Friday, 20th April 2018  

Vijayavani

ಹಾಸನದಲ್ಲಿ ರೇವಣ್ಣ, ಮೈಸೂರಲ್ಲಿ ಜಿಟಿಡಿ- ದಿಗ್ಗಜರಿಂದ ನಾಮಪತ್ರ ಸಲ್ಲಿಕೆ- ಅಫಜಲ್​ಪುರದಲ್ಲಿ ಗುತ್ತೇದಾರ್​ಗೆ ಬಿಎಸ್​ವೈ ಸಾಥ್​        ಭಾಲ್ಕಿಯಲ್ಲಿ ಖಂಡ್ರೆ ಬಲ ಪ್ರದರ್ಶನ- ಲಿಂಗಸೂರಲ್ಲಿ ಎತ್ತಿನ ಬಂಡಿ ಮೆರವಣಿಗೆ- ಉಮೇದುವಾರಿಕೆಗೂ ಮುನ್ನ ಭರ್ಜರಿ ರೋಡ್​ ಶೋ        ಚಾಮುಂಡಿ ದರ್ಶನ.. ಸ್ವಗ್ರಾಮದ ದೇಗುಲದಲ್ಲೂ ನಮನ- ಕೋಟೆ ಆಂಜನೇಯನಿಗೂ ಸಿಎಂ ಪೂಜೆ- ಒಂದೇ ದಿನ ಸಿದ್ದು ಟೆಂಪಲ್​ರನ್​        ರೆಡಿಯಾಯ್ತು ಬಿಜೆಪಿ ಮೂರನೇ ಪಟ್ಟಿ- ಕೆಲವೇ ಹೊತ್ತಲ್ಲಿ ಕದನ ಕಲಿಗಳ ಹೆಸರು ಪ್ರಕಟ- ಜೆಡಿಎಸ್​​​ನಿಂದಲೂ ಇಂದು ಎರಡನೇ ಪಟ್ಟಿ ರಿಲೀಸ್        ಶಟರ್ ಮುರಿದು ಮೊಬೈಲ್ ದೋಚಿದ ಕಳ್ಳರು- ಮತ್ತಿಕೆರೆಯಲ್ಲಿ ಅಂಗಡಿ ರಾಬರಿ- ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ        ಸುಪ್ರೀಂ ಮುಖ್ಯನ್ಯಾಯಮೂರ್ತಿ ವಿರುದ್ಧ ವಿಪಕ್ಷಗಳು ಗರಂ- ಸಿಜೆಐ ವಿರುದ್ಧ 7 ಪಕ್ಷಗಳ ಮಹಾಭೀಯೋಗ ನಿರ್ಣಯ- ಉಪರಾಷ್ಟ್ರಪತಿ ಭೇಟಿ, ಮನವಿ ಸಲ್ಲಿಕೆ       
Breaking News

ಬೇಡ ಫೇಸ್ಬುಕ್ ಟ್ವಿಟರ್ ಆಪ್ ಬೆಟರ್!

Monday, 20.03.2017, 10:06 AM       No Comments

ಸೆಲೆಬ್ರಿಟಿಗಳು ಅಭಿಮಾನಿ ಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು ಇದೀಗ ಹೆಚ್ಚು ಚಾಲ್ತಿಯಲ್ಲಿರುವ ವಿಚಾರ. ಹಾಗಾಗಿ, ಅನೇಕ ಸ್ಟಾರ್ ನಟ-ನಟಿಯರು ಫೇಸ್​ಬುಕ್, ಟ್ವಿಟರ್, ಇನ್ ್ಸ ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ನಟಿ ಕಾಜಲ್ ಅಗರ್ವಾಲ್​ಗೆ ಮಾತ್ರ ಸಾಮಾಜಿಕ ಜಾಲತಾಣಗಳೆಂದರೆ ಆಗುವುದಿಲ್ಲವಂತೆ! ಹಾಗಾದರೆ ಅವರು ಅಭಿಮಾನಿಗಳಿಂದ ದೂರ ಇರುತ್ತಾರೆಯೇ? ಇಲ್ಲ, ಸಾಮಾಜಿಕ ಜಾಲತಾಣಗಳ ಹೊರತಾಗಿಯೂ ಅವರು ಅದಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಅದೇನೆಂದರೆ, ಖಾಸಗಿ ಆಪ್!

