Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ಮದುವೆಯಾಗಿ 2ನೇ ದಿನಕ್ಕೆ ದೂರು

Sunday, 09.07.2017, 3:00 AM       No Comments

ಚಿಂತಾಮಣಿ: ವಿಚ್ಛೇದಿತ ಮಹಿಳೆಯನ್ನು ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ವ್ಯಕ್ತಿ, ಆಕೆ ಮತ್ತು ಆಕೆಯ ಮಾಜಿ ಪತಿಯ ವಿರುದ್ಧ ಚಿಂತಾಮಣಿ ಠಾಣೆಯಲ್ಲಿ ಜೀವ ಬೆದರಿಕೆ ದೂರು ದಾಖಲಿಸಿದ್ದಾನೆ. ಪಾಪತಿಮ್ಮನಹಳ್ಳಿಯ ಮಂಜುನಾಥ್ ದೂರು ನೀಡಿದವ. ಪಟ್ಟಣದ ಅಶ್ವಿನಿ ಬಡಾವಣೆ ನಿವಾಸಿ, ವಕೀಲೆ ಹಾಗೂ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಎಸ್.ರಚನಾ ಜು.5 ರಂದು ತನ್ನದೇ ಮಾಲೀಕತ್ವದ ರಚನಾ ಕ್ರಿಯೇಟಿವ್ ಶಾಲಾ ಬಸ್ ಚಾಲಕ ಮಂಜುನಾಥ್​ನನ್ನು ಮೊದಲ ಗಂಡ ವಕೀಲ ಈಶ್ವರ್​ಗೌಡ ಸಮ್ಮುಖದಲ್ಲೇ ಮದುವೆಯಾಗಿದ್ದರು.

ಆದರೆ, ನನಗೆ ಇಷ್ಟವಿಲ್ಲದಿದ್ದರೂ ರಚನಾ ಮತ್ತು ಆಕೆ ಮೊದಲ ಗಂಡ ಈಶ್ವರ್​ಗೌಡ ಗೂಂಡಾಗಳನ್ನು ಬಿಟ್ಟು ಹೊಡೆಸಿ, ಕೊಲೆ ಮಾಡುವುದಾಗಿ ಹೆದರಿಸಿ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಅಲ್ಲದೆ, ಮನೆಯಲ್ಲಿ ಕೂಡಿಹಾಕಿ ಮಾಧ್ಯಮದವರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎರಡನೇ ಪತಿ ಮಂಜುನಾಥ್ ಕುಟುಂಬದವರೊಂದಿಗೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈಶ್ವರಗೌಡನೊಂದಿಗೆ ವಿಚ್ಛೇದನವಾದ ಬಳಿಕ ಮಂಜುನಾಥ್ ಹಾಗೂ ನನ್ನ ಸ್ಮೇಹ ಗಾಢವಾಗಿತ್ತು. ಅದು ಪ್ರೀತಿಗೆ ತಿರುಗಿ ಮೂರು ವರ್ಷದಿಂದ ನನ್ನನ್ನು ಪ್ರೀತಿಸಿರುವ ಮಂಜುನಾಥ್ ಈಗ ಮೋಸ ಮಾಡಿದ್ದಾನೆ ಎಂದು ಮಹಿಳೆ ಪ್ರತಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

Back To Top