Tuesday, 17th October 2017  

Vijayavani

1. ಅಕ್ರಮ ಕಸಾಯಿಖಾನೆ ಮಾಲೀಕರ ದರ್ಪ – ನೋಟಿಸ್​​​ ನೀಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ – ಹೊಯ್ಸಳ ಸೇರಿ ನಾಲ್ಕು ವಾಹನಗಳು ಜಖಂ 2. ದಿಗ್ವಿಜಯ ಸಿಂಗ್​​ ಸಂಬಂಧಿ ಟೆಂಡರ್​ ಟೋಪಿ – ಗುತ್ತಿಗೆ​​​​​​ ನೆಪದಲ್ಲಿ ಕೋಟಿ ಕೋಟಿ ಪಂಗನಾಮ – ಭವಾನಿ ಸಿಂಗ್​​​ ವಿರುದ್ಧ ವಂಚನೆ ಆರೋಪ 3. ಉಸ್ತುವಾರಿ ಎದುರಲ್ಲೇ ಕಾಂಗ್ರೆಸ್​ ಗಲಾಟೆ – ಕೈಗೆ ಸಿಕ್ಕ ಕುರ್ಚಿಗಳು ಪೀಸ್ ಪೀಸ್​- ಚಿತ್ರದುರ್ಗದಲ್ಲಿ ಮನೆ ಮನೆ ಪ್ರಚಾರದ ವೇಳೆ ಕಿತ್ತಾಟ 4. ಜನರಕ್ಷಾ ಯಾತ್ರೆಗೆ ಅಂತಿಮ ತೆರೆ – ಸಾವಿರಾರು ಕಾರ್ಯಕರ್ತರೊಂದಿಗೆ ಚಾಣಕ್ಯ ಪಾದಯಾತ್ರೆ -ತಿರುವನಂತಪುರಂನಲ್ಲಿ ಬಿಜೆಪಿ ಬೃಹತ್​ Rally  5. ಸಾರಥಿಗೆ ಸಂದ ಬ್ರಿಟನ್​ ಗೌರವ – ಚಕ್ರವರ್ತಿಗೆ ಬಂದಿದೆ ಆಹ್ವಾನ – ಅ.19 ರಂದು ಲಂಡನ್​ನಲ್ಲಿ ಸನ್ಮಾನ
Breaking News :

ಬ್ರೂಸ್​ಲೀ ಬಯೋಪಿಕ್​ಗೆ ರೆಹಮಾನ್ ರಾಗ

Sunday, 13.08.2017, 3:00 AM       No Comments

ಮಾರ್ಷಲ್ ಆರ್ಟ್ಸ್ ದಂತಕತೆ ಬ್ರೂಸ್ ಲೀ ಜೀವನಾಧಾರಿತ ಚಿತ್ರ ಸಿದ್ಧಗೊಳ್ಳುತ್ತಿರುವುದು ಹಳೇ ವಿಷಯ. ಇದೀಗ ಇದೇ ತಂಡದಿಂದ ಹೊಸದೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಈ ಚಿತ್ರಕ್ಕೆ ಸಂಗೀತ ಮಾಂತ್ರಿಕ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಎ.ಆರ್. ರೆಹಮಾನ್ ರಾಗ ಸಂಯೋಜಿಸಲಿದ್ದಾರೆ. ಹಾಲಿವುಡ್​ನಲ್ಲಿ ತಯಾರಾಗುತ್ತಿರುವ

‘ಲಿಟ್ ್ಲ ಡ್ರ್ಯಾಗನ್’ ಶೀರ್ಷಿಕೆಯ ಈ ಚಿತ್ರವನ್ನು ಬಾಲಿವುಡ್ ಹಾಗೂ ಹಾಲಿವುಡ್​ನಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ನಿರ್ದೇಶಕ ಶೇಖರ್ ಕಪೂರ್ ನಿರ್ದೇಶಿಸುತ್ತಿದ್ದಾರೆ. ಇದೀಗ ‘..ಡ್ರ್ಯಾಗನ್’ ಬಳಗಕ್ಕೆ ರೆಹಮಾನ್ ಸೇರ್ಪಡೆಗೊಂಡಿರುವುದು ಚಿತ್ರತಂಡದ ಖುಷಿಯನ್ನು ಇಮ್ಮಡಿಗೊಳಿಸಿದೆ. ಮತ್ತೊಂದು ವಿಷಯ ಏನೆಂದರೆ, ನಿರ್ದೇಶಕ ಶೇಖರ್ ಕಪೂರ್ ಮಗಳು ಕಾವೇರಿ ಈ ಚಿತ್ರದ ಹಾಡೊಂದಕ್ಕೆ ಧ್ವನಿ ನೀಡಲಿದ್ದಾರಂತೆ. ರೆಹಮಾನ್ ಸಂಗೀತ ನಿರ್ದೇಶನದ ಹಾಡಿಗೆ ಧ್ವನಿ ನೀಡುತ್ತಿರುವುದು ಅವರಿಗೆ ಖುಷಿ ನೀಡಿದೆ. 1950ರ ಕಾಲಘಟ್ಟದಲ್ಲಿ ಬ್ರೂಸ್​ಲೀ ಜೀವನ ಹೇಗಿತ್ತು ಎಂಬುದನ್ನು ನಿರ್ದೇಶಕರು ತೆರೆಮೇಲೆ ಕಟ್ಟಿಕೊಡಲಿದ್ದಾರಂತೆ. ಬ್ರೂಸ್ ಲೀ ಕುಟುಂಬ, ಕರಾಟೆ, ಹರೆಯದ ಪ್ರೀತಿ, ನಿಜವಾದ ಸ್ನೇಹ, ದ್ವೇಷ, ಬಡತನ ಹೀಗೆ ಪ್ರತಿಯೊಂದು ಅಂಶಗಳು ಸಿನಿಮಾದಲ್ಲಿರಲಿವೆ. ಇನ್ನು ಹಾಲಿವುಡ್​ನಲ್ಲಿ ಈಗಾಗಲೇ ಹಲವು ಬಯೋಪಿಕ್​ಗಳನ್ನು ನಿರ್ಮಾಣ ಮಾಡಿದ ಹೆಚ್ಚುಗಾರಿಕೆ ನಿರ್ದೇಶಕ ಶೇಖರ್ ಕಪೂರ್ ಅವರದ್ದು. ಇದೀಗ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಖುದ್ದು ಬ್ರೂಸ್​ಲೀ ಪುತ್ರಿ ಶನೋನ್ ಬಂಡವಾಳ ಹೂಡುತ್ತಿದ್ದಾರೆ.-ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top