ಹೌದು.. ಕಾಜಲ್ ಈಗ ತಮ್ಮದೇ ಆದ ಮೊಬೈಲ್ ತಂತ್ರಾಂಶ ಹೊಂದಿದ್ದಾರೆ. ನ್ಯೂಯಾರ್ಕ್ ಮೂಲದ ಕಂಪನಿಯಿಂದ ಅಭಿವೃದ್ಧಿ ಪಡಿಸಿರುವ ಆಪ್​ಗೆ

ಶನಿವಾರ ಚಾಲನೆ ನೀಡಿರುವ ಅವರು, ತಾವು ಆಪ್ ಹೊಂದುತ್ತಿರುವ ಬಗ್ಗೆ ಕೆಲವು ಕಾರಣಗಳನ್ನೂ ತಿಳಿಸಿದ್ದಾರೆ. ‘ನನಗೆ ಸಾಮಾಜಿಕ ಜಾಲತಾಣ ಹಾಗೂ ಟ್ರಾಲ್​ಗಳೆಂದರೆ ಭಯವೇನಿಲ್ಲ. ಆದರೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಅಭಿಪ್ರಾಯ ವ್ಯಕ್ತಪಡಿಸಿದರೆ ಅದು ಅಪಾರ್ಥಕ್ಕೀಡಾಗುವ ಸಾಧ್ಯತೆಗಳಿರುತ್ತವೆ. ಜತೆಗೆ ಅದರಿಂದ ಉಂಟಾಗುವ ಅಹಿತಕರ ಸನ್ನಿವೇಶಗಳನ್ನು ತಪ್ಪಿಸಲು ನಮ್ಮ ಅಭಿಪ್ರಾಯಕ್ಕೆ ಮತ್ತೆ ಸ್ಪಷ್ಟೀಕರಣ ನೀಡುವ ಅನಿವಾರ್ಯತೆಗಳು ಎದುರಾಗುತ್ತವೆ. ಅಲ್ಲದೆ ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ತೆರೆದುಕೊಳ್ಳುವುದರಿಂದ ಮತ್ತು ವೈಯಕ್ತಿಕ-ಸಾಮಾಜಿಕ ಜೀವನಗಳ ಮಧ್ಯೆ ಗೆರೆ ಎಳೆದುಕೊಳ್ಳದಿರುವುದರಿಂದ ಸೆಲೆಬ್ರಿಟಿಗಳ ಬದುಕಿಗೆ ತೊಂದರೆ ಉಂಟಾಗುತ್ತಿದೆ. ಅಷ್ಟಕ್ಕೂ ಸಿನಿಮಾಗಳಲ್ಲಿ ಬಿಜಿ ಆಗಿರುವಾಗಷ್ಟೇ ಕಲಾವಿದರಿಗೆ ಸಾಮಾಜಿಕ ಜಾಲತಾಣಗಳ ಅಗತ್ಯ ಬೀಳುತ್ತದೆ, ಉಳಿದಂತೆ ನಮಗೂ ನಮ್ಮದೇ ಆದ ಬದುಕಿದೆ’ ಎನ್ನುತ್ತಾರೆ ಕಾಜಲ್. ಹೀಗೆ ಸಾಮಾಜಿಕ ಜಾಲತಾಣಗಳಿಂದ ಆಗಬಹುದಾದ ಅನಾಹುತಗಳ ಬಗ್ಗೆ ಎಚ್ಚರವಹಿಸಿರುವ ಕಾಜಲ್, ಸ್ವಂತದ್ದೇ ಆದ ಆಪ್​ನಲ್ಲಿ ಸಕ್ರಿಯರಾಗಿರಲು ನಿರ್ಧರಿಸಿದ್ದಾರೆ. ‘ಅಭಿಮಾನಿಗಳು ಈ ಆಪ್ ಡೌನ್​ಲೋಡ್ ಮಾಡಿಕೊಂಡರೆ ಸಾಮಾಜಿಕ ಜಾಲತಾಣಗಳಲ್ಲಿರುವಂತೆಯೇ ನನ್ನೊಂದಿಗೆ ಸಂಪರ್ಕದಲ್ಲಿ ಇರಬಹುದು, ಚಾಟ್ ಮಾಡಬಹುದು, ಮಾತನಾಡಬಹುದು. ಅಲ್ಲದೆ ನನ್ನ ‘ದ ಬೆಸ್ಟ್’ ಎನ್ನುವಂಥ ಅಭಿಮಾನಿಯನ್ನು ಆರಿಸಲು ಈ ಆಪ್ ಮೂಲಕ ನಾನು ಆಗಾಗ ಕೆಲವು ಸ್ಪರ್ಧೆಗಳನ್ನು ನಡೆಸುತ್ತಿರುತ್ತೇನೆ. ಆಗ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳಿಗಿಂತಲೂ ಈ ಆಪ್ ಆಸಕ್ತಿಕರ ಎನಿಸಲಿದೆ’ ಎಂಬ ಕಿವಿಮಾತು ಹೇಳಿದ್ದಾರೆ ಕಾಜಲ್.

– ಏಜೆನ್ಸೀಸ್

Leave a Reply

Your email address will not be published. Required fields are marked *

Back To Top