Wednesday, 19th September 2018  

Vijayavani

ಭಿನ್ನಮತ ಶಮನಕ್ಕೆ ಕೈ ಪಡೆ ಕಸರತ್ತು - ಸಂಪುಟದಲ್ಲಿ ಖಾಲಿ ಇರೋದು ಆರು, ಆಕಾಂಕ್ಷಿಗಳು ಹತ್ತಾರು        ರಾಜ್ಯ ಕೈ ಪಡೆಯಲ್ಲಿ ಬಂಡಾಯ ಶಮನಕ್ಕೆ ಸರ್ಕಸ್ - ಇತ್ತ ದಿಲ್ಲಿಯಲ್ಲಿ ಸಿದ್ದು ವಾಕಿಂಗ್ ಮೂಲಕ ರಿಲ್ಯಾಕ್ಸ್ - ರಾಹುಲ್ ಜತೆ ಮೀಟಿಂಗ್        ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ರಣೋತ್ಸಾಹದಲ್ಲಿ ರಾಜ್ಯ ಕಮಲ ಪಾಳಯ - ಅರಮನೆ ಮೈದಾನದಲ್ಲಿ ಬಿಜೆಪಿ ವಿಶೇಷ ಸಭೆ - ಗಾಯತ್ರಿ ವಿಹಾರಕ್ಕೆ ಆಗಮನ        ಇಡಿ ಕೇಸ್ ಬಳಿಕ ಡಿಕೆ ಸಹೋದರರಲ್ಲಿ ತಳಮಳ - ಸುಪ್ರೀಂ ವಕೀಲರ ಜತೆ ಸುರೇಶ್ ನಿರಂತರ ಸಂಪರ್ಕ        ಅಗಸ್ತಾ ವೆಸ್ಟ್​ಲ್ಯಾಂಡ್ ಕಾಪ್ಟರ್ ಖರೀದಿ ಹಗರಣ - ಮಧ್ಯವರ್ತಿ ಮೈಕಲ್ ಹಸ್ತಾಂತರಕ್ಕೆ ದುಬೈಕೋರ್ಟ್ ಗ್ರೀನ್ ಸಿಗ್ನಲ್       
Breaking News

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ

Saturday, 14.07.2018, 2:07 PM       No Comments

ಚಿಕ್ಕಬಳ್ಳಾಪುರ: ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ವಕೀಲರು ಧ್ವನಿ ಎತ್ತಬೇಕೆಂದು ರಾಜ್ಯ ವಕೀಲ ಪರಿಷತ್ ಸದಸ್ಯ ಮುನಿಯಪ್ಪ ಹೇಳಿದರು.

ರಾಜ್ಯ ವಕೀಲರ ಪರಿಷತ್ ಸದಸ್ಯರಾಗಿ ಆಯ್ಕೆಯಾದವರಿಗೆ ನಗರದ ವಕೀಲರ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನಸಾಮಾನ್ಯರು ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾದರೆ ವಕೀಲರು ಧ್ವನಿ ಎತ್ತಿ ಕಾನೂನಾತ್ಮಕ ಹೋರಾಟ ನಡೆಸಬೇಕಿದೆ ಎಂದರು.

ವಕೀಲರು ಉತ್ತಮ ನಡತೆ, ಶುದ್ಧ ಹಸ್ತರಾಗಿರಬೇಕು. ಸಮಾಜದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಇನ್ನೂ ಯುವ ವಕೀಲರು ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.

ನೂತನ ಸದಸ್ಯ ಬಿ.ವಿ.ಶ್ರೀನಿವಾಸ್ ಮಾತನಾಡಿ, ವಕೀಲರ ಕ್ಷೇಮಾಭಿವೃದ್ಧಿ ನಿಧಿಗೆ ಸಂಬಂಧಿಸಿದಂತೆ ನೇರ ಹಣ ಪಾವತಿ ಬದಲಿಗೆ ಆನ್​ಲೈನ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.

ರಾಜ್ಯ ವಕೀಲರ ಪರಿಷತ್​ಗೆ ಆಯ್ಕೆಯಾದ ಸದಾಶಿವರೆಡ್ಡಿ, ದೇವರಾಜ್, ಮುನಿಯಪ್ಪ, ಬಿ.ವಿ.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ಎಚ್.ತಮ್ಮೇಗೌಡ, ಉಪಾಧ್ಯಕ್ಷ ಕೆ.ವಿ.ಬಾಲಾಜಿ, ಪ್ರಧಾನ ಕಾರ್ಯದರ್ಶಿ ವಿನೋದ್​ಕುಮಾರ್, ಮಾಜಿ ಅಧ್ಯಕ್ಷ ಕೆ.ಎಂ.ಗೋವಿಂದರೆಡ್ಡಿ, ವಕೀಲರಾದ ಎಸ್.ವಿ.ರಾಮಮೂರ್ತಿ, ಸುದರ್ಶನ್, ಜಿ.ಆರ್.ಹರಿಕುಮಾರ್, ರಘುರಾಮ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

Back To Top