Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಭಾರತದ ಸಾರಿಗೆಗೆ ಬುಲೆಟ್ ಕವಚ

Thursday, 14.09.2017, 3:06 AM       No Comments

ಭಾರತದ ರೈಲ್ವೆ ಸಾರಿಗೆ ವ್ಯವಸ್ಥೆಯ ದಿಕ್ಕನ್ನೇ ಬದಲಿಸುವ ನಿರೀಕ್ಷೆ ಹುಟ್ಟಿಸಿರುವ ದೇಶದ ಮೊದಲ ಬುಲೆಟ್ ರೈಲು ಯೋಜನೆ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಲಿದೆ. ಭಾರತದ ರೈಲ್ವೆ ಹಳಿಗೆ ಮೆರುಗು ತರಲಿರುವ ಈ ಶರವೇಗದ ಸಾರಥಿಗೆ ತಾಂತ್ರಿಕ ಹಾಗೂ ಹಣಕಾಸಿನ ನೆರವು ನೀಡುತ್ತಿರುವ ಜಪಾನ್ ಪರವಾಗಿ ಆ ರಾಷ್ಟ್ರದ ಪ್ರಧಾನಿ ಶಿಂಜೋ ಅಬೆ ಅವರೇ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಶಿಂಜೋ ಭಾರತ ಭೇಟಿ ಸಂದರ್ಭದಲ್ಲಿ, ಚೀನಾದ ಒನ್ ಬೆಲ್ಟ್ ಒನ್ ರೋಡ್​ಗೆ (ಒಬಿಒಆರ್) ಪರ್ಯಾಯವಾಗಿ ಫ್ರೀಡಮ್ ಕಾರಿಡಾರ್ ಅನುಷ್ಠಾನ ಹಾಗೂ ಭಾರತ-ಜಪಾನ್ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಸಂಬಂಧಿಸಿದ 8 ಮಹತ್ವದ ಒಡಂಬಡಿಕೆಗಳಿಗೂ ಸಹಿಹಾಕಲಾಗುತ್ತಿದೆ. ಬುಲೆಟ್ ರೈಲು ಯೋಜನೆ ಜತೆಯಲ್ಲೇ ಶಿಂಜೋ ಅವರ ಭಾರತ ಪ್ರವಾಸದ ಉದ್ದೇಶ, ಪರಿಣಾಮಗಳ ಕುರಿತು ಸಂಕ್ಷಿಪ್ತ ಅವಲೋಕನ ಇಲ್ಲಿದೆ.

2022ಕ್ಕೆ ಹಳಿ ಪ್ರವೇಶ?

2023ರಲ್ಲಿ ಬುಲೆಟ್ ರೈಲು ಯೋಜನೆ ಪೂರ್ಣಗೊಳಿಸುವುದಕ್ಕಾಗಿ 2019ರಲ್ಲೇ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ 2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷವಾಗುವುದರಿಂದ ಅದೇ ವರ್ಷ ರೈಲನ್ನು ಹಳಿ ಮೇಲೆ ತರುವುದಕ್ಕಾಗಿ ವರ್ಷದ ಮೊದಲೇ ಕಾಮಗಾರಿ ಆರಂಭಿಸಲಾಗುತ್ತಿದೆ.

ಯೋಜನಾ ವೆಚ್ಚ – 1,10,000 ಕೋಟಿ ರೂ.=ಜಪಾನ್​ನಿಂದ ಪಡೆದ ಸಾಲ -88,000 ಕೋಟಿ ರೂ.=ರೈಲ್ವೆ ಕಾರಿಡಾರ್ ಉದ್ದ – 509 ಕಿ.ಮೀ. (ಮುಂಬೈ-ಅಹಮದಾಬಾದ್)=7 ಕಿ.ಮೀ -ಸಮುದ್ರದೊಳಗೆ ನಿರ್ವಿುಸಲಾಗುವ ಸುರಂಗ=21 ಕಿ.ಮೀ- ಬುಲೆಟ್ ರೈಲು ಸಾಗುವ ಸುರಂಗದ ಉದ್ದ=1500 ರೂ.-300 ಕಿ.ಮೀ ಪ್ರಯಾಣಕ್ಕೆ ನಿಗದಿ ಆಗಬಹುದಾದ ದರ =2.58 ಗಂಟೆ-ಪ್ರಯಾಣದ ಅವಧಿ ಬೋಗಿಗಳು 750 ಆಸನಗಳು 35

