Monday, 23rd October 2017  

Vijayavani

1. ಲಿಂಗಾಯತರು ಹಿಂದೂಗಳಲ್ಲ ಹೇಳಿಕೆ – ಜಾಮದಾರ್​ಗೆ ಕನೇರಿ ಮಠದ ಶ್ರೀ ತಿರುಗೇಟು – ಬಹಿರಂಗ ಚರ್ಚೆಗೆ ಕಾಡಸಿದ್ದೇಶ್ವರ ಸ್ವಾಮಿಗಳ ಆಹ್ವಾನ 2. ರಾಜ್ಯ ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ – ಸಿದ್ದು, ಪರಂ, ಡಿಕೆಶಿ ದೂರ ದೂರ – ಹೈಕಮಾಂಡ್​ ಸಾಮೂಹಿಕ ಜಪ, ನಾಯಕರು ಸಪರೇಟ್​ ರೂಪ 3. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಜನರ ತೆರಿಗೆ ದುಡ್ಡಲ್ಲಿ ಕಾಂಗ್ರೆಸ್‌ ಪಕ್ಷಕ್ಕೂ ಪ್ರಚಾರ – ಬೆನ್ನುತಟ್ಟಿಕೊಳ್ಳೋ ಸಮಾವೇಶಕ್ಕೆ ಪಿಡಿಓಗಳೂ ದುರ್ಬಳಕೆ 4. ನಟ ವಿಜಯ್ ಬೆಂಬಲಕ್ಕೆ ನಿಂತ ತಲೈವಾ – ಮೆರ್ಸಲ್‌ ಸಿನಿಮಾದ ಬಗ್ಗೆ ಮೆಚ್ಚುಗೆಯ ಟ್ವೀಟ್ – ವಿವಾದಾತ್ಮಕ ವಿಷಯಗಳಿಗೂ ರಜನಿಕಾಂತ್ ಪರೋಕ್ಷ ಶ್ಲಾಘನೆ 5. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್​ ಶಾಕ್​ – ಬಿಜೆಪಿಗೆ ಸೇರಲು 1 ಕೋಟಿ ರೂ ಆಮೀಷ – ಹಾರ್ದಿಕ್​ ಪಟೇಲ್​ ಸಂಗಡಿಗನ ಗಂಭೀರ ಆರೋಪ
Breaking News :

ಭುಜದ ಮೇಲೆ ತಾಯಿ ಶವ ಹೊತ್ತೊಯ್ದ!

Tuesday, 10.10.2017, 3:00 AM       No Comments

ಹೊಸಪೇಟೆ (ಬಳ್ಳಾರಿ): ಉಪವಿಭಾಗೀಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವ ಇಲ್ಲಿನ 100 ಹಾಸಿಗೆ ಆಸ್ಪತ್ರೆಯಲ್ಲಿ ಒಂದೇ ದಿನ ವೃದ್ಧ ದಂಪತಿ ಭಾನುವಾರ ಮೃತಪಟ್ಟಿದ್ದು, ಮಗನೇ ತಾಯಿ ಶವವನ್ನು ಭುಜದ ಮೇಲೆ ಹೊತ್ತೊಯ್ಯುತ್ತಿರುವ ವಿಡಿಯೋ ಸೋಮವಾರ ವೈರಲ್ ಆಗಿದೆ.

