Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಮತ್ತೊಮ್ಮೆ ಕುಚ್​ಕುಚ್

Thursday, 13.09.2018, 2:02 AM       No Comments

1998ರಲ್ಲಿ ತೆರೆಕಂಡ, ಕರಣ್ ಜೋಹರ್ ನಿರ್ದೇಶನದ ಚೊಚ್ಚಲ ಚಿತ್ರ ‘ಕುಚ್ ಕುಚ್ ಹೋತಾ ಹೈ’ ಜನರ ಮೆಚ್ಚುಗೆ ಗಳಿಸುವುದರ ಜತೆಗೆ ಸಾಕಷ್ಟು ಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು. ಇಂದಿನ ಮಕ್ಕಳು ಕೂಡ ಆ ಸಿನಿಮಾದ ಹಾಡುಗಳಿಗೆ ಕುಣಿಯುತ್ತಾರೆ, ಸಂಭಾಷಣೆಗಳಿಗೆ ಡಬ್​ಸ್ಮ್ಯಾಶ್ ಮಾಡುತ್ತಾರೆ. ಶಾರುಖ್ ಖಾನ್, ಕಾಜೋಲ್, ರಾಣಿ ಮುಖರ್ಜಿಗೆ ದೊಡ್ಡ ಯಶಸ್ಸು ತಂದುಕೊಟ್ಟ ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಸೀಕ್ವೆಲ್ ಬಂದರೆ? ಸಿನಿಪ್ರಿಯರ ಪಾಲಿಗೆ ಹಬ್ಬವೇ ಸರಿ. ಆದರೆ ಭಾಗ 2ರಲ್ಲಿ ಯಾವೆಲ್ಲ ಕಲಾವಿದರು ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ ಎಂಬುದೇ ಕುತೂಹಲದ ಪ್ರಶ್ನೆ ಆಗಲಿದೆ. ಅದಕ್ಕೀಗ ಸ್ವತಃ ಕರಣ್ ಉತ್ತರ ನೀಡಿದ್ದಾರೆ.ಇತ್ತೀಚೆಗೆ ಕರಣ್ ನಿರೂಪಣೆಯ ರೇಡಿಯೋ ಶೋ ಒಂದರಲ್ಲಿ ಕೇಳುಗರೊಬ್ಬರು ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಸೀಕ್ವೆಲ್ ಬಗ್ಗೆ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಕರಣ್, ‘ಒಂದು ವೇಳೆ ಸೀಕ್ವೆಲ್ ಮಾಡುವುದಿದ್ದರೆ ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ಜಾನ್ವಿ ಕಪೂರ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ. 2012ರಲ್ಲಿ ‘ಸ್ಟೂಡೆಂಟ್ ಆಫ್ ದಿ ಇಯರ್’ ಮೂಲಕ ಆಲಿಯಾರನ್ನು, ಇತ್ತೀಚೆಗೆ ತೆರೆಕಂಡ ‘ಧಡಕ್’ ಚಿತ್ರದ ಮೂಲಕ ಜಾನ್ವಿ ಅವರನ್ನು ಬಾಲಿವುಡ್​ಗೆ ಪರಿಚಯಿಸಿದ್ದು ಇದೇ ಕರಣ್. ರಣಬೀರ್ ನಟನೆಯ ‘ಏ ದಿಲ್ ಹೈ ಮುಷ್ಕಿಲ್’ಗೆ ಕರಣ್ ನಿರ್ದೇಶನ ಮಾಡಿದ್ದರೆ, ‘ಯೇ ಜವಾನಿ ಹೈ ದಿವಾನಿ’ ಚಿತ್ರಕ್ಕೆ ಹಣ ಹೂಡಿದ್ದರು. ಹೀಗಾಗಿ ಈ ಎಲ್ಲ ನಟ- ನಟಿಯರ ಜತೆಗೆ ಕರಣ್​ಗೆ ಒಳ್ಳೆಯ ಒಡನಾಟವಿದೆ. ಶೀಘ್ರದಲ್ಲೇ ‘ಕುಚ್ ಕುಚ್ ಹೋತಾ ಹೈ 2’ ಕೆಲಸಗಳಿಗೆ ಚಾಲನೆ ನೀಡಿದರೂ ಅಚ್ಚರಿ ಇಲ್ಲ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top