ರೈಲುಗಳ ಸಂಚಾರ (ಆರಂಭದಲ್ಲಿ) ಇತಿಹಾಸದ ನಂಟು

1980ರಲ್ಲಿ ಇಂದಿರಾ ಗಾಂಧಿ ಸರ್ಕಾರ ವಿದೇಶಿ ಹೂಡಿಕೆಗೆ ಅನುಕೂಲ ಮಾಡಿಕೊಟ್ಟಾಗಿನಿಂದಲೂ ಭಾರತದಲ್ಲಿ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿ ಹೊಂದಲು ಜಪಾನ್ ಕಂಪನಿಗಳ ಕೊಡುಗೆ ಗಣನೀಯ

ಸುಜುಕಿ ಮತ್ತು ಹೋಂಡಾ ಸಂಸ್ಥೆಗಳಿಗೆ ಭಾರತ ಲಾಭ ತರುವ ಪ್ರಮುಖ ಮಾರುಕಟ್ಟೆ

ಯೂರೋಪ್ ಮತ್ತು ಅಮೆರಿಕದ ಕಂಪನಿಗಳಿಗಿಂತಲೂ ಮೊದಲೆ ಜಪಾನ್ ಕಂಪನಿಗಳು ಭಾರತದ ಮೇಲೆ ನಂಬಿಕೆ ಹೊಂದಿದ್ದವು. ಭಾರತದ ಕೈಗಾರಿಕಾ ಕ್ಷೇತ್ರದಲ್ಲಿ ನೂರಾರು ಜಪಾನ್ ಕಂಪನಿಗಳು ಹೂಡಿಕೆ ಮಾಡುವ ಮೂಲಕ ಒಟ್ಟೊಟ್ಟಿಗೆ ಬೆಳವಣಿಗೆ ಕಂಡಿದ್ದು, ಆರ್ಥಿಕ ಲಾಭ ಕಾಣುತ್ತಿವೆ

ವಾಣಿಜ್ಯ, ಆರ್ಥಿಕ ಮತ್ತು ಕೈಗಾರಿಕಾ ಸಹಯೋಗದ ಜತೆಗೆ ರಕ್ಷಣಾ ಕ್ಷೇತ್ರದಲ್ಲೂ ಭಾರತಕ್ಕೆ ಜಪಾನ್ ಸಹಕಾರ

ಜಪಾನ್​ನಲ್ಲಿ ಅಪಾರವಾಗಿ ಗೌರವಿಸಲಾಗುವ ಹಾಗೂ ಪರಸ್ಪರ ಉತ್ತಮ ಸಂಬಂಧಕ್ಕೆ ಕಾರಣೀಭೂತರಾದ ಪಶ್ಚಿಮ ಬಂಗಾಳದ ರಾಸ್ ಬಿಹಾರಿ ಬೋಸ್, ನೇತಾಜಿ ಸುಭಾಷ್​ಚಂದ್ರ ಬೋಸ್ ಮತ್ತು ನ್ಯಾ. ರಾಧಾ ವಿನೋದ್ ಪಾಲರನ್ನು ಸ್ಮರಿಸುವ ಮೂಲಕ ಭಾರತ ಭಿನ್ನ ನೆಲೆಯಲ್ಲಿ ನಿಲ್ಲಬಹುದು

ಜಪಾನ್​ಗಾಗಿ ಯುದ್ಧ ಅಪರಾಧ ಟ್ರಿಬ್ಯುನಲ್ ಸ್ಥಾಪಿಸುವ ಮೂಲಕ ಜಪಾನ್ ಪರವಾಗಿ ನಿಂತ, ಭಾರತದಲ್ಲಿ ಬಹುತೇಕರ ಚಿತ್ತದಿಂದ ದೂರವಾಗಿರುವ ನ್ಯಾ. ರಾಧಾ ವಿನೋದ್ ಪಾಲ್ ಅವರಿಗೆ ಜಪಾನ್​ನಲ್ಲಿ ಹಲವು ಸ್ಮಾರಕ ನಿರ್ಮಾಣ

ಅಬೆಗೆ ಆತ್ಮೀಯ ಸ್ವಾಗತ

ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಆಲಂಗಿಸಿಕೊಂಡು ಬರಮಾಡಿಕೊಂಡರು. ಅಬೆ ಪತ್ನಿ ಅಕಿ ಕೂಡ ಜತೆಗಿದ್ದರು.