ಬಳ್ಳಾರಿ ತಾಲೂಕು ಕೊರ್ಲಗುಂದಿ ಗ್ರಾಮದ ಮಾರೆಪ್ಪ (76) ಮತ್ತು ತಿಪ್ಪಮ್ಮ (70) ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಹೋಬಳಿ ಗಾಳೆಮ್ಮನಗುಡಿ ಗ್ರಾಮದ ಮಗನ ಬಳಿ ವಾಸವಿದ್ದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರಿಬ್ಬರನ್ನು ನಗರದ ಸರ್ಕಾರಿ 100 ಹಾಸಿಗೆ ಆಸ್ಪತ್ರೆಯಲ್ಲಿ ಭಾನುವಾರ ದಾಖಲಿಸಲಾಗಿತ್ತು. ಮೊದಲಿಗೆ ನರ್ಸ್​ಗಳು ಈ ದಂಪತಿಗೆ ಗ್ಲೂಕೋಸ್ ನೀಡಿದ್ದರು. ನಂತರ ದಂಪತಿ ತೀವ್ರ ಆರೋಗ್ಯ ಸಮಸ್ಯೆ ಎದುರಿಸಿದರೂ ಸಿಬ್ಬಂದಿ ಎಚ್ಚೆತ್ತುಕೊಂಡಿಲ್ಲ. ಸೂಕ್ತ ಚಿಕಿತ್ಸೆ ನೀಡುವಂತೆ ರವಿ ನರ್ಸ್​ಗಳನ್ನು ಗೋಗರೆದರೂ ಕಾಳಜಿ ವಹಿಸಿಲ್ಲ ಎನ್ನಲಾಗಿದೆ. ಪರಿಣಾಮ ಸಂಜೆ 4.30ರ ಸುಮಾರಿಗೆ ತಂದೆ ಮಾರೆಪ್ಪ, ರಾತ್ರಿ 9 ಗಂಟೆ ಸುಮಾರಿಗೆ ತಾಯಿ ತಿಪ್ಪಮ್ಮ ಮೃತಪಟ್ಟಿದ್ದಾರೆ. ಇದರಿಂದ ಮನನೊಂದ ಮಗ ರವಿ, ಶವಗಳನ್ನು ಕೊಂಡೊಯ್ಯಲು ಸ್ಟ್ರೆಚರ್ ಕೇಳದೆ, ಸ್ವತಃ ತನ್ನ ತಾಯಿ ಶವವನ್ನು ಭುಜದ ಮೇಲೆ ಹೊತ್ತೊಯ್ದಿದ್ದಾರೆ. ಆಸ್ಪತ್ರೆಯಿಂದ ಹೊರಗೆ ಬಂದು ಆಟೋ ಮೂಲಕ ಶವವನ್ನು ಮನೆಗೆ ಕೊಂಡೊಯ್ದಿದ್ದಾನೆ. ಇದಕ್ಕೂ ಮೊದಲು ತಂದೆ ಶವವನ್ನು ತೆಗೆದುಕೊಂಡು ಹೋಗಿದ್ದಾನೆ.

ಉಸಿರಾಟದ ತೊಂದರೆಯಿಂದ ಮಾರೆಪ್ಪ, ತಿಪ್ಪಮ್ಮ ಎಂಬ ವೃದ್ಧ ದಂಪತಿ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಭಾನುವಾರ ದಾಖಲಾಗಿದ್ದರು. 4.30ರ ಸುಮಾರಿಗೆ ಮಾರೆಪ್ಪ, ರಾತ್ರಿ 8 ಗಂಟೆ ಸುಮಾರಿಗೆ ತಿಪ್ಪಮ್ಮ ಮೃತಪಟ್ಟಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಸ್ಟ್ರೆಚರ್​ಗಳಿದ್ದರೂ, ತಾಯಿ ಶವವನ್ನು ಭುಜದ ಮೇಲೆ ಅವರ ಪುತ್ರ ಏಕೆ ಹೊತ್ತೊಯ್ದ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಈ ಕುರಿತು ಅಂದು ಕರ್ತವ್ಯದಲಿದ್ದ ಸಿಬ್ಬಂದಿ ವಿರುದ್ಧ ವರದಿ ಸಿದ್ಧ ಪಡಿಸಲಾಗುತ್ತಿದೆ.

| ಡಾ. ಸಲೀಂ ಆಸ್ಪತ್ರೆ ವೈದ್ಯ

Leave a Reply

Your email address will not be published. Required fields are marked *

Back To Top