Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಭಾವೈಕ್ಯತೆ ಟ್ಯಾಂಕ್ ಭರ್ತಿಗೆ ಬೇಕು ಯುದ್ಧ ಟ್ಯಾಂಕ್!

Wednesday, 15.11.2017, 3:03 AM       No Comments

1942ರಲ್ಲಿ ಹದಿನೇಳರ ಕನಕಲತಾ ಬರುವಾ ಸ್ವಾತಂತ್ರ್ಯದ ಸಂಕೇತವಾದ ರಾಷ್ಟ್ರಧ್ವಜದ ರಕ್ಷಣೆಗಾಗಿ ಪ್ರಾಣವನ್ನೇ ಬಲಿಗೊಟ್ಟಳು. ಈಗ ಇಪ್ಪತ್ತೇಳರ ಕನ್ಹೈಯಾ ಕುಮಾರ್ ‘ಭಾರತ್ ಕಿ ಬರ್ಬಾದಿ’ಗಾಗಿ ದನಿಯೆತ್ತುತ್ತಿದ್ದಾನೆ. ಈ ದೇಶ ನಿರ್ವಣವಾದದ್ದು, ಇನ್ನೂ ಅಸ್ತಿತ್ವದಲ್ಲಿರುವುದು ಹೇಗೆ ಎಂದು ಇಂಥವರಿಗೆ ಮನವರಿಕೆ ಮಾಡಿಕೊಡಬೇಕಿದೆ.

ನವದೆಹಲಿಯ ಜವಾಹರ್​ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಇದೇ ಜುಲೈ 23ರಂದು ಆಯೋಜಿಸಲಾಗಿದ್ದ ತಿರಂಗಾ ಯಾತ್ರಾದಲ್ಲಿ ಕುಲಪತಿ ಪ್ರೊ ಎಂ. ಜಗದೀಶ್ ಕುಮಾರ್ ಯುದ್ಧ ಟ್ಯಾಂಕ್ ಒಂದನ್ನು ಪಡೆದುಕೊಳ್ಳಲು ವಿಶ್ವವಿದ್ಯಾಲಯಕ್ಕೆ ಸಹಕರಿಸಬೇಕೆಂದು ಸಮಾರಂಭದಲ್ಲಿ ಉಪಸ್ಥಿತರಿದ್ದ ತೈಲ ಮಂತ್ರಿ ಧರ್ವೇಂದ್ರ ಪ್ರಧಾನ್ ಹಾಗೂ ವಿದೇಶ ರಾಜ್ಯ ಮಂತ್ರಿ ಜನರಲ್ ವಿ. ಕೆ. ಸಿಂಗ್ (ನಿವೃತ್ತ) ಅವರನ್ನು ಕೇಳಿಕೊಂಡರು. ದೇಶರಕ್ಷಣೆಗಾಗಿ ನಮ್ಮ ಸೈನಿಕರು ಮಾಡುತ್ತಿರುವ ತ್ಯಾಗವನ್ನು ವಿದ್ಯಾರ್ಥಿಗಳಿಗೆ ನಿರಂತರವಾಗಿ ನೆನಪಿಸಲೋಸುಗ ಆ ಯುದ್ಧ ಟ್ಯಾಂಕನ್ನು ವಿಶ್ವವಿದ್ಯಾಲಯದ ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸಬೇಕೆಂಬುದು ಪ್ರೊ. ಕುಮಾರ್ ಹೇಳಿಕೆಯಾಗಿತ್ತು. ಜೆಎನ್​ಯುುವನ್ನು ತಮ್ಮ ಆಸ್ತಿ, ತಮ್ಮ ಅನುಮತಿಯಿಲ್ಲದೇ ಅಲ್ಲೇನೂ ನಡೆಯಕೂಡದು ಎಂದು ತಿಳಿದಿರುವ ತಥಾಕಥಿತ ಪ್ರಗತಿಪರರು ಅರ್ಥಾತ್ ಎಡಪಂಥೀಯರು ಕುಲಪತಿಗಳ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರೆ ರಾಷ್ಟ್ರದ ರಾಜಧಾನಿಯಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಭಾರತದ ಬರ್ಬಾದಿಯ ಕೂಗು, ಸಂಸತ್ ದಾಳಿ ಮತ್ತದರ ಮೂಲಕ ಹಲವು ಭದ್ರತಾ ಸಿಬ್ಬಂದಿಯ ಪ್ರಾಣಹಾನಿಗೆ ಕಾರಣನಾದವನೆಂದು ಮರಣದಂಡನೆಗೆ ಗುರಿಯಾದ ಅಫ್ಜಲ್ ಹಾಗೂ ನಮ್ಮ ಸೈನಿಕರ ಜೀವ ತೆಗೆಯುತ್ತಿರುವ ಪಾಕ್-ಪರ ಕಾಶ್ಮೀರಿ ಭಯೋತ್ಪಾದಕರ ವೈಭವೀಕರಣ ಮುಂತಾದ ಅಹಿತಕರ ಘಟನೆಗಳು ಕೆಲ ವಿದ್ಯಾರ್ಥಿಗಳಿಂದ ಘಟಿಸಿದ ಹಿನ್ನೆಲೆಯಲ್ಲಿ ಕುಲಪತಿಗಳ ಮಾತುಗಳಿಗೆ ಸಮರ್ಥನೆಯೂ ವ್ಯಕ್ತವಾಯಿತು.