ಚೀನಾ ಯೋಜನೆಗೆ ಸವಾಲು

ಪ್ರಾದೇಶಿಕ ಪ್ರಾಬಲ್ಯ ಸಾಧಿಸುವ ಮೂಲಕ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸೆಡ್ಡು ಹೊಡೆಯುವುದಕ್ಕಾಗಿ ಚೀನಾ ಆರಂಭಿಸಿರುವ ಒನ್ ಬೆಲ್ಟ್ ಒನ್ ರೋಡ್(ಒಬಿಒಆರ್) ಕಾರಿಡಾರ್ ಪ್ರಾಜೆಕ್ಟಿಗೆ ಎದುರಾಗಿ ಭಾರತ ಮತ್ತು ಜಪಾನ್ ಸೇರಿ ಈ ಹಿಂದೆ ಘೊಷಿಸಿದ ಏಷ್ಯಾ-ಆಫ್ರಿಕನ್ ಆರ್ಥಿಕ ಕಾರಿಡಾರ್ ಅಥವಾ ಫ್ರೀಡಮ್ ಕಾರಿಡಾರ್ ಅನುಷ್ಠಾನ ಪ್ರಕ್ರಿಯೆ ಚುರುಕುಗೊಳಿಸಲು ತೀರ್ವನಿಸಿವೆ. ಪೂರ್ವ ಆಫ್ರಿಕನ್ ರಾಷ್ಟ್ರಗಳು ಕೂಡ ಈ ಕಾರಿಡಾರ್ ಬಗ್ಗೆ ಧನಾತ್ಮಕವಾಗಿ ಸ್ಪಂದಿಸಿವೆ. ಅಹಮದಾಬಾದ್​ನಲ್ಲಿ ಈಗ ನಡೆಯುತ್ತಿರುವ ಶೃಂಗದಲ್ಲಿ ಇದರ ಅನುಷ್ಠಾನದ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಹೊರಡಿಸುವ ನಿರೀಕ್ಷೆ ಇದೆ.

ಏನಿದು ಯೋಜನೆ?

ಭಾರತ ಹಾಗೂ ಜಪಾನ್​ಗಳು ಚೀನಾದ ಜತೆಗೆ ವ್ಯಾವಹಾರಿಕ ಸಂಬಂಧಗಳನ್ನು ಇರಿಸಿಕೊಂಡಿದ್ದರೂ, ಏಷ್ಯಾದಲ್ಲಿ ಚೀನಾಕ್ಕೆ ಪ್ರತಿಸ್ಪರ್ಧಿಗಳಂತೆಯೇ ಇವೆ. ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನವೆಂಬರ್​ನಲ್ಲಿ ಟೋಕಿಯೋಗೆ ಭೇಟಿ ನೀಡಿದ ವೇಳೆ ಏಷ್ಯಾ-ಆಫ್ರಿಕನ್ ಕನೆಕ್ಟಿವಿಟಿ ಯೋಜನೆ ಬಗ್ಗೆ ಮಾತುಕತೆ ನಡೆಸಿದ್ದರು. ಅಲ್ಲದೆ, ಶಿಂಜೋ ಅಬೆ ಅವರು ಇದನ್ನು ಘೊಷಿಸಿದ್ದರು ಕೂಡ. ಪ್ರಮುಖವಾಗಿ ಹಿಂದು ಮಹಾಸಾಗರದ ಮೂಲಕ ಜಪಾನ್​ನಿಂದ ಆಫ್ರಿಕಾಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ಇದು. ಈ ಯೋಜನೆಯ ಮೂಲಕ ಈ ಎರಡೂ ರಾಷ್ಟ್ರಗಳು ಹಿಂದು ಮಹಾಸಾಗರದ ಮೇಲೆ ಪಾರಮ್ಯ ಮೆರೆಯಲು ಸಜ್ಜಾಗಿವೆ.

ಯೋಜನೆಯಲ್ಲಿ ಏನೇನಿರಲಿವೆ?

