Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಬೇಡಿದ ವರ ನೀಡುವ ವರಮಹಾಲಕ್ಷ್ಮೀ

Wednesday, 02.08.2017, 3:00 AM       No Comments

| ಎ.ಆರ್. ರಘುರಾಮ್ ಬೆಂಗಳೂರು

ಶ್ರಾವಣ ಎಂದರೆ ಅದು ಸಾಲು ಸಾಲು ಹಬ್ಬಗಳ ಮಾಸ. ಆಚರಣೆಗೆ ಕೊಂಚ ಬಿಡುವು ಮಾಡಿಕೊಂಡರೆ ನಿತ್ಯವೂ ಹಬ್ಬದೂಟವೇ. ಸ್ತ್ರೀಯರಿಗಂತೂ ಹತ್ತು ಹಲವು ಸ್ವರೂಪದ ಶಕ್ತಿ ದೇವತೆ ಆರಾಧನೆಗೆ ಪ್ರಶಸ್ತ ಮಾಸ.

ಶ್ರಾವಣ ಶುಕ್ಲಪೂರ್ಣಿಮೆ ದಿನ ಶುಕ್ರಗ್ರಹ ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ (ಶುಕ್ರವಾರ, ಅಥವಾ ಹುಣ್ಣಿಮೆಗೆ ಅತಿಹತ್ತಿರದ ಶುಕ್ರವಾರ – ಎರಡನೇ ಶುಕ್ರವಾರ) ವರಮಹಾಲಕ್ಷ್ಮೀ ಆರಾಧನೆ ಮಾಡಬೇಕು ಎಂಬುದು ಶಾಸ್ತ್ರ ವಿಧಿ.

ಭಕ್ತಿ ಶ್ರದ್ಧೆಯಿಂದ ಸಕಲ ಸಂಪತ್ತನ್ನೂ ದಯಪಾಲಿಸುವ ಲಕ್ಷ್ಮೀಯನ್ನು ಎಲ್ಲರೂ ಅದರಲ್ಲೂ ವಿಶೇಷವಾಗಿ ವನಿತೆಯರು ಆರಾಧಿಸುವ ದಿನ. ಈಕೆ ಕ್ಷೀರ ಸಾಗರ ಮಥನ ಸಂದರ್ಭ ಅವತರಿಸಿದವಳೆಂದು ಪುರಾಣಗಳು ತಿಳಿಸುತ್ತವೆ. ಈಕೆ ಸಂಪತ್ತಿನೊಂದಿಗೆ ಶುದ್ಧತೆಯ ಸಂಕೇತವೂ ಹೌದು. ಲಕ್ಷ್ಮೀಯನ್ನು ಪ್ರತಿಮೆ, ಕಲಶರೂಪದಲ್ಲಿ ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸಿ,

ಹಸಿರು ಸೀರೆ ತೊಡಿಸಿ, ವಿಶೇಷವಾಗಿ ಪರಿಮಳಭರಿತ ಕೆಂಪು ಮತ್ತು ಹಳದಿ ಹೂವುಗಳಿಂದ ಅಲಂಕರಿಸಿ, ಧೂಪ-ದೀಪ ಸಮೇತ ಗೋಧೂಳಿ ಲಗ್ನದಲ್ಲಿ ಪೂಜಿಸುವುದು ವಾಡಿಕೆ. ಒಂದು, ಮೂರು ಹಾಗೂ ಐದು ದಿನ ದೇವಿಯನ್ನು ಪೂಜಿಸುವವರೂ ಇದ್ದಾರೆ.

– ಎಲ್ಲಿ ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮೀ ತಾನಾಗಿಯೇ ಬಂದು ನೆಲೆಸುತ್ತಾಳೆ.

ಹೀಗಾಗಿ ಹಬ್ಬದಾಚರಣೆಗೆ ಆಡಂಬರಕ್ಕಿಂತ ಭಕ್ತಿ ಹಾಗೂ ಶ್ರದ್ಧೆಗಳೇ ಬಹುಮುಖ್ಯ. ವಿಧಿವತ್ತಾದ ಪೂಜೆ ನಂತರ ವರಮಹಾಲಕ್ಷ್ಮೀ ವ್ರತದ ಕಥೆ ಓದುವ ಮತ್ತು ಕೇಳುವವರಿಗೆ ಸಂಕಷ್ಟ ಕಳೆದು, ಆಯಸ್ಸು, ಆರೋಗ್ಯ, ಸಂಪತ್ತು, ಧನ, ಧಾನ್ಯಗಳೆಲ್ಲವೂ ಪ್ರಾಪ್ತಿಯಾಗುವುದೆಂಬ ನಂಬಿಕೆಯೂ ಇದೆ.