ಆಸಕ್ತಿಕರ ವಿಷಯವೆಂದರೆ ಟ್ಯಾಂಕ್​ಗಳಿಗಾಗಿ ಬೇಡಿಕೆ ಸಲ್ಲಿಸಿದವರಲ್ಲಿ ಜೆಎನ್​ಯುು ಕುಲಪತಿ ಮೊದಲಿಗರೇನಲ್ಲ. ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಸಂಘಸಂಸ್ಥೆಗಳು ಹಾಗೂ ಎನ್​ಜಿಓಗಳಿಂದ ಅಂತಹ ಬೇಡಿಕೆಗಳು ಕಳೆದ ಮೂರು-ನಾಲ್ಕು ವರ್ಷಗಳಿಂದಲೂ ಬರುತ್ತಲೇ ಇವೆ ಮತ್ತು ಆ ಬೇಡಿಕೆಗಳ ಸಂಖ್ಯೆ ವರ್ಷೇವರ್ಷೇ ಅಧಿಕವಾಗುತ್ತಲೇ ಇದೆ. 2014-15ರಲ್ಲಿ ಅಂತಹ ಮೂರು ಬೇಡಿಕೆಗಳಿದ್ದರೆ ಮರುವರ್ಷ ಅದು ಏಳಕ್ಕೇರಿತು. ಜೆಎನ್​ಯುುನಲ್ಲಿ ದೇಶವಿರೋಧಿ ಘೊಷಣೆಗಳ ಪ್ರಕರಣ ನಡೆದ ನಂತರ ಬೇಡಿಕೆಗಳ ಸಂಖ್ಯೆ ಗಮನಾರ್ಹವಾಗಿ ಏರಿತು. 2016-17ರ ಇಡೀ ಹಣಕಾಸು ವರ್ಷದಲ್ಲಿ ಅದು ಮೂವತ್ತೊಂದು ಇದ್ದರೆ ಅಷ್ಟೇ ಸಂಖ್ಯೆಯ ಬೇಡಿಕೆಗಳು ಪ್ರಸಕ್ತ ಹಣಕಾಸು ವರ್ಷದ ಮೊದಲ ಅರುತಿಂಗಳಲ್ಲೇ ಸೇನೆಗೆ ಬಂದಿವೆ!

ನಿಯಮ ಏನಿದೆ?: ನಿರುಪಯುಕ್ತ ಅಥವಾ ಹೆಚ್ಚುವರಿ ಪಟ್ಟಿಗೆ ಹಿಂದಿನ ಹಣಕಾಸು ವರ್ಷದಲ್ಲಿ ಸೇರಿಸಲ್ಪಟ್ಟ ಟ್ಯಾಂಕ್​ಗಳು ಅಥವಾ ಇನ್ನಿತರ ಯುದ್ಧೋಪಕರಣಗಳನ್ನು ಬೇಡಿಕೆ ಇತ್ತವರಲ್ಲಿ ಅರ್ಹರೆಂದು ಕಂಡುಬಂದವರಿಗೆ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಆಧಾರದ ಮೇಲೆ ನೀಡುವ ಕ್ರಮ ಸೇನೆಯಲ್ಲಿದ್ದು, ಪಡೆದುಕೊಳ್ಳುವವರು ಉಪಕರಣದ ಬೆಲೆಯ ಶೇಕಡಾ ಐದರಷ್ಟನ್ನು ತೆರಬೇಕು ಹಾಗೂ ಸಾಗಾಣಿಕೆ ವೆಚ್ಚ ಭರಿಸಬೇಕಷ್ಟೇ. ಕಳೆದ ಮೂರು ವರ್ಷಗಳಲ್ಲಿ ಹೀಗೆ ಹಲವಾರು ಟ್ಯಾಂಕ್​ಗಳು ಹಾಗೂ ಆರ್​ಸಿಎಲ್ ತೋಪುಗಳನ್ನು ಸೇನೆ ಕೊಟ್ಟದ್ದಿದೆ. ದೆಹಲಿಯ ಮಾಡರ್ನ್ ಸ್ಕೂಲ್ ಹಾಗೂ ಪಟಿಯಾಲಾದ ಪಂಜಾಬಿ ಯೂನಿವರ್ಸಿಟಿ ತಲಾ ಒಂದೊಂದು ವೈಜಯಂತ ಟ್ಯಾಂಕ್ ಪಡೆದುಕೊಂಡಿದ್ದರೆ ಉತ್ತರ ಪ್ರದೇಶದ ರಾಮ್ುರದಲ್ಲಿನ ಮಹಮದ್ ಆಲಿ ಜೌಹರ್ ಯೂನಿವರ್ಸಿಟಿ, ಲಕ್ನೋದ ಲ ಮಾರ್ಟಿನಿಯರ್ ಕಾಲೇಜ್ ಹಾಗೂ ಸನಾವರ್​ನ ಲಾರೆನ್ಸ್ ಸ್ಕೂಲ್ ತಲಾ ಒಂದೊಂದು ಟಿ-55 ಟ್ಯಾಂಕ್​ಗಳನ್ನು ಪಡೆದುಕೊಂಡಿವೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಭಾರತಿ ವಿದ್ಯಾಪೀಠ, ಪಂಜಾಬ್​ನ ನಭದಲ್ಲಿನ ಪಂಜಾಬ್ ಪಬ್ಲಿಕ್ ಸ್ಕೂಲ್ ಹಾಗೂ ಛತ್ತೀಸ್​ಗಢದ ರಾಜ್​ಕುಮಾರ್ ಕಾಲೇಜ್​ಗಳು ಬೇಡಿಕೆಯಿತ್ತದ್ದು ಎರಡೆರಡು ಟಿ-55 ಟ್ಯಾಂಕ್​ಗಳಿಗಾದರೆ ಅವುಗಳಿಗೆ ಸೇನೆ ಕೊಟ್ಟಿದ್ದು ಒಂದೊಂದೇ ಟ್ಯಾಂಕ್. ಇನ್ನು ಕೆಲವು ಬೇಡಿಕೆಗಳು ಪರಿಶೀಲನೆಯಲ್ಲಿವೆ.

ಶೈಕ್ಷಣಿಕ ಸಂಸ್ಥೆಗಳಲ್ಲದೇ ವಿವಿಧ ರಾಜ್ಯ ಸರ್ಕಾರಗಳ ನಾಗರಿಕ ವಿಭಾಗಗಳೂ ಹಳೆಯ ಯುದ್ಧೋಪಕರಣಗಳಿಗಾಗಿ ಬೇಡಿಕೆಯಿತ್ತು ಪಡೆದುಕೊಂಡದ್ದಿದೆ. ಪಂಜಾಬ್​ನ ಅಮೃತಸರದ ಪಂಜಾಬ್ ಸ್ಟೇಟ್ ವಾರ್ ಹೀರೋಸ್ ಮೆಮೊರಿಯಲ್-ಕಮ್​ವು್ಯೂಸಿಯಂ ನಾಲ್ಕು ವೈಜಯಂತ ಟ್ಯಾಂಕ್​ಗಳು ಹಾಗೂ ಹತ್ತೊಂಬತ್ತು ಆರ್​ಸಿಎಲ್ ಗನ್​ಗಳನ್ನು ಕಳೆದ ವರ್ಷ ಪಡೆದುಕೊಂಡಿದೆ. ಉತ್ತರ ಪ್ರದೇಶದ ಇಟಾವಾದಲ್ಲಿರುವ ಲಯನ್ ಸಫಾರಿ ಪಾರ್ಕ್ ಅಂತೂ ಐದು ವೈಜಯಂತ ಟ್ಯಾಂಕ್​ಗಳನ್ನು ಪಡೆದುಕೊಂಡಿದೆ. ಗುಜರಾತ್​ನ ಕೇವಾಡಿಯಾದಲ್ಲಿ ನಿರ್ವಣವಾಗುತ್ತಿರುವ, 182 ಮೀಟರ್ ಎತ್ತರದ ಸರ್ದಾರ್ ವಲ್ಲಭ್​ಭಾಯಿ ಪಟೇಲರ ಪ್ರತಿಮೆಗಾಗಿ 40 ವೈಜಯಂತ ಟ್ಯಾಂಕ್​ಗಳನ್ನು ನೀಡಲಾಗಿದೆ. ಆದರೆ ಈ ಬಗ್ಗೆ ಗೊಂದಲಗಳಿವೆ. ಪ್ರತಿಮೆಯ ನಿರ್ವಣದಲ್ಲಿ ತೊಡಗಿರುವ ಟ್ರಸ್ಟ್ ಪ್ರತಿಮೆಗಾಗಿ ಉತ್ಕಷ್ಟ ಗುಣಮಟ್ಟದ ಲೋಹಕ್ಕಾಗಿ ಹುಡುಕುತ್ತಿದ್ದಾಗ ಈ ಟ್ಯಾಂಕ್​ಗಳತ್ತ ಅದರ ಗಮನ ಬಿತ್ತು. ಟ್ರಸ್ಟ್ ಬಯಸಿದ್ದಕ್ಕಿಂತಲೂ ಹೆಚ್ಚಿನ ಗುಣಮಟ್ಟದ ಲೋಹ ಟ್ಯಾಂಕ್​ಗಳಲ್ಲಿರುವುದೇನೋ ನಿಜ, ಆದರೆ ಆ ಟ್ಯಾಂಕ್​ಗಳನ್ನೆಲ್ಲಾ ಕರಗಿಸಿ ಲೋಹಗಳನ್ನು ಬೇರ್ಪಡಿಸಿಕೊಳ್ಳುವುದು ಹೆಚ್ಚಿನ ಖರ್ಚಿನ ಬಾಬ್ತು ಎಂದು ಅರಿವಾದ ಕಾರಣ ಆ ಟ್ಯಾಂಕ್​ಗಳನ್ನೇನು ಮಾಡಬೇಕೆಂದು ಟ್ರಸ್ಟ್ ಗೊಂದಲದಲ್ಲಿದೆ. ಪ್ರತಿಮೆ ಪೂರ್ಣವಾದ ನಂತರ ಇನ್ನಷ್ಟು ಆಕರ್ಷಣೆಯನ್ನು ಒದಗಿಸುವ ಉದ್ದೇಶಕ್ಕಾಗಿ ಆ ಟ್ಯಾಂಕ್​ಗಳನ್ನು ಪ್ರದರ್ಶನಕ್ಕಿಡುವ ಬಗ್ಗೆಯೂ ಮಾತುಗಳಿವೆ. ಹರಿದು ಹಂಚಿಹೋಗಲಿದ್ದ ದೇಶವನ್ನು ಒಗ್ಗೂಡಿಸಿ ಇಂದಿನ ನಮ್ಮ ವಿಶಾಲ ಭಾರತವನ್ನು ನಿರ್ವಿುಸಿದ ಸರ್ದಾರ್ ಪಟೇಲರ ಪ್ರತಿಮೆಯ ಸುತ್ತ ಈ ಟ್ಯಾಂಕ್​ಗಳಿರುವುದು ಸೂಕ್ತವೂ, ಅರ್ಥಪೂರ್ಣವೂ ಆಗಬಲ್ಲುದು.

ಈ ಹಿನ್ನೆಲೆಯೊಂದಿಗೆ, ಜೆಎನ್​ಯುು ಕುಲಪತಿಗಳ ಬೇಡಿಕೆಯನ್ನು ವಿಶ್ಲೇಷಿಸೋಣ. ರಾಷ್ಟ್ರದ ಹಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ಟ್ಯಾಂಕ್​ಗಳನ್ನು ಪ್ರದರ್ಶನಕ್ಕಿಟ್ಟಾಗ ಉಂಟಾಗದಿದ್ದ ಚರ್ಚೆ, ವಾದ, ಆಕ್ಷೇಪಣೆ ಜೆಎನ್​ಯುು ಬಗ್ಗೆ ಉಂಟಾದದ್ದೇಕೆ? ಹೀಗೆ ಋಣಾತ್ಮಕವಾಗಿ ಪ್ರತಿಕ್ರಿಯಿಸಿದವರು ಪ್ರಗತಿಪರತೆಯ ಮುಖವಾಡ ತೊಟ್ಟ ಎಡಪಂಥೀಯರು ಹಾಗೂ ಎಡಚಿಂತನಾ ಹಿನ್ನೆಲೆಯ ಮಾಜಿ ಜೆಎನ್​ಯುು ವಿದ್ಯಾರ್ಥಿಗಳು. ದೇಶಪ್ರೇಮದ ಸಂಕೇತವಾಗಿ ಜೆಎನ್​ಯುುನಲ್ಲಿ ಯುದ್ಧ ಟ್ಯಾಂಕನ್ನು ಪ್ರದರ್ಶನಕ್ಕಿಡಬೇಕಾದ ಪರಿಸ್ಥಿತಿ ನಿರ್ವಣವಾಗಿರುವುದು ದೇಶದ ಸುರಕ್ಷೆಗಾಗಿ ನಮ್ಮ ಸೈನಿಕರು ತೆರುತ್ತಿರುವ ಬೆಲೆಯನ್ನು ನಗಣ್ಯಗೊಳಿಸುವ, ರಾಷ್ಟ್ರದ ಏಕತೆಯ ವಿರೋಧಿಗಳನ್ನೇ ವೈಭವೀಕರಿಸುವ ಇವರ ಕುನೀತಿಗಳಿಂದಾಗಿಯೇ ಎನ್ನುವ ಸತ್ಯವನ್ನು ಇವರು ತಣ್ಣಗೆ ಮರೆತುಬಿಡುತ್ತಾರೆ.

