Tuesday, 17th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಭಾಗ್ಯಕ್ಕೆ ಒತ್ತು, ಅಭಿವೃದ್ಧಿ ಕುತ್ತು

Tuesday, 09.01.2018, 3:03 AM       No Comments

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಮಾತೆತ್ತಿದರೆ ನಮ್ಮದು ನುಡಿದಂತೆ ನಡೆದ ಸರ್ಕಾರ ಎನ್ನುವ ರಾಜ್ಯ ಸರ್ಕಾರ, ಆ ಭಾಗ್ಯ ಈ ಭಾಗ್ಯ ಎನ್ನುತ್ತ ಜನಪ್ರಿಯ ಯೋಜನೆಗಳ ಬೆನ್ನತ್ತಿ ಶಾಶ್ವತ ಆಸ್ತಿ ಸೃಷ್ಟಿಸುವ ಅಭಿವೃದ್ಧಿ ಯೋಜನೆಗಳನ್ನು ನಿರ್ಲಕ್ಷಿಸಿರುವ ಪರಿಣಾಮ ಅಭಿವೃದ್ಧಿ ಸಾಧಿಸುವಲ್ಲಿ ಹಿಂದೆಬಿದ್ದಿದೆ. ಈ ಮಾತಿಗೆ ಸಾಕ್ಷಿಯೆಂಬಂತೆ, ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಬೇಕಾದ ಸುಮಾರು 28 ಇಲಾಖೆಗಳು ಏಳು ತಿಂಗಳು ಕಳೆದರೂ ಶೇ.50ರಷ್ಟೂ ಪ್ರಗತಿ ಸಾಧಿಸಿಲ್ಲ ಎಂಬ ಅಂಶವನ್ನು ಯೋಜನಾ ಇಲಾಖೆಯ ದಾಖಲೆಗಳೇ ಹೇಳುತ್ತಿವೆ.

ಅಭಿವೃದ್ಧಿ ಯೋಜನೆಗಳಿಗೆ ವೆಚ್ಚವಾದರಷ್ಟೇ ರಾಜ್ಯದಲ್ಲಿ ಶಾಶ್ವತವಾದ ಆಸ್ತಿಯನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಆದರೆ ಮತಬ್ಯಾಂಕ್ ಗಟ್ಟಿಗೊಳಿಸುವ ಉತ್ಸಾಹದಲ್ಲಿ ಜನಪ್ರಿಯ ಯೋಜನೆಗಳಿಗೆ ಒತ್ತು ನೀಡಿದ್ದರಿಂದ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ವಿನಿಯೋಗ ಕಡಿಮೆಯಾಗಿದೆ. ಇದು ರಾಜ್ಯದ ಸಮಾನ ಬೆಳವಣಿಗೆಗೆ ಅಡ್ಡಿಯಾಗಿದೆ.

ಮುಂದಿನ ಬಜೆಟ್​ಗಾಗಿ ಮುಖ್ಯಮಂತ್ರಿಗಳು ಸಿದ್ಧತೆ ಆರಂಭಿಸಿದ್ದು, ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪ್ರತಿ ಇಲಾಖೆಯ ಪ್ರಗತಿ ಪರಿಶೀಲಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಲ್ಲಿ ಹಿಂದುಳಿದಿರುವುದು ಅವರ ಗಮನಕ್ಕೂ ಬಂದಿದೆ. ಆದ್ದರಿಂದಲೇ ಪ್ರತಿ ಇಲಾಖೆಯಿಂದ ಯೋಜನೆಗಳ ಜಾರಿಗೆ ಸಂಬಂಧಿಸಿ ವಿಡಿಯೋ ದಾಖಲೀಕರಣವನ್ನೇ ಕೇಳಿದ್ದಾರೆ.

ನಾಲ್ಕು ಭಾಗ

ಯೋಜನಾ ಇಲಾಖೆ ಪ್ರತಿ ಇಲಾಖೆಯಿಂದ ಮಾಹಿತಿ ಪಡೆದು ಎಷ್ಟರ ಮಟ್ಟಿಗೆ ಸಾಧನೆಯಾಗಿದೆ ಎಂಬುದನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸುತ್ತದೆ. ಅದರಲ್ಲಿ ನಿರೀಕ್ಷಿತ ಆರ್ಥಿಕ ಪ್ರಗತಿ ಸಾಧಿಸದ ಇಲಾಖೆಗಳ ಸಂಖ್ಯೆ ಆಧಾರದಲ್ಲಿ ಎ,ಬಿ,ಸಿ ಮತ್ತು ಡಿ ಎಂದು ನಾಲ್ಕು ಭಾಗ ಮಾಡಲಾಗಿದೆ.

