Monday, 23rd October 2017  

Vijayavani

1. ಲಿಂಗಾಯತರು ಹಿಂದೂಗಳಲ್ಲ ಹೇಳಿಕೆ – ಜಾಮದಾರ್​ಗೆ ಕನೇರಿ ಮಠದ ಶ್ರೀ ತಿರುಗೇಟು – ಬಹಿರಂಗ ಚರ್ಚೆಗೆ ಕಾಡಸಿದ್ದೇಶ್ವರ ಸ್ವಾಮಿಗಳ ಆಹ್ವಾನ 2. ರಾಜ್ಯ ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ – ಸಿದ್ದು, ಪರಂ, ಡಿಕೆಶಿ ದೂರ ದೂರ – ಹೈಕಮಾಂಡ್​ ಸಾಮೂಹಿಕ ಜಪ, ನಾಯಕರು ಸಪರೇಟ್​ ರೂಪ 3. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಜನರ ತೆರಿಗೆ ದುಡ್ಡಲ್ಲಿ ಕಾಂಗ್ರೆಸ್‌ ಪಕ್ಷಕ್ಕೂ ಪ್ರಚಾರ – ಬೆನ್ನುತಟ್ಟಿಕೊಳ್ಳೋ ಸಮಾವೇಶಕ್ಕೆ ಪಿಡಿಓಗಳೂ ದುರ್ಬಳಕೆ 4. ನಟ ವಿಜಯ್ ಬೆಂಬಲಕ್ಕೆ ನಿಂತ ತಲೈವಾ – ಮೆರ್ಸಲ್‌ ಸಿನಿಮಾದ ಬಗ್ಗೆ ಮೆಚ್ಚುಗೆಯ ಟ್ವೀಟ್ – ವಿವಾದಾತ್ಮಕ ವಿಷಯಗಳಿಗೂ ರಜನಿಕಾಂತ್ ಪರೋಕ್ಷ ಶ್ಲಾಘನೆ 5. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಬಿಗ್​ ಶಾಕ್​ – ಬಿಜೆಪಿಗೆ ಸೇರಲು 1 ಕೋಟಿ ರೂ ಆಮೀಷ – ಹಾರ್ದಿಕ್​ ಪಟೇಲ್​ ಸಂಗಡಿಗನ ಗಂಭೀರ ಆರೋಪ
Breaking News :

ಬೇನಾಮಿ ಕಂಪನಿಗಳ ವಿರುದ್ಧ ಮುಂದುವರಿದ ಕೇಂದ್ರದ ತನಿಖೆ

Friday, 06.10.2017, 3:00 AM       No Comments

ನವದೆಹಲಿ: ಕಾಳಧನ ವರ್ಗಾವಣೆ, ಭ್ರಷ್ಟಾಚಾರ ನಿಗ್ರಹಕ್ಕೆ ಬಿಗು ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ, ಎರಡು ದಿನಗಳ ಹಿಂದಷ್ಟೇ ಬೇನಾಮಿ ಕಂಪನಿಗಳ ಎರಡು ಲಕ್ಷ ನಿರ್ದೇಶಕರನ್ನು ಅನರ್ಹಗೊಳಿಸಿತ್ತು. ಇದರ ಬೆನ್ನಲ್ಲೇ ಮತ್ತಷ್ಟು ನಕಲಿ ಕಂಪನಿಗಳ ನಿರ್ದೇಶಕರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಜತೆಗೆ ಬೇನಾಮಿ ಕಂಪನಿಗಳ ಪರವಾನಗಿಯನ್ನು ಕೂಡ ರದ್ದುಪಡಿಸುವ ಕುರಿತು ಚಿಂತನೆ ನಡೆಸಿದೆ. ಕಾರ್ಪೆರೇಟ್ ವ್ಯವಹಾರಗಳ ಖಾತೆ ರಾಜ್ಯ ಸಚಿವ ಪಿ.ಪಿ. ಚೌಧರಿ, ಒಟ್ಟಾರೆ 4.5 ಲಕ್ಷ ನಿರ್ದೇಶಕರು ಅನರ್ಹತೆಗೊಳಗಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಜತೆಗೆ ಎಲ್ಲ ವ್ಯವಹಾರಗಳ ಸೂಕ್ತ ದಾಖಲೆ ಮತ್ತು ಪ್ರಾಮಾಣಿಕ ತೆರಿಗೆ ಪಾವತಿ, ಲೆಕ್ಕಪತ್ರ ಹೊಂದಿರುವ ಕಂಪನಿಗಳ ನಿರ್ದೇಶಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ, ಹೀಗಾಗಿ ಪ್ರಾಮಾಣಿಕರು ಭಯಪಡಬೇಕಿಲ್ಲ ಎಂದು ಚೌಧರಿ ಹೇಳಿದ್ದಾರೆ.

