Monday, 25th June 2018  

Vijayavani

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ವಿಚಾರ- ಪರಂ, ಸಿದ್ದು ನಡುವೆ ಮೂಡದ ಒಮ್ಮತ- ಸಿದ್ದು ಟ್ರೀಟ್‌ಮೆಂಟ್‌ ಮುಗಿಯೋವರೆಗೂ ವೇಟಿಂಗ್‌        ಸಾಲಮನ್ನಾ ಹೇಗೆ ಮಾಡ್ತಾರೆ ಕಾದು ನೋಡ್ತೀನಿ- ಜೆಡಿಎಸ್‌ ಅಂದಿದಕ್ಕೆಲ್ಲಾ ತಲೆ ಅಲ್ಲಾಡಿಸಬೇಡಿ- ಪರಂಗೆ ಸಿದ್ದರಾಮಯ್ಯ ಕಿವಿಮಾತು        ಐಎಎಸ್‌ ಅಧಿಕಾರಿಗಳ ಫೀಡ್‌ಬ್ಯಾಕ್‌ ಕೇಳಿದ ಕೇಂದ್ರ- ಎಲ್ಲಾ ರಾಜ್ಯಗಳಿಗೂ ಸುತ್ತೋಲೆ ರವಾನೆ- ಬಡ್ತಿ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟ ಮೋದಿ ಸರ್ಕಾರ        ಸಿಎಂ ಗ್ರಾಮ ವಾಸ್ತವ್ಯದ ಫಲದಿಂದ ಬಂತು ಬಸ್‌- ಎಚ್‌ಡಿಕೆ ಸೇತುವೆ ಭರವಸೆ ಠುಸ್‌- ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಗ್ರೌಂಡ್‌ ರಿಪೋರ್ಟ್‌        ಕೈಗಾ ಸುತ್ತಮುತ್ತಾ ಕ್ಯಾನ್ಸರ್‌ ಭೀತಿ- ಭಯ ಪಡಬೇಡಿ ಇದು ಕೇವಲ ವದಂತಿ- ಉತ್ತರಕನ್ನಡ ಜನತೆಗೆ ಜಿಲ್ಲಾಧಿಕಾರಿ ಅಭಯ        ಊಟ, ತಿಂಡಿ, ಸ್ನ್ಯಾಕ್ಸ್‌ ಎಲ್ಲದಕ್ಕೂ ಅದೇ- 19 ವರ್ಷದಿಂದ ಪಾರ್ಲೆ ಜಿ ಬಿಸ್ಕೆಟ್‌ ತಿಂದೇ ಜೀವನ- ಚಿಕ್ಕೋಡಿ ಯುವತಿ ವೈದ್ಯಲೋಕಕ್ಕೆ ಸವಾಲ್‌       
Breaking News

ಮಂಗನ ಕೈಲಿ ಮರಿಜುವಾನಾ!

Wednesday, 13.06.2018, 3:00 AM       No Comments

‘ಮಂಗನ ಕೈಲಿ ಮಾಣಿಕ್ಯ ಕೊಟ್ಟಹಾಗೆ’ ಎಂಬ ಗಾದೆಮಾತನ್ನು ಕೇಳದವರಿಲ್ಲ. ಆದರೆ ಇದನ್ನೀಗ ಬದಲಿಸಬೇಕಾದ ಕಾಲ ಬಂದಿದೆ. ಅದಕ್ಕೆ ಕಾರಣವಾಗಿರುವುದು ವಿಟಾಲಿ ಜೊರಿವೆಟ್ಸ್ಕಿ