ಟ್ಯಾಂಕ್​ಗಳನ್ನು ಪ್ರದರ್ಶಿಸುವುದರ ಮೂಲಕ ದೇಶಪ್ರೇಮ ಉದ್ದೀಪಿಸುವುದಿರಲಿ, ದೇಶಪ್ರೇಮ ಎಂಬ ಭಾವನಾತ್ಮಕತೆಯೇ ಅರ್ಥಹೀನ, ಅನಗತ್ಯ ಎಂದು ಇವರ ವಾದ. ಆದರೆ, ಭಾವನಾತ್ಮಕತೆ ಇಲ್ಲದೇ ಮನುಷ್ಯರು ಗುಂಪಿನಲ್ಲಿ ಬದುಕಲು ಸಾಧ್ಯವೇ? ಪರಸ್ಪರ ಪ್ರೀತಿ, ವಿಶ್ವಾಸ, ಸಾಹಚರ್ಯ, ಸಹಬಾಳ್ವೆಯ ತಳಹದಿಯೇ ಭಾವನಾತ್ಮಕತೆ. ನಮ್ಮ ಕುಟುಂಬವನ್ನು, ಆತ್ಮೀಯ ಬಂಧುಗಳ ಅಥವಾ ಸ್ನೇಹಿತರ ಗುಂಪನ್ನು ಕಟ್ಟಿ ಮುಂದುವರಿಸಿಕೊಂಡು ಹೋಗಲು ಭಾವನಾತ್ಮಕ ಪ್ರೀತಿ ಅತ್ಯಗತ್ಯ. ಭಾವನಾತ್ಮಕತೆ ಇಲ್ಲದಿದ್ದರೆ ಯಾರೊಬ್ಬರೂ ಯಾರೊಬ್ಬರ ಜತೆಗೂ ಹೆಚ್ಚುಕಾಲ ಒಟ್ಟಿಗಿರಲಾರರು. ಹೀಗೆ ಪುಟ್ಟದೊಂದು ಕುಟುಂಬವನ್ನೋ, ಬಂಧುಗಳ ಗುಂಪನ್ನೋ ಕಟ್ಟಿ ಕಾಪಾಡಿಕೊಳ್ಳಲು ಭಾವನಾತ್ಮಕತೆ ಅತ್ಯಗತ್ಯವಾಗುವುದಾದರೆ ಕೋಟಿಗಟ್ಟಲೆ ಜನರನ್ನುಳ್ಳ ವಿಶಾಲ ರಾಷ್ಟ್ರವನ್ನು ಉಳಿಸಿಕೊಳ್ಳಲು ಭಾವನಾತ್ಮಕತೆ ಬೇಡವೇ? ನಮ್ಮ ಹಿರಿಯರು ಈ ದೇಶವನ್ನು ಕಟ್ಟಿದ್ದೇ ಭಾರತ ಎಂಬ ರಾಷ್ಟ್ರದ ಬಗೆಗಿನ ಭಾವನಾತ್ಮಕ ಪ್ರೇಮದಿಂದ. ಲಕ್ಷಲಕ್ಷ ಗಂಡಸರು ಹೆಂಗಸರು ದೇಶಕ್ಕಾಗಿ ಇಡೀ ಬದುಕನ್ನೇ ತ್ಯಾಗ ಮಾಡಲು ಮುಂದೆಬಂದದ್ದು ಈ ದೇಶದ ಬಗ್ಗೆ ಭಾವನಾತ್ಮಕ ಪ್ರೇಮ ಇದ್ದದ್ದರಿಂದಲೇ. ಇಲ್ಲದಿದ್ದರೆ, ಸ್ವಾತಂತ್ರ್ಯದ ಬಗ್ಗೆ ಯಾರೂ ಕ್ಯಾರೇ ಅನ್ನುತ್ತಿರಲಿಲ್ಲ.

