರುವುದು ಮಧ್ಯಪ್ರಾಚ್ಯದಲ್ಲಿ ಕಂಪನಕ್ಕೆ ಕಾರಣವಾಗಿದೆ. ಭ್ರಷ್ಟಾಚಾರ ವಿರೋಧಿ ಸಮರದ ನೆಪದಲ್ಲಿ ರಾಜಮನೆತನದ 11 ರಾಜಕುಮಾರರನ್ನು ಬಂಧಿಸಿ ಜೈಲಿಗಟ್ಟಿದ್ದ ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್​ನ ನಡೆಗೆ ವಿಶ್ವವೇ ಬ್ಬೆರಗಾಗಿರುವ ಸಂದರ್ಭದಲ್ಲೇ ಈ ಘಟನೆ ನಡೆದಿರುವುದು ಆ ಭಾಗದಲ್ಲಿ ಕದನ ಕಾಮೋಡ ಕವಿಯುವಂತೆ ಮಾಡಿದೆ.

ಏನಿದು ಪ್ರಕರಣ

ಕಳೆದ ವಾರ ವಿದೇಶ ಪ್ರವಾಸದ ಅಂಗವಾಗಿ ಸೌದಿ ಅರೇಬಿಯಾಗೆ ಭೇಟಿ ಕೊಟ್ಟಿದ್ದ ಲೆಬನಾನ್ ಪ್ರಧಾನಿ ಸಾದ್ ಹ್ಯಾರಿರಿ ಹಠಾತ್  ನಾಪತ್ತೆಯಾಗಿದ್ದಾರೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಸೌದಿ ರಾಜಧಾನಿ ರಿಯಾದ್​ನಿಂದ ವಿಡಿಯೋ ಸಂದೇಶ ಕಳುಹಿಸಿದ ಬಳಿಕ ಅವರ ಸುಳಿವು ಸಿಕ್ಕಿಲ್ಲ. ಹ್ಯಾರಿರಿ ಇಚ್ಛೆಗೆ ವಿರುದಟಛಿವಾಗಿ ಸೌದಿ ಅವರನ್ನು ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿದೆ ಎಂಬುದು ಲೆಬನಾನ್ ಆರೋಪವಾದರೆ, ಕೊಲೆ ಸಂಚಿನ ಶಂಕೆ ಮೇಲೆ ಅವರನ್ನು ಗೌಪ್ಯ ಸ್ಥಳದಲ್ಲಿ ರಕ್ಷಿಸಿಟ್ಟಿರುವುದಾಗಿ ಸೌದಿ ಹೇಳಿಕೊಂಡಿದೆ.

ಅಮೆರಿಕ ಎಚ್ಚರಿಕೆ 

ಈ ಬಿಕ್ಕಟ್ಟಿನ ನಡುವೆಯೇ ಮಧ್ಯಪ್ರವೇಶಿಸಿರುವ ಅಮೆರಿಕ, ಯಾವುದೇ ದೇಶದ ಅಭದ್ರತೆಗೆ ಕಾರಣವಾಗುವ ರಾಷ್ಟ್ರಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೂರು ರಾಷ್ಟ್ರಗಳಿಗೂ ಎಚ್ಚರಿಕೆ ನೀಡಿದೆ.

ಇಸ್ರೇಲ್ ನೆರವೇಕೆ?

ಲೆಬನಾನ್​ನ ಉತ್ತರದ ಗಡಿಯಲ್ಲಿ ಹಿಜ್ಬೋಲ್ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಆತಂಕ ಹೊಂದಿರುವ ಇಸ್ರೇಲ್, 2006ರಲ್ಲಿ ಆ ಆಂದೋಲನದ ವಿರುದಟಛಿ ಯುದಟಛಿ ಸಾರಿತ್ತು. ಹೀಗಾಗಿ ಲೆಬನಾನ್ ಹತ್ತಿಕ್ಕಲು ಇಸ್ರೇಲ್ ಬಳಸಿಕೊಳ್ಳುವುದು ಸೌದಿಯ ಪ್ಲ್ಯಾನ್​.

ಪ್ರಜೆಗಳಿಗೆ ಎಚ್ಚರಿಕೆ

ಲೆಬನಾನ್​ನಲ್ಲಿರುವ ಸೌದಿಯ ಉದ್ಯಮಿಗಳಿಗೆ ಕೂಡಲೇ ದೇಶಕ್ಕೆ ಹಿಂದಿರುಗುವಂತೆ ಸೌದಿ ದೊರೆ ಸೂಚನೆ ನೀಡಿದ್ದಾರೆ.

