Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಭಾರತದ ಬೆಳಕಿಗೆ ಬೆರಗಾದ ಜಗ

Friday, 20.10.2017, 3:07 AM       No Comments

ವಿಶ್ವಾದ್ಯಂತ ಭಾರತೀಯರು ಬೆಳಕಿನ ಹಬ್ಬದಲ್ಲಿ ಮಿಂದೇಳುತ್ತಿರುವ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪುತ್ರಿ ಇವಾಂಕಾ ಟ್ರಂಪ್ ಶ್ವೇತಭವನದ ಓವೆಲ್ ಕಚೇರಿಯಲ್ಲಿ ಮಂಗಳವಾರ ದೀಪಾವಳಿ ಆಚರಿಸಿದ್ದಾರೆ. ಮತ್ತೊಂದೆಡೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುಧವಾರ 1.71 ಲಕ್ಷ ಮಣ್ಣಿನ ದೀಪ ಹಚ್ಚಲಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಮರಾಜ್ಯ ನಿರ್ವಣದ ಕನಸು ಬಿತ್ತಿದ್ದಾರೆ. ಇನ್ನೊಂದೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸತತ ನಾಲ್ಕನೇ ಬಾರಿಗೆ ದೀಪಾವಳಿಯನ್ನು ಸೈನಿಕರೊಡಗೂಡಿ ಆಚರಿಸಿದರು.

ಕುಟುಂಬದೊಂದಿಗೆ ಮೋದಿ ದೀಪಾವಳಿ

ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಪರಂಪರೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದುವರಿಸಿದ್ದಾರೆ. ಗುರುವಾರ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಗೆ ಸಮೀಪದ ಗಡಿನಿಯಂತ್ರಣ ರೇಖೆಯ ಬಳಿಯ ಗುರೇಜ್ ಸೆಕ್ಟರ್​ನಲ್ಲಿ ನಿಯೋಜಿಸಲಾಗಿರುವ ಸೈನಿಕರೊಂದಿಗೆ ಮೋದಿ ದೀಪಾವಳಿ ಆಚರಿಸಿದರು.

‘ಎಲ್ಲರಂತೆಯೆ ನಾನು ನನ್ನ ಕುಟುಂಬದ (ಸೈನಿಕರು) ಜತೆ ದೀಪಾವಳಿ ಆಚರಿಸುತ್ತಿದ್ದೇನೆ. ಸೈನಿಕರೊಂದಿಗೆ ಸಮಯ ಕಳೆಯುವುದರಿಂದ ನವ ಚೈತನ್ಯ ಪಡೆದುಕೊಳ್ಳುತ್ತೇನೆ’ ಎಂದು ಮೋದಿ ಹೇಳಿದರು. ಮಾತೃಭೂಮಿಯನ್ನು ಕಾಪಾಡುವುದಕ್ಕೋಸ್ಕರ ಪ್ರೀತಿಪಾತ್ರರಿಂದ ದೂರ ಉಳಿದು ತ್ಯಾಗದ ಪರಂಪರೆ ಮುಂದುವರಿಸಿರುವ, ದೇಶದ ಗಡಿಯಲ್ಲಿ ಕರ್ತವ್ಯನಿರತ ಎಲ್ಲ ಸೈನಿಕರು ಅರ್ಪಣಾ ಮನೋಭಾವ ಮತ್ತು ಧೈರ್ಯದ ಸಂಕೇತ ಎಂದು ಸಂದರ್ಶಕರ ಪುಸ್ತಕದಲ್ಲಿ ಮೋದಿ ಅಭಿಪ್ರಾಯ ಬರೆದರು.

 2ನೇ ಬಾರಿ ಕಾಶ್ಮೀರದಲ್ಲಿ

ಕಳೆದ 4 ವರ್ಷಗಳಿಂದಲೂ ಮೋದಿ ಸೈನಿಕರ ಜತೆ ದೀಪಾವಳಿ ಆಚರಿಸುತ್ತಿದ್ದಾರೆ. 2014ರಲ್ಲಿ ಸಿಯಾಚಿನ್​ಗೆ ಭೇಟಿ ನೀಡಿದ್ದ ಪ್ರಧಾನಿ, 2015ರಲ್ಲಿ ಪಂಜಾಬ್​ನ ಇಂಡೊ-ಪಾಕ್ ಗಡಿಯಲ್ಲಿ, 2016ರಲ್ಲಿ ಹಿಮಾಚಲ ಪ್ರದೇಶದ ಗಡಿಯಲ್ಲಿ ಇಂಡೊ-ಟಿಬೆಟನ್ ಗಡಿ ಪೊಲೀಸರ ಜತೆ ಹಬ್ಬ ಆಚರಿಸಿದ್ದರು.

