Tuesday, 17th October 2017  

Vijayavani

1. ಅಕ್ರಮ ಕಸಾಯಿಖಾನೆ ಮಾಲೀಕರ ದರ್ಪ – ನೋಟಿಸ್​​​ ನೀಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ – ಹೊಯ್ಸಳ ಸೇರಿ ನಾಲ್ಕು ವಾಹನಗಳು ಜಖಂ 2. ದಿಗ್ವಿಜಯ ಸಿಂಗ್​​ ಸಂಬಂಧಿ ಟೆಂಡರ್​ ಟೋಪಿ – ಗುತ್ತಿಗೆ​​​​​​ ನೆಪದಲ್ಲಿ ಕೋಟಿ ಕೋಟಿ ಪಂಗನಾಮ – ಭವಾನಿ ಸಿಂಗ್​​​ ವಿರುದ್ಧ ವಂಚನೆ ಆರೋಪ 3. ಉಸ್ತುವಾರಿ ಎದುರಲ್ಲೇ ಕಾಂಗ್ರೆಸ್​ ಗಲಾಟೆ – ಕೈಗೆ ಸಿಕ್ಕ ಕುರ್ಚಿಗಳು ಪೀಸ್ ಪೀಸ್​- ಚಿತ್ರದುರ್ಗದಲ್ಲಿ ಮನೆ ಮನೆ ಪ್ರಚಾರದ ವೇಳೆ ಕಿತ್ತಾಟ 4. ಜನರಕ್ಷಾ ಯಾತ್ರೆಗೆ ಅಂತಿಮ ತೆರೆ – ಸಾವಿರಾರು ಕಾರ್ಯಕರ್ತರೊಂದಿಗೆ ಚಾಣಕ್ಯ ಪಾದಯಾತ್ರೆ -ತಿರುವನಂತಪುರಂನಲ್ಲಿ ಬಿಜೆಪಿ ಬೃಹತ್​ Rally  5. ಸಾರಥಿಗೆ ಸಂದ ಬ್ರಿಟನ್​ ಗೌರವ – ಚಕ್ರವರ್ತಿಗೆ ಬಂದಿದೆ ಆಹ್ವಾನ – ಅ.19 ರಂದು ಲಂಡನ್​ನಲ್ಲಿ ಸನ್ಮಾನ
Breaking News :

ಬ್ರೆಜಿಲ್​ನ ಹ್ಯಾಂಡ್ಸಮ್ ಮ್ಯಾನ್​ಗೆ 76 ವರ್ಷ

Sunday, 13.08.2017, 3:00 AM       No Comments

ಹ್ಯಾಂಡ್ಸಮ್ ಅಂದ ಕೂಡಲೆ, ಎತ್ತರ ಕಾಯದ ಸುಂದರ ಮೈಕಟ್ಟಿನ ಯುವಕ ಕಣ್ಮುಂದೆ ಬರುತ್ತಾನೆ. ಆದರೆ, ಬ್ರೆಜಿಲ್​ನ ಈ ಸುರಸುಂದರಾಂಗನಿಗೆ 76 ವರ್ಷ. ಈ ತಾತನ ನಗು ಮೊಗಕ್ಕೆ ಎಲ್ಲರೂ ಸೋತಿದ್ದಾರೆ. ಸಾವೋ ಪೊಲೊ ರಾಜ್ಯದ ಆರೋಗ್ಯ ಇಲಾಖೆ, ಹಿರಿಯರ ಆತ್ಮಗೌರವ ವೃದ್ಧಿಗಾಗಿ ಕಳೆದ 14 ವರ್ಷದಿಂದ ‘ಸಾವ್ ಪೊಲೊ ಹ್ಯಾಂಡ್ಸಮೆಸ್ಟ್ ಎಲ್ಡರ್ಲಿ ಮ್ಯಾನ್‘ ಸ್ಪರ್ಧೆಯನ್ನು ನಡೆಸಿಕೊಂಡು ಬರುತಿದ್ದು, 2017ನೇ ಸಾಲಿನ ಈ ಸ್ಪರ್ಧೆಯಲ್ಲಿ 76 ವರ್ಷದ ಜೋಸ್ ಡೊಸ್ ಸ್ಯಾಂಟೊಸ್ ನಿವೆಸ್ ‘ಹ್ಯಾಂಡ್​ಸಮೆಸ್ಟ್ ಎಲ್ಡರ್ಲಿ ಮ್ಯಾನ್‘ ಪ್ರಶಸ್ತಿ ಪಡೆದುಕೊಂಡು ತುಂಟ ನಗು ಬೀರಿದ್ದಾರೆ. ಈ ಸ್ಪರ್ಧೆಯಲ್ಲಿ ಸ್ಯಾಂಟೊಸ್ 24 ಸಹ ಸ್ಪರ್ಧಿಗಳನ್ನು ಹಿಂದಿಕ್ಕಿ ವಿಜೇತರಾಗಿದ್ದಾರೆ. ಇಂತಹ ಸ್ಪರ್ಧೆಯಿಂದ ಹಿರಿಯಲ್ಲಿ ಆತ್ಮಾಭಿಮಾನ, ಜೀವನ ಉತ್ಸಾಹ, ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ ಎಂಬುದು ಸಂಸ್ಥೆಯ ಉದ್ದೇಶ. ಸ್ಪರ್ಧೆಯಲ್ಲಿ 62 ರಿಂದ 96 ವರ್ಷದವರೆಗಿನ ಹಿರಿಯರು ಯುವಕರಂತೆ ಉಲ್ಲಾಸದಿಂದ ಪಾಲ್ಗೊಂಡು ನಾವಿನ್ನೂ ಕಿರಿಯರು ಎಂದು ನಿರೂಪಿಸಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top