ಕಾರಣವೇನು

ಇತ್ತೀಚೆಗಷ್ಟೇ ಯೆಮನ್‌ನಿಂದ ಕ್ಷಿಪಣಿಯೊಂದು ಹಾರಿಬಂದಿದ್ದನ್ನೇ ನೆಪವಾಗಿಸಿಕೊಂಡ ಸೌದಿ ಇಂದು ಇರಾನ್‌, ಲೆಬನಾನ್‌ ಸಾರಿದ ಯುದ್ಧ ಎಂದು ಪರಿಗಣಿಸಿ ಆ ರಾಷ್ಟ್ರಗಳ ಮೇಲೆ ದಾಳಿ ನಡೆಸುವಂತೆ ಇಸ್ರೇಲನ್ನು ಎತ್ತಿಕಟ್ಟಿತ್ತು. ಪ್ರವಾಸಕ್ಕಾಗಿ ಆಗಮಿಸಿದ ಹ್ಯಾರಿರಿ ಅವ್ರನ್ನು ಅಪಹರಿಸಿದ ಬಳಿಕ ಲೆಬನಾನ್‌ ಮೇಲೆ ದಾಳಿ ನಡೆಸಲು ಇಸ್ರೇಲ್‌ಗೆ ಸೌದಿ ಸೂಚನೆ ನೀಡಿದೆ ಎಂಬುದು ಲೆಬನಾನ್‌ನ ಮೈತ್ರಿ ಸರ್ಕಾರದ ಅಂಗಪಕ್ಷ ಹಿಜ್ಬೋಲ್‌ ಮೂವ್‌ಮೆಂಟ್‌ ಆರೋಪ.

ಮಧ್ಯಪ್ರಾಚ್ಯದಲ್ಲಿ ಪ್ರಾಬಲ್ಯ ಸಮರ

ಬೈರುತ್: ಪ್ರಧಾನಿ ಸಾದ್ ಹ್ಯಾರಿರಿ ಸೌದಿ ಅರೇಬಿಯಾದಿಂದ ಯಾಕೆ ಸ್ವದೇಶಕ್ಕೆ ಹಿಂತಿರುಗಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಲೆಬನಾನ್ ಅಧ್ಯಕ್ಷ ಮೈಕೆಲ್ ಔನ್ ಸೌದಿ ಅರೇಬಿಯಾ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ಲೆಬನಾನ್​ನಲ್ಲಿರುವ ಇರಾನ್ ಬೆಂಬಲಿತ ರಾಜಕೀಯ ಪಕ್ಷ ಹಿಜ್ಬೋಲ್ ನಾಯಕರು, ಸೌದಿ ಅರೇಬಿಯಾವೇ ಸಾದ್ ಹ್ಯಾರಿರಿಯನ್ನು ಅಪಹರಿಸಿ, ದಿಗ್ಬಂಧನದಲ್ಲಿರಿಸಿದೆ ಎಂದು ಆರೋಪಿಸಿದ್ದಾರೆ. ಸೌದಿ ಅರೇಬಿಯಾ ಮತ್ತು ಇರಾನ್ ನಡುವಿನ ಪ್ರಾಬಲ್ಯ ಸಮರಕ್ಕೆ ಈ ವಿದ್ಯಮಾನ ವೇದಿಕೆ ಒದಗಿಸಿದಂತಾಗಿದೆ. ಅಲ್ಲದೆ, ಮಧ್ಯಪ್ರಾಚ್ಯದಲ್ಲಿ ಸಮರ ಭೀತಿಯನ್ನು ಸೃಷ್ಟಿಸಿದೆ.

ಲೆಬನಾನ್ ಪ್ರಧಾನಮಂತ್ರಿ ಸಾದ್ ಹ್ಯಾರಿರಿ ಕಳೆದ ವಾರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದವರು, ಮಾರನೇ ದಿನ ಅಲ್ಲಿಂದಲೇ ವಿಡಿಯೋ ಮೂಲಕ ರಾಜೀನಾಮೆ ಘೋಷಿಸಿದಾಗ ಮಧ್ಯಪ್ರಾಚ್ಯ ಅಚ್ಚರಿಗೊಳಗಾಗಿತ್ತು. ಇದರ ಬೆನ್ನಲ್ಲೇ ಸೌದಿಯ ನಾಲ್ವರು ಸಚಿವರು ಸೇರಿ 11 ರಾಜಕುಮಾರರನ್ನು ಭ್ರಷ್ಟಾಚಾರದ ಆರೋಪದಲ್ಲಿ ಬಂಧಿಸಲ್ಪಟ್ಟಾಗ ಸೌದಿ ಅರೇಬಿಯಾದಲ್ಲಿ ಏನಾಗುತ್ತಿದೆ ಎಂದು ಅರಿಯದಂತಹ ಪರಿಸ್ಥಿತಿ ನಿರ್ವಣವಾಗಿದ್ದು, ಉದ್ವಿಗ್ನ ಸ್ಥಿತಿ ಇದೆ.