ಆಗ ಬಲಿದಾನ, ಈಗ?: ಆದರೆ ಕಳೆದ ಏಳು ದಶಕಗಳಲ್ಲಿ ರಾಷ್ಟ್ರದ ಬಗ್ಗೆ ಭಾವನಾತ್ಮಕ ಪ್ರೀತಿ ಇಳಿಮುಖವಾಗುತ್ತಾ ಸಾಗಿದೆ. ಇದನ್ನೊಂದು ಮಾರ್ವಿುಕ ಉದಾಹರಣೆಯ ಮೂಲಕ ಗುರುತಿಸಬಹುದು. 1942ರಲ್ಲಿ ಹದಿನೇಳರ ಕನಕಲತಾ ಬರುವಾ ಸ್ವಾತಂತ್ರ್ಯದ ಸಂಕೇತವಾದ ರಾಷ್ಟ್ರಧ್ವಜದ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಬಲಿಗೊಟ್ಟಳು. ಆ ಎಳೆಬಾಲೆಯ ಬಲಿದಾನ ಕೋಟ್ಯಂತರ ಭಾರತೀಯರನ್ನು ಸ್ವಾತಂತ್ರಾ್ಯಂದೋಳನಕ್ಕೆ ಧುಮುಕಿಸಿತು. ಆದರೆ, ಏಳು ದಶಕಗಳ ನಂತರ ಇಪ್ಪತ್ತೇಳರ ಕನ್ಹೈಯಾ ಕುಮಾರ್ ‘ಭಾರತ್ ಕಿ ಬರ್ಬಾದಿ’ಗಾಗಿ ದನಿಯೆತ್ತುತ್ತಿದ್ದಾನೆ, ‘ಭಾರತ್, ತೇರೆ ಟುಕಡೇ ಟುಕಡೇ ಹೋಂಗೇ’ ಎಂದು ಕೂಗುತ್ತಿದ್ದಾನೆ! ಅವನನ್ನು ಬೆಂಬಲಿಸುವ ಲಕ್ಷಾಂತರ ಜನ ನಮ್ಮ ನಡುವೆ ಹುಟ್ಟಿಕೊಂಡಿದ್ದಾರೆ!

ದೇಶದ ಅಳಿವಿಗಾಗಿ ದನಿಯೆತ್ತುವ ಇವರು ಮೂಲಭೂತವಾಗಿ ಎಡಚಿಂತನೆಯನ್ನು ಅಂಗೀಕರಿಸಿದವರು. ಇವರಿಗೆ ದೇಶ ಒಂದಾಗಿರುವುದು ಎಂದೂ ಬೇಕಿರಲಿಲ್ಲ. 1947ರಲ್ಲಿ ದೇಶವನ್ನು ಎರಡೇ ಎರಡು ತುಂಡು ಮಾಡಿ ಎಂದು ಮುಸ್ಲಿಂ ಲೀಗ್ ಕೇಳಿದರೆ, ಭಾರತವನ್ನು ಹದಿನೇಳು ಸ್ವತಂತ್ರ ದೇಶಗಳನ್ನಾಗಿ ವಿಭಜಿಸಿ ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷ ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರರ ಮುಂದೆ ಬೇಡಿಕೆಯನ್ನಿತ್ತಿತ್ತು! ಈ ರಾಷ್ಟ್ರಕಂಟಕರು ತಮ್ಮ ಬೇಡಿಕೆಗೆ ಸಮರ್ಥನೆಯಾಗಿ ದೇಶದ ವಿವಿಧ ಭಾಗಗಳಲ್ಲಿನ ಆರ್ಥಿಕ, ಐತಿಹಾಸಿಕ, ಸಾಂಸ್ಕೃತಿಕ, ಭಾಷಿಕ ಭಿನ್ನತೆಗಳನ್ನು ಮುಂದೆಮಾಡಿದರೂ ಇವರ ನಿಜವಾದ ಉದ್ದೇಶ ಅಧಿಕಾರಲಾಲಸೆಯ ಸ್ವಾರ್ಥವಾಗಿತ್ತು. ಇಷ್ಟೊಂದು ವೈವಿಧ್ಯಮಯ ರಾಷ್ಟ್ರದ ಎಲ್ಲೆಡೆ ತಮಗೆ ಬೆಂಬಲವಿಲ್ಲ ಎನ್ನುವುದನ್ನು ಈ ಚಾಣಾಕ್ಷರು ಅರಿತೇ ಇದ್ದರು. ಹೊರಗಿನ ಸಹಾಯದಿಂದ ಸಣ್ಣಸಣ್ಣ ಪ್ರದೇಶಗಳಲ್ಲಿ ರಕ್ತಪಾತದ ಮೂಲಕ ಅಧಿಕಾರ ಗಳಿಸಿಕೊಳ್ಳುವುದು ಸುಲಭವೆಂದು ಆ ದಿನಗಳಲ್ಲಿ ಪೂರ್ವ ಯೂರೋಪಿನಲ್ಲಿ ಘಟಿಸುತ್ತಿದ್ದ ಬೆಳವಣಿಗೆಗಳಿಂದ ಇವರಿಗೆ ಮನವರಿಕೆಯಾಗಿತ್ತು. ಅದಕ್ಕೆ ಪೂರಕವಾಗುವಂತೆ ಸೋವಿಯೆತ್ ಸರ್ವಾಧಿಕಾರಿ ಸ್ಟಾಲಿನ್ ಕಿತ್ತುಹೋಗುವ ಮಟ್ಟಿಗೆ ಇವರ ಕಿವಿಯೂದುತ್ತಿದ್ದ. ಹೀಗಾಗಿ ಈ ಜನ ಭಾರತವನ್ನು ಮತ್ತೊಂದು ಪೂರ್ವ ಯೂರೋಪ್ ಆಗಿಸಬಯಸಿದರು.

