Friday, 22nd September 2017  

Vijayavani

1. ಸಮಾವೇಶಕ್ಕೆ ಲಕ್ಷ ಮಂದಿ ಸೇರಿಸೋ ಟಾರ್ಗೆಟ್​- ಬರದಿದ್ರೆ ಅಕ್ಕಿ ಕಟ್​​, ಬ್ಯಾಂಕ್​ ಸಬ್ಸಿಡಿಗೆ ಬ್ರೇಕ್​- ಫಲಾನುಭವಿಗಳಿಗೆ ಕೈ ಕಾರ್ಯಕರ್ತರ ಬೆದರಿಕೆ 2. ಕೊಟ್ಟ ಮಾತು ಮರೆತ ಸಿಎಂ ಸಿದ್ದರಾಮಯ್ಯ- 8 ತಿಂಗಳಾದ್ರೂ ಕುಟುಂಬಸ್ಥರಿಗೆ ಸಿಗದ ಪರಿಹಾರ- ಇದೇನಾ ನುಡಿದಂತೆ ನಡೆಯುವ ಸರ್ಕಾರ..? 3. ಎಸ್​​.ಎಂ.ಕೃಷ್ಣ ಅಳಿಯನ ಮನೆ ಕಚೇರಿ ತಲಾಷ್​​- ಎರಡನೇ ದಿನವೂ ಮುಂದುವರಿದ ಪರಿಶೀಲನೆ- ಹುಡುಕಿದಷ್ಟು ಪತ್ತೆಯಾಗ್ತಿದೆ ದಾಖಲೆ ಪತ್ರ 4. ಗದಗದಲ್ಲಿ ಹನಿ ನೀರಿಗಾಗಿ ಹೋರಾಟ- 6 ಸಾವಿರ ಜನಕ್ಕೆ ಟ್ಯಾಂಕರ್​ ನೀರೇ ಆಧಾರ- ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ 5. ಮೈಸೂರು ದಸರಾಗೆ ಜನವೋ ಜನ- ಅತ್ತೆ, ಸೊಸೆ ಜೊತೆ ಜೊತೆ ಮಾಡಿದ್ರು ನಳಪಾಕ- ಕೆಲವೇ ಕ್ಷಣಗಳಲ್ಲಿ ಯುವ ದಸರಾಗೆ ಚಾಲನೆ
Breaking News :

ಮಕ್ಕಳ ಚಿತ್ರಕ್ಕೆ ಕಂಗನಾ ನಿರ್ದೇಶಕಿ

Monday, 11.09.2017, 3:00 AM       No Comments

ಟನೆಯಲ್ಲಿ ಮೂರು ಬಾರಿ ರಾಷ್ಟ್ರಪ್ರಶಸ್ತಿ ಮುಡಿಗೇರಿದ್ದಾಗಿದೆ. ಇನ್ಮುಂದೆ ಬೇರೇನಾದರೂ ಹೊಸ ಸಾಹಸ ಮಾಡಬೇಕೆಂಬ ತವಕ ನಟಿ ಕಂಗನಾ ರಣೌತ್ ಅವರದು. ಹೀಗಾಗಿ ನಿರ್ದೇಶನದತ್ತ ಗಮನಹರಿಸುವುದಾಗಿ ಅವರು ಕೆಲವು ವರ್ಷಗಳ ಹಿಂದೆಯೇ ಪ್ರಸ್ತಾಪಿಸಿದ್ದರು. ಈಗ ಅದಕ್ಕೆ ಕಾಲ ಕೂಡಿಬಂದಿದ್ದು, ಶೀಘ್ರದಲ್ಲೇ ಡೈರೆಕ್ಟರ್ಸ್ ಹ್ಯಾಟ್ ಧರಿಸಲಿದ್ದಾರಂತೆ ಕಂಗನಾ.

ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ವಿಭಾಗದಲ್ಲಿ ಕಂಗನಾಗೆ ಎಷ್ಟು ಆಸಕ್ತಿ ಇದೆ ಎಂದರೆ, ಅದರಿಂದಾಗಿ ಇತ್ತೀಚೆಗೆ ವಿವಾದಗಳೂ ಹುಟ್ಟಿಕೊಂಡಿದ್ದವು. ‘ಮಣಿಕರ್ಣಿಕಾ’ ಚಿತ್ರದಲ್ಲಿ ಸಿಕ್ಕಾಪಟ್ಟೆ ಮೂಗು ತೂರಿಸಿದ್ದಕ್ಕಾಗಿ ನಿರ್ದೇಶಕರೇ ಬದಲಾಗಬೇಕಾದ ಸ್ಥಿತಿ ನಿರ್ವಣವಾಯಿತು. ‘ಸಿಮ್ರನ್’ ಚಿತ್ರತಂಡದಲ್ಲಿದ್ದ ಬರಹಗಾರ ಅಪೂರ್ವ ಅರ್ಸಾನಿ ಜತೆಗೂ ಕಂಗನಾ ಕಿರಿಕ್ ಮಾಡಿಕೊಂಡಿದ್ದರು. ಈಗ ತಾವೇ ಒಂದು ಚಿತ್ರವನ್ನು ಪೂರ್ಣಪ್ರಮಾಣದಲ್ಲಿ ನಿರ್ದೇಶಿಸಲು ಮುಂದಾಗಿದ್ದಾರೆ.

ಕಂಗನಾ ಆಕ್ಷನ್-ಕಟ್ ಹೇಳಲಿರುವ ಚೊಚ್ಚಲ ಚಿತ್ರಕ್ಕೆ ‘ತೇಜು’ ಎಂದು ಶೀರ್ಷಿಕೆ ಇಡಲಾಗಿದೆ. ವಿಶೇಷವೆಂದರೆ ಇದು ಮಕ್ಕಳ ಚಿತ್ರವಾಗಿರಲಿದೆಯಂತೆ. ಪ್ರಸ್ತುತ ‘ಸಿಮ್ರನ್’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಕಂಗನಾ ಬಿಜಿಯಾಗಿದ್ದಾರೆ. ಸೆ. 15ರಂದು ಚಿತ್ರ ತೆರೆಕಾಣಲಿದೆ. ಆ ಬಳಿಕ ‘ಮಣಿಕರ್ಣಿಕಾ’ ಶೂಟಿಂಗ್​ನಲ್ಲಿ ತೊಡಗಿಕೊಳ್ಳಲಿದ್ದಾರೆ. ಅದು ರಿಲೀಸ್ ಆದ ನಂತರವಷ್ಟೇ ‘ತೇಜು’ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ. ‘ಚಿತ್ರಕಥೆ ಕೆಲಸಗಳು ಜಾರಿಯಲ್ಲಿವೆ. ಮಕ್ಕಳ ಜತೆ ಕೆಲಸ ಮಾಡಬೇಕಿರುವುದರಿಂದ ಅದು ನಿಜಕ್ಕೂ ಸವಾಲು ಎನಿಸುತ್ತದೆ. ಎಲ್ಲ ವರ್ಗದ ಪ್ರೇಕ್ಷಕರನ್ನೂ ತಲುಪಬೇಕು ಎಂಬ ಕಾರಣಕ್ಕಾಗಿ ಮಕ್ಕಳ ಚಿತ್ರವನ್ನು ಆಯ್ದುಕೊಂಡಿದ್ದೇನೆ’ ಎಂದಿದ್ದಾರೆ ಕಂಗನಾ. ಒಂದೆಡೆ ನಟನೆಯಲ್ಲೂ ಮಿಂಚುತ್ತ, ಇನ್ನೊಂದೆಡೆ ವಿವಾದಗಳನ್ನೂ ಎದುರಿಸುತ್ತ, ಜತೆಗೆ ನಿರ್ದೇಶನದಲ್ಲೂ ಆಸಕ್ತಿ ತೋರಿಸುತ್ತಿರುವ ಅವರ ಬಗ್ಗೆ ಇಡೀ ಬಾಲಿವುಡ್ ಅಚ್ಚರಿಯಿಂದ ನೋಡುವಂತಾಗಿದೆ. -ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top