Saturday, 16th December 2017  

Vijayavani

1. ಭಯೋತ್ಪಾದನೆಗೆ ಒತ್ತಡ ಆರೋಪ ವಿಚಾರ- ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ- ಬಾಗಲಕೋಟೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ 2. ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್​​​ ಅಧಿಕಾರ- ದೆಹಲಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ- ರಾಹುಲ್​​​​ ಮುಂದಿದೆ ನೂರಾರು ಸವಾಲು 3. ಸುನಿಲ್​​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ- ಇಂದು ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ- ಇತ್ತ ಜಯದೇವದಲ್ಲಿ ಮುಂದುವರಿದ ಚಿಕಿತ್ಸೆ 4. ಕಲಬುರಗಿಯತ್ತ ಸಾಗಿದ ಸಿಎಂ ಸಾಧನ ಸಂಭ್ರಮ- ಜೇವರ್ಗಿಯಲ್ಲಿ ಹಲವು ಕಾಮಗಾರಿಗೆ ಚಾಲನೆ- ಸಿಎಂಗೆ ಹಲವು ಸಚಿವರಿಂದ ಸಾಥ್​​​ 5. ಸನ್ನಿ ನೈಟ್​​ಗೆ ಸರ್ಕಾರದ ಬ್ರೇಕ್​- ನಿರ್ಧಾರದ ವಿರುದ್ಧ ಪರ-ವಿರುದ್ಧ ಚರ್ಚೆ- ಸಚಿವರ ಕ್ರಮಕ್ಕೆ ಕೆಂಡಕಾರಿದ ಅಭಿಮಾನಿಗಳು
Breaking News :

ಬೆರಗುಗೊಳಿಸುವ ಚಿತ್ತಾರ

Friday, 13.10.2017, 3:02 AM       No Comments

ವಿದೇಶಗಳಲ್ಲಿನ ರಸ್ತೆಗಳ ಬಗ್ಗೆ ನೀವು ಕೇಳಿರಬಹುದು, ನೋಡಿರಬಹುದು. ನೇರವಾಗಿ, ಯಾವುದೇ ಗುಂಡಿ-ಉಬ್ಬುಗಳಿಲ್ಲದ ಉತ್ತಮ ಗುಣಮಟ್ಟದ ರಸ್ತೆಗಳು! ಅಲ್ಲಿ ಅತಿವೇಗದಿಂದ ಸಾಗುವ ವಾಹನಗಳನ್ನು ನಿಯಂತ್ರಿಸಲು ರಸ್ತೆಯಲ್ಲೇ 3ಡಿ ಮಾದರಿ ಹೊಂಡಗಳನ್ನು ಚಿತ್ರಿಸುತ್ತಾರೆ. ದೂರದಿಂದ ನೋಡಿದರೆ ಅವು ನೈಜ ಉಬ್ಬುಗುಂಡಿಗಳಂತೆ ಕಾಣಿಸುವುದರಿಂದ ಕಾರು ಚಾಲಕರು ತಾವಾಗಿಯೇ ನಿಧಾನವಾಗಿ ಸಾಗುತ್ತಾರೆ. ಆದರೆ ಇದೇ ಮಾದರಿ ಚಿತ್ತಾರವನ್ನು ಶಾಪಿಂಗ್ ಮಳಿಗೆ ಹೊರಗೆ ಚಿತ್ರಿಸಿದರೆ ಹೇಗಿರುತ್ತದೆ? ಈ ಬಗ್ಗೆ ಚಿಂತಿಸಿದ ಇಂಗ್ಲೆಂಡ್ ಮೂಲದ ಕಂಪನಿಯೊಂದು ತನ್ನ ಮ್ಯಾಂಚೆಸ್ಟರ್​ನ ಮಳಿಗೆ ಹೊರಗಡೆ 3ಡಿ ಚಿತ್ತಾರ ರೂಪಿಸಿದೆ.

ಗ್ರಾಹಕರು ಮಳಿಗೆ ಪ್ರವೇಶಿಸುವಾಗ ಈ ಚಿತ್ತಾರ ಅವರ ಅರಿವಿಗೆ ಬರುವುದಿಲ್ಲ, ಅದು ನೇರವಾಗಿ ಮತ್ತು ಸ್ಪಷ್ಟವಾಗಿರುತ್ತದೆ. ಆದರೆ ಮಳಿಗೆಯಿಂದ ಹೊರಹೋಗುವಾಗ ಕಾಣುವ ರೀತಿಯೇ ಬೇರೆಯಾಗಿರುತ್ತದೆ. ಪಕ್ಕನೆ ಹೊರಗಡೆ ಬಂದು ನೋಡಿದಾಗ ನೆಲವೇ ಬಾಗಿದಂತೆ ಮತ್ತು ಒಂದು ಕಡೆಗೆ ವಾಲಿಕೊಂಡು ಗುಂಡಿ ಬಿದ್ದಂತೆ ಕಾಣಿಸುತ್ತದೆ. ವಾಸ್ತವದಲ್ಲಿ ನೆಲ ಏನೂ ಆಗಿರುವುದಿಲ್ಲ ಮತ್ತು ಸರಿಯಾಗಿಯೇ ಇರುತ್ತದೆ. ಆದರೆ 3ಡಿ ವಿನ್ಯಾಸ ಮಾತ್ರ ನೋಡುವಾಗ ಪಕ್ಕನೆ ನೆಲ ಬಿರಿದಂತೆ, ಒಂದು ಬದಿಗೆ ವಾಲಿದಂತೆ ಗೋಚರಿಸುವುದರಿಂದ ಗ್ರಾಹಕರು ಗೊಂದಲಕ್ಕೊಳಗಾಗುತ್ತಾರೆ. ಕೊನೆಗೆ ಗಲಿಬಿಲಿಯಿಂದ ಹೊರಬಂದು ಮತ್ತೆ ಹೊರಗೆ ಸಾಗುತ್ತಾರೆ.

ಶಾಪಿಂಗ್ ಮಳಿಗೆಯ ಈ ವಿಚಿತ್ರ ಚಿತ್ತಾರದ ಬಗ್ಗೆ ಗ್ರಾಹಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜತೆಗೆ ಸಾಮಾಜಿಕ ತಾಣಗಳಲ್ಲೂ ಚಿತ್ರ ಹಂಚಿಕೊಂಡು, ಪಕ್ಕನೆ ಹೊರಗೆ ಬಂದು ನೆಲ ನೋಡಿದಾಗ ಏನನ್ನಿಸಿತು ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಮಳಿಗೆಯ ಚಿತ್ರ ಮತ್ತು ಅಲ್ಲಿನ ನೆಲದ ಚಿತ್ತಾರ ಆನ್​ಲೈನ್​ನಲ್ಲಿ ಫೇಮಸ್ ಆಗಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top