ಎಂಬ ರಷ್ಯಾ ಸಂಜಾತ ಅಮೆರಿಕನ್. ಈತ ಓರ್ವ ಯೂಟ್ಯೂಬ್ ಸ್ಟಾರ್ ಕೂಡ ಹೌದು. ಯೂಟ್ಯೂಬ್​ನಲ್ಲಿ ಸರಿಸುಮಾರು 1 ಕೋಟಿ ಚಂದಾದಾರರನ್ನು ಹೊಂದಿರುವ ಹೆಗ್ಗಳಿಕೆಯಿರುವ ಈತ ‘ಸುಮ್ಮನಿರಲಾರದೆ ಇರುವೆ ಬಿಟ್ಕೊಂಡ್ರು’ ಎಂಬ ಮಾತಿನಂತೆ, ಮಂಗವೊಂದು ಮರಿಜುವಾನ ಮಾದಕದ್ರವ್ಯವನ್ನು ಸೇದುತ್ತಿರುವ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಹರಿಯಬಿಟ್ಟ. ನೋಡನೋಡುತ್ತಿದ್ದಂತೆ ಅದು ವೈರಲ್ ಆಗಿಬಿಟ್ಟಿತು, ಜತೆಗೆ ಪೇಟಾ ಸೇರಿ ಪ್ರಾಣಿ ಹಕ್ಕುಗಳಿಗೆ ಸಂಬಂಧಿಸಿದ ವಿವಿಧ ಸಂಘಟನೆಗಳಿಂದ ಹಿಗ್ಗಾಮುಗ್ಗ ಟೀಕೆಗಳನ್ನೂ ಎದುರಿಸಬೇಕಾಗಿ ಬಂತು.

ಪುಟ್ಟ ಕೋತಿಯೊಂದು ವ್ಯಕ್ತಿಯೊಬ್ಬನ ತೊಡೆಯ ಮೇಲೆ ಕೂತಿರುವುದು, ಅಲ್ಲಿಂದ ನೆಗೆದು ಬೇರೆಡೆಗೆ ತೆರಳುವ ಮುನ್ನ ಒಂದಷ್ಟು ದಂ ಹೊಡೆಯುವುದು, ಈ ವಿಲಕ್ಷಣ ದೃಶ್ಯವನ್ನು ಮೊಬೈಲ್ ಫೋನ್​ನಲ್ಲಿ ಚಿತ್ರೀಕರಿಸುತ್ತಿರುವ ವ್ಯಕ್ತಿ ಜೋರಾಗಿ ನಗುವುದು, ತರುವಾಯದಲ್ಲಿ ಕೋತಿಯು ಆಲೂಗಡ್ಡೆ ಚಿಪ್ಸ್ ಮೆಲ್ಲುತ್ತಿರುವುದು… ಹೀಗೆ ದೃಶ್ಯ ಸರಣಿ ಸಾಗುತ್ತದೆ.

‘ಇದನ್ನು ತಮಾಷೆ ಎಂಬಂತೆ ಪರಿಭಾವಿಸಿರುವವರು ಛೀಮಾರಿ ಹಾಕಿಸಿಕೊಳ್ಳಲು ಅರ್ಹರು’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಅಸಹನೆ ತೋಡಿಕೊಂಡಿದ್ದರೆ, ‘ತಾವು ದುಶ್ಚಟ ಕಲಿತಿದ್ದು ಸಾಲದೆಂಬಂತೆ ಪ್ರಾಣಿಗಳನ್ನೂ ಅದರ ಬಲಿಪಶುವಾಗಿಸುವುದು ಅದೆಷ್ಟು ಸರಿ?’ ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರಂತೆ. ಒಟ್ನಲ್ಲಿ, ಮಂಗನ ಕೈಲಿ ಮರಿಜುವಾನ ಕೊಟ್ಟಿದ್ದಕ್ಕೆ ವಿಟಾಲಿ ಜೊರಿವೆಟ್ಸ್ಕಿ ಸ್ವತಃ ‘ಇಂಗು ತಿಂದ ಮಂಗನಂತೆ’ ಆಗಿರುವುದಂತೂ ದಿಟ!

Leave a Reply

Your email address will not be published. Required fields are marked *

Back To Top