Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ಬ್ರಿಟನ್ ಸಂಸತ್​ನಲ್ಲಿ ಬ್ರೆಕ್ಸಿಟ್ ಬಿಲ್ ಪಾಸ್

Wednesday, 13.09.2017, 3:04 AM       No Comments

ರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಪ್ರಕ್ರಿಯೆ (ಬ್ರೆಕ್ಸಿಟ್) ಮಸೂದೆಗೆ ಬ್ರಿಟನ್ ಸಂಸತ್​ನಲ್ಲಿ ಆರಂಭಿಕ ಮುನ್ನಡೆ ಸಿಕ್ಕಿದೆ. 13 ತಾಸುಗಳ ಕಾಲ ನಡೆದ ಚರ್ಚೆಯ ಬಳಿಕ 326 ಸಂಸದರಲ್ಲಿ 290 ಸಂಸದರು ಬ್ರೆಕ್ಸಿಟ್ ಮಸೂದೆ ಪರವಾಗಿ ಮತ ಚಲಾಯಿಸಿದರು. ಕಳೆದ ವರ್ಷ ನಡೆದಿದ್ದ ಜನಮತಗಣನೆಯಲ್ಲಿ ಬ್ರೆಕ್ಸಿಟ್ ಪರ ಶೇ. 50ಕ್ಕಿಂತ ಹೆಚ್ಚು ಮತ ಬಿದ್ದಿದ್ದವು. ಆದರೆ, ಈಗ ಈ ಕಾಯ್ದೆಯನ್ನು ಜಾರಿಗೊಳಿಸುವುದು ಅಲ್ಲಿನ ಸರ್ಕಾರಕ್ಕೆ ಸವಾಲಿನ ಸಂಗತಿಯಾಗಿದೆ. ಬ್ರಿಟನ್ ಸಂಸತ್ತು ಈಗ ಸಮಗ್ರ ಕಾಯ್ದೆಗೆ ಒಪ್ಪಿಗೆ ನೀಡಿದೆ. ಆದರೆ ಅದರಲ್ಲಿನ ನೀತಿ, ನಿರೂಪಣೆಗಳ ಬಗ್ಗೆ ಪ್ರತ್ಯೇಕ ಸಮಿತಿಗಳು ಅಧ್ಯಯನ ನಡೆಸಿ, ಅಗತ್ಯವಾದಲ್ಲಿ ತಿದ್ದುಪಡಿಗೆ ಸೂಚಿಸುತ್ತವೆ. ಇದಾದ ಬಳಿಕ ಅಂತಿಮ ಕರಡು ಸಿದ್ಧವಾಗುತ್ತದೆ. ಆದರೆ, ಇದಕ್ಕೆ ಪ್ರತಿಪಕ್ಷ ಕನ್ಸರ್ವೆಟಿವ್ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ.

‘ಐರೋಪ್ಯ ಒಕ್ಕೂಟದಿಂದ ಹಿಂಪಡೆತ ಮಸೂದೆ‘ 2019

‘ಗ್ರೇಟ್ ರಿಪೀಲ್ ಬಿಲ್‘ ಎಂದೇ ಕರೆಯಲಾಗುವ ಈ ಮಸೂದೆ 52 ಪುಟಗಳನ್ನು ಹೊಂದಿದೆ. ಈಗ ಜಾರಿಯಲ್ಲಿರುವ ಐರೋಪ್ಯ ಒಕ್ಕೂಟದ ವಿವಿಧ 20 ಸಾವಿರ ಕಾಯ್ದೆ, ನಿಯಮಾವಳಿಗಳನ್ನು ತನ್ನ ದೇಶದ ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿ ಮಾಡಿಕೊಳ್ಳುವುದು ಅಥವಾ ಸಂಪೂರ್ಣವಾಗಿ ತಿರಸ್ಕರಿಸುವ ಅಧಿಕಾರವನ್ನು ಈ ಮಸೂದೆ ಬ್ರಿಟನ್ ಸಂಸತ್​ಗೆ ನೀಡುತ್ತದೆ. ಈ ಮಸೂದೆ ಜಾರಿಯಾಗುತ್ತಿದ್ದಂತೆ 1972ರ ಐರೋಪ್ಯ ಸಮುದಾಯ ಕಾಯ್ದೆ ಬ್ರಿಟನ್​ನಲ್ಲಿ ಅಂತ್ಯ ಕಾಣಲಿದೆ. ಮಾರ್ಚ್​ನಲ್ಲಿ ಪ್ರಧಾನಿ ಥೆರೆಸಾ ಮೇ ಬ್ರೆಕ್ಸಿಟ್ ಘೊಷಣೆಯನ್ನು ಔಪಚಾರಿಕವಾಗಿ ಪ್ರಕಟಿಸಿದ ನಂತರದಲ್ಲಿ ಈ ಮತದಾನ ಮಹತ್ವದ ಹೆಜ್ಜೆಯಾಗಿದೆ.

