Tuesday, 24th October 2017  

Vijayavani

1. ಕೊಳೆಯುತ್ತಿದೆ ಹಸಿವು ಮುಕ್ತ ರಾಜ್ಯದ ಕನಸು – ಹುಳು ಹಿಡಿದು ಪಡಿತರ ಹಾಳು – ರಾಜ್ಯದಲ್ಲಿ ಅನ್ನಭಾಗ್ಯದ ಬದಲು ಹುಳು ಭಾಗ್ಯ 2. 100 ಸಿಸಿ ಬೈಕ್‌ನಲ್ಲಿ ಡಬಲ್ ರೈಡಿಂಗ್ ನಿಷೇಧ ವಿಚಾರ – ವಿಷಯ ಗಮನಕ್ಕೆ ಬಂದಿಲ್ಲ ಎಂದ ಸಚಿವರು – ಅಧಿಕಾರಿಗಳಿಗೆ ಸೂಚಿಸುವುದಾಗಿ ರೇವಣ್ಣ ಸ್ಪಷ್ಟನೆ 3. ಹಂದಿ ತಿಂದು ಮಸೀದಿಗೆ ಹೋಗ್ಲಿ – ಸಿಎಂಗೆ ಸವಾಲೆಸೆದ ಸೊಗಡು ಶಿವಣ್ಣ – ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಮತ್ತಷ್ಟು ಸಿಡಿಮಿಡಿ 4. ಮತ್ತೆ ಭುಗಿಲೆದ್ದ ತಾಜ್‌ ಮಹಲ್‌ ಕಟ್ಟಡ ವಿವಾದ – ಯಾವಾಗ ಕೆಡವ್ತೀರ ಅಂತಾ ಪ್ರಕಾಶ್‌ ರಾಜ್ ವ್ಯಂಗ್ಯ – ಅತ್ತ ಸ್ಮಾರಕದ ಎದುರು ಶಿವಪೂಜೆ 5. ವಜ್ರ ಮಹೋತ್ಸವಕ್ಕೆ ಸಜ್ಜಾಗ್ತಿದೆ ವಿಧಾನಸೌಧ – ಶಕ್ತಿಕೇಂದ್ರಕ್ಕೆ ಬಣ್ಣಬಣ್ಣದ ಹೂಗಳ ಅಲಂಕಾರ – ಸಭಾಪತಿ, ಸಭಾಧ್ಯಕ್ಷರಿಂದ ಸಿದ್ಧತೆಗಳ ಪರಿಶೀಲನೆ
Breaking News :

ಭಾರತದ ಜಲಮಾರ್ಗಕ್ಕೆ ವಿಶ್ವಬ್ಯಾಂಕ್ ಸಾಲ

Sunday, 23.04.2017, 3:00 AM       No Comments

ನವದೆಹಲಿ: ಪಶ್ಚಿಮ ಬಂಗಾಲದ ಹಲ್ದಿಯಾ ಹಾಗೂ ಉತ್ತರಪ್ರದೇಶದ ವಾರಣಾಸಿಯ ನಡುವೆ ಗಂಗಾನದಿ ಕೊಳ್ಳದಲ್ಲಿ ಒಳನಾಡು ಜಲಮಾರ್ಗ ಯೋಜನೆಗೆ 2,421 ಕೋಟಿ ರೂ. ಸಾಲ ನೀಡಲು ವಿಶ್ವ ಬ್ಯಾಂಕ್ ಸಮ್ಮತಿಸಿದೆ.

‘ಜಲ್ ಮಾರ್ಗ ವಿಕಾಸ್’ ಯೋಜನೆ ಅನ್ವಯ ನಿರ್ವಣವಾಗಲಿರುವ ರಾಷ್ಟ್ರೀಯ ಜಲಮಾರ್ಗ ಯೋಜನೆಗೆ ವಿಶ್ವಬ್ಯಾಂಕ್ ಸಾಲ ನೀಡಲು ಮುಂದಾಗಿದೆ. ಯೋಜನೆಯ ಒಟ್ಟು ವೆಚ್ಚ 5,369 ಕೋಟಿ ರೂ.ಗಳಾಗಿವೆ. ಇದರಲ್ಲಿ 1,390 ಕಿ.ಮೀ. ಮಾರ್ಗವನ್ನು ವಾಣಿಜ್ಯ ವಹಿವಾಟುಗಳಿಗೆ ಒದಗಿಸಲಾಗುವುದು. ಇದು 1,500ರಿಂದ 2 ಸಾವಿರ ಟನ್ ತೂಕದ ಹಡಗುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಈ ಮಾರ್ಗ ನಿರ್ಮಣವಾಗಲಿದೆ.

ಈ ಯೋಜನೆ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಲದ ಮೂಲಕ ಹಾದು ಹೋಗಲಿದೆ. ಇದರಿಂದ ಅಲಹಾಬಾದ್, ವಾರಣಾಸಿ, ಗಾಜಿಯಾಪುರ, ಬಾಗಲಪುರ, ಪಟನಾ, ಹೌರಾ, ಹಲ್ದಿಯಾ ಹಾಗೂ ಕೋಲ್ಕತ ನಗರಗಳಿಗೆ ಅನುಕೂಲವಾಗಲಿದೆ. ವಾರಣಾಸಿ, ಸಾಹಿಬ್​ಗಂಜ್ ಹಾಗೂ ಹಲ್ದಿಯಾದಲ್ಲಿ ಟರ್ವಿುನಲ್ (ನಿಲ್ದಾಣ)ಗಳನ್ನು ನಿರ್ವಿುಸಲಾಗುವುದು.

ಈ ಪ್ರದೇಶಗಳಲ್ಲಿ ರೈಲು ಹಾಗೂ ಬಸ್ ಮಾರ್ಗಗಳು ಹೆಚ್ಚು ಜನಸಂದಣಿಯಿಂದ ಕೂಡಿರುವುದರಿಂದ ಈ ಜಲ ಮಾರ್ಗ ಪರ್ಯಾಯವಾಗಿ ಬಳಕೆಯಾಗಲಿದೆ. ವಾರಣಾಸಿ, ಪಟನಾ, ಬಾಗಲಪುರ, ಮಂಗರ್, ಕೋಲ್ಕತ್ತ ಹಾಗೂ ಹಲ್ದಿಯಾಗಳಿಂದ ದೋಣಿ ಸೇವೆ ಒದಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

-ಏಜೆನ್ಸೀಸ್

Leave a Reply

Your email address will not be published. Required fields are marked *

Back To Top