Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಭಾಷೆಯಷ್ಟೆ ಸಾಲದು, ಸಂಸ್ಕೃತಿಯೂ ಬೇಕು

Tuesday, 05.12.2017, 3:02 AM       No Comments

ಯಾವ ಸಭೆ-ಸಮಾರಂಭ ಸಿಕ್ಕರೂ ಹಿಂದುನಿಂದೆ, ರಾಮಾಯಣ ತೇಜೋವಧೆ, ಗೀತೆಗೆ ಬೈಗುಳ, ಹಿಂದು ವಿದ್ವಾಂಸರಿಗೆ ಸರ್ಕಾರೀ ಕಿರುಕುಳ, ಸುಳ್ಳು ಕೇಸು ಹಾಕುವುದು, ಹಿಂದು ಸಮುದಾಯಗಳನ್ನು ಒಡೆಯುವುದು, ಬುದ್ಧ, ಬಸವ, ಶಂಕರಾದಿ ಮಹಾತ್ಮರನ್ನು ಎಳೆತಂದು, ತಿರುಚಿ, ದುರುಪಯೋಗಿಸಿ, ಅನರ್ಥ ಮಾಡುವುದು- ಇದೇ ಕಾಯಕ ನಡೆಯುತ್ತಿದೆ. ಇದೆಲ್ಲ ಎಲ್ಲಿಯವರೆಗೆ?

ಜೀವನದಲ್ಲಿ ಆವಿಷ್ಕೃತಿ-refinement, evolution, ಉನ್ನತಿಯತ್ತ ಹೆಜ್ಜೆ ಎಂಬುವು ದೈವ ಇತ್ತ ದಿಕ್ಕು. ಇದು ಕಮ್ಯುನಿಷ್ಟರ, ಎಡಪಂಥೀಯರ ಕ್ಟಟಜ್ಟಛಿಠಠ ಎಂಬ ಸಂಕುಚಿತಾರ್ಥದ ‘ಪ್ರಗತಿ’ ಅಲ್ಲ. ಇಂದು ಪೊಳ್ಳು ಸೆಕ್ಯುಲರ್ ಕಲ್ಪನೆಯಲ್ಲಿ ಜೀವನದ ಮಹಾಮೌಲ್ಯಗಳೇ ಅಪಾರ್ಥಗೊಳ್ಳುತ್ತಿವೆ. ಹಿಂದೆ ನಾನು ಪಾಠ ಕಲಿಸುತ್ತಿದ್ದ ಒಂದು ವಿಶ್ವವಿದ್ಯಾಲಯದಲ್ಲಿ, ಇಂದಿರಾ ದರ್ಬಾರಿನ ಕಾಲದಲ್ಲಿ, ಕರ್ನಾಟಕದಲ್ಲಿ, ಎಡಪಂಥೀಯ ಸರ್ಕಾರದ ಅವನತಿಯ ಕಾಲದಲ್ಲಿ ಎಲ್ಲೆಲ್ಲೂ Deficit Financing ಎಂಬ ‘ವಿತ್ತೀಯ ಕೊರತೆಯನ್ನೇ’ ಪ್ರಗತಿ ಎಂದೆಣಿಸಿ, ಹಣದುಬ್ಬರವನ್ನೇ ಅಬ್ಬರಾರ್ಭಟಗಳಿಂದ ಕೊಂಡಾಡುತ್ತ, ಜನ ಸಂಕಟಪಡುತ್ತಿದ್ದ ಕಾಲದಲ್ಲಿ,

ಶೆಣೈ ಎಂಬ ಮಹಾ ಅರ್ಥಶಾಸ್ತ್ರಜ್ಞರನ್ನು ದೇಶದ ಹಣಕಾಸು ಕುರಿತಂತೆ ವ್ಯಾಪಕವಾಗಿ ವಿಶ್ಲೇಷಿಸುವಂತೆ ಆಹ್ವಾನಿಸಲಾಯ್ತು. ತುಂಬ ಜನ ಸೇರಿದ್ದರು. ಆಗ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದವರು- ಆಮೇಲೆ ಅವರು ವೈಸ್ ಚಾನ್ಸಲರ್ ಆಗಿಯೂ, ನಂತರ ಸರ್ಕಾರದ ಆಯೋಗಾಧ್ಯಕ್ಷರಾಗಿಯೂ ಬಡ್ತಿ ಪಡೆದು, ಅನೇಕ ಅನರ್ಥಗಳಿಗೆ ಮೂಲವೂ ಆದರು. ಈ ಸಂಕುಚಿತ

