Monday, 25th September 2017  

Vijayavani

1. ರಾಜ್ಯದೆಲ್ಲೆಡೆ ವರುಣನ ಆರ್ಭಟ- ಬೆಂಗಳೂರು, ದಾವಣೆಗೆರೆಯಲ್ಲಿ ಮಳೆ ಅವಾಂತರ- ಕೆರೆಗಳೆಲ್ಲ ಭರ್ತಿ, ಮಂಡ್ಯದಲ್ಲಿ ಜಮೀನಿಗೆ ನುಗ್ಗಿತು ನೀರು 2. ಕಲ್ಯಾಣಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು ಪ್ರಕರಣ- ಬೆಂಗಳೂರಿನ ನ್ಯಾಷನಲ್​ ಕಾಲೇಜು ವಿರುದ್ಧ ನಿರ್ಲಕ್ಷ್ಯದ ಆರೋಪ- ಸಿಬ್ಬಂದಿ ವಿರುದ್ಧ ಪೋಷಕರ ಆಕ್ರೋಶ 3. ಇಂದು ದೀನ್​ ದಯಾಳ್​​ ಜನುಮದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 4. ಜೆಮ್​ಶೆಡ್​ಪುರದಲ್ಲಿ ಭೀಕರ ಅಗ್ನಿ ಅವಘಡ- 8 ಜನ ಸಜೀವ ದಹನ, 25 ಮಂದಿಗೆ ಗಾಯ- ಪಟಾಕಿ ಕಾರ್ಖಾನೆಗೆ ಧಗಧಗಿಸಿದ ಕಿಡಿ 5. ಹುಟ್ಟಿದ ಆರೇ ನಿಮಿಷದಲ್ಲಿ ಮಗುವಿಗೆ ಆಧಾರ್- ಜನನ ಪ್ರಮಾಣಪತ್ರಕ್ಕೆ ಲಿಂಕ್​ ಮಾಡಿಸಿದ ಪೋಷಕರು- ಒಸ್ಮಾನಾಬಾದ್​ ಆಸ್ಪತ್ರೆಯಲ್ಲಿ ಭಾರಿ ಕಮಾಲ್​
Breaking News :

ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ

Thursday, 10.08.2017, 3:00 AM       No Comments

ರಾಯಚೂರು: ಒಂದೆಡೆ ರಾಯರ ನಾಮ ಸ್ಮರಣೆ, ಜಯಘೊಷಗಳ ನಿನಾದ. ಮತ್ತೊಂದೆಡೆ ಭಕ್ತಿಯ ಪರಾಕಾಷ್ಠೆಯಿಂದ ಮೈಮರೆತು ರಾಯರ ಸೇವೆಯಲ್ಲಿ ತೊಡಗಿರುವ ಸಹಸ್ರಾರು ಭಕ್ತರ ದಂಡು. ಇದು ಶ್ರೀ ಗುರುರಾಯರ 346ನೇ ಆರಾಧನೆ ಮಹೋತ್ಸವದ ಪೂರ್ವಾರಾಧನೆ ದಿನವಾದ ಬುಧವಾರ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಕಂಡು ಬಂದ ಅಪರೂಪದ ದೃಶ್ಯಗಳು.

ಶ್ರೀ ಗುರುರಾಯರ ಸಶರೀರರಾಗಿ ಬೃಂದಾವನಸ್ಥರಾಗಿರುವ ದಿನವಾದ ಮಧ್ಯಾರಾಧನೆ ದಿನ ಶ್ರೀಮಠದಲ್ಲಿ ಸಹಸ್ರಾರು ಭಕ್ತರು ಸಮಾಗಮಗೊಂಡಿದ್ದರು. ಶ್ರೀಮಠದ ಪ್ರಾಕಾರದಲ್ಲಿ ಚಂಡ ಮದ್ದಲೆಗಳ ಸಂಗೀತ, ಭಜನಾ ಮಂಡಳಿಗಳಿಂದ ರಾಯರ ಗುಣಗಾನ, ಬ್ಯಾಂಡ್ ನೃತ್ಯಕ್ಕೆ ಹೆಜ್ಜೆ ಹಾಕಿದ ಯುವಕ- ಯುವತಿಯರು. ಇವಷ್ಟೇ ಅಲ್ಲದೇ ಉರುಳು ಸೇವೆ ಮಾಡುವ ಭಕ್ತರ ದಂಡೇ ಶ್ರೀಮಠದಲ್ಲಿ ಕಂಡು ಬಂತು.

ಬೆಳಗ್ಗೆ ರಾಯರ ಮೂಲ ಬೃಂದಾವನಕ್ಕೆ ನೈರ್ಮಲ್ಯ ವಿಸರ್ಜನೆ ನಂತರ ಪಂಚಾಮೃತ ಅಭಿಷೇಕ, ನಂತರ ಶ್ರೀಮಠ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಹಾ ಮಂಗಳಾರತಿ ನೆರವೇರಿಸಿದರು. ನಂತರ ರಾಯರ ಬಂಗಾರ ಕವಚವನ್ನಿಟ್ಟು ನವರತ್ನ ರಥೋತ್ಸವ ನೆರವೇರಿಸಲಾಯಿತು.

