Sunday, 23rd July 2017  

Vijayavani

1. ಕೊಪ್ಪಳದ ಖೋಟಾನೋಟು ಪ್ರಕರಣಕ್ಕೆ ಹೊಸ ಟ್ವಿಸ್ಟ್​- ಐವರಲ್ಲಿ ಮೂವರು ಆರೋಪಿಗಳು ಅರೆಸ್ಟ್- ವೈಯಕ್ತಿಕ ದ್ವೇಷಕ್ಕೆ ಬಲಿಯಾಗಿದ್ದ ಉಪನ್ಯಾಸಕ 2. ಮಳೆಗೆ ಹಾರಂಗಿ ಜಲಾಶಯ ಬಹುತೇಕ ಭರ್ತಿ- ಡ್ಯಾಂನಿಂದ 1,200 ಕ್ಯೂಸೆಕ್ ನೀರು ಬಿಡುಗಡೆ- ನದಿಪಾತ್ರದ ಜನರಿಗೆ ಎಚ್ಚರದಿಂದಿರಲು ಸೂಚನೆ 3. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವಕರ್ಮ ಸಮಾವೇಶ- ಸಮುದಾಯದಿಂದ ಬಿಎಸ್​ವೈಗೆ ಸನ್ಮಾನ- ಬಿಜೆಪಿ ಹಲವು ಮುಖಂಡರು ಹಾಜರ್‌ 4. ಕಾಂಗ್ರೆಸ್​ ಕದ ತಟ್ಟಿದ ಜೆಡಿಎಸ್​ ರೆಬೆಲ್ಸ್​- ಇನ್ನೆರಡು ತಿಂಗಳಲ್ಲಿ ಸೇರ್ಪಡೆ ಖಚಿತ- ಇನ್ನೂ ಏಳು ಜನ ಬರ್ತಾರೆಂದು ಜಮೀರ್​ ಬಾಂಬ್​ 5. ವನಿತೆಯರ ವಿಶ್ವಕಪ್‌ನಲ್ಲಿ ಇಂಡೋ- ಇಂಗ್ಲೆಂಡ್‌ ಫೈಟ್- ಟಾಸ್‌ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ- ಟೀಂ ಇಂಡಿಯಾಗೆ ದೇಶ ಜನರಿಂದ ಆಲ್​ ದ ಬೆಸ್ಟ್​
Breaking News :

ಭಾರತದ ಗೆಲುವು ತಪ್ಪಿಸಿದ ಆಸೀಸ್!

Tuesday, 21.03.2017, 9:48 AM       No Comments

ರಾಂಚಿ: ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಮುನ್ನಡೆ ಕಾಣುವ ಭಾರತದ ಆಸೆ ರಾಂಚಿ ಟೆಸ್ಟ್​ನಲ್ಲಿ ಭಗ್ನಗೊಂಡಿದೆ. ಅಂತಿಮ ದಿನ ಆಸ್ಟ್ರೇಲಿಯಾದ ಕೊನೇ ಎಂಟೂ ವಿಕೆಟ್​ಗಳನ್ನು ಉರುಳಿಸುವಲ್ಲಿ ಯಶಸ್ಸು ಕಾಣುವ ಭರವಸೆಯಲ್ಲಿದ್ದ ಭಾರತ ಬರೋಬ್ಬರಿ 560 ಎಸೆತಗಳ ದಾಳಿ ನಡೆಸಿದರೂ ಸಿಕ್ಕಿದ್ದು 4 ವಿಕೆಟ್ ಮಾತ್ರ. ಪೀಟರ್ ಹ್ಯಾಂಡ್ಸ್​ಕೊಂಬ್ ಹಾಗೂ ಶಾನ್ ಮಾರ್ಷ್ ಐದನೇ ವಿಕೆಟ್​ಗೆ 62 ಓವರ್​ಗಳ ಕಾಲ ಜಿಗುಟಿನ ಬ್ಯಾಟಿಂಗ್ ಪ್ರದರ್ಶಿಸಿ 3ನೇ ಟೆಸ್ಟ್​ನಲ್ಲಿ ಭಾರತ ಡ್ರಾ ಫಲಿತಾಂಶಕ್ಕೆ ತೃಪ್ತಿಪಡುವಂತೆ ಮಾಡಿದರು.