ಎ ಗುಂಪಿನಲ್ಲಿರುವ ಶೇ. 90ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಿರುವ ಇಲಾಖೆಗಳ ಸಂಖ್ಯೆ ಕೇವಲ 7. ಬಿ ಗುಂಪಿನಲ್ಲಿ ಶೇ. 75 ಪ್ರಗತಿ ಸಾಧಿಸಿದ ಇಲಾಖೆಗಳಿದ್ದು ಅವುಗಳ ಸಂಖ್ಯೆ 9 ಮಾತ್ರ. ಶೇ.50 ಪ್ರಗತಿ ಸಾಧಿಸಿದ 16 ಇಲಾಖೆಗಳು ಸಿ ಗುಂಪಿನಲ್ಲಿದ್ದರೆ, ಶೇ.50ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ 7 ಇಲಾಖೆಗಳು ಡಿ ಗುಂಪಿನಲ್ಲಿವೆ.

ಏಳು ತಿಂಗಳಲ್ಲಿ ಅನುದಾನದ ಶೇ.43.4 ಮಾತ್ರ ಪ್ರಗತಿ ಸಾಧಿಸಲಾಗಿದೆ. ಆದರೆ ವಾಸ್ತವವಾಗಿ ಶೆ.66.66 ಪ್ರಗತಿ ಸಾಧನೆಯಾಗಬೇಕಾಗಿತ್ತು.

ಎಸ್​ಸಿಪಿ, ಟಿಎಸ್​ಪಿ:

ರಾಜ್ಯ ಸರ್ಕಾರ ಇಡೀ ದೇಶದಲ್ಲಿ ಎರಡನೆಯದಾಗಿ ವಿಶೇಷ ಘಟಕ ಉಪ ಯೋಜನೆ ಜಾರಿಗೆ ತಂದಿರುವುದಾಗಿ ಹೇಳುತ್ತಿದೆ. ಆದರೆ ಇಲ್ಲಿ ಹಣಕಾಸಿನ ವೆಚ್ಚ ತೀರಾ ಕಡಿಮೆಯಾಗಿದೆ. ಎಸ್​ಸಿಪಿಯಲ್ಲಿ ಶೇ. 28.49 ಹಾಗೂ ಟಿಎಸ್​ಪಿಯಲ್ಲಿ ಶೇ. 25.13ಮಾತ್ರ ಪ್ರಗತಿಯಾಗಿದೆ.

ಪರಿಣಾಮ ಬೀರದ ಜಿಎಸ್​ಟಿ

ಜಿಎಸ್​ಟಿ ಜಾರಿ ನಂತರ ತೆರಿಗೆ ಸಂಗ್ರಹಣೆಯಲ್ಲಿ ಕುಂಠಿತವಾಗಲಿದೆ ಎಂದು ಸರ್ಕಾರ ಭಾವಿಸಿತ್ತು. ಆದರೆ ತೆರಿಗೆ ಸಂಗ್ರಹಣೆ ಕಡಿಮೆಯಾಗಿಲ್ಲ. ಬಹಳಷ್ಟು ವ್ಯಾಪಾರೋದ್ಯಮಿಗಳು ಇನ್ನೂ ರಿಟರ್ನ್್ಸ ಸಲ್ಲಿಸಿಲ್ಲ, ಆದ್ದರಿಂದ ಸಂಗ್ರಹಣೆಯ ನಿಖರ ಮಾಹಿತಿ ಲಭ್ಯವಾಗಬೇಕಾಗಿದೆ. ಸಮಸ್ಯೆ ಇರುವುದು ಅಧಿಕಾರಿಗಳ ಇಚ್ಛಾಶಕ್ತಿಯಲ್ಲಿ. ಎಲ್ಲ ಇಲಾಖೆಗಳು ಮಾರ್ಚ್ ಅಂತ್ಯದ ವೇಳೆಗೆ ಹಣ ಖರ್ಚು ಮಾಡುವ ಬಗ್ಗೆ ಮಾತ್ರ ಕಾಳಜಿ ತೋರಿಸುತ್ತವೆ ಹೊರತೂ ಗುಣಮಟ್ಟದ ಅಭಿವೃದ್ಧಿಯತ್ತ ಗಮನ ನೀಡುತ್ತಿಲ್ಲ.

ಪ್ರಮುಖ ಇಲಾಖೆಗಳ ಪ್ರಗತಿ, ಇಲಾಖೆ ಅನುದಾನದ ಬಳಕೆ ಪ್ರಮಾಣ

ಕೃಷಿ 4971 2132.47 ಶೇ 42.89

ಮಹಿಳಾ 4925 2030.48 ಶೇ. 41.15

ಜಲ ಸಂಪನ್ಮೂಲ 15929 5578.81 ಶೇ. 31.64

ನಗರಾಭಿವೃದ್ಧಿ 18126 6808.23 ಶೇ. 31.24

ಪ್ರವಾಸೋದ್ಯಮ 572 176. 61 ಶೇ. 30.86

ಅರಣ್ಯ 1731 501.37 ಶೇ. 28.95

ಪಿಡಬ್ಲ್ಯೂಡಿ 8559 2459.96 ಶೇ. 28.74.