ಲಕ್ಷ್ಮೀ ಎಂದರೆ ಸಂಪತ್ತು- ಸೌಭಾಗ್ಯ. ಸಂಭ್ರಮಗಳನ್ನು ಬದುಕಿನ ಎಲ್ಲಸ್ತರದಲ್ಲೂ ಕಾಣುವಂತಾಗಲಿ ಎಂದು ಪ್ರಾರ್ಥಿಸುವ ಹಬ್ಬವಿದು. ನಮ್ಮ ಬದುಕನ್ನು ಸುಗಮಗೊಳಿಸುವ ಎಲ್ಲ ರೀತಿಯ ಐಶ್ವರ್ಯಗಳಿಗೆ, ಅದಕ್ಕೆ ಪೂರಕ ಮಾರ್ಗಗಳಿಗೆ ಕೃತಜ್ಞತೆ ಸಲ್ಲಿಸುವ ಆಚರಣೆ. ಪ್ರಾದೇಶಿಕವಾಗಿ ಒಂದಿಷ್ಟು ವ್ಯತ್ಯಾಸ ಅಲ್ಲಲ್ಲಿ ಕಂಡು ಬಂದರೂ ದೇಶಾದ್ಯಂತ ಈ ಮುಖಗಳ ನಡುವೆ ಸಮಾನ ಬಂಧುತ್ವವಿದೆ. ಹಾಲು ನೀಡುವ ಕಾಮಧೇನು, ಶ್ರಮದಿಂದ ಬರುವ ಸಂಪಾದನೆ, ಅಂಗಡಿಯ ಗಲ್ಲಾಪೆಟ್ಟಿಗೆ, ಧಾನ್ಯ ರಾಶಿ- ಹೀಗೆ ಎಲ್ಲದರಲ್ಲಿ ಸಂಭ್ರಮ-

ಸೊಗಸು-ಸಂತಸವಿರುತ್ತದೆ. ಅದನ್ನು ಕಾಣುವ ಭವ್ಯ ದೃಷ್ಟಿಯನ್ನು ನೀಡುವವಳೇ ಲಕ್ಷ್ಮೀ. ಪುಟ್ಟ ಹಣತೆ ದೊಡ್ಡ ಬೆಳಕಿಗೆ ನಾಂದಿಯಾಗುವಂತೆ ಹಣದ ಹರಿವು ಚಿಕ್ಕದಿದ್ದರೂ ಅದು ನೀಡುವ ಆನಂದ ಅಕ್ಷಯವಾಗಲಿ ಎಂಬುದೇ ಸರ್ವ ಮನಸ್ಸುಗಳ ಹಾರೈಕೆ. ಇದು ಕೇವಲ ಹೊರನೋಟದ ಹಬ್ಬ ಮಾತ್ರವಲ್ಲ, ಒಳಗಣ್ಣನ್ನೂ (ಅಂತರಂಗವನ್ನೂ) ಜಾಗೃತಗೊಳಿಸುವ ವಿಶಿಷ್ಟ ಪ್ರಕ್ರಿಯೆಯ ಪರ್ವ. ಇದನ್ನು ಅರಿತರೆ ವ್ಯಕ್ತಿಯ ಬದುಕಿನಲ್ಲಿ ಸಂಪತ್ತು ಸಾಗರರೂಪವಾಗಿ ಬರುತ್ತದೆ. ಹೊಸ ನೋಟಕ್ಕೆ ಒಳಗಿನ ಕಣ್ಣು ಮೆಲ್ಲನೆ ತೆರೆಯುತ್ತದೆ. ಆಗ ವ್ಯಕ್ತಿ ಶಕ್ತಿಯಾಗುತ್ತಾನೆ. ಮಾಡುವ ಕೆಲಸಗಳೂ ಮಹೋನ್ನತವಾಗುತ್ತದೆ. ಲಕ್ಷ್ಮೀ ಸ್ವರೂಪವಾದ ಸಕಲ ಸಂಪತ್ತೂ ಅವರನ್ನು ಹಿಂಬಾಲಿಸುತ್ತದೆ. ಮೈಲಿಗಲ್ಲುಗಳು ಮೈದಳೆದು ನಿಲ್ಲುತ್ತವೆ.

 

Leave a Reply

Your email address will not be published. Required fields are marked *

Back To Top