Friday, 25th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಭೈರಾದೇವಿ ರಾಧಿಕಾ

Tuesday, 13.02.2018, 3:05 AM       No Comments

ಬೆಂಗಳೂರು: ಶೀಘ್ರವೇ ಹೋಂ ಬ್ಯಾನರ್​ನಲ್ಲೊಂದು ಸಿನಿಮಾ ಮಾಡುವುದಾಗಿ ನಟಿ ರಾಧಿಕಾ ಕುಮಾರಸ್ವಾಮಿ ಹೇಳಿಕೊಂಡಿದ್ದರು. ಆದರೆ ಆ ಚಿತ್ರ ಯಾವುದು ಎಂಬ ಬಗ್ಗೆ ಅವರು ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಆ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ‘ಭೈರಾದೇವಿ’ ಶೀರ್ಷಿಕೆಯ ಹೊಸ ಚಿತ್ರವನ್ನು ಅವರು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಮುಖ್ಯಭೂಮಿಕೆಯಲ್ಲಿ ಅವರೇ ನಟಿಸುತ್ತಿದ್ದು, ಈ ಹಿಂದೆ ‘ಆರ್​ಎಕ್ಸ್ ಸೂರಿ’ ಚಿತ್ರ ನಿರ್ದೇಶಿಸಿದ್ದ ಶ್ರೀಜೈ ಅವರು ಆಕ್ಷನ್-ಕಟ್ ಹೇಳಲಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ರಮೇಶ್ ಅರವಿಂದ್ ಕೂಡ ನಟಿಸುತ್ತಿದ್ದು, ಇದೇ ಮೊದಲ ಬಾರಿಗೆ ಅವರು ರಾಧಿಕಾ ಜತೆ ತೆರೆಹಂಚಿಕೊಂಡಿದ್ದಾರೆ.

ರಮೇಶ್ ಮತ್ತು ರಾಧಿಕಾ ಜತೆಯಾಗಿ ನಟಿಸುತ್ತಾರೆ ಎಂದ ಮಾತ್ರಕ್ಕೆ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದುಕೊಳ್ಳುವಂತಿಲ್ಲ. ಹೌದು, ಚಿತ್ರದಲ್ಲಿ ಭೈರಾದೇವಿ ಪಾತ್ರಕ್ಕೆ ಬಣ್ಣ ಹಚ್ಚಲಿರುವ ರಾಧಿಕಾ, ಕಾಳಿದೇವಿ ರೂಪದಲ್ಲಿ ದರ್ಶನ ನೀಡಲಿದ್ದಾರೆ. ರಮೇಶ್​ಗೆ ಪೊಲೀಸ್ ಅಧಿಕಾರಿ ಪಾತ್ರವಂತೆ. ಅವರಿಗೆ ಜೋಡಿಯಾಗಿ ಅನು ಪ್ರಭಾಕರ್ ಇರಲಿದ್ದಾರೆ. ಅಷ್ಟಕ್ಕೂ ಭೈರಾದೇವಿ ಮತ್ತು ಪೊಲೀಸ್ ಅಧಿಕಾರಿ ಯಾಕೆ ಮುಖಾಮುಖಿ ಆಗುತ್ತಾರೆ ಎಂಬುದೇ ಕಥಾಕೌತುಕವಂತೆ. ದೇವಿ ಗೆಟಪ್​ನಲ್ಲಿ ರಾಧಿಕಾ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದರ ಝುಲಕ್ ತಿಳಿಸಲು ಶೀಘ್ರದಲ್ಲೇ ಒಂದು ಫೋಟೋಶೂಟ್ ಮಾಡಲಿದ್ದಾರಂತೆ ನಿರ್ದೇಶಕರು. ಶೀರ್ಷಿಕೆ ಕೇಳಿದರೆ ಇದು ಹಾರರ್ ಅಥವಾ ಭಕ್ತಿ ಪ್ರಧಾನ ಸಿನಿಮಾ ಇರಬಹುದೇ ಎಂಬ ಅನುಮಾನ ಮೂಡುವುದು ಸಹಜ. ಇದಕ್ಕೆ ಉತ್ತರಿಸುವ ಶ್ರೀಜೈ, ‘ಕಾಳಿದೇವಿಯ ಇನ್ನೊಂದು ಹೆಸರು ಭೈರಾದೇವಿ. ಸಣ್ಣದೊಂದು ಹಾರರ್ ಎಳೆ ಬರುತ್ತದೆ. ಆದರೆ ಇಡೀ ಚಿತ್ರ ಹಾಗಿರುವುದಿಲ್ಲ’ ಎನ್ನುತ್ತಾರೆ. ಇದು ಯಾವ ಶೈಲಿಯ ಸಿನಿಮಾ ಎಂಬುದನ್ನು ಫಸ್ಟ್​ಲುಕ್ ಮೂಲಕ ಅವರು ಬಹಿರಂಗ ಪಡಿಸಲಿದ್ದಾರಂತೆ.

