Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಬೆಹ್ರೆನ್​ಡ್ರೊಫ್ ದಾಳಿಗೆ ಬೆಂಡಾದ ಭಾರತ

Wednesday, 11.10.2017, 3:05 AM       No Comments

ಗುವಾಹಟಿ: ಬ್ಯಾಟಿಂಗ್ ವಿಭಾಗದ ಅಪರೂಪದ ವೈಫಲ್ಯ ಹಾಗೂ ಪ್ರವಾಸಿ ತಂಡದ ಬೌಲರ್​ಗಳ ಶಿಸ್ತಿನ ದಾಳಿಯ ಮುಂದೆ ಕಂಗೆಟ್ಟ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 8 ವಿಕೆಟ್​ಗಳಿಂದ ಶರಣಾಗಿದೆ. ಈ ಮೂಲಕ ಸರಣಿ ಗೆಲ್ಲುವ ಆಸೆಯನ್ನು ಪ್ರವಾಸಿ ತಂಡ ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಬರ್ಸಾಪರ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಫೀಲ್ಡಿಂಗ್ ಆಯ್ದುಕೊಂಡಿತು. ವೇಗಿ ಜಾಸನ್ ಬೆಹ್ರೆನ್​ಡ್ರೊಫ್ (21ಕ್ಕೆ 4) ದಾಳಿಗೆ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ರನ್​ಗಳಿಸಲು ಪರದಾಡಿದ್ದರಿಂದ ಭಾರತ ತಂಡ 20 ಓವರ್​ಗಳಲ್ಲಿ 118 ರನ್​ಗೆ ಆಲೌಟ್ ಆಯಿತು. ಪ್ರತಿಯಾಗಿ ಸುಲಭ ಸವಾಲನ್ನು ಯಾವುದೇ ಅಳುಕಿಲ್ಲದೆ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 15.3 ಓವರ್​ಗಳಲ್ಲಿ 2 ವಿಕೆಟ್​ಗೆ 122 ರನ್ ಪೇರಿಸಿ 1-1ರಿಂದ ಸರಣಿ ಸಮಬಲ ಸಾಧಿಸಿತು. ಭಾರತ ತಂಡದ ವಿರುದ್ಧ ಆಸೀಸ್​ಗೆ ಟಿ20 ಕ್ರಿಕೆಟ್​ನಲ್ಲಿ ಇದು ಸತತ 7 ಸೋಲುಗಳ ಬಳಿಕ ಬಂದ ಮೊದಲ ಗೆಲುವೆನಿಸಿದೆ.

ಡೇವಿಡ್ ವಾರ್ನರ್ ಹಾಗೂ ಆರನ್ ಫಿಂಚ್​ರನ್ನು 3ನೇ ಓವರ್​ವೇಳೆಗೆ ಡಗ್​ಔಟ್​ಗೆ ಅಟ್ಟಿದ್ದ ಭಾರತ ತಂಡ ಪೈಪೋಟಿ ಒಡ್ಡುವ ವಿಶ್ವಾಸದಲ್ಲಿತ್ತು. ಆದರೆ, ಮೋಯ್ಸೆಸ್ ಹೆನ್ರಿಕ್ಸ್ (62*ರನ್, 46 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ಟ್ರಾವಿಸ್ ಹೆಡ್ (48*ರನ್, 34 ಎಸೆತ, 5 ಬೌಂಡರಿ, 1 ಸಿಕ್ಸರ್) ಜೋಡಿ ಇದಕ್ಕೆ ಅವಕಾಶ ನೀಡಲಿಲ್ಲ. ಭಾರತದ ಬೌಲರ್​ಗಳ ಒಂದೊಂದು ಎಸೆತವನ್ನು ಜಾಣ್ಮೆಯಿಂದ ಎದುರಿಸಿದ ಈ ಜೋಡಿ ತಂಡಕ್ಕೆ ಚೇತರಿಕೆ ನೀಡಿದ್ದಲ್ಲದೆ, ಗೆಲುವಿನ ವೇದಿಕೆ ನಿರ್ವಿುಸುವಲ್ಲಿ ನೆರವಾದರು. ಕೇವಲ 76 ಎಸೆತಗಳಲ್ಲಿ 109 ರನ್ ಜತೆಯಾಟವಾಡಿ ತಂಡಕ್ಕೆ ಇನ್ನೂ 27 ಎಸೆತಗಳಿರುವಂತೆ ಗೆಲುವು ನೀಡಿದರು. ಹೆನ್ರಿಕ್ಸ್, ಕುಲದೀಪ್ ಎಸೆದ ಇನಿಂಗ್ಸ್​ನ 16ನೇ ಓವರ್​ನಲ್ಲಿ ಸತತ 2 ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದರು.