ಈ ಮೊದಲು ಸಚಿವಾಲಯ ವಾರ್ಷಿಕ ಹಣಕಾಸು ವ್ಯವಹಾರಗಳ ವಿವರ ಸಲ್ಲಿಸದ 2,17,239 ನಕಲಿ ಕಂಪನಿಗಳ ಹೆಸರನ್ನು ಪಟ್ಟಿಮಾಡಿತ್ತು. ನಂತರ 3,19,637 ನಿರ್ದೇಶಕರನ್ನು ಗುರುತಿಸಿ, ಅವರನ್ನು ಅನರ್ಹಗೊಳಿಸಿತ್ತು. ಈ ರೀತಿ ಅನರ್ಹಗೊಳ್ಳುವ ನಿರ್ದೇಶಕರ ಪಟ್ಟಿ 4.5 ಲಕ್ಷಕ್ಕೆ ತಲುಪುವ ಸಾಧ್ಯತೆಯಿದೆ. -ಏಜೆನ್ಸೀಸ್

ತೆರಿಗೆ ವಂಚಿಸಲೆಂದೇ ಸೃಷ್ಟಿಯಾಗಿದ್ದ ನಕಲಿ ಕಂಪನಿಗಳ ಅನರ್ಹ ನಿರ್ದೇಶಕರ ಹೆಸರನ್ನು ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ, ಈಗ ಕಂಪನಿಗಳ ಪರವಾನಗಿಯನ್ನು ರದ್ದು ಮಾಡಲು ನಿರ್ಧರಿಸಿದೆ. ಕೇಂದ್ರದ ಈ ಕ್ರಮದಿಂದ ಕರ್ನಾಟಕದ ಪ್ರಮುಖ ರಾಜಕೀಯ ನಾಯಕರು, ಉದ್ಯಮಿಗಳು ಸೇರಿದಂತೆ 20,924 ಮಂದಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗಿದೆ.

1 ಜಗದೀಶ್ ಶುಗರ್ಸ್​ನ ಶಿಲ್ಪಾ ಶೆಟ್ಟರ್, ಸಂಕಲ್ಪ ಶೆಟ್ಟರ್, ಪ್ರಶಾಂತ್ ಶೆಟ್ಟರ್

2 ಲಕ್ಷ್ಮಣ ರಾವ್ ಜಾರಕಿಹೊಳಿ ಶುಗರ್ಸ್​ನ ರಮೇಶ ಜಾರಕಿಹೊಳಿ, ಲಕ್ಕಣ್ಣ ಜಾರಕಿಹೊಳಿ, ಲಕ್ಷ್ಮಣ ರಾವ್ ಜಾರಕಿಹೊಳಿ, ಭೀಮಶಿ ಜಾರಕಿಹೊಳಿ, ಸುವರ್ಣ ಜಾರಕಿಹೊಳಿ

3 ರಾಯಲ್ ಶುಗರ್ಸ್ ಲಿಮಿಟೆಡ್​ನ ರವಿಕಾಂತ ಪಾಟೀಲ

4 ಬೀರೇಶ್ವರ ಮಾರ್ಕೆಟಿಂಗ್​ನ ಅಣ್ಣಸಾಹೇಬ ಜೊಲ್ಲೆ

5 ಕ್ವಾಲಿಟಿ ಪ್ರಾಪರ್ಟಿ ಮ್ಯಾನೇಜ್​ವೆುಂಟ್​ನ ಲಿಯಾಂಡರ್ ಪೇಸ್

6 ಎಎಲ್​ವಿ ಪ್ರಾಜೆಕ್ಟ್್ಸ ನಂದಿನಿ ಆಳ್ವ, ಪ್ರಿಯಾಂಕ ಒಬೆರಾಯ್

7 ಜೆ.ಎಚ್. ಪಟೇಲ್ ಹೋಟೆಲ್ಸ್ ಇಂಡಿಯಾ ಪ್ರೖೆ. ಲಿ.ನ ಮಹಿಮಾ ಪಟೇಲ್

Leave a Reply

Your email address will not be published. Required fields are marked *

Back To Top