ಕಮ್ಯುನಿಸ್ಟ್ ಮನನೆಲೆಯ ಅಂದಿನ ಪ್ರಾಧ್ಯಾಪಕರು ಶೆಣೈಯವರಿಗೆ ಒಂದು ಪ್ರಶ್ನೆ ಕೇಳಿದರು- ‘ಜನರಿಗೆ, ಉದ್ಯೋಗಪತಿಗಳಿಗೆ, ವ್ಯವಸಾಯೋತ್ಪನ್ನಗಾರರಿಗೆ ಉತ್ತೇಜನ ಕೊಡಲು ಸರ್ಕಾರ ಯಾವ ‘Incentive’ (ಪ್ರಚೋದನೆ) ಕೊಡಬೇಕು?’ ಅಂತ. ಕೆರಳಿದ ಶೆಣೈ ಹೇಳಿದರು- ‘ಮಾರಾಯ್ರೇ! ನಾವಿರುವುದು ಪ್ರಜಾಪ್ರಭುತ್ವದಲ್ಲಿ. Don’t use the wrong word incentive. Use the ‘initiative’….’ ಅಂತ.

ಆಮೇಲೆ ಆ ಪದಗಳ ಅರ್ಥವ್ಯತ್ಯಾಸ ತಿಳಿಯದೆ ಕಕ್ಕಾಬಿಕ್ಕಿಯಾದ ಆ ಸಂಕುಚಿತಜ್ಞಾನರಿಗೆ ಶೆಣೈ ಹೇಳಿದ್ದು-

1) ‘Incentive ಎಂಬುದು ಕೃತಕ ಉತ್ತೇಜನಸೂಚಕ ಶಬ್ದ. ಒಲ್ಲದ ಬೆಕ್ಕಿಗೆ ಇಲಿಯನ್ನು ಹಿಡಿಯಲು ಇಂಜೆಕ್ಷನ್, ಮಾತ್ರೆ ಇತ್ತು, ಇಲಿ ತೋರಿಸಿ, ‘ಹೆದರಬೇಡ’ ಎಂದು ಹೇಳಿ, ಬೆಕ್ಕನ್ನೇ ಎತ್ತಿ ಇಲಿಯ ಮೇಲೆ ಎಸೆದಂತೆ. Incendiary ಎಂಬ ಶಬ್ದವೂ ಈ ಮೂಲದ್ದೇ. ಕಿಡಿಗೇಡಿ ಕೃತ್ಯ, ಭಾಷಣ, ಪ್ರಯೋಗ, ಬಾಂಬು ಎಸೆತ, ಹಿಂಸಾಚಾರಗಳ ಪ್ರಚೋದನೆಗೆ ಈ ಶಬ್ದ ಬಳಸುವುದು ಕಮ್ಯುನಿಸ್ಟರ ರೀತಿ. ‘ಛೂ’ ಬಿಡುವುದು, ಕೆಟ್ಟ ಉದ್ದಿಶ್ಯದ ಪ್ರೇರಣೆಗೆ ಬಳಸುವ ಮಾತು. ಕುಮ್ಮಕ್ಕು ಕೊಡುವುದು.

2) ‘Incentive ಎಂಬುದು, ಸ್ವಯಂಪ್ರವೃತ್ತಿಯಿಂದ ಒಂದು ಸಕಾರಾತ್ಮಕ ಕಾರ್ಯ ನಡೆಸುವವನಿಗೆ ಕೊಡುವ ಪ್ರೋತ್ಸಾಹ. ನಿಮ್ಮ ‘ಸಾಲಮೇಳ’ಗಳು, 20 ಅಂಶದ ಕಾರ್ಯಕ್ರಮಗಳು ಇಲ್ಲಿ ಸೇರುವುದಿಲ್ಲ. ಹೊಲವೇ ಇಲ್ಲದವನಿಗೆ ಕೃಷಿಸಾಲ, ಅಂಗಡಿ ಇಲ್ಲದವನಿಗೆ ವಾಣಿಜ್ಯಸಾಲ- ಆಮೇಲೆ ‘ಗುಳುಂ’, ಸಾಲಮನ್ನಾ ಇವು Incentive ಆದಾವು. Incentive ಎಂಬುದು ವ್ಯಕ್ತಿಮೂಲದ್ದು. ಒಬ್ಬನು ತಾನೇ ಒಂದು ಸತ್ಕಾರ್ಯ, ಸದುದ್ದೇಶದ ದುಡಿಮೆಯಲ್ಲಿ ತೊಡಗುವಾಗ, ಅವನಿಗೆ ಬೆಂಬಲ, ಗೌರವ, ಸಹಾಯ ಮಾಡುವುದು, ವಿದ್ಯಾರ್ಥಿ ವೇತನ, ಅರ್ಹರಿಗೆ ಪ್ರೋತ್ಸಾಹ, ಹೆಚ್ಚು ಬೆಳೆದ ಬೆಳೆಗಾರನಿಗೆ ಬಹುಮಾನ, ಒಳ್ಳೆಯ ಸಾಹಿತಿಗೆ ಗೌರವಪದವಿ, ಪ್ರಶಸ್ತಿ, ಧನಸಹಾಯ, ಇವೇ ಬೇರೆ. ಇದು ತಿಳಿಯದೇ ನೀವು ಎಂಥ ಅರ್ಥಶಾಸ್ತ್ರ ಕಲಿಸುತ್ತೀರಿ?’ ಎಂದು ಝಾಡಿಸಿದರು.