ಬೆಹ್ರೆನ್​ಡೊಫ್ ಸೂಪರ್​ಸ್ಪೆಲ್

ಕಳೆದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ 27 ವರ್ಷದ ಜಾಸನ್ ಬೆಹ್ರೆನ್​ಡ್ರೊಫ್, ಮೊದಲ ಓವರ್​ನಲ್ಲಿಯೇ ಭಾರತವನ್ನು ಕಂಗೆಡಿಸಿದರು. ಟಿ20 ಕ್ರಿಕೆಟ್​ನ ಸೂಪರ್ ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮ (8) ಹಾಗೂ ನಾಯಕ ವಿರಾಟ್ ಕೊಹ್ಲಿ (0) ವಿಕೆಟ್​ಅನ್ನು ಉರುಳಿಸಿದ ಬೆಹ್ರೆನ್​ಡ್ರೊಫ್ ಆಘಾತ ನೀಡಿದರು. ಬಳಿಕ ಮನೀಷ್ ಪಾಂಡೆ (6) ಹಾಗೂ ಶಿಖರ್ ಧವನ್ (2) ವಿಕೆಟ್ ಉರುಳಿಸುವ ಮೂಲಕ ಟಿ20 ಕ್ರಿಕೆಟ್​ನ 5ನೇ ಅತ್ಯುತ್ತಮ ಬೌಲಿಂಗ್ ನಿರ್ವಹಣೆ ಸಾಧಿಸಿದ ದಾಖಲೆ ಮಾಡಿದರು. ಅದರಲ್ಲೂ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಇದೇ ಮೊದಲ ಬಾರಿಗೆ ಶೂನ್ಯಕ್ಕೆ ಔಟಾದರು.

ಆಧರಿಸಿದ ಜಾಧವ್-ಧೋನಿ

ಪ್ರಮುಖ 4 ವಿಕೆಟ್​ಗಳನ್ನು ಕೇವಲ 27 ರನ್​ಗಳಿಗೆ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದ್ದ ತಂಡಕ್ಕೆ ಕೇದಾರ್ ಜಾಧವ್ (27 ರನ್, 27 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಎಂಎಸ್ ಧೋನಿ (13 ರನ್, 16 ಎಸೆತ, 1 ಬೌಂಡರಿ) 5ನೇ ವಿಕೆಟ್​ಗೆ 33 ರನ್ ಸೇರಿಸುವ ಮೂಲಕ ಆಧರಿಸಿದರು. ಬೌಲರ್​ಗಳಿಗೆ ನೆರವೀಯುತ್ತಿದ್ದ ಪಿಚ್ ವರ್ತನೆಯನ್ನು ಎಚ್ಚರಿಯಿಂದಲೇ ಗಮನಿಸಿದ ಈ ಜೋಡಿ, ಬೆಹ್ರೆನ್​ಡ್ರೊಫ್ ಹಾಗೂ ಕೌಲ್ಟರ್ ನಿಲ್ ಎಸೆತಗಳನ್ನು ಜಾಗರೂಕತೆಯಿಂದ ಎದುರಿಸಿತು. ತಂಡದ ಮೊತ್ತ 60ರ ಗಡಿ ಮುಟ್ಟುತ್ತಿದ್ದಂತೆ ಧೋನಿ ನಿರ್ಗಮಿಸಿದರೆ, ಈ ಮೊತ್ತಕ್ಕೆ 7 ರನ್ ಸೇರಿಸುವಾಗ ಉತ್ತಮವಾಗಿ ಆಡುತ್ತಿದ್ದ ಜಾಧವ್ ಕೂಡ ಹೊರನಡೆದರು. ಏಕದಿನ ಸರಣಿಯ ವೇಳೆ ಬ್ಯಾಟಿಂಗ್ ಮೂಲಕವೂ ನೆರವಿಗೆ ಬಂದಿದ್ದ ಭುವನೇಶ್ವರ್ ಕೇವಲ 1 ರನ್ ಬಾರಿಸಿ ಔಟಾದಾಗ ಭಾರತ 70 ರನ್​ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಹೆನ್ರಿಕ್ಸ್ ಹಾಗೂ ಟ್ರಾವಿಸ್ ಹೆಡ್ 3ನೇ ವಿಕೆಟ್​ಗೆ ಮುರಿಯದ 109 ರನ್ ಜತೆಯಾಟವಾಡಿದರು. ಇದು ಭಾರತ ತಂಡದ ವಿರುದ್ಧ ಟಿ20ಯಲ್ಲಿ 3ನೇ ವಿಕೆಟ್​ಗೆ ದಾಖಲಾದ ಗರಿಷ್ಠ ಮೊತ್ತ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್​ನ ಜಾನ್ಸನ್ ಚಾರ್ಲ್ಸ್ ಹಾಗೂ ಲೆಂಡ್ಸ್ ಸಿಮನ್ಸ್ 2016ರಲ್ಲಿ ಮುಂಬೈ ಟಿ20ಯಲ್ಲಿ 97 ರನ್ ಕೂಡಿಸಿದ್ದು ದಾಖಲೆಯಾಗಿತ್ತು.

