Monday, 19th February 2018  

Vijayavani

ನನ್ನ ಮಗನನ್ನ ನಾನೇ ಸರೆಂಡರ್​ ಮಾಡಿಸುತ್ತೇನೆ - ಪೊಲೀಸರಿಗೆ ಶೀಘ್ರವೇ ಒಪ್ಪಿಸುತ್ತೇನೆ - ಗೂಂಡಾ ನಲಪಾಡ್​​ ಕುರಿತು ಹ್ಯಾರಿಸ್​ ಪ್ರತಿಕ್ರಿಯೆ        ನಿನ್ನೆ ಚಿಕ್ಕವನು.. ಇಂದು ಬೆಳೆದ ಮಗ - ಬೈದ ನಂತರ ಮೊಬೈಲ್​ ಸ್ವಿಚ್​​ ಆಫ್​​ ಮಾಡ್ಕೊಂಡಿದ್ದ - ಕೇಸ್​ ಭೀತಿಯಲ್ಲಿ ಉಲ್ಟಾ ಹೊಡೆದ ಹ್ಯಾರಿಸ್​​        ರಾಜ್ಯದಲ್ಲಿ ಇಡೀ ದಿನ ಮೋದಿ ಮೇನಿಯಾ - ಮಧ್ಯಾಹ್ನ ಬಾಹುಬಲಿ ಸನ್ನಿಧಿಗೆ ಪ್ರಧಾನಿ - ಮತ್ತಷ್ಟು ಮೇಳೈಸಲಿದೆ ಮಹಾಮಜ್ಜನ        ಪರಿವರ್ತನಾ ರ‍್ಯಾಲಿಯಲ್ಲಿಂದು ಮೋದಿ ಅಬ್ಬರ - ಬಿಜೆಪಿಯಿಂದ ಗಣಪತಿ ಉಡುಗೊರೆ - ಮೈಸೂರು ಪೇಟ ತೊಡಿಸಿ ಸ್ವಾಗತ        ರೈತ ನಾಯಕ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶ - ವಿದೇಶದಿಂದ ಮಕ್ಕಳ ಬಂದ ಬಳಿಕ ಅಂತ್ಯಕ್ರಿಯೆ - ಕಂಬನಿ ಮಿಡಿದ ಗಣ್ಯರು       
Breaking News