ಭೂಮಿಯ ಶೋಷಣೆ: ಇಲ್ಲಿ, ಮೂಲಭೂತ ಸೈದ್ಧಾಂತಿಕತೆಯ ಆಯಾಮವನ್ನೂ ಗಣನೆಗೆ ತಂದುಕೊಳ್ಳಬೇಕು. ಕಮ್ಯೂನಿಸಂ ಭೂಮಿಯನ್ನು ನೋಡುವುದು ಕಚ್ಚಾವಸ್ತುಗಳ ಪೂರೈಕೆದಾರ ಎಂದಷ್ಟೇ. ಇಲ್ಲಿ ಭಾವನೆಗಳಿಗೆ, ಸಂವೇದನೆಗಳಿಗೆ, ಅಮೂರ್ತ ಕಲ್ಪನೆಗಳಿಗೆ ಯಾವ ಸ್ಥಾನವೂ ಇಲ್ಲ. ಕಮ್ಯೂನಿಸ್ಟರ ಪ್ರಕಾರ ಭೂಮಿಗೆ, ಅದರ ಒಂದು ತುಣುಕಾದ ಭಾರತಕ್ಕೆ ಇರುವುದು ಕೇವಲ ಆರ್ಥಿಕ ಮೌಲ್ಯ ಮಾತ್ರ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಭೂಮಿ ಇರುವುದು ಶೋಷಿಸಲಿಕ್ಕಾಗಿ ಅಷ್ಟೇ! ದುರಂತವೆಂದರೆ, ಸ್ವಾತಂತ್ರಾ್ಯನಂತರ ದೇಶದ ಚುಕ್ಕಾಣಿ ದಕ್ಕಿಸಿಕೊಂಡ ನೆಹರೂರ ರಾಜಕೀಯ ಹಾಗೂ ಆಡಳಿತಾತ್ಮಕ ಹುನ್ನಾರಗಳಿಂದಾಗಿ ರಾಷ್ಟ್ರ್ರದ ಶಿಕ್ಷಣ, ಸಂಸ್ಕೃತಿ, ಸಾಹಿತ್ಯ ಹಾಗೂ ಮಾಧ್ಯಮ ಕ್ಷೇತ್ರಗಳ ನಾಯಕತ್ವ ಈ ಏಕತಾ-ವಿರೋಧೀ, ಸ್ವಾರ್ಥಿ ಎಡಪಂಥೀಯರ ಕೈಗೆ ಬಿತ್ತು. ತಾನು ಪೋಷಿಸುತ್ತಿರುವುದು ಫ್ರಾಂಕೆನ್​ಸ್ಟೈನ್ ರಕ್ಕಸನನ್ನು ಎಂದು ಆ ‘ಪಂಡಿತ’ ಕೊನೆಯವರೆಗೂ ಅರಿಯಲೇ ಇಲ್ಲ. ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಶತ್ರುವಿನತ್ತ ತಿರುಗಬೇಕಾದ ಯುದ್ಧ ಟ್ಯಾಂಕನ್ನು ಇವರ ಮುಂದೆ ನಿಲ್ಲಿಸಬೇಕಾದ ಒತ್ತಡಕ್ಕೆ ನಾವಿಂದು ಒಳಗಾಗಿದ್ದೇವೆ, ಈ ದೇಶ ನಿರ್ವಣವಾದದ್ದು, ಇನ್ನೂ ಅಸ್ತಿತ್ವದಲ್ಲಿರುವುದು ಹೇಗೆ ಎಂದು ಇವರಿಗೆ ಮನವರಿಕೆ ಮಾಡಲೋಸುಗ.