ಮಧ್ಯಾಹ್ನ ಶ್ರೀ ಮೂಲ ರಾಮದೇವರ ಪೂಜೆ ನೆರವೇರಿಸಿದ ಶ್ರೀಗಳು, ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಇದಕ್ಕೂ ಮೊದಲು ತಿರುಮಲ ತಿರುಪತಿ ದೇವಸ್ಥಾನದಿಂದ ತರಲಾದ ಶೇಷವಸ್ತ್ರವನ್ನು ಶ್ರೀಗಳು ಖುದ್ದಾಗಿ ಬರಮಾಡಿಕೊಂಡು, ರಾಯರಿಗೆ ಸಮರ್ಪಿಸಿದರು.

ಟಿಟಿಡಿ ಆಡಳಿತಾಧಿಕಾರಿ ಶ್ರೀಮಠಕ್ಕೆ ಶೇಷವಸ್ತ್ರವನ್ನು ತಂದಾಗ ಮಂಗಳವಾದ್ಯಗಳೊಂದಿಗೆ ಬರ ಮಾಡಿಕೊಂಡು, ವಿಶೇಷ ಪೂಜೆ ಸಲ್ಲಿಸಿದ ನಂತರ ಧಾರ್ವಿುಕ ವಿಧಿವಿಧಾನಗಳಂತೆ ರಾಯರಿಗೆ ಸಮರ್ಪಿಸಲಾಯಿತು.

***

ಬೆಳಗ್ಗೆಯಿಂದಲೇ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ರಾಯರ ಆರಾಧನೆಯಲ್ಲಿ ಪಾಲ್ಗೊಂಡಿದ್ದರು. 15 ಲಕ್ಷ ರೂ. ವೆಚ್ಚದಲ್ಲಿ ಬೆಂಗಳೂರಿ ನಿಂದ ಹೂವುಗಳನ್ನು ತರಿಸಿ ರಾಯರ ಮೂಲ ಬೃಂದಾವನ ಸೇರಿ ಶ್ರೀ ಮಠದ ಪ್ರಾಕಾರವನ್ನು ಅಲಂಕರಿಸಲಾಗಿತ್ತು. ಮುಖ್ಯದ್ವಾರದ ಹೊರ ವಲಯ ವಿದ್ಯುತ್ ದ್ವೀಪಗಳಿಂದ ಕಂಗೊಳಿಸು ತ್ತಿದ್ದರೆ, ಪ್ರಾಕಾರದ ಆವರಣ ಬಣ್ಣ ಬಣ್ಣದ ಹೂವುಗಳ ಅಲಂಕಾರದಿಂದ ಆಕರ್ಷಕವಾಗಿ ಕಾಣುತ್ತಿತ್ತು.

ತಮಿಳುನಾಡಿನ ಎಸ್​ಎಸ್​ವೈನ 350ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಕರ್ನಲ್​ನ ರೆಡ್ ಕ್ರಾಸ್ ಸಂಸ್ಥೆಯ 100ಕ್ಕೂ ಹೆಚ್ಚು ಯುವಕರ ಪಡೆ ಆರಾಧನೆ ಮಹೋತ್ಸವ ನಿಮಿತ್ತ ಶ್ರೀಮಠದ ಸೇವೆಯಲ್ಲಿ ತೊಡಗಿವೆ.

ನಟ ಜಗ್ಗೇಶ, ದಂಪತಿ ಸಮೇತರಾಗಿ ಆಗಮಿಸಿ ದ್ದರೆ, ನಿರ್ವಪಕ ರಾಕ್​ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಆಗಮಿಸಿ ವೃಂದಾವನ ದರ್ಶನ ಮಾಡಿ ಶ್ರೀಗಳ ಆಶೀರ್ವಾದ ಪಡೆದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕುಟುಂಬ ಸಮೇತರಾಗಿ ದರ್ಶನ ಪಡೆದರು.

***

ಇಂದು ಉತ್ತರಾರಾಧನೆ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 346ನೇ ಆರಾಧನಾ ಮಹೋತ್ಸವದ ಅಂಗವಾಗಿ ಉತ್ತರಾರಾಧನಾ ಪ್ರಯುಕ್ತ ಗುರುವಾರ (ಆ.10) ಬೆಳಗ್ಗೆ ಮಹಾರಥೋತ್ಸವ ಜರುಗಲಿದೆ.

***

ಹಲವೆಡೆ ಭಜನೆ-ಸಂಗೀತೋತ್ಸವ

ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನಾ ಉತ್ಸವದ ಸಂದರ್ಭ ಬೆಂಗಳೂರಿನ ವಿವಿಧ ಮಠ-ಮಂದಿರಗಳಲ್ಲಿ ಸಂಗೀತ-ಭಜನೆ ಮತ್ತು ನೃತ್ಯಾರಾಧನೆಯೂ ನೆರವೇರಿತು. ರಾಯರಿಗೂ-ಸಂಗೀತಕ್ಕೂ ಅವಿನಾಭಾವ ಸಂಬಂಧವಿದ್ದ ದ್ಯೋತಕವಾಗಿ ಕಲಾಸೇವೆಗೆ ಅನೇಕ ಮಠಗಳು ವೇದಿಕೆ ಕಲ್ಪಿಸಿದ್ದವು. ರಾಘವೇಂದ್ರ ಕಾಲನಿಯ ಶ್ರೀಪಾದರಾಜರ ಮಠದಲ್ಲಿ ಪ್ರಹ್ಲಾದ-ಗಾಯತ್ರಿ ಮತ್ತು ರಂಗವಿಠಲ ಭಜನಾ ಸಂಘದ ಸದಸ್ಯರು ದಾಸರ ಕೃತಿಗಳನ್ನು ಪ್ರಸ್ತುತಪಡಿಸಿದರು.

Leave a Reply

Your email address will not be published. Required fields are marked *

Back To Top