 

ಸಂಸತ್ತಿನಲ್ಲಿ ಸಿಕ್ಕ ಈ ಒಪ್ಪಿಗೆ ಐತಿಹಾಸಿಕವಾದುದು. ಈ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಇನ್ನೂ ಹಲವು ಹಂತಗಳಿವೆ. ಪರಿಣಾಮಕಾರಿಯಾಗಿ ರ್ಚಚಿಸುತ್ತ ಬ್ರೆಕ್ಸಿಟ್ ಪೂರ್ಣಗೊಳಿಸುವುದಕ್ಕೆ ಭದ್ರ ಬುನಾದಿ ಹಾಕಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಸಂಸದರ ಪಾಲ್ಗೊಳ್ಳುವಿಕೆಯೂ ಅವಶ್ಯವಾಗಿದ್ದು, ತಕ್ಕ ಉತ್ತೇಜನ ನೀಡಲಾಗುವುದು.

| ಥೆರೇಸಾ ಮೇ ಬ್ರಿಟನ್ ಪ್ರಧಾನಿ

 

ನಾಥುಲಾ ಪಾಸ್ ಮಾರ್ಗ ಪುನಾರಂಭ ಮಾತುಕತೆಗೆ ಸಿದ್ಧವೆಂದ ಚೀನಾ

ಎರಡೂವರೆ ತಿಂಗಳ ಕಾಲ ಮುಂದುವರಿದಿದ್ದ ಡೋಕ್ಲಂ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಬಿಗು ನಿಲುವು ತಾಳಿತ್ತು. ಇದಕ್ಕೆ ಪ್ರತೀಕಾರವೆಂಬಂತೆ ಕೈಲಾಸ ಮಾನಸ ಸರೋವರ ಯಾತ್ರೆಯ ನಾಥು ಲಾ ಮಾರ್ಗವನ್ನು ಚೀನಾ ಬಂದ್ ಮಾಡಿತ್ತು. ಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲೇ ಚೀನಾ ಇಂತಹ ಕ್ರಮ ಕೈಗೊಂಡು ಕಿರಿಕಿರಿ ಉಂಟುಮಾಡಿತ್ತಾದರೂ, ಭಾರತ ಇನ್ನೊಂದು ಮಾರ್ಗದ ಮೂಲಕ ಯಾತ್ರಿಕರಿಗೆ ಯಾತ್ರೆ ಮುಂದುವರಿಸುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈಗ ಡೋಕ್ಲಂ ಬಿಕ್ಕಟ್ಟು ಬಗೆಹರಿದಿದ್ದು, ಚೀನಾ ತನ್ನ ನಿಲುವು ಸಡಿಲಗೊಳಿಸಿದೆ.

ಬದಲಾದ ಚೀನಾ ನಿಲುವು: ಟಿಬೆಟ್​ನಲ್ಲಿರುವ ದತ್ತಾಂಶ ಸಂಗ್ರಹ ಕೇಂದ್ರವನ್ನು ಮೇಲ್ದರ್ಜೆಗೇರಿಸುತ್ತಿರುವುದರಿಂದ ಬ್ರಹ್ಮಪುತ್ರ ನದಿಯ ಜಲ ಮಾಹಿತಿ (ಹೈಡ್ರೋಲಾಜಿಕಲ್) ದತ್ತಾಂಶವನ್ನು ಭಾರತದ ಜತೆ ಹಂಚಿಕೊಳ್ಳಲಾಗದು ಎಂದು ಚೀನಾ ಮಂಗಳವಾರ ಹೇಳಿದೆ. ಆದರೆ, ಟಿಬೆಟ್​ನಲ್ಲಿರುವ ಕೈಲಾಸ ಮತ್ತು ಮಾನಸ ಸರೋವರಕ್ಕೆ ತೆರಳುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಿಕ್ಕಿಂನಲ್ಲಿರುವ ನಾಥು ಲಾ ಮಾರ್ಗವನ್ನು ಮುಕ್ತಗೊಳಿಸುವ ಸಂಬಂಧ ಮಾತುಕತೆ ನಡೆಸಲಯ ಸಾಧ್ಯ ಎಂದು ಹೇಳಿದೆ. ಡೋಕ್ಲಂ ಬಿಕ್ಕಟ್ಟಿನಿಂದಾಗಿ ಕಳೆದ ಜೂನ್​ನಲ್ಲಿ ನಾಥು ಲಾ ಮಾರ್ಗವನ್ನು ಚೀನಾ ಬಂದ್ ಮಾಡಿತ್ತು.

ಬಹು ವರ್ಷಗಳಿಂದ ನದಿ ದತ್ತಾಂಶಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಉತ್ತಮ ಸಹಕಾರ ಹೊಂದಿದ್ದೇವೆ. ಈಗ ಸಂಬಂಧಪಟ್ಟ ಕೇಂದ್ರವನ್ನು ಮೇಲ್ದರ್ಜೆಗೇರಿಸುತ್ತಿರುವುದರಿಂದ ಬ್ರಹ್ಮಪುತ್ರ ನದಿಗೆ ಸಂಬಂಧಿಸಿದಂತೆ ದತ್ತಾಂಶ ಸಂಗ್ರಹಿಸುವ ಪರಿಸ್ಥಿತಿಯಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಚುವಾಂಗ್ ಹೇಳಿದ್ದಾರೆ. ದತ್ತಾಂಶ ಹಂಚಿಕೆಗೆ ಸಂಬಂಧಿಸಿದಂತೆ ಭಾರತಕ್ಕೆ ವಿಷಯ ತಿಳಿಸಲಾಗಿದೆ ಎಂಬ ಮಾಹಿತಿ ನನಗೆ ಇದೆ ಎಂದು ಅವರು ಹೇಳಿದ್ದಾರೆ. ಆದರೆ, ಪ್ರಸಕ್ತ ವರ್ಷ ಚೀನಾದಿಂದ ಬ್ರಹ್ಮಪುತ್ರ ನದಿಗೆ ಸಂಬಂಧಿಸಿದಂತೆ ಮಾಹಿತಿ ಬಂದಿಲ್ಲ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಈಚೆಗೆ ಹೇಳಿದ್ದರು. –ಏಜೆನ್ಸೀಸ್

Leave a Reply

Your email address will not be published. Required fields are marked *

Back To Top