 ಶ್ವೇತಭವನದಲ್ಲಿ ಸಂಭ್ರಮ

ಅಮೆರಿಕ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಡೊನಾಲ್ಡ್ ಟ್ರಂಪ್, ಅಮೆರಿಕದ ಏಳ್ಗೆಯಲ್ಲಿ ಭಾರತೀಯ ಸಂಜಾತರ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಪ್ರಧಾನಿ ನರೇಂದ್ರ ಮೋದಿಯೊಂದಿಗಿನ ಸುಭದ್ರ ಸಂಬಂಧವನ್ನು ಗೌರವಿಸುವುದಾಗಿ ಹೇಳಿದ್ದಾರೆ.

ಕಲೆ, ವಿಜ್ಞಾನ, ಔಷಧ, ಉದ್ಯಮ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಭಾರತೀಯ ಸಂಜಾತರು ಅಪಾರ ಕೊಡುಗೆ ನೀಡಿದ್ದಾರೆ. ಅಮೆರಿಕ ಸೇನೆಯಲ್ಲಿ ಕರ್ತವ್ಯನಿರತ ಇಂಡೊ-ಅಮೆರಿಕನ್ ಸೈನಿಕರಿಗೆ ದೇಶ ಎಂದಿಗೂ ಕೃತಜ್ಞವಾಗಿರುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

‘ವಿಶ್ವಾದ್ಯಂತ ಇರುವ ಹಿಂದೂ, ಸಿಖ್ ಮತ್ತು ಜೈನರಿಗೆ ದೀಪಾವಳಿಯ ಶುಭಾಶಯಗಳು. ಭಾರತದಲ್ಲಿ ನಡೆಯುವ ಜಾಗತಿಕ ಉದ್ಯಮಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿರುವೆ’ ಎಂದು ಇವಾಂಕಾ ಟ್ವೀಟ್ ಮಾಡಿದ್ದಾರೆ. ಟ್ರಂಪ್ ಭಾರತೀಯ ಸಂಜಾತರೊಡಗೂಡಿ ದೀಪ ಬೆಳಗಿ, ಹಬ್ಬ ಆಚರಿಸಿದ ಕಾರ್ಯಕ್ರಮದ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆ, ಮೆಡಿಕೇರ್ ಮತ್ತು ಮೆಡಿಕೇಡ್ ಸರ್ವೀಸ್ ಕೇಂದ್ರಗಳ ಆಡಳಿತಾಧಿಕಾರಿ ಸೀಮಾ ವರ್ವ, ಅಮೆರಿಕದ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ ಅಧ್ಯಕ್ಷ ಅಜಿತ್ ಪೈ ಮತ್ತು ಪ್ರಧಾನ ಉಪ ಮಾಧ್ಯಮ ಕಾರ್ಯದರ್ಶಿ ರಾಜ್ ಶಾ ಹಾಗೂ ಇಂಡೊ-ಅಮೆರಿಕದ ಮುಖಂಡರು ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ಹೆಲಿಕಾಪ್ಟರ್​ನಲ್ಲಿ ರಾಮ-ಸೀತೆ

