Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಭೀಮಾ ತೀರಕ್ಕುಂಟು ಗೌರಿ ಹಂತಕರ ನಂಟು?

Monday, 02.10.2017, 3:26 AM       No Comments

| ಪರಶುರಾಮ ಭಾಸಗಿ

ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ್ ಶೂಟೌಟ್ ನಡೆದಿರು ವುದು ಭೀಮಾ ತೀರದ ಗುಂಡಿನಲ್ಲಿ ಎಂಬ ಸುದ್ದಿ ಹರಡಿದ್ದು, ಹಂತಕರ ಪೈಕಿ ಓರ್ವ ಇಲ್ಲಿಯವನೇ ಎಂಬ ಸಂಶಯ ದಟ್ಟವಾಗಿದೆ.

ಈ ಹಿನ್ನೆಲೆಯಲ್ಲಿ ಸೆ.14ರಂದು ಎಸ್​ಐಟಿ ತಂಡ ಮೊದಲ ಬಾರಿಗೆ ವಿಜಯಪುರಕ್ಕೆ ಭೇಟಿ ನೀಡಿ ತನಿಖೆ ನಡೆಸಿತ್ತು. ಬಳಿಕ ಅ.1ರಂದು ಡಿಸಿಪಿ ಜಿನೇಂದ್ರ ಖನಗಾವಿ ನೇತೃತ್ವದ ತಂಡ ಮತ್ತೆ ಭೇಟಿ ನೀಡಿದೆ.

ಮೂಲಗಳ ಪ್ರಕಾರ ಹಂತಕರ ಪೈಕಿ ಓರ್ವ ವಿಜಯಪುರದವನಾಗಿದ್ದು, ಇಲ್ಲಿಂದಲೇ ಸಂಚು ರೂಪಿಸಿರುವ ಮಾಹಿತಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ ಎನ್ನಲಾಗಿದೆ. ಆದರೆ, ಖನಗಾವಿ ಇದನ್ನು ನಿರಾಕರಿಸಿದ್ದು, ಈ ಹಿಂದೆ ಇಲ್ಲಿಯೇ ಸೇವೆ ಸಲ್ಲಿಸಿದ ಹಿನ್ನೆಲೆ ಕೆಲ ಮಾಹಿತಿ ಕಲೆ ಹಾಕಲು ಬಂದಿರುವುದಾಗಿ ತಿಳಿಸಿದ್ದಾರೆ.

ಅಕ್ರಮ ಪಿಸ್ತೂಲ್​ಗೆ ಕುಖ್ಯಾತಿ!

ಭೀಮಾತೀರ ಹಂತಕರೆಲ್ಲ ಮಣ್ಣು ಪಾಲಾದರೂ ಬಿಟ್ಟುಹೋದ ಬಂದೂಕು ಸಂಸ್ಕೃತಿ ಮಾತ್ರ ಮುಂದುವರಿದಿದೆ. ಪ್ರತಿ ವರ್ಷ ಕನಿಷ್ಠ 10-15 ಅಕ್ರಮ ಶಸ್ತ್ರ್ಸಾಸ್ತ್ರಗಳು ಪೊಲೀಸ್ ದಾಳಿ ವೇಳೆ ಪತ್ತೆಯಾಗುತ್ತಲೇ ಇವೆ. ಇಲ್ಲಿನ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಜಾಲ ಭೋಪಾಲ್, ಮಧ್ಯಪ್ರದೇಶ, ಛತ್ತೀಸ್​ಗಡಕ್ಕೂ ವ್ಯಾಪಿಸಿದೆ. ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಿಸುತ್ತಿರುವ ಶಸ್ತ್ರಾಸ್ತ್ರಗಳು ವಿವಿಧ ಜಿಲ್ಲೆಗಳಿಗೆ ಸರಬರಾಜಾಗುತ್ತಿವೆ. 2012ರಿಂದ ಈವರೆಗೂ ಜಿಲ್ಲೆಯಲ್ಲಿ 59 ಪ್ರಕರಣ ದಾಖಲಾಗಿವೆ. 95 ಕಂಟ್ರಿ ಪಿಸ್ತೂಲ್ ಮತ್ತು 205ಕ್ಕೂ ಅಧಿಕ ಗುಂಡು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

Back To Top