Saturday, 24th February 2018  

Vijayavani

ಮತ್ತೊಂದು ಸುತ್ತಿನ ರಣಕಹಳೆಗೆ ಕೈ ಸಿದ್ಧತೆ - ಇಂದಿನಿಂದ ಮೂರುದಿನ ರಾಹುಲ್ ರಾಜ್ಯ ಪ್ರವಾಸ - ಅಧ್ಯಕ್ಷರ ಆಗಮನಕ್ಕೆ ಭರ್ಜರಿ ತಯಾರಿ        ಮೈಸೂರಲ್ಲಿ ರಂಗೇರಿದ ಎಲೆಕ್ಷನ್ ಅಖಾಡ - ಸುನಿಲ್ ಬೋಸ್ ಜತೆಗಿರುವ ಜೆಡಿಎಸ್‌ ಅಭ್ಯರ್ಥಿ ಫೋಟೋ ವೈರಲ್ - ಆರೋಪ ತಳ್ಳಿ ಹಾಕಿದ ಅಶ್ವಿನ್ ಕುಮಾರ್‌        ಉದ್ಯೋಗ ಕೊಡಿಸುವುದಾಗಿ ನೇಪಾಳದಿಂದ ಕರೆಸಿದ - ಮದುವೆಯಾಗ್ತೀನಿ ಅಂತಾ ಅತ್ಯಾಚಾರವೆಸಗಿದ - ಕಾಮ ಪಿಶಾಚಿ ಹೋಟೆಲ್‌ ಕ್ಯಾಶಿಯರ್‌ ಎಸ್ಕೇಪ್‌        ಸುಪ್ರೀಂಕೋರ್ಟ್​​ ಆದೇಶಗಾಳಿಗೆ ತೂರಿ ಬಾರ್ ಓಪನ್ ​- ಎಂಜಲು ಕಾಸಿಗಾಗಿ ನಿಯಮ ಉಲ್ಲಂಘಿಸಿದ್ರಾ ಅಧಿಕಾರಿಗಳು -ದಿಗ್ವಿಜಯ ನ್ಯೂಸ್ ರಿಯಾಲಿಟಿ ಚೆಕ್‌ನಲ್ಲಿ ಅಸಲಿ ಮುಖ ಬಯಲು        ಬೋಲ್‌ವೆರ್‌ ಕೊರೆಸಿದ್ದು ಒಂದ್ಕಡೆ - ನೀರು ಚಿಮ್ಮಿದ್ದು ಇನ್ನೊಂದ್ಕಡೆ - ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಆಕಾಶಕ್ಕೆ ಉಕ್ಕಿದ ಗಂಗೆ       
Breaking News