ಜೆಎಸ್​ಸಿಎ ಸ್ಟೇಡಿಯಂನಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಸೋಲಿನ ಭೀತಿಯಲ್ಲಿ ಆಡಿದ ಆಸ್ಟ್ರೇಲಿಯಾ ಭಾರತದ ಬಿಗಿ ಬೌಲಿಂಗ್ ದಾಳಿಯನ್ನು ಎದುರಿಸಿ ಹೋರಾಟಯುತ ಡ್ರಾ ಮಾಡಿಕೊಳ್ಳುವಲ್ಲಿ ಯಶ ಕಂಡಿತು. ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನೂ 129 ರನ್ ಬಾರಿಸಬೇಕಿದ್ದ ಆಸೀಸ್, 2 ವಿಕೆಟ್​ಗೆ 23 ರನ್​ಗಳಿಂದ ಅಂತಿಮ ದಿನದಾಟ ಆರಂಭಿಸಿತು. ಹ್ಯಾಂಡ್ಸ್​ಕೊಂಬ್ (72* ರನ್, 200 ಎಸೆತ, 7 ಬೌಂಡರಿ) ಹಾಗೂ ಶಾನ್ ಮಾರ್ಷ್ (53 ರನ್, 197 ಎಸೆತ, 7 ಬೌಂಡರಿ) ಅರ್ಧಶತಕದ ಹೋರಾಟದ ನೆರವಿನಿಂದ 100 ಓವರ್​ಗಳಲ್ಲಿ 6 ವಿಕೆಟ್​ಗೆ 204 ರನ್ ಪೇರಿಸಿತು. ಈ ವೇಳೆ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ತೀರ್ವನಿಸಲಾಯಿತು. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ 1-1 ಸಮಬಲದಲ್ಲಿ ಮುಂದುವರಿದಿದೆ. 152 ರನ್​ಗಳ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ, 4ನೇ ದಿನದಾಟದಲ್ಲಿಯೇ ವಾರ್ನರ್ ಹಾಗೂ ಲ್ಯಾನ್ ವಿಕೆಟ್ ಕಳೆದುಕೊಂಡಿತ್ತು. -ಏಜೆನ್ಸೀಸ್

3 – ಆಸ್ಟ್ರೇಲಿಯಾ ತಂಡ ಭಾರತದಲ್ಲಿ 3ನೇ ಬಾರಿ ಟೆಸ್ಟ್ ಪಂದ್ಯವೊಂದರಲ್ಲಿ 150ಕ್ಕೂ ಅಧಿಕ ಮೊತ್ತದ ಹಿನ್ನಡೆ ಕಂಡರೂ ಡ್ರಾ ಮಾಡಿಕೊಳ್ಳುವಲ್ಲಿ ಯಶ ಕಂಡಿತು. ಆದರೆ, ಈ ಎರಡೂ ಫಲಿತಾಂಶಗಳು ದಾಖಲಾಗಿದ್ದು 30 ವರ್ಷಗಳ ಹಿಂದೆ. 1979-80ರ ದೆಹಲಿ ಟೆಸ್ಟ್ ಹಾಗೂ 1986-87ರ ಮುಂಬೈ ಟೆಸ್ಟ್​ನಲ್ಲಿ ಈ ಫಲಿತಾಂಶ ದಾಖಲಾಗಿತ್ತು.

9 – ಭಾರತದಲ್ಲಿ ನಡೆದ ಟೆಸ್ಟ್​ನಲ್ಲಿ ಪ್ರವಾಸಿ ತಂಡವೊಂದು 9 ವರ್ಷಗಳ ಬಳಿಕ 150ಕ್ಕೂ ಅಧಿಕ ಮೊತ್ತದ ಹಿನ್ನಡೆ ಕಂಡರೂ ಡ್ರಾ ಸಾಧಿಸುವಲ್ಲಿ ಯಶ ಕಂಡಿತು.

 ರಾಹುಲ್ ಹಾಗೂ ಮುರಳಿ ವಿಜಯ್ ಉತ್ತಮವಾಗಿ ಆಡಿದರು. ಆದರೆ, ಪೂಜಾರ ಹಾಗೂ ಸಾಹ ಜೋಡಿಯ ಆಟ ನಾನು ನೋಡಿದ ಅತ್ಯುತ್ತಮ ಜತೆಯಾಟ. ಪಂದ್ಯದಲ್ಲಿ 150ಕ್ಕೂ ಅಧಿಕ ಮೊತ್ತದ ಮುನ್ನಡೆ ಪಡೆಯುತ್ತೇವೆ ಎಂದು ಯೋಚನೆಯನ್ನೇ ಮಾಡಿರಲಿಲ್ಲ. ಭಾನುವಾರ ಎರಡು ವಿಕೆಟ್ ಉರುಳಿಸಿದ್ದರಿಂದ ಪಂದ್ಯ ಗೆಲ್ಲುವ ಅವಕಾಶವಿದೆ ಎಂದುಕೊಂಡಿದ್ದೆವು. ಆದರೆ, ಹ್ಯಾಂಡ್ಸ್​ಕೊಂಬ್ ಹಾಗೂ ಮಾರ್ಷ್ ಅತ್ಯುತ್ತಮವಾಗಿ ಆಡಿದರು. ಪಂದ್ಯದ ಫಲಿತಾಂಶ ಏನೇ ಆದರೂ, ನಮ್ಮ ಸ್ಥಿತಿ ಮಾತ್ರ ಉತ್ತಮವಾಗಿದೆ.

| ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ

13 –  ಆಸ್ಟ್ರೇಲಿಯಾ ತಂಡ 13 ವರ್ಷಗಳ ಬಳಿಕ ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್​ನಲ್ಲಿ 100 ಓವರ್​ಎದುರಿಸಿತು. 2004ರ ಚೆನ್ನೈ ಟೆಸ್ಟ್​ನ ಆಸ್ಟ್ರೇಲಿಯಾ 133.5 ಓವರ್ ಆಡಿತ್ತು.

