Sunday, 21st October 2018  

Vijayavani

ಅರ್ಜುನ್‌ ಸರ್ಜಾಕಡೆಯಿಂದ ಬೆದರಿಕೆ ಕರೆ - ಕಾನೂನು ಹೋರಾಟದ ಬಗ್ಗೆ ದಾಖಲೆ ಸಂಗ್ರಹ - ಸುದ್ದಿಗೋಷ್ಠಿಯಲ್ಲಿ ಶ್ರುತಿ ಗಂಭೀರ ಆರೋಪ        ಭಾವೈಕ್ಯತೆ ಶ್ರೀಗಳಿಗೆ ಕಣ್ಣೀರ ವಿದಾಯ - ಕ್ರಿಯಾಸಮಾಧಿಯಲ್ಲಿ ಸಿದ್ದಲಿಂಗ ಶ್ರೀ ಲೀನ - ಭಕ್ತಸಾಗರದಿಂದ ತೋಂಟದಾರ್ಯರಿಗೆ ಅಂತಿಮ ನಮನ        ಡಿಕೆಶಿ ಶೋ ಮಾಡೋದು ಬಿಡ್ಬೇಕು - ಪಕ್ಷದ ಪರ ಕೆಲಸ ಮಾಡ್ಬೇಕು - ಬಳ್ಳಾರಿ ಪ್ರಚಾರದಲ್ಲಿ ಬಯಲಾಯ್ತು ಜಾರಕಿಹೊಳಿ ಸಿಟ್ಟು        ಸಿಎಂ ಎಚ್‌ಡಿಕೆ ಮತ್ತೆ ಟೆಂಪಲ್‌ರನ್‌ - ಶಕ್ತಿ ದೇವತೆ ಸನ್ನಿಧಿಗೆ ಕುಮಾರಸ್ವಾಮಿ - ಮಹಾರಾಷ್ಟ್ರದ ತುಳಜಾ ಭವಾನಿ ದೇಗುಲಕ್ಕೆ ಭೇಟಿ        ಶಿರಡಿ ಸಾಯಿ ಸಮಾಧಿ ಶತಮಾನೋತ್ಸವ ಹಿನ್ನೆಲೆ - ಸಾಯಿ ಸನ್ನಿಧಿಗೆ ಭಕ್ತ ಸಾಗರ - ನಾಲ್ಕು ದಿನದಲ್ಲಿ 5 ಕೋಟಿ ರೂಪಾಯಿ ಕಾಣಿಕೆ        ರೋಡ್ ರೋಲರ್​ನ್ನೂ ಬಿಡದ ಕಳ್ಳರು - ವರ್ತೂರು ಬಳಿ ನಿಲ್ಲಿಸಿ ಎಸ್ಕೇಪ್ ಆದ ಚೋರರು - ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ       
Breaking News

ಭಕ್ತರ ಸೋಗಿನಲ್ಲಿ ಧರ್ಮದರ್ಶಿಯ 20 ಲಕ್ಷ ದೋಚಿದ್ರು

Monday, 11.06.2018, 3:00 AM       No Comments

ಕುಣಿಗಲ್: ಭಕ್ತರ ಸೋಗಿನಲ್ಲಿ ಬಂದ ಆರು ದರೋಡೆಕೋರರು ಶನಿವಾರ ರಾತ್ರಿ ದೇವಾಲಯ ಧರ್ಮದರ್ಶಿ ಕಣ್ಣಿಗೆ ರಾಸಾಯನಿಕ ಸಿಂಪಡಿಸಿ 20 ಲಕ್ಷ ರೂ. ದೋಚಿದ್ದಾರೆ.

ಪಟ್ಟಣದ ಹೊರವಲಯದಲ್ಲಿರುವ ಬಿದನಗೆರೆ ಶನಿಮಹಾತ್ಮ ದೇವಸ್ಥಾನದ ಧರ್ಮದರ್ಶಿ ಧನಂಜಯ ಸ್ವಾಮೀಜಿ, ಶನಿವಾರ ರಾತ್ರಿ 9.30ರಲ್ಲಿ ಪೂಜೆ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ಹೊರಟಿದ್ದಾರೆ. ಮಾರ್ಗ ಮಧ್ಯೆ ಅಡ್ಡಗಟ್ಟಿದ ದರೋಡೆಕೋರರು ಕಾರು ಸಮೇತ ಹಣ ಕದ್ದೊಯ್ದು 5 ಕಿಮೀ ದೂರದಲ್ಲಿ ಕಾರು ಬಿಟ್ಟು ಹಣದೊಂದಿಗೆ ಪರಾರಿಯಾಗಿದ್ದಾರೆ.

ಹದಿನೆಂಟರಿಂದ ಇಪ್ಪತೆôದು ವರ್ಷದೊಳಗಿನ ದರೋಡೆಕೋರರು ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುತ್ತಿದ್ದರು ಎಂದು ಸ್ವಾಮೀಜಿ ಪೊಲೀಸರಿಗೆ ತಿಳಿಸಿದ್ದಾರೆ.

