Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ಬೆನ್ನುನೋವು ನಿವಾರಿಸಲು ಸರಳ ಆಸನಗಳು

Wednesday, 22.11.2017, 3:05 AM       No Comments

ಬೆನ್ನುನೋವು ನಿವಾರಣೆಗೆ ಕಾಲುಗಳನ್ನು ಮಡಿಸಿ ಮಾಡುವ ಜಠರ ಪರಿವರ್ತನಾಸನ ಬಹು ಸಹಕಾರಿ. ಅದರ ಎರಡು ಮತ್ತು ಮೂರನೇ ಪ್ರಕಾರಗಳನ್ನು ಕ್ರಮವಾಗಿ ಅಭ್ಯಾಸ ಮಾಡೋಣ.

ಜಠರ ಪರಿವರ್ತನಾಸನ: ಪ್ರಕಾರ 2

ಮೊಣಕೈ ಆಧಾರದಿಂದ ನಿಧಾನವಾಗಿ ಬೆನ್ನಿನ ಭಾಗವನ್ನು ನೆಲಕ್ಕೆ ಒರಗಿಸುತ್ತ ಮಲಗಿ. ಎರಡೂ ಕೈಗಳನ್ನು ಹೊಟ್ಟೆಯ ಮೇಲೆ ಇಡಿ. ಎರಡೂ ಕಾಲುಗಳನ್ನು ಮಡಿಸಿ. ಪಾದಗಳ ನಡುವೆ ಎರಡು ಅಡಿಗಳಷ್ಟು ಅಂತರವಿರಲಿ. ಎರಡೂ ಮಂಡಿಗಳನ್ನು ನೆಲದ ಕಡೆಗೆ ಬಲಪಾರ್ಶ್ವಕ್ಕೆ ಒರಗಿಸಿ. ಎಡಮಂಡಿಯನ್ನು ಬಲಪಾದಕ್ಕೆ ತಾಗಿಸುವ ಯತ್ನ ಮಾಡಿ. ಬಲಮಂಡಿ ನೆಲಕ್ಕೆ ಒರಗಿಸುವ ಯತ್ನ ಮಾಡಿ. ತಲೆಯನ್ನು ಎಡಕ್ಕೆ ತಿರುಗಿಸಿ. ಒಂದು ನಿಮಿಷ ಈ ಸ್ಥಿತಿಯಲ್ಲಿರಿ. ನಿಧಾನವಾಗಿ ನಾಲ್ಕನೇ ಸ್ಥಿತಿಗೆ ಬನ್ನಿ. ಇನ್ನೊಂದು ಭಾಗದಲ್ಲೂ ಇದನ್ನೇ ಪುನರಾವರ್ತಿಸಿ.

ಜಠರ ಪರಿವರ್ತನಾಸನ: ಪ್ರಕಾರ 3

ಬೆನ್ನಿನ ಭಾಗವನ್ನು ನೆಲಕ್ಕೆ ಒರಗಿಸಿ ಮಲಗಿ. ಎರಡೂ ಕೈಗಳನ್ನು ಹೊಟ್ಟೆಯ ಮೇಲಿಡಿ. ಎರಡೂ ಕಾಲುಗಳನ್ನು ಮಡಿಸಿ. ಪಾದಗಳು ಹಾಗೂ ಮಂಡಿಗಳು ಜೋಡಿಸಿರಲಿ. ಬಲಗಾಲನ್ನು ಎಡಗಾಲ ಮೇಲೆ ಹಾಕಿ ಸುತ್ತಿ. ಎರಡೂ ಮಂಡಿಗಳನ್ನು ನೆಲದ ಕಡೆ ಎಡಬದಿಗೆ ಒರಗಿಸಿ. ತಲೆಯನ್ನು ಬಲಕ್ಕೆ ತಿರುಗಿಸುವ ಯತ್ನ ಮಾಡಿ. ಒಂದು ನಿಮಿಷ ಈ ಸ್ಥಿತಿಯಲ್ಲಿರಿ. ನಿಧಾನವಾಗಿ ನಾಲ್ಕನೇ ಸ್ಥಿತಿಗೆ ಬನ್ನಿ. ಸುತ್ತಿದ ಕಾಲುಗಳನ್ನು ಬಿಡಿಸಿ. ಬಲಗಾಲ ಮೇಲೆ ಎಡಗಾಲನ್ನು ಹಾಕಿ ಸುತ್ತಿ. ಇನ್ನೊಂದು ಬದಿಯಲ್ಲೂ ಪುನರಾವರ್ತಿಸಿ.