ತ್ರೇತಾಯುಗದ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಶೋಭಾಯಾತ್ರೆ ಯಲ್ಲಿ ಹೆಲಿಕಾಪ್ಟರ್​ನಲ್ಲಿ ಬಂದಿಳಿದ ರಾಮ, ಸೀತೆ ಹಾಗೂ ಲಕ್ಷ್ಮಣ ಪಾತ್ರಧಾರಿಗಳಿಗೆ ಯೋಗಿ ಆದಿತ್ಯನಾಥ ಸ್ವಾಗತಿಸಿದರು. ಶೋಭಾಯಾತ್ರೆಯಲ್ಲಿ ರಾಜಸ್ಥಾನದ ದೌಸಾ ಜಿಲ್ಲೆಯ ಬಂಡಕಿ ಗ್ರಾಮದ ಐವರು ಮುಸ್ಲಿಂ ಸಹೋದರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ರಾಮಕಥಾ ಪಾರ್ಕ್​ನಿಂದ ಸಾಕೇತ್ ಕಾಲೇಜಿನವರೆಗೆ ನಡೆದ 3 ಕಿ.ಮೀ. ಯಾತ್ರೆಯಲ್ಲಿ ಶಂಷದ್ ವಾನರ ಸೇನೆಯ ಸದಸ್ಯ, ಆತನ ಸಹೋದರ ಫರೀದ್ ಶಿವನ ಪಾತ್ರಧಾರಿ, ಸಲೀಂ ಹನುಮಾನ್, ಕಿರಿಯ ಸಹೋದರ ಅಕ್ರಂ ಕೃಷ್ಣನ ಪಾತ್ರದಲ್ಲಿ ಮಿಂಚಿದರು. ಹಿರಿಯ ಸಹೋದರ ಫಿರೋಜ್ ಜಿನ್ನಿ ಪಾತ್ರಧಾರಿಯಾಗಿದ್ದರು.

ಲಕ್ಷ ದೀಪಗಳ ಸಾಲು

ಸರಯು ನದಿ ತೀರದಲ್ಲಿ 1.71 ಲಕ್ಷ ಮಣ್ಣಿನ ದೀಪಗಳನ್ನು ಹಚ್ಚಲಾಗಿತ್ತು. ದೀಪಗಳ ಸಾಲಿನ ನೋಟ ಕಣ್ಣಿಗೆ ಹಬ್ಬ ಉಂಟುಮಾಡಿತ್ತು. ಇದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ಗೆ ಸೇರುವ ಸಾಧ್ಯತೆ ಇದೆ.

ಸರಯೂ ತೀರದಲ್ಲಿ ತ್ರೇತಾಯುಗ ಮರುಸೃಷ್ಟಿ

ಅಖಿಲೇಶ್ ಯಾದವ್ ನೇತೃತ್ವದ ಹಿಂದಿನ ಸರ್ಕಾರ ಸ್ವಜನ ಪಕ್ಷಪಾತದಲ್ಲಿ ಮುಳುಗಿದ್ದ ರಾವಣ ರಾಜ್ಯ, ಯಾರ ಬಗ್ಗೆಯೂ ಭೇದಭಾವ ಎಣಿಸದ ಬಿಜೆಪಿ ಸರ್ಕಾರ ರಾಮರಾಜ್ಯ ನಿರ್ಮಾಣ ಮಾಡುವುದು. ರಾಮ ರಾಜ್ಯ ಎಂದರೆ ಅಭಿವೃದ್ಧಿ. ಎಲ್ಲರಿಗೂ ವಿದ್ಯುತ್, ರಸ್ತೆ ಮತ್ತು ನೀರು ಒದಗಿಸುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ಅಯೋಧ್ಯೆ ಅಭಿವೃದ್ಧಿಗಾಗಿ ಸರ್ಕಾರ ಶ್ರಮಿಸುತ್ತಿದ್ದು, ವಿಷಯಾಂತರ ಮಾಡುತ್ತಿಲ್ಲ. ಹಿಂದಿನ ಸರ್ಕಾರ ರಾಮನ ಜನ್ಮ ಸ್ಥಳವನ್ನು ಮರೆತುಬಿಟ್ಟಿತ್ತು. ಮುಂದೆ ಈ ರೀತಿ ಆಗದು ಎಂದು ಹೇಳಿದರು.

ವಿದೇಶಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿರುವ ಧಾರ್ವಿುಕ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು. ವಿಶ್ವಕ್ಕೆ ದೀಪಾವಳಿ ಪರಿಚಯಿಸಿದ್ದು ಅಯೋಧ್ಯೆ. ಅದು ನಮಗೆ ಮಾನವೀಯತೆಯನ್ನು ಕಲಿಸಿದೆ. ಅಯೋಧ್ಯೆಯನ್ನು ನಾಲ್ಕು ಹಂತಗಳಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈ ಪೈಕಿ ಮೊದಲ ಹಂತದ ಕಾಮಗಾರಿ ಆರಂಭವಾಗಿದ್ದು, ಪವಿತ್ರ ಸ್ಥಳದ ಅಭಿವೃದ್ಧಿಗಾಗಿ -ಠಿ;133 ಕೋಟಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಅಯೋಧ್ಯೆ ಹಾಗೂ ಸುತ್ತಲಿನ ಪ್ರದೇಶದ ಸೌಂದರ್ಯ ಹೆಚ್ಚಿಸಲಾಗುವುದು. ಕಾಶಿ, ಮಥುರಾ, ನಮಿಶರಯ್ನಾ (ಸೀತಾಪುರ), ಮಿರ್ಜಾಪುರ, ತುಳಸೀಪುರ, ಸಹಾರನಪುರ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು. ರಾಜ್ಯವನ್ನು ಜಾಗತಿಕ ಪ್ರವಾಸ ಕೇಂದ್ರವಾಗಿಸಲು ನಿರ್ಧರಿಸಲಾಗಿದ್ದು, ಅದು ಅಯೋಧ್ಯೆಯಿಂದ ಆರಂಭವಾಗಿದೆ ಎಂದರು.

ರಾಮಜನ್ಮಭೂಮಿಗೆ ಭೇಟಿ

ಅಯೋಧ್ಯೆಯ ರಾಮಜನ್ಮಭೂಮಿಗೆ ಗುರುವಾರ ಆದಿತ್ಯನಾಥ ಭೇಟಿ ನೀಡಿದ್ದರು. ‘ದೇಶ ಹಾಗೂ ವಿಶ್ವದ ವಿವಿಧ ಭಾಗಗಳಿಂದ ಜನರು ರಾಮಜನ್ಮಭೂಮಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸ್ವಚ್ಛತೆ ಮತ್ತು ಸುರಕ್ಷತೆ ಅರಿಯಲು ಭೇಟಿ ನೀಡಿದ್ದೆ. ಚರಂಡಿ, ಕುಡಿಯುವ ನೀರು ಹಾಗೂ ಶೌಚಗೃಹಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಅವರು ಹೇಳಿದರು. ಅಯೋಧ್ಯೆಯಲ್ಲಿ ಮೆಗಾ ದೀಪಾವಳಿಗೆ ವಿರೋಧ ವ್ಯಕ್ತವಾಗಿರುವುದಕ್ಕೆ ಪ್ರತಿಕ್ರಿಯಿಸಿದ ಆದಿತ್ಯನಾಥ, ‘ವೈಯಕ್ತಿಕ ನಂಬಿಕೆಗೆ ಸಂಬಂಧಪಟ್ಟ ವಿಚಾರದಲ್ಲಿ ವಿರೋಧ ಪಕ್ಷಗಳು ಮಧ್ಯಪ್ರವೇಶಿಸಬಾರದು. ವಿರೋಧ ಪಕ್ಷಗಳಿಗೆ ಮಾಡಲು ಕೆಲಸವಿಲ್ಲ. ಸದ್ಯ ರಾಜ್ಯದಲ್ಲಿ ಪಾರದರ್ಶಕ ಆಡಳಿತವಿದೆ. ನಕಾರಾತ್ಮಕ ಧೋರಣೆ ಹೊಂದಿರುವ ಜನರಿಂದ ಹೇಗೆ ಒಳಿತು ಬಯಸುವುದು?’ ಎಂದು ಕಿಡಿಕಾರಿದ್ದಾರೆ.

ದೀಪಾವಳಿ ಹಾಗೂ ಕಾಳಿ ಪೂಜೆ

ಪಶ್ಚಿಮ ಬಂಗಾಳದಲ್ಲಿ ಆಗಾಗ್ಗೆ ಸುರಿಯುತ್ತಿದ್ದ ಮಳೆ ನಡುವೆ ದೀಪಾವಳಿ ಮತ್ತು ಕಾಳಿ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಎರಡೂ ಹಬ್ಬಗಳು ಏಕಕಾಲಕ್ಕೆ ಬಂದಿದ್ದರಿಂದ ಸಂಭ್ರಮ ದ್ವಿಗುಣಗೊಂಡಿತ್ತು. ಉಳಿದಂತೆ ತ್ರಿಪುರದ 16ನೇ ಶತಮಾನದ ತ್ರಿಪುರ ಸುಂದರಿ ದೇವಸ್ಥಾನದಲ್ಲಿ ದೀಪಾವಳಿ ಹಾಗೂ ಕಾಳಿ ಪೂಜೆಯ ನಿಮಿತ್ತ ಸಂಭ್ರಮ ಮನೆ ಮಾಡಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