ಭಾರತ ಹಾಗೂ ಜಪಾನ್​ಗಳು ಈಗಾಗಲೇ ಏಷ್ಯಾ ಹಾಗೂ ಆಫ್ರಿಕನ್ ರಾಷ್ಟ್ರಗಳನ್ನು ಬೆಸೆಯಲು ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಇದರ ವ್ಯಾಪ್ತಿಗೆ ಸೇರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇರಾನ್ ಛಬಹಾರ್ ಬಂದರು ಅಭಿವೃದ್ಧಿ ಕಾರ್ಯದಲ್ಲಿ ಜಪಾನ್ ಕೂಡ ಕೈಜೋಡಿಸುವ ಸಾಧ್ಯತೆ ದಟ್ಟವಾಗಿದೆ. ಶ್ರೀಲಂಕಾದ ಪೂರ್ವಭಾಗ ಅಭಿವೃದ್ಧಿ ಕಾಮಗಾರಿಗಳಲ್ಲೂ ವಿಶೇಷವಾಗಿ ಟ್ರಿಂಕಾಮಲಿ ಬಂದರು ಯೋಜನೆ ಹಾಗೂ ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವ ದಾವೈ ಬಂದರು ಅಭಿವೃದ್ಧಿ ಯೋಜನೆಯಲ್ಲಿ ಎರಡೂ ದೇಶಗಳು ಭಾಗಿಯಾಗಲಿವೆ. ಉತ್ತಮ ಗುಣಮಟ್ಟದ ಮೂಲಸೌಕರ್ಯ ಒದಗಿಸುವ ಪಾಲುದಾರಿಕೆ(ಪಾರ್ಟ್​ನರ್​ಷಿಪ್ ಫಾರ್ ಕ್ವಾಲಿಟಿ ಇನ್​ಫ್ರಾಸ್ಟ್ರಕ್ಚರ್- ಪಿಕ್ಯೂಐ)ಯನ್ನು ಶಿಂಜೋ ಅಬೆ 2015ರ ಮೇ ತಿಂಗಳಲ್ಲಿ ಘೊಷಿಸಿದ್ದರು.

ಆಕ್ಟ್ ಈಸ್ಟ್ ಮತ್ತು ಪಿಕ್ಯೂಐ

ಯುರೋಪ್ ಮಾರುಕಟ್ಟೆ ತಲುಪುವುದಕ್ಕೆ ಜಪಾನ್ ಹಲವು ಪ್ರಜಾಸತ್ತಾತ್ಮಕ ಪರ್ಯಾಯ ಮಾರ್ಗಗಳನ್ನು ಪ್ರಸ್ತಾಪಿಸಿದ್ದು, ಸಮುದ್ರ ಮಾರ್ಗದ ಮೂಲ ಆಫ್ರಿಕಾ ತಲುಪುವ ನಿಟ್ಟಿನಲ್ಲಿ ಭಾರತವನ್ನೂ ಜತೆಗೂಡಿಸಿಕೊಂಡಿದೆ. ಎರಡೂ ದೇಶಗಳು ‘ಉಚಿತ ಮತ್ತು ಮುಕ್ತ ಇಂಡೋ ಪೆಸಿಫಿಕ್ ಪ್ರಾಂತ್ಯ‘ಕ್ಕೆ ಉತ್ತೇಜನ ನೀಡುತ್ತಿವೆ. ಈ ವಿಷಯದಲ್ಲಿ ಭಾರತದ ಆಕ್ಟ್ ಈಸ್ಟ್ ನೀತಿ ಹಾಗೂ ಜಪಾನ್​ನ ಪಿಕ್ಯೂಐ ಮಹತ್ವ ಪಡೆದುಕೊಂಡಿವೆ.

ಚೀನಾ ಚಡಪಡಿಕೆ

ಭಾರತ ಹಾಗೂ ಜಪಾನ್​ಗಳ ‘ಉಚಿತ ಮತ್ತು ಮುಕ್ತ ಇಂಡೋ ಪೆಸಿಫಿಕ್ ಪ್ರಾಂತ್ಯ‘ದ ಪರಿಕಲ್ಪನೆ ಚೀನಾಕ್ಕೆ ಇರಿಸುಮುರಿಸು ಉಂಟುಮಾಡುತ್ತಿದೆ. ಒಬಿಒಆರ್ ಮೂಲಕ ಯುರೋಪ್ ಹಾಗೂ ಏಷ್ಯಾದ ಮೂಲೆಮೂಲೆಗಳನ್ನು ತಲುಪುವುದು ಹಾಗೂ ಹಿಂದು ಮಹಾಸಾಗರವನ್ನು ನೆಲ, ರೈಲು ಹಾಗೂ ಜಲಮಾರ್ಗದ ಮೂಲಕ ತಲುಪುವುದಕ್ಕೆ ಮಾಡುತ್ತಿರುವ ಪ್ರಯತ್ನಕ್ಕೆ ಅಡ್ಡಿಯಾಗಿ ಈ ಪ್ರಯತ್ನವನ್ನು ಚೀನಾ ಕಾಣುತ್ತಿದೆ.

