Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಭಾರತಕ್ಕೆ ಶಾಕ್ ಕೊಟ್ಟ ನೇಪಾಳ

Monday, 13.11.2017, 3:00 AM       No Comments

ಕೌಲಾಲಂಪುರ: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಹಾಲಿ ಚಾಂಪಿಯನ್ ಭಾರತ ಕಿರಿಯರ ತಂಡ 19 ವಯೋಮಿತಿಯ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ನೇಪಾಳ ತಂಡದ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದೆ. ಕ್ರಿಕೆಟ್ ಲೋಕದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ನೇಪಾಳ ತಂಡ ನಾಯಕ ದೀಪೇಂದ್ರ ಸಿಂಗ್ (88 ರನ್, 101ಎಸೆತ, 6ಬೌಂಡರಿ, 2ಸಿಕ್ಸರ್ ಮತ್ತು 39ಕ್ಕೆ 4) ಆಲ್ರೌಂಡರ್ ನಿರ್ವಹಣೆ ನೆರವಿನಿಂದ 19 ರನ್​ಗಳಿಂದ ಕನ್ನಡಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಭಾರತವನ್ನು ಮಣಿಸಿ ಇತಿಹಾಸ ನಿರ್ವಿುಸಿತು. ಇದು ನೇಪಾಳ ತಂಡಕ್ಕೆ ಭಾರತದ ವಿರುದ್ಧ ಸಿಕ್ಕ ಚೊಚ್ಚಲ ಜಯವಾಗಿದೆ.

ಬಯೂಮಸ್ ಓವಲ್ ಮೈದಾನದಲ್ಲಿ ಭಾನುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ನೇಪಾಳ ತಂಡವನ್ನು ಬ್ಯಾಟಿಂಗ್​ಗೆ ಇಳಿಸಿದ ಭಾರತ ಸಂಘಟಿತ ದಾಳಿಯೊಂದಿಗೆ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು. ನೇಪಾಳ 8ವಿಕೆಟ್​ಗೆ 185ರನ್ ದಾಖಲಿಸಿತು. ಈ ಸವಾಲು ಬೆನ್ನಟ್ಟಿದ ಭಾರತ ನಿರೀಕ್ಷಿಸಲಾಗದಷ್ಟು ಕಳಪೆಯಾಟವಾಡಿ 48.1 ಓವರ್​ಗಳಲ್ಲಿ 166 ರನ್​ಗೆ ಆಲೌಟಾಯಿತು. ಮೊದಲ ಪಂದ್ಯದಲ್ಲಿ ಗೆದ್ದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಭಾರತ ಪರ ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ಹಿಮಾಂಶು ರಾಣಾ(46) ಹೊರತುಪಡಿಸಿ ಉಳಿದೆಲ್ಲರೂ ವೈಫಲ್ಯ ಕಂಡರು.

ನೇಪಾಳ: 8ವಿಕೆಟ್​ಗೆ 185(ದೀಪೇಂದ್ರ ಸಿಂಗ್ 88, ಆದಿತ್ಯ ಠಾಕ್ರೆ 33ಕ್ಕೆ 2, ಅಭಿಷೇಕ್ ಶರ್ಮ 38ಕ್ಕೆ 2), ಭಾರತ: 48.1 ಓವರ್​ಗಳಲ್ಲಿ 166(ಹಿಮಾಂಶು 46, ಅಭಿಷೇಕ್ ಶರ್ಮ 27).

ಭಾರತಕ್ಕೆ ಮುಂದಿನ ಪಂದ್ಯ

ಯಾವಾಗ: ಮಂಗಳವಾರ

ಎದುರಾಳಿ: ಬಾಂಗ್ಲಾದೇಶ

Leave a Reply

Your email address will not be published. Required fields are marked *

Back To Top