Monday, 19th February 2018  

Vijayavani

ಮೈಸೂರಲ್ಲಿ ಮೋದಿ ಮೇನಿಯಾ - ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ -ಮಹಾಪುರುಷರ, ವಸ್ತುಗಳ ಸ್ಮರಿಸಿದ ನಮೋ.        ಬಡವರ ಅವಶ್ಯಕತೆ ಪೂರೈಕೆಗೆ ರೈಲ್ವೆ ಅವಶ್ಯಕ - ಜೋಡಿ ಮಾರ್ಗ ಉದ್ಘಾಟಿಸಿ ನಮೋ ಮಾತು - ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ.        ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ - ಸಿಎಂ ವಿರುದ್ಧ ಪ್ರತಾಪಸಿಂಹ ವಾಕ್ಪ್ರಹಾರ - ಮೋದಿಗೆ ಸ್ಮರಣಿಕೆ ನೀಡಿದ ಮುಖಂಡರು.        ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆ ಕೇಸ್​ - ಆರೋಪಿಗಳಿಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​​ - ಶಿವಾಜಿನಗರದ ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್.        ಸರ್ವಸಂಘ ಪರಿತ್ಯಾಗಿಗೆ ಮಹಾಮಜ್ಜನ - ಶ್ರವಣಬೆಳಗೊಳದಲ್ಲಿ ಭಕ್ತ ಸಾಗರ - ಆಸ್ಪತ್ರೆ, ಬೆಟ್ಟದ ಮೆಟ್ಟಿಲು ಲೋಕಾರ್ಪಣೆ.       
Breaking News

ಭರವಸೆಯೇ ಬೆಳಕು

Friday, 19.05.2017, 2:59 AM       No Comments

| ಯತಿರಾಜ್ ವೀರಾಂಬುಧಿ

ಕೊಠಡಿಯೊಂದರಲ್ಲಿ ನಾಲ್ಕು ದೀಪಗಳು ಉರಿಯುತ್ತಿದ್ದವು. ಅಲ್ಲಿ ಮೌನವು ನೆಲೆಗೊಂಡಿತ್ತಾದರೂ, ಸ್ವಲ್ಪ ಕಿವಿಗೊಟ್ಟು ಕೇಳಿದರೆ ಆ ನಾಲ್ಕು ದೀಪಗಳು ಮಾತಾಡುವುದನ್ನು ಕೇಳಿಸಿಕೊಳ್ಳಬಹುದಿತ್ತು.

ಮೊದಲ ದೀಪವು, ‘ನಾನು ಶಾಂತಿ. ಆದರೆ ನನ್ನನ್ನು ಯಾರೂ ಇಷ್ಟಪಡುವುದಿಲ್ಲ. ನಾನು ಇಲ್ಲಿಂದ ಹೊರಟುಹೋಗುತ್ತೇನೆ’ ಎಂದಿತು. ಅದರ ಜ್ವಾಲೆಯು ವೇಗವಾಗಿ ಉರಿದು ಸಂಪೂರ್ಣವಾಗಿ ಆರಿಹೋಯಿತು. ಎರಡನೆಯ ದೀಪವು, ‘ನಾನು ನಂಬಿಕೆ. ಮೊದಲಾದರೆ ನಾನು ಬಹಳವೇ ಬೇಕಾದವಳಾಗಿದ್ದೆ. ಈಗ ನಾನು ಯಾರಿಗೂ ಬೇಡ. ನಾನು ಉರಿಯುವುದು ವ್ಯರ್ಥ’ ಎಂದು ಹೇಳಿತು. ಸಣ್ಣಗಿನ ಗಾಳಿ ಅಲ್ಲಿ ಸುಳಿದು ಆ ದೀಪವನ್ನು ಆರಿಸಿಬಿಟ್ಟಿತು. ಮೂರನೆಯ ದೀಪವು ಮ್ಲಾನ ದನಿಯಲ್ಲಿ, ‘ನಾನು ಪ್ರೇಮ. ನನಗೆ ಉರಿಯುತ್ತಾ ಇರುವುದಕ್ಕೆ ಶಕ್ತಿ ಇಲ್ಲ. ಜನರು ನನ್ನನ್ನು ನಿರ್ಲಕ್ಷಿಸುತ್ತಾರೆ. ನನ್ನ ಪ್ರಾಮುಖ್ಯ ಅವರಿಗೆ ಅರ್ಥವಾಗುತ್ತಿಲ್ಲ. ತಮ್ಮ ಹತ್ತಿರದವರನ್ನೂ ಪ್ರೀತಿಸಲು ಜನರು ಮರೆತಿದ್ದಾರೆ’ ಎಂದು ಹೇಳಿ ಆರಿಹೋಯಿತು.