ಮೂಲಸೌಕರ್ಯ 789 183.33 ಶೇ. 23.21

ತೋಟಗಾರಿಕೆ 1193 308.27 ಶೇ.25.84

ಹಿಂದುಳಿದ ವರ್ಗ 3154 1122.68 ಶೇ.35

ಕೌಶಲಾಭಿವೃದ್ಧಿ 1190 428.87 ಶೇ.36

ವೆಚ್ಚವಾದುದೆಷ್ಟು?

ಬಂಡವಾಳ ವೆಚ್ಚ ಹಾಗೂ ರಾಜಸ್ವ ವೆಚ್ಚ ಸೇರಿ ಒಟ್ಟಾರೆ ಈ ಸಾಲಿನಲ್ಲಿ 1,78,385 ಕೋಟಿ ರೂ.ಗಳನ್ನು ವೆಚ್ಚ ಮಾಡಬೇಕು. ನವೆಂಬರ್ ಅಂತ್ಯದ ತನಕ ಒಟ್ಟಾರೆ 99,774 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದರಲ್ಲಿ ಅಭಿವೃದ್ಧಿಯಾಗುವ ಬಂಡವಾಳ ವೆಚ್ಚ 33,630 ಕೋಟಿ ರೂ. ಆಗಬೇಕಿದ್ದು, ಕೇವಲ 14,585 ಕೋಟಿ ರೂ.ವ್ಯಯಿಸಲಾಗಿದೆ, ಶೇ. 43.4ರಷ್ಟು ಮಾತ್ರ ಒಟ್ಟಾರೆ ಸಾಧನೆ.

ತೆರಿಗೆ ಸಂಗ್ರಹಣೆ (ನವೆಂಬರ್ ಅಂತ್ಯಕ್ಕೆ) ವಲಯ ಗುರಿ ಸಂಗ್ರಹ (ಕೋಟಿ ರೂ.ಗಳಲ್ಲಿ)

ವಾಣಿಜ್ಯ 55000 34608

ಅಬಕಾರಿ 18050 11585

ಮೋಟಾರ್ ವಾಹನ 6006 3973

ಮುದ್ರಾಂಕ, ನೋಂದಣಿ 9000 5761

ಇತರೆ 1901 1063

ತೆರಿಗೇತರ 6945 3629

ಅಭಿವೃದ್ಧಿ ಕಾರ್ಯಗಳು ಶೇ. 100ರಷ್ಟು ಪ್ರಗತಿ ಸಾಧಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಸದ್ಯದಲ್ಲಿಯೇ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿ ಅಭಿವೃದ್ಧಿಯ ವೇಗ ಹೆಚ್ಚಿಸಲಾಗುತ್ತದೆ.

ಕೆ. ರತ್ನಪ್ರಭಾ ಮುಖ್ಯ ಕಾರ್ಯದರ್ಶಿ

ಸಿಎಂ ಕಚೇರಿಯಲ್ಲೇ ಆತಂಕ

ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು ಹೀಗೆ ವಿವಿಧ ಹಂತಗಳಲ್ಲಿ ಪ್ರಗತಿ ಪರಿಶೀಲನೆ ಮಾಡುತ್ತ, ಆದೇಶಗಳನ್ನು ಹೊರಡಿಸಿ, ಹಣ ಬಿಡುಗಡೆ ಮಾಡಿದ್ದರೂ ವೆಚ್ಚ ಮಾಡುವಲ್ಲಿ ಹಿಂದುಳಿದಿರುವ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯೇ ಆತಂಕ ವ್ಯಕ್ತಪಡಿಸುತ್ತಿದೆ. ಬಜೆಟ್​ನಲ್ಲಿ ಘೊಷಿಸಿದ ಕಾರ್ಯಕ್ರಮಗಳಿಗೆ ಸಂಬಂಧಿಸಿ ಒಟ್ಟಾರೆ 450 ಆದೇಶಗಳು ಹೊರಬಿದ್ದಿವೆ, ಆದರೆ ಕಾಲಮಿತಿಯಲ್ಲಿ ಅನುಷ್ಠಾನ ಮಾತ್ರ ಆಗುತ್ತಿಲ್ಲ.

ಎಲ್ಲೆಲ್ಲಿ ಕುಂಠಿತ

ಹೆಚ್ಚು ಅನುದಾನ ವನ್ನು ಹೊಂದಿರುವ ಲೋಕೋಪಯೋಗಿ, ತೋಟಗಾರಿಕೆ, ಮೂಲ ಸೌಕರ್ಯ, ಯೋಜನೆ, ಜಲ ಸಂಪನ್ಮೂಲ, ನಗರಾಭಿವೃದ್ಧಿ, ಪ್ರವಾಸೋದ್ಯಮ, ಕೃಷಿ ಹೀಗೆ ಪ್ರಮುಖ ಇಲಾಖೆಗಳಲ್ಲಿ ಆರ್ಥಿಕ ವೆಚ್ಚ ಕಡಿಮೆಯಾಗಿದೆ.

Leave a Reply

Your email address will not be published. Required fields are marked *

Back To Top