ಭಾರತ ತಂಡ ಟಿ20 ಕ್ರಿಕೆಟ್​ನ ಇನಿಂಗ್ಸ್​ವೊಂದರಲ್ಲಿ ಆಲೌಟ್ ಆಗಿದ್ದು ಇದು 7ನೇ ಬಾರಿ. ಈ ಎಲ್ಲ ಪಂದ್ಯಗಳಲ್ಲೂ ಭಾರತ ಸೋಲು ಕಂಡಿದೆ.

ಶತಕದ ಗಡಿ ದಾಟಿಸಿದ ಪಾಂಡ್ಯ

ಮೊತ್ತ 100ರ ಗಡಿ ದಾಟುವುದು ಅನುಮಾನ ಎನ್ನುವ ಹೊತ್ತಿನಲ್ಲಿ ಹಾರ್ದಿಕ್ ಪಾಂಡ್ಯ (25 ರನ್, 23 ಎಸೆತ, 1 ಸಿಕ್ಸರ್) ಹಾಗೂ ಕುಲದೀಪ್ ಯಾದವ್ (16) ಹೋರಾಟದ ಆಟವಾಡಿ 8ನೇ ವಿಕೆಟ್​ಗೆ 33 ರನ್ ಕೂಡಿಸಿದರು. ಇದರಿಂದಾಗಿ 17ನೇ ಓವರ್​ನಲ್ಲಿ 100ರ ಗಡಿ ದಾಟಿದ್ದ ಭಾರತ 130 ರನ್​ಗಳ ನಿರೀಕ್ಷೆಯಲ್ಲಿತ್ತು. ಪಾಂಡ್ಯ ಕೂಡ ಕ್ರೀಸ್​ನಲ್ಲಿದ್ದ ಕಾರಣ ಆಸೀಸ್​ಗೆ ಸವಾಲಿನ ಮೊತ್ತ ನಿಗದಿಪಡಿಸುವ ಗುರಿಯಲ್ಲಿ ಕೊಹ್ಲಿ ಇದ್ದರು. 18ನೇ ಓವರ್​ನಲ್ಲಿ ಪಾಂಡ್ಯ ನಿರ್ಗಮನ ಕಂಡಿದ್ದರಿಂದ ಭಾರತದ ಆಸೆ ಈಡೇರಲಿಲ್ಲ.

ವಿರಾಟ್ ಕೊಹ್ಲಿ ಅಂತಾ ರಾಷ್ಟ್ರೀಯ ಟಿ20ಯಲ್ಲಿ ಮೊದಲ ಬಾರಿಗೆ ಶೂನ್ಯಕ್ಕೆ ಔಟಾದರು. ಒಟ್ಟಾರೆ ಟಿ20ಯಲ್ಲಿ ಅವರು ಸೊನ್ನೆಗೆ ಔಟಾಗಿರುವುದು ಇದು 8ನೇ ಬಾರಿ. ಹಿಂದಿನ ಏಳು ಬಾರಿ ಅವರು ಆರ್​ಸಿಬಿ ಪರವಾಗಿ ಶೂನ್ಯಕ್ಕೆ ಔಟಾಗಿದ್ದರು.