ಆಗ ಇದ್ದಕ್ಕಿದ್ದಂತೆ ಒಂದು ಮಗು ಆ ಕೊಠಡಿಯನ್ನು ಪ್ರವೇಶಿಸಿ, ಮೂರೂ ದೀಪಗಳು ಆರಿಹೋಗಿರುವುದನ್ನು ಕಂಡಿತು. ‘ಯಾಕೆ ನೀವು ಉರಿಯುತ್ತಿಲ್ಲ? ನೀವು ಕೊನೆಯವರೆಗೂ ಉರಿಯಬೇಕಿತ್ತಲ್ಲ?’ ಎಂದು ಕೇಳಿತು. ಅಷ್ಟು ಹೇಳುವ ಹೊತ್ತಿಗೆ ಆ ಮಗುವಿಗೆ ಅಳು ಬಂದುಬಿಟ್ಟಿತು. ಆಗ ನಾಲ್ಕನೆಯ ದೀಪವು, ‘ಹೆದರಬೇಡ ಮಗೂ. ನಾನು ಹೇಗೂ ಉರಿಯುತ್ತಿದ್ದೇನೆ. ನನ್ನಿಂದ ಉಳಿದ ಮೂರು ದೀಪಗಳನ್ನು ಹೊತ್ತಿಸು. ನಾನು ಭರವಸೆ’ ಎಂದಿತು. ಆ ಮಗುವಿನ ಕಣ್ಣುಗಳು ನಕ್ಷತ್ರದಂತೆ ಬೆಳಗಿದವು. ಭರವಸೆಯ ದೀಪದಿಂದ ಅದು ಉಳಿದ ಮೂರು ದೀಪಗಳನ್ನು ಹೊತ್ತಿಸಿತು.

ನಮ್ಮ ಜೀವನದಲ್ಲಿ ಭರವಸೆಯ ದೀಪವು ಎಂದಿಗೂ ಆರಕೂಡದು; ಆಗ ನಮ್ಮ ಪ್ರೇಮ, ಶಾಂತಿ ಮತ್ತು ನಂಬಿಕೆಯ ದೀಪಗಳು ಉರಿಯುತ್ತಲೇ ಇರುತ್ತವೆ. ಭರವಸೆಯು ನಮ್ಮನ್ನೆಂದೂ ತ್ಯಜಿಸಿ ಓಡುವುದಿಲ್ಲ. ನಾವು ಭರವಸೆಯನ್ನು ಕಳೆದುಕೊಂಡು ದೂರಮಾಡಿಕೊಳ್ಳುತ್ತೇವೆ. ಭಯವನ್ನು ಮುಂದುಮಾಡಿಕೊಂಡು ನಮ್ಮ ಕನಸುಗಳನ್ನೂ, ಭರವಸೆಗಳನ್ನೂ ದೂರಮಾಡಬಾರದು. ಆಶಾಭಂಗಗಳು ನಮ್ಮನ್ನು ಪಾತಾಳಕ್ಕೆ ತಳ್ಳಬಲ್ಲವು. ಅವುಗಳ ಬಗ್ಗೆ ಯೋಚಿಸದೆ ನಮ್ಮ ಸುಪ್ತಶಕ್ತಿಗಳ ಬಗ್ಗೆ ಆಲೋಚಿಸೋಣ. ನಾವು ಅನೇಕ ಸಲ ಮೊದಲನೇ ಪ್ರಯತ್ನದಲ್ಲಿ ಗೆಲ್ಲುವುದಿಲ್ಲ. ಪ್ರಯತ್ನ ಮಾಡಿದೆವಲ್ಲಾ, ಅದು ಮುಖ್ಯ. ಒಂದು ಯತ್ನದಲ್ಲಿ ಸೋತರೇನಂತೆ? ಮತ್ತೊಮ್ಮೆ ಪ್ರಯತ್ನಿಸೋಣ. ಹಿಂದಿನ ಪ್ರಯತ್ನದಲ್ಲಿ ಯಾವ ಘಟ್ಟದಲ್ಲಿ ಸೋತೆವೋ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಹೊಸ ಮೆಟ್ಟಿಲನ್ನು ಹತ್ತೋಣ.

‘ಸೋಲು ಗೆಲುವಿನ ಮೆಟ್ಟಿಲು’ ಎನ್ನುವ ಮಾತು ನಾವೆಲ್ಲಾ ಕೇಳಿರುವಂತಹದ್ದೇ. ಭರವಸೆಯು ಸೂರ್ಯನಂತೆ. ನಾವು ಅದರತ್ತ ಪ್ರಯಾಣಿಸುತ್ತಿದ್ದಂತೆ ಅದು ನಮ್ಮ ಕಷ್ಟದ ಹೊರೆಗಳ ನೆರಳನ್ನು ನಮ್ಮ ಹಿಂದೆ ಉಳಿಯುವಂತೆ ಮಾಡುತ್ತದೆ. ಥಾಮಸ್ ಫುಲ್ಲರ್​ನ, ‘ಭರವಸೆಗಳೆಂಬುದು ಇಲ್ಲದಿದ್ದರೆ ನಮ್ಮ ಹೃದಯವು ಒಡೆದುಹೋಗುತ್ತದೆ. ಭರವಸೆಗಳನ್ನು ಬೆಂಬತ್ತುವುದಕ್ಕೆ ನಮ್ಮಲ್ಲಡಗಿರುವ ಭಯವು ತಡೆಯೊಡ್ಡದಂತೆ ನೋಡಿಕೊಳ್ಳಬೇಕು’ ಎಂಬ ಗಮನಾರ್ಹ ಸೂಕ್ತಿ ಈ ನಿಟ್ಟಿನಲ್ಲಿ ಅನುಕರಣೀಯ.

Leave a Reply

Your email address will not be published. Required fields are marked *

Back To Top