Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಭವಿಷ್ಯದ ಕ್ರಿಕೆಟ್ ಸ್ಟಾರ್​ಗಳ ವಿಶ್ವಸಮರ!

Friday, 12.01.2018, 3:02 AM       No Comments

ಸಂಕೀರ್ಣ ಮಾದರಿಯ ಟೂರ್ನಿ ಎಲ್ಲ 16 ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಭಾಗಿಸಲಾಗಿದೆ. ಲೀಗ್ ಹಂತದಲ್ಲಿ ಪ್ರತಿ ತಂಡ 3 ಪಂದ್ಯ ಆಡಲಿದ್ದು, ಗೆದ್ದ ತಂಡಕ್ಕೆ ಇಂತಿಷ್ಟು ಅಂಕಗಳು ಇರುತ್ತವೆ. ದೊಡ್ಡ ಅಂತರದಿಂದ ಗೆಲುವು ಸಾಧಿಸಿದಲ್ಲಿ ಬೋನಸ್ ಅಂಕ ಕೂಡ ಇರಲಿದೆ. ಆದರೆ, ಗುಂಪು ಹಂತ ಮುಗಿದ ಬಳಿಕ ಟೂರ್ನಿಯ ಮಾದರಿ ಸ್ವಲ್ಪ ಮಟ್ಟಿಗೆ ಸಂಕೀರ್ಣವಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಸೂಪರ್ ಲೀಗ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಅರ್ಥಾತ್ ಸೂಪರ್ ಲೀಗ್​ಗೆ ಅರ್ಹತೆ ಪಡೆದ 8 ತಂಡಗಳಿಗೆ ಮಾತ್ರವೇ ವಿಶ್ವಕಪ್ ಗೆಲ್ಲುವ ಅವಕಾಶವಿರುತ್ತದೆ. ಇನ್ನು ಗುಂಪಿನಲ್ಲಿ 3 ಹಾಗೂ 4ನೇ ಸ್ಥಾನ ಪಡೆದ ತಂಡಗಳು (ಒಟ್ಟು 8 ತಂಡ) ಪ್ಲೇಟ್ ಗುಂಪಿಗೆ ಅರ್ಹತೆ ಪಡೆಯುತ್ತದೆ. ಈ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದ್ದರೂ ವಿಶ್ವಕಪ್ ಗೆಲ್ಲುವ ಅವಕಾಶ ಇರುವುದಿಲ್ಲ. ಈ ತಂಡಗಳು ಪ್ಲೇಟ್ ಪ್ರಶಸ್ತಿಗಾಗಿ ಮಾತ್ರವೇ ಹೋರಾಟ ನಡೆಸಬಹುದು. ಪ್ಲೇಟ್ ಚಾಂಪಿಯನ್ ಆದ ತಂಡ ಒಟ್ಟಾರೆ ಟೂರ್ನಮೆಂಟ್​ನ ತಂಡಗಳ ಸ್ಥಾನದಲ್ಲಿ 9ನೇ ಸ್ಥಾನ ಪಡೆಯಲಿದೆ. ಇನ್ನು ವಿಶ್ವಕಪ್​ನಲ್ಲಿ ಒಟ್ಟಾರೆ 8 ಕ್ವಾರ್ಟರ್​ಫೈನಲ್ ಇರಲಿವೆ.

(ಸೂಪರ್ ಲೀಗ್​ನಲ್ಲಿ ನಾಲ್ಕು ಹಾಗೂ ಪ್ಲೇಟ್ ಲೀಗ್​ನಲ್ಲಿ ನಾಲ್ಕು). ಎರಡೂ ಲೀಗ್​ನ ಸೆಮಿಫೈನಲ್​ನಲ್ಲಿ ಗೆದ್ದ ತಂಡಗಳು, ತಮ-ತಮ್ಮ ಲೀಗ್​ನ ಫೈನಲ್​ನಲ್ಲಿ ಮುಖಾಮುಖಿ ಯಾಗಲಿವೆ. ಇನ್ನು ಸೂಪರ್ ಲೀಗ್ ಹಾಗೂ ಪ್ಲೇಟ್ ಲೀಗ್​ನ ಕ್ವಾರ್ಟರ್​ಫೈನಲ್​ನಲ್ಲಿ ಸೋತ ತಂಡಗಳು ಕ್ರಮವಾಗಿ ಸೂಪರ್ ಲೀಗ್ ಪ್ಲೇಟ್ ಮತ್ತು ಪ್ಲೇಟ್ ಲೀಗ್ ಪ್ಲೇ-ಆಫ್ ಸೆಮಿಫೈನಲ್ಸ್​ನಲ್ಲಿ ಆಡಲಿವೆ. ಸೂಪರ್ ಲೀಗ್ ಪ್ಲೇ-ಆಫ್ ಸೆಮಿಫೈನಲ್ಸ್​ನಲ್ಲಿ ಗೆದ್ದ ತಂಡ 5ನೇ ಸ್ಥಾನಕ್ಕಾಗಿ ಜಟಾಪಟಿ ನಡೆಸಲಿದೆ.