ಭಗವದ್ದರ್ಶನದ ರಾಜಮಾರ್ಗ

Thursday, 14.09.2017, 3:00 AM       No Comments

ವೇದವೆಂಬುದು ಜ್ಞಾನರಾಶಿ. ಪರಮಾರ್ಥಜ್ಞಾನ ಉಂಟುಮಾಡುವಿಕೆಯೇ ವೇದಾಧ್ಯಯನದ ಪರಮ ಪ್ರಯೋಜನ. ಅದೇ ಮೋಕ್ಷಕ್ಕೆ ಸಾಧನ. ಈ ಲೋಕಕ್ಕೆ ಸೀಮಿತವಲ್ಲದ ಹಾಗೆ ಅತೀಂದ್ರಿಯ ವಸ್ತುವನ್ನು ಪ್ರಾಮಾಣಿಕವಾಗಿ ತಿಳಿಯುವುದಕ್ಕೆ ವೇದ ಬೇಕು. ಜನನ-ಮರಣರೂಪದ ಸಂಸಾರಚಕ್ರ ಅನಾದಿಯಿಂದ ಚಲಿಸುತ್ತಿದೆ. ವ್ಯಕ್ತಿಯೊಬ್ಬ ಮರಣದ ಅನಂತರ ಎಲ್ಲಿರುತ್ತಾನೆ, ಹೇಗಿರುತ್ತಾನೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ವೇದದಲ್ಲಿದೆ. ನಮಗೆ ಹಿಂದಿನ ಜನ್ಮದ ಅರಿವಿಲ್ಲ, ಮುಂದಿನ ಇರುವಿಕೆಗೆ ಅಸ್ತಿತ್ವ ಗೊತ್ತಿಲ್ಲ. ಯಾಕೆಂದರೆ ಸ್ವರ್ಗ-ನರಕಾದಿಗಳು ನಮ್ಮ ಕಣ್ಣಿಗೆ ಅಗೋಚರ. ಕಣ್ಣಿಗೆ ಕಂಡದ್ದು ಮಾತ್ರ ಸತ್ಯ ಎಂದರೆ; ಕಣ್ಣಿಗೆ ಕಾಣದ್ದನ್ನು, ಅದರ ಅಸ್ತಿತ್ವವನ್ನು ನಿರಾಕರಿಸಲಾಗದು. ಪರಲೋಕವಿಲ್ಲ ಎಂಬುದಕ್ಕೆ ‘ಕಣ್ಣಿಗೆ ಕಾಣದೆ ಇರುವುದರಿಂದ’ ಎಂಬ ಕಾರಣ ಕೊಟ್ಟರೆ, ಪರಲೋಕವಿದೆ ಎಂಬುದಕ್ಕೂ ಇದೇ ಕಾರಣ ನೀಡಬಹುದು. ಯಾಕೆಂದರೆ ಇದೆ-ಇಲ್ಲ ಎಂಬುದನ್ನು ನಿರ್ಧರಿಸಲು ಈ ಲೌಕಿಕ ಕಣ್ಣಿಗೆ ಶಕ್ತವಾಗದು. ಲೋಕಲೋಕಾಂತರಗಳು ಹಾಗಿರಲಿ, ನಮ್ಮ ಮನೆಯ ಗೋಡೆಯ ಸೂಕ್ಷ್ಮ ರಂಧ್ರದೊಳಗಿರುವ ಅತಿ ಸೂಕ್ಷ್ಮ ಜೀವಿಯೂ ಗೋಚರಿಸದೆ ಇರುವಾಗ ಈ ಬರಿಗಣ್ಣು ಬರಿದಾದ ಲೋಕಾನುಭವ ಎಲ್ಲವನ್ನೂ ನಿರ್ಧರಿಸುತ್ತದೆ ಎನ್ನುವುದು ಹಾಸ್ಯಾಸ್ಪದ. ಅಟ್ಟವನ್ನು ಏರಲು ಉದ್ದದ ಕೈಕಾಲುಗಳು ಇದ್ದರೂ ಸಾಧ್ಯವಾಗದಾಗ ಅದಕ್ಕೂ ಉದ್ದದ ಏಣಿ ಬಳಸುವಂತೆ ಅತಿ ಬುದ್ಧಿಮತ್ತೆಗೂ ಹೊಳೆಯದ ವಿಚಾರಗಳನ್ನರಿಯಲು ವೇದವನ್ನು ಅಂದರೆ ಅಮೂಲ್ಯ ಜ್ಞಾನರಾಶಿಯನ್ನು ಮೊರೆ ಹೋಗುವುದು ಅನಿವಾರ್ಯ. ವೇದವನ್ನು ಅರಿತರೆ ಭಗವಂತನನ್ನು ಅರಿತಂತೆ. ವೇದಾರ್ಥ ನಿರ್ಧರಿಸುವುದಕ್ಕೆ ವೇದಾಂಗಗಳು (ಶಿಕ್ಷಾ, ವ್ಯಾಕರಣ, ಛಂದ, ನಿರುಕ್ತ, ಜ್ಯೋತಿಷ, ಕಲ್ಪ) ಸಹಕರಿಸುತ್ತವೆ. ಛಂದಸ್ಸು ವೇದಪುರುಷನ ಪಾದ, ಕಲ್ಪವು ಹಸ್ತ, ಜ್ಯೋತಿಷ್ಯಾಸ್ತ್ರ ಕಣ್ಣು, ನಿರುಕ್ತ ಕಿವಿ, ಶಿಕ್ಷಾಶಾಸ್ತ್ರ ಮೂಗು, ವ್ಯಾಕರಣವೇ ಮುಖ. ವೇದಪುರುಷನ ಸಾಕ್ಷಾತ್ಕಾರವೆಂದರೆ ಅಂಗಸಹಿತ ವೇದಾಧ್ಯಯನ.

 

 

Leave a Reply

Your email address will not be published. Required fields are marked *

Back To Top