 ಮಾದಪ್ಪನ ಜಾತ್ರೇಲಿ ಹಾಲರವೆ ಉತ್ಸವ

ಹನೂರು: ಪ್ರಸಿದ್ಧ ಧಾರ್ವಿುಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರಬೆಟ್ಟದಲ್ಲಿ ಗುರುವಾರ ಹಾಲರವೆ ಉತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಜರುಗಿತು. ದೀಪಾವಳಿ ಜಾತ್ರಾ ಮಹೋತ್ಸವದ ಎರಡನೇ ದಿನ ಗುರುವಾರ ಸಾಲೂರು ಮಠಾಧ್ಯಕ್ಷ ಗುರುಸ್ವಾಮೀಜಿ ಹಾಗೂ ಇಮ್ಮಡಿ ಮಹದೇವಸ್ವಾಮೀಜಿ ಅವರ ನೇತೃತ್ವದಲ್ಲಿ ಹಾಲರವೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬೆಳಗ್ಗೆ 7.30ರಲ್ಲಿ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ 101 ಕಳಶಹೊತ್ತ ಹೆಣ್ಣು ಮಕ್ಕಳು, ಸತ್ತಿಗೆ ಸೂರಿಪಾನಿ, ವಾದ್ಯಮೇಳದೊಂದಿಗೆ ದೊಡ್ಡಪಾಲು, ಚಿಕ್ಕಪಾಲು, ಕಾಡುವೀರ ತಂಬಡಿ ಹಾಗೂ ಬೇಡಗಂಪಣ ಅರ್ಚಕರ ಸಮ್ಮುಖದಲ್ಲಿ ಸಮೀಪದ ಆನೆದಿಂಬ ಬಳಿಯ ಹಾಲರಹಳ್ಳಕ್ಕೆ ತೆರಳಿ ಧಾರ್ವಿುಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ಮೆರವಣಿಗೆ ಸಂದರ್ಭದಲ್ಲಿ ಭಕ್ತರು ಉಘೕ ಮಾದಪ್ಪ ಉಘೕ, ಜೈ ಮಹತ್ ಮಲೆಯಾ ಎಂಬಿತ್ಯಾದಿ ಘೊಷಣೆಗಳನ್ನು ಮೊಳಗಿಸಿದರು.

 ರುದ್ರಪಾದ ತೀರದಲ್ಲಿ ಶಿವಗಂಗಾ ವಿವಾಹ

ಗೋಕರ್ಣ: ಸಮುದ್ರ ತೀರದ ರುದ್ರಪಾದ ಬಳಿ ಬುಧವಾರ ಸಂಜೆ ಅಪಾರ ಭಕ್ತ ಸಮುದಾಯದ ನಡುವೆ ಶಿವಗಂಗಾ ವಿವಾಹ ಸಂಪನ್ನವಾಯಿತು. ಸೂರ್ಯಾಸ್ತ ಸಮಯದಲ್ಲಿ ಮಹಾಬಲೇಶ್ವರ ಪಲ್ಲಕ್ಕಿ ಉತ್ಸವವು ಮಂದಿರದಿಂದ ಹೊರಟು ವಿವಾಹ ಸ್ಥಳ ಸೇರಿತು. ವೈದಿಕರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆದ ವಿವಾಹದ ನಂತರ ಪ್ರಸಾದ ವಿತರಿಸಲಾಯಿತು. ಮದುವೆ ನಂತರ ಉತ್ಸವವು ತಿರುಗಿ ಬರುವ ವೇಳೆ ಸಮುದ್ರ ಕಿನಾರೆಯಲ್ಲಿರುವ ಮಹರ್ಷಿ ದೈವರಾತ ಆಶ್ರಮದಲ್ಲಿ ಕೆಲ ಕಾಲ ವಿಶ್ರಮಿಸಿತು. ಅಲ್ಲಿಂದ ಮಂದಿರದ ಅಮೃತಾನ್ನ ವಿಭಾಗಕ್ಕೆ ಆಗಮಿಸಿದ ಮಹಾಬಲೇಶ್ವರ ಉತ್ಸವವು ಅಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಅಷ್ಟಾವಧಾನ ಸೇವೆಯಲ್ಲಿ ಪಾಲ್ಗೊಂಡಿತು. ದೀಪಾವಳಿ ನಿಮಿತ್ತ ಶುಕ್ರವಾರ ಕ್ಷೇತ್ರ ವಾಸಿಗಳಿಂದ ಮಹಾಬಲೇಶ್ವರ ಮಂದಿರದಲ್ಲಿ ವಾರ್ಷಿಕ ಫಲಕಾಣಿಕೆ ಸಮರ್ಪಣೆ ನಡೆಯುವುದು.