ಏಷ್ಯಾ-ಆಫ್ರಿಕನ್ ಮೈತ್ರಿ

ಒಬಿಒಆರ್ ಮೂಲಕ ಚೀನಾ 64 ದೇಶಗಳೊಂದಿಗಿನ ಮೈತ್ರಿ ಹಾಗೂ ಅವುಗಳ ಮೇಲಿನ ಪ್ರಾಬಲ್ಯ ಹೆಚ್ಚಿಸಲು ಹೊರಟರೆ, ಭಾರತ ಹಾಗೂ ಜಪಾನ್​ಗಳು ಆಫ್ರಿಕನ್ ಡೆವಲಪ್​ವೆುಂಟ್ ಬ್ಯಾಂಕ್​ನ 78 ಸದಸ್ಯ ರಾಷ್ಟ್ರಗಳ ಜತೆ ಸೇರಿ ಏಷ್ಯಾ- ಆಫ್ರಿಕಾ ಮೈತ್ರಿ ಬಲಪಡಿಸಲು ಮುಂದಾಗಿವೆ. ಈ ಬ್ಯಾಂಕ್​ನ ಸದಸ್ಯರಾಷ್ಟ್ರಗಳ ಪೈಕಿ 53 ರಾಷ್ಟ್ರಗಳು ಆಫ್ರಿಕನ್ ರಾಷ್ಟ್ರಗಳೇ ಆಗಿವೆ.

30 ಬಗೆಯ ತಿನಿಸು

ಮೋದಿ ಅವರು ರಾತ್ರಿ ಶಿಂಜೋ ಅಬೆ ಹಾಗೂ ಅಕಿ ಅಬೆ ಅವರಿಗೆ ಆತಿಥ್ಯ ನೀಡಿದರು. ಔತಣಕ್ಕೆ 30ಕ್ಕೂ ಹೆಚ್ಚು ಬಗೆಯ ತಿನಿಸು ಇತ್ತು. ರಾಸ್ಪತ್ರಾ, ಗೋಟಾ ಫ್ರಿಟ್ಟರ್ಸ್, ಮುಶಿ ರೈಸ್ ಕಿಚಿಡಿ, ರೋಲ್ಟಾ, ರೋಟಿ, ಪುರಿ, ಸೇವ್ ಟೊಮ್ಯಾಟೊ, ದಾಲ್, ಶ್ರೀಖಂಡ, ಮಸಾಲ ಮಜ್ಜಿಗೆ ಇವು ಪ್ರಮುಖ ತಿನಿಸುಗಳು.

ಭಾರತದಲ್ಲಿ ಶಿಂಜೋ ಅಬೆ ಮಸೀದಿಗೆ ಭೇಟಿ

16ನೇ ಶತಮಾನದಲ್ಲಿ ಮೊಘಲರ ಆಳ್ವಿಕೆ ವೇಳೆ ನಿರ್ವಣವಾದ ಸಿದ್ದಿ ಸೈಯದ್ ಮಸೀದಿಗೆ ನಾಯಕರು ಭೇಟಿ ನೀಡಿದರು.

ಸಬರಮತಿ ಆಶ್ರಮದಲ್ಲಿ..

ಉಭಯ ದೇಶದ ಪ್ರಧಾನಿಗಳು ಸಬರಮತಿ ಆಶ್ರಮಕ್ಕೆ ಆಗಮಿಸಿ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಆಶ್ರಮದ ಪ್ರಾಮುಖ್ಯತೆಯನ್ನು ಮೋದಿ ವಿವರಿಸಿದರು.

ಬುಧವಾರ(ಸೆ.13) ಮಧ್ಯಾಹ್ನ 3.30 ಅಹಮದಾಬಾದ್​ನ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ.