ಮೊದಲ ಅವಧಿಯಲ್ಲಿ ಮಿಂಚಿದ್ದ ಭಾರತ

ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮ್ಯಾಟ್ ರೆನ್​ಶಾ (15) ಜತೆ ಕ್ರೀಸ್​ಗಿಳಿದ ನಾಯಕ ಸ್ಟೀವನ್ ಸ್ಮಿತ್ (21) ಕೆಲ ಓವರ್​ಗಳವರೆಗೆ ಪ್ರತಿರೋಧ ಒಡ್ಡಿದ್ದರು. ಆದರೆ, 3 ಎಸೆತಗಳ ಅಂತರದಲ್ಲಿ ಇವರಿಬ್ಬರನ್ನು ಪೆವಿಲಿಯನ್​ಗಟ್ಟಿ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಈ ನಡುವೆ ಇಶಾಂತ್ ಹಾಗೂ ರೆನ್​ಶಾ ನಡುವೆ ಮಾತಿನ ಚಕಮಕಿಗಳೂ ನಡೆದವು. ಸತತ ಬೌನ್ಸರ್​ಗಳ ಮಧ್ಯೆ ಎಸೆದ ಕೆಳಮಟ್ಟದ ಎಸೆತವೊಂದು ಲಾಭ ತಂದುಕೊಟ್ಟಿತು. ರೆನ್​ಶಾ ಎಲ್​ಬಿಯಾಗಿ ಹೊರನಡೆದರು. ಅದಾದ 3 ಎಸೆತಗಳ ಬಳಿಕ ಜಡೇಜಾರ ಎಸೆತವನ್ನು ಅಂದಾಜಿಸುವಲ್ಲಿ ಸಂಪೂರ್ಣವಾಗಿ ಎಡವಿದ ಸ್ಮಿತ್ ಬೌಲ್ಡ್ ಆದರು. ಔಟ್​ಸೈಡ್ ಲೆಗ್​ನತ್ತ ಬಂದ ಚೆಂಡು ಸ್ಟಂಪ್ ಆಚೆ ಹೋಗುತ್ತದೆ ಎಂದು ಅಂದಾಜಿಸಿದ ಸ್ಮಿತ್, ಅರ್ಧಮನಸ್ಸಿನಲ್ಲಿ ಪ್ಯಾಡ್ ತಾಕಿಸುವ ಪ್ರಯತ್ನ ಮಾಡಿದ್ದರು. ಆದರೆ, ಅದ್ಭುತವಾಗಿ ಸ್ಪಿನ್ ಆದ ಚೆಂಡು ಸ್ಮಿತ್​ರ ಪ್ಯಾಡ್​ಅನ್ನು ವಂಚಿಸಿ ಆಫ್​ಸ್ಟಂಪ್ ಎಗರಿಸಿತು. 63 ರನ್​ಗೆ 4 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಆ ವೇಳೆ ಸೋಲಿನ ಅಂದಾಜಿನಲ್ಲಿತ್ತು.

ಐದು ಗಂಟೆಗಳ ಮ್ಯಾರಥಾನ್ ಇನಿಂಗ್ಸ್

ಭಾರತವನ್ನು ಮತ್ತೆ ಬ್ಯಾಟಿಂಗ್​ಗೆ ಇಳಿಸಲು ಆಸ್ಟ್ರೇಲಿಯಾ ಇನ್ನೂ 89 ರನ್ ಬಾರಿಸಬೇಕಿದ್ದ ಹಂತದಲ್ಲಿ ಜತೆಯಾಗಿದ್ದು ಹ್ಯಾಂಡ್ಸ್ ಕೊಂಬ್ ಹಾಗೂ ಶಾನ್ ಮಾರ್ಷ್. ಪಿಚ್​ನ ನಿಧಾನಗತಿಯನ್ನು ಅರಿತುಕೊಂಡ ಜೋಡಿ ಐದು ಗಂಟೆಗಳ ಮ್ಯಾರಥಾನ್ ಇನಿಂಗ್ಸ್ ಆಡಿತು. 62.1 ಓವರ್ ಆಡಿದ ಜೋಡಿ 124 ರನ್ ಕೂಡಿಸಿತು. ಈ ಜೋಡಿಯನ್ನು ಬೇರ್ಪಡಿಸಲು ಕೊಹ್ಲಿ ನಡೆಸಿದ ಯಾವುದೇ ಪ್ರಯತ್ನಕ್ಕೂ ಜಗ್ಗಲಿಲ್ಲ. ಮಾರ್ಷ್ ಅರ್ಧಶತಕದ ಗಡಿ ದಾಟಿದ ಬಳಿಕ ಜಡೇಜಾಗೆ 4ನೇ ವಿಕೆಟ್ ರೂಪದಲ್ಲಿ ಹೊರಬಿದ್ದರು. ಬೆನ್ನಲ್ಲೇ ಮ್ಯಾಕ್ಸ್​ವೆಲ್, ಅಶ್ವಿನ್ ಎಸೆತದಲ್ಲಿ ಔಟಾದರು. ನಂತರವಾದರೂ ಏನೋ ಒಂದು ಅಚ್ಚರಿ ನಡೆಯಬಹುದು ಎನ್ನುವ ಆಸೆ ಹುಟ್ಟಿದರೂ ಹ್ಯಾಂಡ್ಸ್​ಕೊಂಬ್ ಡ್ರಾ ಘೊಷಣೆವರೆಗೆ ವಿರಮಿಸದೆ ಕ್ರೀಸ್​ನಲ್ಲೇ ಉಳಿದರು.

