Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಭಕ್ತಿಯೋಗಕ್ಕೆ ಅಪರಿಮಿತ ಫಲ

Thursday, 21.06.2018, 3:04 AM       No Comments

ಯೋಗದಿಂದ ಮನಸ್ಸು ಮತ್ತು ದೇಹ ಶುದ್ಧವಾಗುತ್ತದೆ. ಭಕ್ತಿ ಯೋಗ ಅಂತರಂಗವನ್ನೇ ಪವಿತ್ರಮಯ ಮಾಡುತ್ತದೆ. ಪರಮಾತ್ಮನ ಸಾಯುಜ್ಯ ದೊರಕಿಸುತ್ತದೆ ಎಂಬುದಕ್ಕೆ ಒಂದು ನಿದರ್ಶನ ನೋಡೋಣ. ಕಡು ಬಡವ ಸುಧಾಮ ದ್ವಾರಕೆಗೆ ಬಂದ. ಬಾಲ್ಯದ ಮಿತ್ರ ಕೃಷ್ಣನನ್ನು ಕಾಣಬೇಕು ಎಂಬುದು ಅವನ ಅಪೇಕ್ಷೆ. ಆದರೆ ಆತ ಅರಮನೆಯೊಳಗಿದ್ದ. ಅವನ ದರ್ಶನಕ್ಕೆ ಅನೇಕಾನೇಕ ಋಷಿಗಳು, ರಾಜ ಮಹಾರಾಜರು ಮಹಾದ್ವಾರದಲ್ಲಿ ಕಾದಿದ್ದರು. ನಿನ್ನಂಥ ಭಿಕಾರಿಗೆಲ್ಲಿ ಕೃಷ್ಣನ ದರ್ಶನ ಎಂದು ಅವರೆಲ್ಲಾ ದೂಡಿಬಿಟ್ಟರು. ಗಾಯಗೊಂಡ ಸುಧಾಮ ಹೇ ದೇವಾ, ದೀನವತ್ಸಲಾ, ಆಪದ್ಭಾಂಧವಾ ಎಂದು ಹೃದಯಪೂರ್ವಕವಾಗಿ ಉದ್ಗಾರ ತೆಗೆದ. ಅವನ ದನಿ ದೇವರಿಗೆ ಮುಟ್ಟಿತು. ಹೃದಯ ತಟ್ಟಿತು. ಕೂಡಲೇ ಕೃಷ್ಣ ದಿವ್ಯ ಪಲ್ಲಕ್ಕಿ ಕಳುಹಿಸಿದ. ಸಿಂಹಾಸನದಿಂದ ಇಳಿದು ಸುಧಾಮನ ಪಾದ ತೊಳೆದು ಉಪಚರಿಸಿದ. ಯಥೇಚ್ಛ ಸಂಪತ್ತು ಕರುಣಿಸಿದ. ಇದಕ್ಕೆಲ್ಲ ಕಾರಣ ಸುಧಾಮನ ನಿಷ್ಕಾಮ ಭಕ್ತಿ. ಇದೊಂದು ಶ್ರೇಷ್ಠ ಯೋಗಾಯೋಗ. ಭಕ್ತಿಯಿಂದಲೇ ಸದ್ಗತಿ ಮತ್ತು ಮುಕ್ತಿ. ಯೋಗ ಶಕ್ತಿಗೆ ಭಕ್ತಿ ಬೆರೆಸಿ ನಾವೂ ಧನ್ಯರಾಗೋಣ.

Leave a Reply

Your email address will not be published. Required fields are marked *

Back To Top