ಅಪರಾಹ್ನ 4.30 ಸಬರಮತಿ ಆಶ್ರಮಕ್ಕೆ ಭೇಟಿ

ಸಂಜೆ 6.15 ಸಿದಿ ಸೈಯದ್ ಕಿ ಜಾಲಿ(ಸಿದಿ ಸೈಯದ್ ಮಸೀದಿ)ಗೆ ಭೇಟಿ

ಗುರುವಾರ (ಸೆ.14) ಬೆಳಗ್ಗೆ 9.50 ಸಬರಮತಿ ರೈಲ್ವೆ ಸ್ಟೇಷನ್ ಸಮೀಪ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಹೈಸ್ಪೀಡ್ ರೈಲು ಯೋಜನೆಯ ಅಡಿಗಲ್ಲು ಸಮಾರಂಭ

ಬೆಳಗ್ಗೆ 11.30 ದಂಡಿ ಕುಟೀರಕ್ಕೆ ಭೇಟಿ

ಮಧ್ಯಾಹ್ನ 12 ಮಹಾತ್ಮ ಮಂದಿರದಲ್ಲಿ ಹಸ್ತಲಾಘವ ಫೋಟೋ ಶೂಟ್

ಮಧ್ಯಾಹ್ನ 12.05 ನಿಯೋಗ ಮಟ್ಟದ ಮಾತುಕತೆ

ಅಪರಾಹ್ನ 1 ಮಹಾತ್ಮ ಮಂದಿರದಲ್ಲಿ ಪತ್ರಿಕಾ ಹೇಳಿಕೆ ಮತ್ತು ಒಪ್ಪಂದಗಳ ವಿನಿಮಯ

ಅಪರಾಹ್ನ 2.30 ಭಾರತ-ಜಪಾನ್ ಉದ್ಯಮಿಗಳ ಜತೆಗೆ ಗ್ರೂಪ್ ಫೋಟೋ ಶೂಟ್

ಅಪರಾಹ್ನ 3.45 ಮಹಾತ್ಮ ಮಂದಿರದ ಪ್ರದರ್ಶಿನಿಗಳಿಗೆ ಭೇಟಿ

ಅಪರಾಹ್ನ 4 ಭಾರತ-ಜಪಾನ್ ಉದ್ಯಮಿಗಳ ಸಭೆ

ರಾತ್ರಿ 9.35 ಟೋಕಿಯೋಗೆ ಮರುಪ್ರಯಾಣ

10 ಬೋಗಿಗಳು

ಎರಡು ಮಾರ್ಗಗಳ ಕಾರಿಡಾರ್ ಎಲ್ಲೆಲ್ಲಿ

156 ಕಿ.ಮೀ. ಮಹಾರಾಷ್ಟ್ರ

351 ಕಿ.ಮೀ. ಗುಜರಾತ್

2 ಕಿ.ಮೀ. ಡಿ-ಎನ್ ಹವೇಲಿ (ಕೇಂದ್ರಾಡಳಿತ ಪ್ರದೇಶ)

21 ಕಿ.ಮೀ. ಸುರಂಗ ಮಾರ್ಗ (ಬಿಕೆಸಿ -ಥಾಣೆ)

7 ಕಿ.ಮೀ. ಆಳಸಮುದ್ರ ಸುರಂಗ (ಥಾಣೆ ಕ್ರೀಕ್- ವಿರಾರ್)

12 ರೈಲ್ವೆ ನಿಲ್ದಾಣಗಳು

20,000 ಉದ್ಯೋಗ (ನಿರ್ವಣ ಕ್ಷೇತ್ರದಲ್ಲಿ)

04,000 ಉದ್ಯೋಗ (ನಿರ್ವಹಣಾ ಕ್ಷೇತ್ರದಲ್ಲಿ)

20,000 ಉದ್ಯೋಗ(ವಿವಿಧ ಪರೋಕ್ಷ ಉದ್ಯೋಗ)

2 ಗಂಟೆ ಬುಲೆಟ್ ರೈಲಿನ ಪ್ರಯಾಣದ ಅವಧಿ (ನಿಯಮಿತ ನಿಲುಗಡೆ)

2.58 ಗಂಟೆ ಬುಲೆಟ್ ರೈಲಿನ ಪ್ರಯಾಣದ ಅವಧಿ (ನಿಲುಗಡೆ ಸಹಿತ) (8 ಗಂಟೆ ಪ್ರಸ್ತುತ ರೈಲು ಪ್ರಯಾಣದ ಅವಧಿ)

 

Leave a Reply

Your email address will not be published. Required fields are marked *

Back To Top