ಪ್ರಶ್ನೆ ಕೇಳಿದವರ ಕಮ್ಯುನಿಸ್ಟ್ ಮನೋಭಾವ, ಅವರು ಸಾಯುವ ತನಕ ಅವರನ್ನು ಬಿಡದೆ ಬೇತಾಳವಾಗಿ ಕಾಡಿತ್ತು. ಕಮ್ಯುನಿಸ್ಟರಾಗಲಿ, ಕ್ರೖೆಸ್ತರಾಗಲಿ, ಮಹಮ್ಮದೀಯರಾಗಲಿ, ಯಾರೇ ಆಗಲಿ, ಮನಮುರುಟಿನಿಂದ ಮನಬಾಗಿಲು ಮುಚ್ಚಿ Closed minded ಎಂಬ ರೀತಿಯ ಕುರುಡು ಉಂಟಾದರೆ, ನರಕದಲ್ಲೂ ತಿದ್ದುವುದು ಸಾಧ್ಯವಿಲ್ಲ. ಧೃತರಾಷ್ಟ್ರನಿಗೆ ತನಗೇಕೆ ರಾಜ್ಯಾಧಿಕಾರ ತಪ್ಪಿತು? ಎಂಬ ಬಗೆಗೆ ತರ್ಕಬದ್ಧ, ವಿವೇಕಪೂರ್ಣ ತಿಳಿವಳಿಕೆ ಬಂದಿತೇ? ದುರ್ಯೋಧನನಿಗೋ? ರಾವಣನಿಗೋ? ಶಿಶುಪಾಲನಿಗೋ? ಅದು ಮತಾಂಧತೆ, ಮತಾಂತರ ತರುವ ಮನನಾಶ, ಸಂಸ್ಕೃತಿನಾಶ, ಪ್ರಜ್ಞಾನಾಶ.