ತಮ್ಮ ರಾಷ್ಟ್ರಪ್ರೇಮರಾಹಿತ್ಯವನ್ನು ಮುಚ್ಚಿಕೊಳ್ಳಲು ಈ ಸೋಗಲಾಡಿ ಸ್ವಾರ್ಥಿಗಳು ಎರಡು ನೆಪಗಳನ್ನು ಮುಂದೆಮಾಡುತ್ತಾರೆ. 1. ರಾಷ್ಟ್ರದ ಸಂಕೇತಗಳನ್ನು ಗೌರವಿಸಿಯೇ ದೇಶಭಕ್ತಿಯನ್ನು, ರಾಷ್ಟ್ರೀಯ ಏಕತೆಯ ಬಗೆಗಿನ ನಿಷ್ಠೆಯನ್ನು ಪ್ರಮಾಣೀಕರಿಸಬೇಕಾಗಿಲ್ಲ ಎಂದಿವರು ಹೇಳುತ್ತಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಹೊರಬರುವ ಸತ್ಯವೇನೆಂದರೆ ಇವರಲ್ಲಿ ಒಂದು ಭಾಗದವರು ರಾಷ್ಟ್ರವಿರಲಿ, ಕೌಟುಂಬಿಕ ಮೌಲ್ಯಗಳನ್ನೇ ಬಲಿಗೊಟ್ಟು ವೈಯಕ್ತಿಕ ಸುಖದ ಬೆನ್ನುಹತ್ತಿದ್ದರೆ ಇನ್ನೊಂದು ಭಾಗದವರು ತಮ್ಮ ಕುಟುಂಬ ಹಾಗೂ ಹತ್ತಿರದವರ ಉಪಯೋಗಕ್ಕಾಗಿ ಭಾರತ ಎಂಬ ವ್ಯವಸ್ಥೆಯಲ್ಲಿ ದೊರಕುವ ಎಲ್ಲ ಸವಲತ್ತುಗಳನ್ನೂ ಬಾಚಿ ತುಂಬಿಕೊಳ್ಳುತ್ತಿದ್ದಾರೆ, ಅಂದರೆ ಕಮ್ಯೂನಿಸ್ಟ್ ಮೌಲ್ಯಕ್ಕನುಸಾರವಾಗಿ ದೇಶವನ್ನು ಶೋಷಿಸುತ್ತಿದ್ದಾರೆ. 2. ಬಿಜೆಪಿಯನ್ನು ಸಂಕುಚಿತ ಹಿಂದುತ್ವವಾದಿ ಎಂದು ಕರೆದು ಅದು ಪ್ರತಿಪಾದಿಸುವ ಬಗೆಯ ದೇಶಭಕ್ತಿ ತಮಗೆ ಸಮ್ಮತವಲ್ಲ ಎಂದಿವರು ತಿಪ್ಪೆ ಸಾರಿಸುತ್ತಾರೆ. ಹಾಗೆ ಮಾಡುವ ಮೂಲಕ ಕಳೆದ ಏಳುದಶಕಗಳಲ್ಲಿನ ಬೆಳವಣಿಗೆಗಳನ್ನು ಉದ್ದೇಶಪೂರ್ವಕವಾಗಿಯೇ ನಿರಾಕರಿಸುತ್ತಾರೆ. ಧರ್ಮದ ಆಧಾರದ ಮೇಲಾದ ದೇಶವಿಭಜನೆಯಿಂದ ನೊಂದ, ನಿರಾಶ್ರಿತರಾಗಿ ಇಲ್ಲಿಗೆ ಓಡಿಬಂದ ಶ್ಯಾಮಾಪ್ರಸಾದ್ ಮುಖರ್ಜಿ, ಆಡ್ವಾಣಿಯಂತಹವರು ಸ್ಥಾಪಿಸಿದ ರಾಜಕೀಯ ಪಕ್ಷ ಹಿಂದೂ-ಪರವಾದದ್ದು ಅತ್ಯಂತ ಸಹಜ. ಆದರೆ ನಂತರದ ವರ್ಷಗಳಲ್ಲಿ ಧರ್ಮದ ಮಿತಿಗಳನ್ನು ಮೀರಿ ಎಲ್ಲ ಭಾರತೀಯರನ್ನೂ ಸಮಾನವಾಗಿ ನೋಡುವ ಮನೋಧರ್ಮವನ್ನು ಬಿಜೆಪಿ ಬೆಳೆಸಿಕೊಂಡು ಸರ್ವಮಾನ್ಯವಾಗಿದೆ. ಇದಕ್ಕೆ ವಿರುದ್ಧವಾಗಿ ಒಂದುಕಾಲದಲ್ಲಿ ಧರ್ಮನಿರಪೇಕ್ಷ, ನಿಸ್ವಾರ್ಥ ದೇಶಪ್ರೇಮಿಗಳಿಂದಲೇ ತುಂಬಿದ್ದ ಕಾಂಗ್ರೆಸ್ ಇಂದು ಜಾತಿವಾದಿ, ಕೋಮುವಾದಿ, ಸ್ವಾರ್ಥಿ, ಭ್ರಷ್ಟ ಲೂಟಿಗಾರರ ಪಕ್ಷವಾಗಿ ಬದಲಾಗಿಹೋಗಿದೆ! ಎಡಪಂಥೀಯರಂತೂ ಸಾರ್ವಜನಿಕವಾಗಿ ಸಮಾಜವಾದದ ಪುಂಗಿ ಊದುತ್ತಲೇ ಬಂಡವಾಳಶಾಹಿಗಳಾಗಿ ಬೆಳೆದು ನಿಂತಿದ್ದಾರೆ.

ಇವರೆದುರು ಯುದ್ಧ ಟ್ಯಾಂಕ್ ನಿಲ್ಲಿಸುವುದು ಬೇಡವೇ?

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top