ಲೆಬನಾನ್ ಪ್ರಧಾನಿ ಸಾದ್ ಹ್ಯಾರಿರಿ ಕಳೆದ ವಾರ ದಿಢೀರ್ ವಿದೇಶ ಪ್ರವಾಸ ಕೈಗೊಂಡಾಗ, ರಾಜಕೀಯ ಪೋಷಕ ರಾಷ್ಟ್ರ ಸೌದಿ ಅರೇಬಿಯಾಕ್ಕೆ ಸಹಜ ಭೇಟಿ ನೀಡಿರಬೇಕು ಎಂದೇ ಭಾವಿಸಲಾಗಿತ್ತು. ಆದರೆ, ಅಲ್ಲಿಂದಲೇ ಹ್ಯಾರಿರಿ ರಾಜೀನಾಮೆ ಘೋಷಿಸಿದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಯಾಕೆ ಹೀಗೆ?: ಶಿಯಾ-ಸುನ್ನಿ ಬಿಕ್ಕಟ್ಟು ಕೂಡ ಇರಾನ್ ಮತ್ತು ಸೌದಿ ನಡುವೆ ಇದೆ. ಇಸ್ಲಾಮಿಕ್ ಜಗತ್ತಿನ ನಾಯಕತ್ವಕ್ಕಾಗಿ ಈ ರಾಷ್ಟ್ರಗಳ ನಡುವೆ ಪೈಪೋಟಿ ಎದ್ದಿದೆ. ಮುಸ್ಲಿಮರ ಶ್ರದ್ಧಾ ಕೇಂದ್ರಗಳಾದ ಮೆಕ್ಕಾ ಮತ್ತು ಮದೀನಾ ಸೌದಿ ಅಧೀನದಲ್ಲಿದೆ. 1979ರ ಇಸ್ಲಾಮಿಕ್ ಕ್ರಾಂತಿಯ ರೂವಾರಿ ಎಂಬ ಕೀರ್ತಿ ಇರಾನ್ ಬೆನ್ನಿಗಿದೆ. ಇಂತಹ ಹಿನ್ನೆಲೆಯೊಂದಿಗೆ ಹೇಳುವುದಾದರೆ, ಇಸ್ರೇಲ್ ಮತ್ತು ಲೆಬನಾನ್ ಮೇಲೆ ಇರಾನ್ ಪ್ರಾಬಲ್ಯ ಸೌದಿ ಅರೇಬಿಯಾಕ್ಕೆ ಸಹಿಸಲಾಗುತ್ತಿಲ್ಲ. ಅಲ್ಲದೆ, ಸಿರಿಯಾ, ಇರಾಕ್ ಮೇಲೆ ಅದರ ಪ್ರಭಾವವೂ ಸೌದಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್ ಪ್ರಾಬಲ್ಯ ಹೆಚ್ಚಿಸುತ್ತಿದೆ ಎಂಬ ಭಾವನೆ ಸೌದಿಯಲ್ಲಿ ಮನೆಮಾಡಿದೆ. ಹೀಗಾಗಿಯೇ ಸೌದಿಯ ಹೊಸ ಯುವರಾಜ ಮೊಹಮ್ಮದ್ ಬಿನ್ ಸುಲ್ತಾನ್ ಇರಾನ್ ಪರ ಕಠಿಣ ನಿಲುವು ತಾಳಿದ್ದಾರೆ.

ಅಮೆರಿಕ, ರಷ್ಯಾಗಳ ಪಾತ್ರ: ಈ ಹಿಂದೆ ಬರಾಕ್ ಒಬಾಮ ಅಮೆರಿಕ ಅಧ್ಯಕ್ಷ ರಾಗಿದ್ದಾಗ ಇರಾನ್ ಜತೆಗೆ ಉತ್ತಮ ನೆರೆಹೊರೆ ಸಂಬಂಧ ಇರಿಸುವಂತೆ ಸಲಹೆ ನೀಡಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ಅವರ ಪಶ್ಚಿಮ ಏಷ್ಯಾ ಕಾರ್ಯಸೂಚಿ ಪ್ರಕಾರ ಇರಾನ್ ವಿಚಾರದಲ್ಲಿ ದಿಟ್ಟ ಕ್ರಮಕ್ಕೆ ಒತ್ತಡ ಹೇರಿದ್ದಾರೆ. ಇದಕ್ಕೆ ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸುಲ್ತಾನ್ ಕೂಡ ಒಪ್ಪಿಕೊಂಡಂತೆ ಭಾಸವಾಗುತ್ತಿದೆ. ಇನ್ನೊಂದೆಡೆ, ಸಿರಿಯಾದಲ್ಲಿ ಸೌದಿ ಹಾಗೂ ಅಮೆರಿಕದ ಪ್ರಾಬಲ್ಯ ಕುಗ್ಗಿಸಲು ಇರಾನ್ ರಷ್ಯಾವನ್ನು ನೆಚ್ಚಿಕೊಂಡಿದೆ ಎಂಬುದು ರಾಜತಾಂತ್ರಿಕ ತಜ್ಞರ ವಿಶ್ಲೇಷಣೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top