‘ಭೈರಾದೇವಿ’ಯ ಮತ್ತೊಂದು ವಿಶೇಷವೇನೆಂದರೆ, ಇದು ಏಕಕಾಲಕ್ಕೆ ಕನ್ನಡದ ಜತೆ ತಮಿಳು ಮತ್ತು ತೆಲುಗಿನಲ್ಲಿಯೂ ಮೂಡಿಬರಲಿದೆ. ‘ಮೊದಲಿಗೆ ಕಥೆ ಕೇಳಿದ ರಾಧಿಕಾ ಸಖತ್ ಇಷ್ಟಪಟ್ಟರು. ನಂತರ ಮೂರು ಭಾಷೆಗಳಲ್ಲಿ ನಿರ್ಮಾಣ ಮಾಡಿದರೆ ಒಳಿತು ಎಂಬ ಅಭಿಪ್ರಾಯ ವ್ಯಕ್ತವಾಯ್ತು. ಎಲ್ಲ ಭಾಷೆಯಲ್ಲೂ ಈ ಕಲಾವಿದರೇ ಇರಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಶ್ರೀಜೈ. ಚಿತ್ರದ ಬಹುತೇಕ ಶೂಟಿಂಗ್ ವಾರಾಣಸಿಯಲ್ಲಿ ನಡೆಯಲಿದೆಯಂತೆ. ಉಳಿದಂತೆ ಊಟಿ, ಬೆಂಗಳೂರು, ಹರಿದ್ವಾರ ಮುಂತಾದೆಡೆ ಚಿತ್ರೀಕರಣ ಮಾಡುವ ಆಲೋಚನೆ ತಂಡಕ್ಕಿದೆ. ಸೋಮವಾರ (ಫೆ. 12) ಬೆಂಗಳೂರಿನಲ್ಲಿ ಮುಹೂರ್ತ ನೆರವೇರಿಸಲಾಗಿದೆ. ಮೂರು ಭಾಷೆಗಳೂ ಸೇರಿ ಒಟ್ಟು 80 ದಿನಗಳು ಶೂಟಿಂಗ್ ನಡೆಯಲಿದೆ. ಎಚ್.ಸಿ. ವೇಣು ಛಾಯಾಗ್ರಹಣ ಮಾಡಲಿದ್ದಾರೆ.

ಈವರೆಗೂ ರಾಧಿಕಾ ಕುಮಾರಸ್ವಾಮಿ ಹೆಚ್ಚು ಕೌಟುಂಬಿಕ ಕಥಾಹಂದರದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಮ್ಮ ಚಿತ್ರದಲ್ಲಿ ಅವರನ್ನು ತುಂಬ ಭಿನ್ನವಾಗಿ ತೋರಿಸಲಿದ್ದೇವೆ. ಶೀಘ್ರದಲ್ಲೇ ಫಸ್ಟ್ ಲುಕ್ ಹೊರ ಬರಲಿದೆ.

| ಶ್ರೀಜೈ ನಿರ್ದೇಶಕ

Leave a Reply

Your email address will not be published. Required fields are marked *

Back To Top