ಗುಜರಾತಿನಲ್ಲಿ, ಆರ್ಚ್ ಬಿಷಪ್ ಎಂಬ ಪದವಿಯಲ್ಲಿನ ಪಾದ್ರಿ ಮಹಾಶಯರೊಬ್ಬರು ಕ್ರೖೆಸ್ತ ಸಮುದಾಯಕ್ಕೆ ಕರೆಕೊಟ್ಟಿದ್ದಾರೆ- ‘ರಾಷ್ಟ್ರವಾದಿಗಳಿಗೆ, ದೇಶಾಭಿಮಾನಿಗಳಿಗೆ, Nationalistಗಳಿಗೆ ವೋಟು ಹಾಕಬೇಡಿ’ ಅಂತ! ಅಬ್ಬಾ, ಬಯಲಾದರು! ‘ನೀ ಮಾಯೆಯೊಳಗೋ? ನಿನ್ನೊಳು ಮಾಯೆಯೋ?’ ಎಂಬ ಕನಕದಾಸರ ವಾಣಿಯನ್ನು (ಕ್ಷಮಿಸಿ!) ಇಲ್ಲಿ ವಿಡಂಬನೆಯಾಗಿ ಅನ್ವಯಿಸಿ ನೋಡಿ. ಈತ ಹುಟ್ಟಿನಿಂದ ಭಾರತೀಯ, ಹಿಂದು ಮೂಲದವ! ಯಾವಾಗಲೋ ಮತಾಂತರವಾದವರು. ಇವರು ಜೆರೂಸಲೆಂ ಬೆತ್ಲೆಹೆಂನಿಂದ ಬಂದವರಲ್ಲ. ಭಾರತ ಜಾತರೊಬ್ಬರಿಗೆ ಭಾರತದ್ವೇಷದ ದುರ್ಗತಿ ಹೇಗೆ ಬಂತು? ಇದು ಹಾಗೂ ಮರಳುಗಾಡಿನ ಮತಗಳು ಮೂಲೋದ್ದೇಶದಲ್ಲಿಯೇ ರಾಜಕೀಯ, ವಿಸ್ತರಣಾವಾದಿ, ಸೇನಾ ಮನನೆಲೆಯಯ ಸುಳಿಯವು. ಅಲ್ಲಿ ಆತ್ಮಶೋಧ, ಯೋಗ, ಬುದ್ಧ, ಋಷಿಮುನಿಗಳು ಉಪದೇಶಿಸಿದ ವ್ಯಕ್ತಿಸುಧಾರಣಾ ಯತ್ನ, ಗುರಿಯ, ಆವಿಷ್ಕಾರ ಅಂಶಗಳು ಇಲ್ಲ. ಗುಂಪು ಬೆಳೆಸುವುದು, Swelling the following, ಸೇನಾನಿರ್ವಣ ರೀತಿಯ ಪ್ರಣಾಳಿಗಳು ಇವರದೆಂದು ರಾಂ ಸ್ವರೂಪ್, ಅರುಣ್ ಶೌರಿ, ಸೀತಾರಾಂ ಗೋಯೆಲ್, ಡೇವಿಡ್ ಫ್ರಾಲೀ (ವಾಮದೇವ ಶಾಸ್ತ್ರಿ), ಕಾನ್ರಾಡ್ ಎಲ್ಸ್ ್ಟ ಅಲ್ಲದೆ, ಅನ್ವರ್ ಶೇಖ್ ಇನ್ನಿತರ ಮತತೊರೆದ, ಮನಬೆಳೆದ, ಮನಬಿಚ್ಚಿದ ಬರಹಗಾರರು ಬರೆದು ಪುಸ್ತಕರಾಶಿಯನ್ನೇ ಕೊಡುಗೆ ಇತ್ತಿದ್ದಾರೆ. ನನ್ನಲ್ಲಿ ಈ ಬಗೆಯ ಒಂದು ಭಂಡಾರವೇ ಇದೆ. ಇವರು ‘ಮತ ಬೆಳೆಸುವುದು’ ಹೇಗೆ? ಹಿಂದುಗಳನ್ನು ಬೈಯುವುದು, ಹಿಂದು ಗ್ರಂಥಗಳನ್ನು ತಿರುಚುವುದು, ಅವಹೇಳನ ಮಾಡುವುದು, ಮುಗ್ಧರಿಗೆ ಆಮಿಷ ತೋರಿಸುವುದು, ಬೆದರಿಸುವುದು, ಸರ್ಕಾರಿ ಸೌಲಭ್ಯಗಳ ದುರುಪಯೋಗ, ಸಂಘಶಕ್ತಿಯಿಂದ ಸರ್ಕಾರಗಳನ್ನೇ ವಶಪಡಿಸಿಕೊಳ್ಳುವುದು, ಉರುಳಿಸುವುದು, ವಿದೇಶಿ ಬೆಂಬಲದಿಂದ Minority ಆಗಿಯೂ Majorityಯನ್ನು ಬಗ್ಗಿಸುವುದು, ಅಂತಾರಾಷ್ಟ್ರೀಯ ಒತ್ತಡ ತರುವುದು- ಇದೆಲ್ಲ ನೋಡಿದ್ದೇವೆ. ಕಮ್ಯುನಿಸ್ಟರು ಮಾಡಿದ್ದೂ, ಮಾಡುತ್ತಿರುವುದೂ ಇದನ್ನೇ. ಈ ಸಂಘಟಿತ ಬೇತಾಳ ಸ್ವರೂಪಕ್ಕೇ ಈಗ ಎಲ್ಲರೂ ತಿಳಿದಿರುವಂತೆ ‘ಸೆಕ್ಯುಲರ್’ ಎಂಬ ಅಮಾಯಕ, ಮಾರೀಚ ಸೋಗಿನ ಮೋಸಶಬ್ದ ಬಳಕೆ ಆಗುತ್ತಿರುವುದು (ನನ್ನ ‘ಸೆಕ್ಯುಲರಿಸಂ’ ಪುಸ್ತಕ ಓದಿ. ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ). ಈ ಸೆಕ್ಯುಲರ್ ಸೇನೆ, ಈಗ ಗೌರವಾರ್ಹವಾದ ಎಲ್ಲ ಸಂಸ್ಥೆಗಳ ಗಂಟಲನ್ನು ಹಿಡಿದೇ ಅನರ್ಥಮಾಡುತ್ತಿದೆ ಎಂದು ಈ ಹಿಂದೆ ಬರೆದಿದ್ದೇನೆ. ಜೆಎನ್​ಯುು, ಐಐಟಿಗಳಲ್ಲದೆ ಅಕಾಡೆಮಿ, ಪ್ರಾಧಿಕಾರ, ಪರಿಷತ್ತುಗಳು, ಪ್ರಶಸ್ತಿ ಪ್ರದಾಯಕ ಸಂಸ್ಥೆಗಳು, ಮಠಮಾನ್ಯಗಳು, ಹಲವು ‘ಸಿಡಿಮಿಡುಕ’ ಕಾವೀಧಾರೀ ಸ್ವಾಮಿಗಳು, ಇಂಥ ಎಲ್ಲ ಢೋಂಗಿಗಳೂ ಇಲ್ಲಿ ಸೇರಿ ದಾಂಧಲೆ ಎಬ್ಬಿಸುತ್ತಾ, ಹಿಂದು ತೇಜೋವಧೆಗೆ ಸರ್ವಮುಖ ಯತ್ನ ಮಾಡುತ್ತಿದ್ದಾರೆ. ಅದರ ಮುಂಚೂಣಿ ಯತ್ನ, ಮೋದಿಯವರನ್ನು ಬೈಯುವುದು, ಅವರ ದೇಶೋದ್ಧಾರ ಕಾರ್ಯಗಳಿಗೆ ಅಪಾರ್ಥ ಮಾಡುವುದು, ಜನರಿಗೆ ತಪು್ಪ ಕಲ್ಪನೆ ಕೊಡುವುದು, ಸಂಘಟಿತ ಹಿಂಸಾಚಾರ ಮಾಡುವುದು- ಎಲ್ಲವನ್ನೂ ಆರ್​ಎಸ್​ಎಸ್​ಗೆ ತಳುಕು ಹಾಕುವುದು- ಇಂಥವು.