ಕಿಟಕಿ ಬಳಸಿ ಮಾಡುವ ಆಸನಗಳು

ಅಂದುಕೊಂಡಷ್ಟು ಸುಲಭಕ್ಕೆ ಬೆನ್ನುನೋವು ಬಿಟ್ಟುಹೋಗುವುದಿಲ್ಲ. ಹಲವು ಆಸನಗಳ ಅಭ್ಯಾಸ ಮಾಡುವುದರಿಂದ ವಿವಿಧ ಸಮಸ್ಯೆಯಿಂದ ಬಂದಿರುವ ನೋವು ಪರಿಹಾರವಾಗುತ್ತದೆ. ಈ ನಿಟ್ಟಿನಲ್ಲಿ ಕಿಟಕಿಯನ್ನು ಆಧರಿಸಿ ಮಾಡುವ ಕೆಲವು ಆಸನಗಳು ನೋವನ್ನು ಶಮನ ಮಾಡಬಲ್ಲವು.

ಸಮಸ್ಥಿತಿಯಲ್ಲಿ ವಿಶೇಷ ಭಂಗಿ

ಕಿಟಕಿಗೆ ಬೆನ್ನು ಮಾಡಿ ನೇರ ನಿಂತುಕೊಳ್ಳಿ. ಎರಡೂ ಕೈಗಳನ್ನು ಬೆನ್ನಿನ ಹಿಂದಕ್ಕೆ ಚಾಚಿ, ಸೊಂಟದ ಎತ್ತರದಲ್ಲಿರುವ ಕಿಟಕಿಯ ಕಂಬಿಗಳನ್ನು ಹಿಡಿದುಕೊಳ್ಳಿ. ಪಾದಗಳೆರಡೂ ಗೋಡೆಗೆ ಹತ್ತಿರವಾಗಿರಲಿ. ಕಂಬಿಗಳನ್ನು ಹಿಡಿದು ಎದೆಯ ಭಾಗವನ್ನು ನಿಧಾನವಾಗಿ ಮುಂದಕ್ಕೆ ತಳ್ಳಿ. ಭುಜಗಳನ್ನು ಹಿಂದಕ್ಕೆ ತಳ್ಳುವಂತೆ ಮಾಡಿ. ಕತ್ತಿನ ಸ್ನಾಯುಗಳು ಹಿಂದಕ್ಕೆ ಮತ್ತು ಮೇಲಕ್ಕೆ ಹಿಗ್ಗುವಂತಿರಲಿ. ಅರ್ಧ ನಿಮಿಷ ಇದೇ ಸ್ಥಿತಿಯಲ್ಲಿದ್ದು ನಂತರ ನಿಧಾನವಾಗಿ ಕೈಗಳನ್ನು ಕೆಳಗಿಳಿಸಿ.

ಕಿಟಕಿ ಆಧರಿಸಿದ ಉತ್ಕಟಾಸನ

ಕಿಟಕಿಯ ಕಡೆಗೆ ಮುಖ ಮಾಡಿ ನೇರವಾಗಿ ನಿಲ್ಲಿ. ಭುಜಗಳ ಎತ್ತರದಲ್ಲಿರುವ ಕಂಬಿಗಳನ್ನು ಹಿಡಿದುಕೊಳ್ಳಿ. ಕೈಗಳ ನಡುವೆ ಎದೆಯಷ್ಟು ಅಗಲದ ಅಂತರವಿರಲಿ. ಪಾದಗಳೆರಡೂ ಗೋಡೆಗೆ ಒತ್ತಿರಲಿ. ಹೆಬ್ಬೆರಳುಗಳು ಎತ್ತಿರಲಿ. ಉಗುರುಗಳಿಗೆ ನೋವಾಗದಂತಿರಲಿ. ಮೊಣಕಾಲುಗಳನ್ನು ಗೋಡೆಗೆ ತಾಗಿಸಿ ಕುರ್ಚಿಯಲ್ಲಿ ಕುಳಿತುಕೊಂಡ ಹಾಗೆ ಪೃಷ್ಠವನ್ನು ಕೆಳಕ್ಕೆ ತಳ್ಳಿ. ಹತ್ತರಿಂದ ಇಪ್ಪತ್ತು ಸೆಕೆಂಡ್ ಈ ಸ್ಥಿತಿಯಲ್ಲಿರಿ. ನಂತರ ನಿಧಾನವಾಗಿ ಕಾಲುಗಳನ್ನು ನೇರ ಮಾಡುತ್ತಾ ಪುನಃ ಮೊದಲಿನ ಸ್ಥಿತಿಗೆ ಬನ್ನಿ.

Leave a Reply

Your email address will not be published. Required fields are marked *

Back To Top