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 451

ಭಾರತ ಮೊದಲ ಇನಿಂಗ್ಸ್: 9 ವಿಕೆಟ್​ಗೆ 603 ಡಿ.

ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್:

100 ಓವರ್​ಗಳಲ್ಲಿ 6 ವಿಕೆಟ್​ಗೆ 204 (ಭಾನುವಾರ 2 ವಿಕೆಟ್​ಗೆ 23)

ರೆನ್​ಶಾ ಎಲ್​ಬಿಡಬ್ಲ್ಯು ಬಿ ಇಶಾಂತ್ 15

ಸ್ಟೀವನ್ ಸ್ಮಿತ್ ಬಿ ಜಡೇಜಾ 21

ಮಾರ್ಷ್ ಸಿ ವಿಜಯ್ ಬಿ ಜಡೇಜಾ 53

ಹ್ಯಾಂಡ್ಸ್​ಕೊಂಬ್ ಅಜೇಯ 72

ಮ್ಯಾಕ್ಸ್​ವೆಲ್ ಸಿ ವಿಜಯ್ ಬಿ ಅಶ್ವಿನ್ 2

ಮ್ಯಾಥ್ಯೂ ವೇಡ್ ಔಟಾಗದೆ 9

ಇತರೆ: 16. ವಿಕೆಟ್ ಪತನ: 2-23, 3-59, 4-63, 5-187, 6-190. ಬೌಲಿಂಗ್: ಆರ್. ಅಶ್ವಿನ್ 30-10-71-1, ರವೀಂದ್ರ ಜಡೇಜಾ 44-18-54-4, ಉಮೇಶ್ ಯಾದವ್ 15-2-36-0, ಇಶಾಂತ್ ಶರ್ಮ 11-0-30-1.

ಪಂದ್ಯಶ್ರೇಷ್ಠ: ಚೇತೇಶ್ವರ ಪೂಜಾರ

 

ಅಂತಿಮ ಟೆಸ್ಟ್ ಪಂದ್ಯ

ಯಾವಾಗ: ಮಾ. 25-29

ಎಲ್ಲಿ: ಧರ್ಮಶಾಲಾ

ಹಾಲಿ ಸರಣಿಯಲ್ಲಿ ಮೊದಲ ಬಾರಿಗೆ ನಡೆದ ಪಂದ್ಯದ 5ನೇ ದಿನದಾಟ ವಿಶೇಷತೆಗಳಿಂದ ಕೂಡಿತ್ತು. ಭಾರತ ಗೆಲುವಿಗಾಗಿ ನಡೆಸಿದ ಪೈಪೋಟಿ, ಆಸ್ಟ್ರೇಲಿಯಾ ಡ್ರಾ ಮಾಡಿ ಕೊಳ್ಳುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ಟೆಸ್ಟ್ ಕ್ರಿಕೆಟ್​ನ ನಿಜವಾದ ಸಾಮರ್ಥ್ಯವನ್ನು ಸಾಬೀತು ಮಾಡಿದಂತಿತ್ತು. ಸ್ಮಿತ್ ವಿಕೆಟ್ ಉರುಳಿದ ಬಳಿಕ ಆಸೀಸ್ ಪತನ ಆರಂಭ ವಾಗುತ್ತದೆ ಎಂಬ ನಿರೀಕ್ಷೆ ಇದ್ದರೂ, ಮಾರ್ಷ್-ಹ್ಯಾಂಡ್ಸ್ ಕೊಂಬ್ ಸಾಹಸಿಕ ಆಟದಿಂದ ಅಡ್ಡಿಯಾದರು.

 

Leave a Reply

Your email address will not be published. Required fields are marked *

4 × 2 =

Back To Top