Tuesday, 26th September 2017  

Vijayavani

1. ಗಡಿಯಲ್ಲಿ ಬಾಲ ಬಿಚ್ಚಿದ್ರೆ ಹುಷಾರ್​- ನಡೆಯಲಿದೆ ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​- ಪಾಕ್​ಗೆ ಬಿಪಿನ್​ ರಾವತ್​ ವಾರ್ನಿಂಗ್​ 2. ಮ್ಯಾನ್ಮಾರ್‌ನಲ್ಲಿ ಭುಗಿಲೆದ್ದ ಹಿಂಸಾಚಾರ- ಪ್ರತಿಕಾರಕ್ಕಿಳಿದ ರೋಹಿಂಗ್ಯಾ ಮುಸ್ಲಿಂರು- 92 ಜನರ ಭೀಕರ ಕಗ್ಗೊಲೆ 3. ವಿಶ್ವಕ್ಕೆ 3ನೇ ಮಹಾಯುದ್ಧದ ಭೀತಿ- ಕೋರಿಯಾ ದೃಷ್ಟಿಯಲ್ಲಿ ಅಮೆರಿಕಾವೇ ಆರೋಪಿ- ಸಮರಕ್ಕೆ ಸಿದ್ಧ ಎಂದ ಸರ್ವಾಧಿಕಾರಿ 4. ಗದಗ್​ನಲ್ಲಿ ಯಶಸ್ವಿಯಾದ ಸ್ವಚ್ಛ ಭಾರತ- ನರಗುಂದ ತಾಲೂಕು ಬಯಲು ಶೌಚಮುಕ್ತ- ಇಂದು ಉಪರಾಷ್ಟ್ರಪತಿಗಳಿಂದ ಅಧಿಕೃತ ಘೋಷಣೆ 5. ಮಳೆಗೆ ತತ್ತರಿಸಿದ ಬೆಣ್ಣೆ ದೋಸೆ ನಗರಿ- ಮಲೆನಾಡಲ್ಲಿ ಮನೆಗೆ ನುಗ್ಗಿದ ನೀರು- ಇತ್ತ ಕೋಲಾರದಲ್ಲಿ ನೂರಾರು ಎಕರೆ ಬೆಳೆ ನಾಶ
Breaking News :

ಮಣಿಪುರದಲ್ಲಿ ಬಹುಮತ ಸಾಬೀತು ಮಾಡಿದ ಬಿಜೆಪಿ

Tuesday, 21.03.2017, 7:40 AM       No Comments

ಇಂಫಾಲ: ಮಣಿಪುರದಲ್ಲಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನೇತೃತ್ವದ ಸರ್ಕಾರ ಸೋಮವಾರ ನಡೆದ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ 32 ಶಾಸಕರ ಬೆಂಬಲ ಪಡೆಯುವ ಮೂಲಕ ಜಯಗಳಿಸಿದೆ. ಈ ಮೂಲಕ ಗೋವಾ ಹಾಗೂ ಮಣಿಪುರ ಚುನಾವಣೆಯಲ್ಲಿ ಎರಡನೇ ದೊಡ್ಡ ಪಕ್ಷವಾಗಿದ್ದರೂ ರಾಜಕೀಯ ತಂತ್ರಗಾರಿಕೆಯಿಂದ ಅಧಿಕ್ಕಾರಕ್ಕೇರುವಲ್ಲಿ ಬಿಜೆಪಿ ಸಫಲವಾಗಿದೆ.

ಮಾ. 15ರಂದು ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ್ದ ಬೀರೆನ್ ಸಿಂಗ್ ಅವರಿಗೆ ಮಾ. 20ರಂದು ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲರು ಸೂಚಿಸಿದ್ದರು. ಧ್ವನಿ ಮತದಾನದಲ್ಲಿ ಬಿಜೆಪಿಯ 20 ಶಾಸಕರು, ನಾಗಾ ಪೀಪಲ್ಸ್ ಫ್ರಂಟ್(ಎನ್​ಪಿಎಫ್)ನ 4 ಶಾಸಕರು, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್​ಪಿಪಿ)ಯ 4 ಶಾಸಕರು, ಲೋಕಜನಶಕ್ತಿ, ಪಕ್ಷೇತರ ಶಾಸಕ, ಟಿಎಂಸಿ ಕಾಂಗ್ರೆಸ್​ನ ತಲಾ ಒಬ್ಬ ಶಾಸಕರು ಬಿಜೆಪಿಗೆ ಬೆಂಬಲ ನೀಡಿದರು. ಇದೇ ವೇಳೆ ಟಿಎಂಸಿ ಶಾಸಕ ಕೂಡ ಬಿರೇನ್ ಸಿಂಗ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. 60 ಸ್ಥಾನಗಳಿರುವ ಮಣಿಪುರದಲ್ಲಿ ಬಹುಮತ ಸಾಬೀತು ಮಾಡಲು 31 ಶಾಸಕರ ಬೆಂಬಲ ಅಗತ್ಯವಿತ್ತು. ವಿಧಾನಸಭೆಯಲ್ಲಿ ಧ್ವನಿ ಮತದಾನಕ್ಕೂ ಮುನ್ನ ಬಿಜೆಪಿ ಶಾಸಕ ಯುಮ್ನಮ್ ಖೆಮ್ಂದ್ ಅವರನ್ನು ವಿಧಾನಸಭೆಯ ಸ್ಪೀಕರ್ ಆಗಿ ಆರಿಸಲಾಯಿತು. -ಏಜೆನ್ಸೀಸ್

ಟಿಎಂಸಿ ಅಸಮಾಧಾನ

ಟಿಎಂಸಿ ಶಾಸಕ ಟಿ ರವೀಂದ್ರ ಅವರು ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಪಕ್ಷದ ವರಿಷ್ಠರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅವರು ಬಿರೇನ್ ಸಿಂಗ್​ಗೆ ಬೆಂಬಲ ನೀಡುವ ವಿಚಾರದ ಕುರಿತು ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ ಈ ಆರೋಪ ತಳ್ಳಿ ಹಾಕಿರುವ ರವೀಂದ್ರ ಅವರು, ‘ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿದ ನಂತರದಲ್ಲಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಒಂದೊಮ್ಮೆ ನಾನು ಪಕ್ಷದ ನಿಯಮ ಮೀರಿದ್ದರೆ ಪಕ್ಷದ ವರಿಷ್ಠರು ಈಗಾಗಲೇ ನನ್ನ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಪಕ್ಷದವರು ನನ್ನ ಪರವಾಗಿದ್ದಾರೆ’ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top