Monday, 19th February 2018  

Vijayavani

ಮೈಸೂರಲ್ಲಿ ಮೋದಿ ಮೇನಿಯಾ - ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ -ಮಹಾಪುರುಷರ, ವಸ್ತುಗಳ ಸ್ಮರಿಸಿದ ನಮೋ.        ಬಡವರ ಅವಶ್ಯಕತೆ ಪೂರೈಕೆಗೆ ರೈಲ್ವೆ ಅವಶ್ಯಕ - ಜೋಡಿ ಮಾರ್ಗ ಉದ್ಘಾಟಿಸಿ ನಮೋ ಮಾತು - ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ.        ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ - ಸಿಎಂ ವಿರುದ್ಧ ಪ್ರತಾಪಸಿಂಹ ವಾಕ್ಪ್ರಹಾರ - ಮೋದಿಗೆ ಸ್ಮರಣಿಕೆ ನೀಡಿದ ಮುಖಂಡರು.        ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆ ಕೇಸ್​ - ಆರೋಪಿಗಳಿಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​​ - ಶಿವಾಜಿನಗರದ ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್.        ಸರ್ವಸಂಘ ಪರಿತ್ಯಾಗಿಗೆ ಮಹಾಮಜ್ಜನ - ಶ್ರವಣಬೆಳಗೊಳದಲ್ಲಿ ಭಕ್ತ ಸಾಗರ - ಆಸ್ಪತ್ರೆ, ಬೆಟ್ಟದ ಮೆಟ್ಟಿಲು ಲೋಕಾರ್ಪಣೆ.       
Breaking News

ಮಂಗನ ಕಾಟ ತಪ್ಪಿಸಲು ಯೋಧರ ನೇಮಕ

Saturday, 12.08.2017, 3:02 AM       No Comments

ವೈರಿ ದೇಶದಿಂದ ರಕ್ಷಣೆ ಪಡೆಯಲು ಗಡಿಯಲ್ಲಿ ಸೈನಿಕರನ್ನು ನೇಮಿಸುವುದು ಸಹಜ. ಆದರೆ ಇಂಡೋನೇಷ್ಯಾದ ಹಳ್ಳಿ ಯೊಂದರಲ್ಲಿ ಮಂಗನಿಂದ ರಕ್ಷಣೆ ನೀಡಲು ಪೊಲೀಸರು ಹಾಗೂ ಸೈನಿಕರನ್ನು ನೇಮಕ ಮಾಡಲಾಗಿದೆ. 2 ತಿಂಗಳಿಂದೀಚೆಗೆ ಕೇಂದ್ರ ಜಾವಾದ ಬೊಯೊಲಾಲಿ ಎಂಬ ಪ್ರದೇಶದಲ್ಲಿ ಮಂಗಗಳ ದಂಡು ಬಂದಿತ್ತು. ನಿತ್ಯ ಇವುಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಜತೆಗೆ ಕಾಟವೂ ಹೆಚ್ಚಿತ್ತು. ಮಂಗಗಳು ಮನೆಗೆ ನುಗ್ಗಿ ಆಹಾರ ಕದಿಯುವುದು, ಮಕ್ಕಳ ಮೇಲೆ ಹಾಗೂ ವೃದ್ಧರ ಮೇಲೆ ದಾಳಿ ನಡೆಸಲು ಆರಂಭಿ ಸಿದ್ದವು. ಹೀಗಾಗಿ ಇವುಗಳನ್ನು ನಿಯಂತ್ರಿಸಿ ಗ್ರಾಮಸ್ಥರಿಗೆ ರಕ್ಷಣೆ ನೀಡಲು ಸೈನಿಕರ ವಿಶೇಷ ತಂಡವನ್ನು ನೇಮಕ ಮಾಡಲಾಗಿದೆ. ವಿಶೇಷ ತಂಡ ಈ ಭಾಗದಲ್ಲಿ ಗಸ್ತು ತಿರುಗುತ್ತ, ಮಂಗಗಳನ್ನು ಗುಂಡಿಕ್ಕಿ ಕೊಲ್ಲುವ ಕಾರ್ಯದಲ್ಲಿ ತೊಡಗಿದೆ. ಇದಕ್ಕೆ ಗ್ರಾಮಸ್ಥರೂ ಬೆಂಬಲ ನೀಡುತ್ತಿದ್ದಾರೆ. ‘ಈ ಮಂಗಗಳಿಗೆ ಆಹಾರ ಬೇಕು. ಹೀಗಾಗಿ ಮನೆಯ ಮೇಲೆ ದಾಳಿ ನಡೆಸುತ್ತಿವೆ. ಒಂದೊಮ್ಮೆ ಮಕ್ಕಳು ಆಹಾರ ಹಿಡಿದುಕೊಂಡಿದ್ದರೆ, ಅವರ ಮೇಲೆ ದಾಳಿ ನಡೆಸಿ ಅವನ್ನು ಕಿತ್ತುಕೊಂಡು ಹೋಗುತ್ತಿವೆ. ಈಗ ಕೆಲ ಯೋಧರು ಮಂಗನ ದಾಳಿಗೆ ತುತ್ತಾಗಿ ಗಾಯಗೊಂಡ ಪ್ರಕರಣಗಳು ವರದಿಯಾಗಿವೆ. ಈ ತಂಡದ ಕಾರ್ಯಾಚರಣೆಯಿಂದ ಮಂಗಗಳ ಹಾವಳಿ ಕೊಂಚಮಟ್ಟಿಗೆ ಕಡಿಮೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top