ಭಾರತ: 20 ಓವರ್​ಗಳಲ್ಲಿ 118

ರೋಹಿತ್ ಎಲ್​ಬಿಡಬ್ಲ್ಯು ಬಿ ಬೆಹ್ರೆನ್​ಡ್ರೊಫ್ 8

ಧವನ್ ಸಿ ವಾರ್ನರ್ ಬಿ ಬೆಹ್ರೆನ್​ಡ್ರೊಫ್ 2

ವಿರಾಟ್ ಕೊಹ್ಲಿ ಸಿ ಮತ್ತು ಬಿ ಬೆಹ್ರೆನ್​ಡ್ರೊಫ್ 0

ಮನೀಷ್ ಪಾಂಡೆ ಸಿ ಪೇಯ್್ನ ಬಿ ಬೆಹ್ರೆನ್​ಡ್ರೊಫ್ 6

ಕೇದಾರ್ ಜಾಧವ್ ಬಿ ಆಡಂ ಜಂಪಾ 27

ಧೋನಿ ಸ್ಟಂಪ್ಡ್ ಪೇಯ್ನ್‌ ಬಿ ಜಂಪಾ 13

ಹಾರ್ದಿಕ್ ಪಾಂಡ್ಯ ಸಿ ಕ್ರಿಶ್ಚಿಯನ್ ಬಿ ಸ್ಟೋಯಿನಿಸ್ 25

ಭುವನೇಶ್ವರ್ ಸಿ ಹೆನ್ರಿಕ್ಸ್ ಬಿ ಕೌಲ್ಟರ್ ನಿಲ್ 1

ಕುಲದೀಪ್ ಯಾದವ್ ಸಿ ಪೇಯ್ನ್‌ ಬಿ ಟೈ 16

ಬುಮ್ರಾ ರನೌಟ್ (ಪೇಯ್ನ್‌ 7)

ಯಜುವೇಂದ್ರ ಚಾಹಲ್ ಔಟಾಗದೆ 3

ಇತರೆ: 10, ವಿಕೆಟ್ ಪತನ: 1-8, 2-8, 3-16, 4-27, 5-60, 6-67, 7-70, 8-103, 9-115. ಬೌಲಿಂಗ್: ಬೆಹ್ರೆನ್​ಡ್ರೊಫ್ 4-0-21-4, ಕೌಲ್ಟರ್ ನಿಲ್ 4-0-23-1, ಆಂಡ್ರ್ಯೂ ಟೈ 4-0-30-1, ಜಂಪಾ 4-0-19-2, ಸ್ಟೋಯಿನಿಸ್ 4-0-20-1.

ಆಸ್ಟ್ರೇಲಿಯಾ: 5.3 ಓವರ್​ಗಳಲ್ಲಿ 2 ವಿಕೆಟ್​ಗೆ 122

ಫಿಂಚ್ ಸಿ ಕೊಹ್ಲಿ ಬಿ ಭುವನೇಶ್ವರ್ 8

ವಾರ್ನರ್ ಸಿ ಕೊಹ್ಲಿ ಬಿ ಬುಮ್ರಾ 2

ಹೆನ್ರಿಕ್ಸ್ ಅಜೇಯ 62

ಟ್ರಾವಿಸ್ ಹೆಡ್ ಅಜೇಯ 48

ಇತರೆ: 2, ವಿಕೆಟ್ ಪತನ: 1-11, 2-13. ಬೌಲಿಂಗ್: ಭುವನೇಶ್ವರ್ 3-0-9-1, ಬುಮ್ರಾ 3-0-25-1, ಹಾರ್ದಿಕ್ ಪಾಂಡ್ಯ 2-0-13-0, ಕುಲದೀಪ್ 4-0-46-0, ಚಾಹಲ್ 3.3-0-29-0.

ಪಂದ್ಯಶ್ರೇಷ್ಠ: ಜಾಸನ್ ಬೆಹ್ರೆನ್​ಡ್ರೊಫ್

ಅಂತಿಮ ಟಿ20 ಪಂದ್ಯ

ಯಾವಾಗ: ಶುಕ್ರವಾರ

ಎಲ್ಲಿ: ಹೈದರಾಬಾದ್

ಆರಂಭ: ಸಂಜೆ 7.00

Leave a Reply

Your email address will not be published. Required fields are marked *

Back To Top