ಮಗಳ ಒಡಲಲ್ಲಿ ಅಮ್ಮನ ಗರ್ಭಾಶಯ ಕಸಿ

Sunday, 23.04.2017, 3:00 AM       No Comments

ಮುಂಬೈ: ಭಾರತೀಯ ವೈದ್ಯಕೀಯ ಲೋಕ ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಸಜ್ಜುಗೊಂಡಿದೆ. ತಾಯಿಯ ಗರ್ಭಾಶಯವನ್ನು ಮಗಳಿಗೆ ಕಸಿ ಮಾಡುವ ಸಂಕೀರ್ಣ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಪುಣೆಯ ಖಾಸಗಿ ಆಸ್ಪತ್ರೆಯೊಂದು ಮುಂದಾಗಿದೆ. ಇದು ಭಾರತದಲ್ಲಿ ನಡೆಯುತ್ತಿರುವ ಪ್ರಥಮ ಗರ್ಭಾಶಯ ಕಸಿಯಾಗಿದ್ದು, ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯ ಶಸ್ತ್ರಚಿಕಿತ್ಸೆಗೆ ಹಸಿರು ನಿಶಾನೆ ತೋರಿದೆ. ಮೇ 13 ಹಾಗೂ 14ರಂದು ಮೂವರು ಮಹಿಳೆಯರ ಗರ್ಭಾಶಯವನ್ನು ಅವರ ಹೆಣ್ಣು ಮಕ್ಕಳಿಗೆ ಕಸಿ ಮಾಡಲಾಗುತ್ತದೆ. ಸಂತಾನ ಹೀನತೆಯಿಂದ ಬಳಲುತ್ತಿರುವ ಇವರು ಚಿಕಿತ್ಸೆ ಬಳಿಕ ಗರ್ಭ ಧರಿಸಬಹುದಾಗಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಲಿರುವ ವೈದ್ಯ ಶೈಲೇಶ್ ಪುಂಟಬೇಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲೂ ನಡೆದಿದೆ ತಯಾರಿ: ಬೆಂಗಳೂರಿನ ಮಿಲನ್ ಅಂತಾರಾಷ್ಟ್ರೀಯ ಸಂತಾನೋತ್ಪತ್ತಿ ಸಂಶೋಧನಾ ಹಾಗೂ ತರಬೇತಿ ಸಂಸ್ಥೆ ಕೂಡ ಎರಡು ಗರ್ಭಕೋಶ ಕಸಿ ಶಸ್ತ್ರಚಿಕಿತ್ಸೆಗೆ ಭಾರತೀಯ ವೈದ್ಯಕೀಯ ಪರಿಷತ್ತಿನಿಂದ ಅನುಮತಿ ಪಡೆದಿದೆ. ಈ ಕುರಿತು ಸಮಗ್ರ ಸಿದ್ಧತೆ ನಡೆಯುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ತೀರಾ ವಿರಳ: ವಿಶ್ವದಾದ್ಯಂತ ಈ ವರೆಗೆ ಇಂಥ 25 ಶಸ್ತ್ರಚಿಕಿತ್ಸೆಗಳು ಮಾತ್ರ ನಡೆದಿವೆ. ಕಸಿ ಬಳಿಕ 10 ಮಹಿಳೆಯರು ಗರ್ಭಧರಿಸಿದ್ದಾರೆ. 2014ರಲ್ಲಿ ಸ್ವೀಡನ್​ನಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಎಲ್ಲಿ?: ಪುಣೆಯ ಗ್ಯಾಲಕ್ಸಿ ಕೇರ್ ಲ್ಯಾಪರೋಸ್ಕೋಪಿ ಇನ್​ಸ್ಟಿಟ್ಯೂಟ್​ನಲ್ಲಿ(ಜಿಸಿಎಲ್​ಐ)

ಮಹತ್ವವೇನು?: ಒಂದೇ ಬಾರಿಗೆ ಮೂರು ಮಹಿಳೆಯರಿಗೆ ಗರ್ಭಕೋಶ ಕಸಿ.

ಯಾವಾಗ?: ಮೇ 13, 14

ಪ್ರಕ್ರಿಯೆ ಹೇಗೆ?

ಚಿಕಿತ್ಸೆಗೊಳಗಾಗುವ ಮಹಿಳೆಯರು ಕೃತಕ ಗರ್ಭಧಾರಣೆ ಚಿಕಿತ್ಸೆ ಮೂಲಕ ಅಂಡೋತ್ಪತ್ತಿ ಉತ್ತೇಜನ ಚಿಕಿತ್ಸೆಗೆ ಒಳಗಾಗಬೇಕು. ಇದರಿಂದ ಉಂಟಾಗುವ ಭ್ರೂಣ ಸಂಗ್ರಹಿಸಿಟ್ಟು ಗರ್ಭಕೋಶ ಕಸಿ ಯಶಸ್ವಿಯಾದ ನಂತರ ಅಳವಡಿಸಲಾಗುವುದು. ಹೊಸ ಗರ್ಭಕೋಶವನ್ನು ದೇಹ ನಿರಾಕರಿಸುವ ಸಾಧ್ಯತೆಗಳಿದ್ದು, ಅದನ್ನು ತಡೆಯಲು ನಿರೋಧಕ ಶಮನಕಾರಿ (ಇಮ್ಯುನೋಸ್ಯುಪ್ರೆಸಂಟ್) ಚಿಕಿತ್ಸೆಯನ್ನು ಮೊದಲೇ ಆರಂಭಿಸಿರಬೇಕು. ದಾನಿಗಳು ಕೂಡ ಹೈಸ್ಟೆರೆಕ್ಟೋಮಿ ಚಿಕಿತ್ಸೆಗೆ ಸಿದ್ಧರಾಗಬೇಕು.

ಶವದ ಮೇಲೆ ಪ್ರಯೋಗ: ಡಾ. ಶೈಲೇಶ್ ಹಾಗೂ ತಂಡ ಜರ್ಮನಿ ಹಾಗೂ ಅಮೆರಿಕದಲ್ಲಿ ಮಾನವ ಶವಗಳ ಮೇಲೆ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದೆ. ನಂತರ ಸ್ವೀಡನ್ ವೈದ್ಯರ ತಂಡವನ್ನು ಭೇಟಿ ಮಾಡಿ, ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಗಳನ್ನು ಅಧ್ಯಯನ ನಡೆಸಿದ್ದಾರೆ.

Leave a Reply

Your email address will not be published. Required fields are marked *

Back To Top