ಮಮತಾ ಬ್ಯಾನರ್ಜಿಯವರ ಕಾಳಧನವೆಲ್ಲ ನೋಟು ಅಮಾನ್ಯೀಕರಣದಲ್ಲಿ ಹೋಯ್ತು. ‘ಗಿಳಿ ಪಂಜರದೊಳಿಲ್ಲ’, ‘ಬೆಕ್ಕುಕೊಂಡು ಮಾಯವಾಯಿತಲ್ಲಾ?’ ಎಂಬಂತಾಗಿದೆ. ಪಿಣರಾಯಿ, ಸೋನಿಯಾ, ಕರ್ನಾಟಕದ ಕರ್ಣರ, ದಾನಶೂರ ‘ಭಾಗ್ಯದಾತ’ರ ಸ್ಥಿತಿ? ಇದೇ! ಎಲ್ಲ ಜಮಾಯಿಸಿ, ಎಲ್ಲೆಲ್ಲೂ ಯಾವ ಸಭೆ-ಸಮಾರಂಭ ಸಿಕ್ಕರೂ ಮೋದಿಗೆ ಬೈಗುಳ, ಹಿಂದುನಿಂದೆ, ರಾಮಾಯಣ ತೇಜೋವಧೆ, ಗೀತೆಗೆ ಬೈಗುಳ- ಮನುವನ್ನು ಕೇಳಲೇಬೇಡಿ- ಹಿಂದು ವಿದ್ವಾಂಸರಿಗೆ ಸರ್ಕಾರೀ ಕಿರುಕುಳ, ಸುಳ್ಳು ಕೇಸು ಹಾಕುವುದು, ಹಿಂದು ಮುಖಂಡರ ಕೊಲೆ, ಅಪಪ್ರಚಾರಕ್ಕೆ ಜಾಹೀರಾತು, ಹಿಂದು ಸಮುದಾಯಗಳನ್ನು ಒಡೆಯುವುದು, ಅಲ್ಲಿ ಜಾತಿಗಳನ್ನೇ ಬೇರೆ ಉಪಜಾತಿಗಳ ಮೇಲೆ ಎತ್ತಿಕಟ್ಟುವುದು, ಅಲ್ಲಿ ಬುದ್ಧ, ಬಸವ, ಶಂಕರಾದಿ ಮಹಾತ್ಮರನ್ನು ಎಳೆತಂದು, ತಿರುಚಿ, ದುರುಪಯೋಗಿಸಿ, ಅನರ್ಥ ಮಾಡುವುದು- ಇದೇ ಕಾಯಕ ನಡೆಯುತ್ತಿದೆ. ಇದೆಲ್ಲ ಎಲ್ಲಿಯವರೆಗೆ? ಬರಲಿರುವ ಚುನಾವಣೆಯವರೆಗೆ! ಕಾಣಿರಯ್ಯ!