ಕಣದಲ್ಲಿ ಮಾಜಿ ಕ್ರಿಕೆಟಿಗರ ಪುತ್ರರು

ಹಾಲಿ ವಿಶ್ವಕಪ್ ಟೂರ್ನಿ ಕ್ರಿಕೆಟ್ ದಿಗ್ಗಜರಾದ ಆಸ್ಟ್ರೇಲಿಯಾದ ಸ್ಟೀವ್ ವಾ ಹಾಗೂ ದಕ್ಷಿಣ ಆಫ್ರಿಕಾದ ಮುಖಾಯ ಎನ್​ಟಿನಿ ಪುತ್ರರ ಪ್ರತಿಭಾ ಪ್ರದರ್ಶನಕ್ಕೂ ವೇದಿಕೆಯಾಗಿದೆ. ಅಪ್ಪನ ಹಾದಿಯಲ್ಲಿಯೇ ಸಾಗುವ ಗುರಿಯಲ್ಲಿರುವ ಇಬ್ಬರೂ ಆಟಗಾರರು ದೇಶೀಯ ಟೂರ್ನಿಗಳಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದಾರೆ. ಸ್ಟೀವ್ ವಾ ಪುತ್ರ ಆಸ್ಟಿನ್ ವಾ, 2016ರಲ್ಲಿ 17 ವಯೋಮಿತಿ ರಾಷ್ಟ್ರೀಯ ಚಾಂಪಿಯನ್​ಷಿಪ್​ನ ಫೈನಲ್​ನಲ್ಲಿ ಅಜೇಯ 122 ರನ್ ಸಿಡಿಸಿ ಗಮನಸೆಳೆದಿದ್ದರೆ, ಎನ್​ಟಿನಿ ಪುತ್ರ ಥಂಡೋ ಎನ್​ಟಿನಿ ಹಾಲಿ ವರ್ಷ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧದ ಪದಾರ್ಪಣಾ ಪಂದ್ಯದಲ್ಲೇ 56 ರನ್​ಗೆ 4 ವಿಕೆಟ್ ಉರುಳಿಸಿ ಮಿಂಚಿದ್ದರು.

ಗುಂಪುಗಳು

 ಎ: ಕೀನ್ಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್. ಬಿ: ಆಸ್ಟ್ರೇಲಿಯಾ, ಭಾರತ ಪಪುವಾ ನ್ಯೂಗಿನಿ, ಜಿಂಬಾಬ್ವೆ. ಸಿ: ಬಾಂಗ್ಲಾದೇಶ, ಕೆನಡ, ಇಂಗ್ಲೆಂಡ್, ನಮೀಬಿಯಾ. ಡಿ: ಅಫ್ಘಾನಿಸ್ತಾನ, ಐರ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ.

ವಿಂಡೀಸ್ ಹಾಲಿ ಚಾಂಪಿಯನ್

2016ರಲ್ಲಿ ಕೊನೆಯ ಆವೃತ್ತಿಯ 19 ವಯೋಮಿತಿ ವಿಶ್ವಕಪ್​ಗೆ ಬಾಂಗ್ಲಾದೇಶ ಆತಿಥ್ಯ ವಹಿಸಿಕೊಂಡಿತ್ತು. ಮೀರ್​ಪುರದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿ ವೆಸ್ಟ್ ಇಂಡೀಸ್ ಚಾಂಪಿಯನ್ ಆಗಿತ್ತು.

 ವಾಲ್​ಗೆ ಸಿಗಲಿದೆಯೇ ವಿಶ್ವಕಪ್

ಗುರುವಾರ 45ನೇ ವರ್ಷದ ಜನ್ಮದಿನ ಆಚರಿಸಿಕೊಂಡ ದಿಗ್ಗಜ ಕ್ರಿಕೆಟಿಗ, ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್. ಜಂಟಲ್​ವೆುನ್​ಗಳ ಕ್ರೀಡೆಯ ಜಂಟಲ್​ವೆುನ್ ಎನಿಸಿಕೊಂಡಿದ್ದ ದ್ರಾವಿಡ್ ಪಾಲಿಗೆ ವೃತ್ತಿಜೀವನದಲ್ಲಿ ವಿಶ್ವಕಪ್ ಟ್ರೋಫಿ ಎನ್ನುವುದು ಗಗನಕುಸುಮವಾಗಿಯೇ ಉಳಿದುಕೊಂಡಿತು. ಇನ್ನು 19 ವಯೋಮಿತಿ ತಂಡದ ಕೋಚ್ ಆಗಿಯೂ ದ್ರಾವಿಡ್ ಈ ವಿಚಾರದಲ್ಲಿ ನಿರಾಸೆ ಕಂಡಿದ್ದಾರೆ. 2016ರಲ್ಲಿ ಇವರ ಕೋಚಿಂಗ್​ನಲ್ಲಿ ತಂಡ ಅದ್ಭುತ ನಿರ್ವಹಣೆ ನೀಡಿ ಫೈನಲ್​ಗೇರಿದರೂ, ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿ ಕಂಡಿತ್ತು.

Leave a Reply

Your email address will not be published. Required fields are marked *

Back To Top