ದೇವಿ ಜಾತ್ರೆಯಲ್ಲಿ ಭಕ್ತಸಾಗರ

ಚಿಕ್ಕಮಗಳೂರು: ಕತ್ತಲಲ್ಲಿ ಮೊಬೈಲ್ ಬೆಳಕು ಹಿಡಿದು ಹೆಜ್ಜೆ ಹಾಕಿದ ಜನರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 50 ಸಾವಿರಕ್ಕೂ ಹೆಚ್ಚು ಭಕ್ತರು. ಬೃಹತ್ ದಿಮ್ಮಿ ಹೊತ್ತು ಸಾಗಿದ ಹರಕೆ ಹೊತ್ತವರು. ದೇವಿ ಜಾತ್ರೆಗೆ ಸಾಕ್ಷಿಯಾದ ಆಬಾಲವೃದ್ಧರು. ಇಂತಹ ಹತ್ತು ಹಲವು ಅಪರೂಪದ ಸನ್ನಿವೇಶಗಳು ಕಂಡಿದ್ದು ಮಲ್ಲೇನಹಳ್ಳಿ ಬಿಂಡಿಗ ದೇವೀರಮ್ಮನ ಜಾತ್ರಾ ಮಹೋತ್ಸವದಲ್ಲಿ.

ಮಂಗಳವಾರ ರಾತ್ರಿ 10ರಿಂದ ಬುಧವಾರ ಮಧ್ಯಾಹ್ನ 3ರವರೆಗೆ 50 ಸಾವಿರಕ್ಕೂ ಹೆಚ್ಚು ಭಕ್ತರು ನಡಿಗೆಯಲ್ಲಿ ಸಾಗಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಮಧ್ಯರಾತ್ರಿ, ಬೆಳಗಿನ ಜಾವ ಎನ್ನದೆ ಕಲ್ಲುಮುಳ್ಳಿನ ಹಾದಿ ಲೆಕ್ಕಿಸದೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಶಿಖರವೇರಿದರು. ಬೆಂಗಳೂರು, ಮೈಸೂರು, ಹಾಸನ, ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದು ಪುನೀತರಾದರು.

 ಥೆರೇಸಾ ಮೇ ಶುಭಾಶಯ

ಬ್ರಿಟನ್ ಅಭಿವೃದ್ಧಿಗೆ ಶ್ರಮಿಸುತ್ತಿರುವ ಭಾರತೀಯರ ಕೊಡುಗೆಯನ್ನು ಪ್ರಧಾನಿ ಥೆರೇಸಾ ಮೇ ಶ್ಲಾಘಿಸಿದ್ದು, ಬೆಳಕಿನ ಹಬ್ಬದ ಶುಭಾಶಯ ಕೋರಿದ್ದಾರೆ. ಯಶಸ್ವಿ ಮತ್ತು ಸಮಗ್ರ ಸಮುದಾಯವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸುವುದರ ಜತೆಗೆ ನಿಮ್ಮ ವಿಭಿನ್ನ ಪರಂಪರೆ ಉಳಿಸಿಕೊಂಡಿದ್ದೀರಿ. ಈ ಮೂಲಕ ಬ್ರಿಟನ್​ನಲ್ಲಿ ಎಲ್ಲ ಹಿನ್ನೆಲೆ ಮತ್ತು ನಂಬಿಕೆಗಳ ಜನರು ವಾಸ ಮಾಡಲು ಪ್ರಶಸ್ತ ಸ್ಥಳ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೀರಿ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top