ಕೆಲವು ದಿನಗಳಿಂದ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಸ್ವಾಮೀಜಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಸ್ವಾಮೀಜಿ ಕಾರು ಚಾಲಕ ಶ್ರೀಧರ ಪೊಲೀಸರಿಗೆ ತಿಳಿಸಿದ್ದಾನೆ.

ಭಾನುವಾರ ಬೆಳಗ್ಗೆ ಬೆಳ್ಳೂರು ಟೋಲ್ ಬಳಿ ಕಾರು ಪತ್ತೆಯಾಗಿರುವ ಮಾಹಿತಿ ಪಡೆದ ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.

ಎಸ್ಟಿ ದಿವ್ಯಾ ಗೋಪಿನಾಥ್, ಡಿವೈಎಸ್​ಪಿ ವೆಂಕಟೇಶ್, ಸಿಪಿಐ ಅಶೋಕ್, ಪಿಎಸ್​ಐ ಪುಟ್ಟೆಗೌಡ ಸ್ಥಳ ಪರಿಶೀಲಿಸಿದ್ದು, ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಡಿವೈಎಸ್​ಪಿ ವೆಂಕಟೇಶ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.

ಪೂರ್ವ ನಿಯೋಜಿತ ಕೃತ್ಯ ಶಂಕೆ: ಬಿದನಗೆರೆ ಸತ್ಯಶನೈಶ್ಚರ ಹಾಗೂ ಉದ್ಭವ ಬಸವಣ್ಣ ಸ್ವಾಮಿ ಕ್ಷೇತ್ರಕ್ಕೆ ಅಪಾರ ಭಕ್ತರು ಆಗಮಿಸುತ್ತಾರೆ. ಶನಿವಾರ ತುಸು ಹೆಚ್ಚಾಗಿರುತ್ತಿದೆ. ದೇವಾಲಯ ಆವರಣದಲ್ಲಿ 151 ಅಡಿ ಎತ್ತರದ ಆಂಜನೇಯ ವಿಗ್ರಹ ನಿರ್ವಣವಾಗುತ್ತಿರುವುದರಿಂದ ದೇವಾಲಯಕ್ಕೆ ಕಾಣಿಕೆ, ದೇಣಿಗೆ ರೂಪದಲ್ಲಿ ಅಪಾರ ಹಣ ಬರುತ್ತಿದೆ. ಶನಿವಾರ ಹುಂಡಿ ತೆರೆಯಲಾಗಿತ್ತು. ಕಳೆದ ಒಂದು ವಾರದಿಂದ ದುಷ್ಕರ್ವಿುಗಳ ತಂಡ ಸ್ವಾಮೀಜಿಯನ್ನು ಹಿಂಬಾಲಿಸಿ ದರೋಡೆ ಮಾಡಿರುವ ಸಾಧ್ಯತೆ ಇದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಭಕ್ತರ ಸೋಗಿನಲ್ಲಿ ದರೋಡೆ: 

ಹೊಸ ಕಾರಿಗೆ ಸ್ವಾಮೀಜಿಗಳೇ ಪೂಜೆ ಮಾಡುವಂತೆ ಭಕ್ತರ ಸೋಗಿನಲ್ಲಿದ್ದ ದರೋಡೆಕೋರರು ಪಟ್ಟುಹಿಡಿದ್ದಾರೆ. ಸ್ವಾಮೀಜಿ ಪೂಜೆ ಮಾಡಲು ಮುಂದಾದಾಗ ರಾಸಾಯನಿಕ ಎರಚಿ, ಮಾರಕಾಸ್ತ್ರಗಳಿಂದ ಸುತ್ತುವರಿದಿದ್ದಾರೆ. ತಕ್ಷಣವೇ ಕಾರು ಚಾಲಕ ಶ್ರೀಧರ್ ಸ್ವಾಮೀಜಿಗೆ ತಪ್ಪಿಸಿಕೊಳ್ಳುವಂತೆ ಕೂಗಿಕೊಂಡಿದ್ದಾನೆ.

ದರೋಡೆಕೋರರ ಪೈಕಿ ಒಬ್ಬ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ. ತಪ್ಪಿಸಿಕೊಳ್ಳಲು ಹೋದಾಗ ಕಣ್ಣಿಗೆ ಸ್ವಲ್ಪ ಪೆಟ್ಟಾಗಿದೆ. ಈ ವೇಳೆ ದಾರಿಯಲ್ಲಿ ಬಂದ ಮತ್ತೊಂದು ಭಕ್ತರ ಕಾರಿನಲ್ಲಿ ಮನೆ ತಲುಪಿದೆ.

| ಧನಂಜಯ ಸ್ವಾಮೀಜಿ, ಸತ್ಯ ಶನೇಶ್ಚರ ದೇವಾಲಯ ಧರ್ಮದರ್ಶಿ

Leave a Reply

Your email address will not be published. Required fields are marked *

Back To Top