ಈಗ ಸಾಹಿತ್ಯ ಸಮ್ಮೇಳನದ ದುರುಪಯೋಗ! ಅಲ್ಲಿ ರಾಜಕೀಯ ವೇದಿಕೆ! ಅಲ್ಲಿ ನಾಲಿಗೆ ಹರಿಯಬಿಡುವುದು, ಕೀಳುಶಬ್ದಗಳ ಪ್ರಯೋಗ, ಶಿಶುಪಾಲಸೇನೆಯ ಆಕ್ರಮಣ ಇದು ನಡೆದಿದ್ದು ಈಗ ಕರ್ನಾಟಕ ಎಂಬ ಸಂಸ್ಕೃತಿಯ ಅವಹೇಳನ ನಡೆದಿದೆ. ಒಬ್ಬ ಅಧ್ಯಕ್ಷ. ಮೊದಲಿನಿಂದಲೂ ಈತ ಈ ಕುಪ್ರಸಿದ್ಧ ಚಾಳಿಗೇ ಗಂಟುಬಿದ್ದ ಮಹಾನುಭಾವ! ಅವನಂಥವರೇ ‘ಗೋಷ್ಠಿ’ ಅಧ್ಯಕ್ಷರುಗಳು. ಯಾರು ಆಯ್ದರೋ?

ಪುಣ್ಯಾತ್ಮರು! ಪ್ರಶ್ನೆ ಕೇಳಲೇ? ಕನ್ನಡ ಭಾಷೆಯನ್ನು ಹೀಗೆ ಬೆಳೆಸುತ್ತೀರಾ? ನಿಮ್ಮ ಮಾತುಗಳು ಬೆಳವಣಿಗೆಗೆ ಪೂರಕವೋ? ದ್ವೇಷಕ್ಕೋ? ಸಂಸ್ಕೃತಿಯೇ ಹಾಳಾದರೆ ಭಾಷೆ ಹೇಗೆ ಉಳಿಯುತ್ತದೆ? ಭಾಷೆ ಎಂದರೆ ಬರೀ ಅಕ್ಷರವೇ? ಶಬ್ದವೇ? ‘ಅಕ್ಷರ’ ಎಂದರೆ (ನ+ಕ್ಷರತಿ ಎಂಬಂತೆ) ‘ಚ್ಯುತಿಯಿಲ್ಲದ ಮೂಲಬೇರುಗಳು’ ಅಲ್ಲವೇ? ಇದನ್ನೇ ಅಲ್ಲವೇ ಇಂಗ್ಲಿಷ್​ನಲ್ಲಿ Characters ಎಂದುದು? ನೋಡಿ, Greek, Latin, Arabic, Sanskrit characters ಎನ್ನುತ್ತಾರಲ್ಲ? ಏಕೆ? ಸ್ವಯಂ ಚಾರಿತ್ರ್ಯಶೂನ್ಯರಿಗೆ ಅಕ್ಷರಗಳು ಒಲಿಯುವುದು ಹೇಗೆ? ಅಕ್ಷರವಿಲ್ಲದೆ ಸಂಸ್ಕೃತಿಯೇ? ಸಂಸ್ಕೃತಿಯಿಲ್ಲದೆ ಅಕ್ಷರವೇ? ಬೈಗುಳದ ಕಾಗುಣಿತವೇನು? ಅದರ ಪರಿಭಾಷೆಗೆ ಬೇರೆ ವ್ಯಾಕರಣ, ಬೇರೆ ಅಕ್ಷರ ತಯಾರಿಸಿಕೊಳ್ಳಲು ಸಮ್ಮೇಳನ ಬೇಕೆ? ಕನ್ನಡಿಗರೇ, ಎದ್ದೇಳಿ, ಎಚ್ಚರವಾಗಿರಿ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top