Tuesday, 17th October 2017  

Vijayavani

1. ಅಕ್ರಮ ಕಸಾಯಿಖಾನೆ ಮಾಲೀಕರ ದರ್ಪ – ನೋಟಿಸ್​​​ ನೀಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ – ಹೊಯ್ಸಳ ಸೇರಿ ನಾಲ್ಕು ವಾಹನಗಳು ಜಖಂ 2. ದಿಗ್ವಿಜಯ ಸಿಂಗ್​​ ಸಂಬಂಧಿ ಟೆಂಡರ್​ ಟೋಪಿ – ಗುತ್ತಿಗೆ​​​​​​ ನೆಪದಲ್ಲಿ ಕೋಟಿ ಕೋಟಿ ಪಂಗನಾಮ – ಭವಾನಿ ಸಿಂಗ್​​​ ವಿರುದ್ಧ ವಂಚನೆ ಆರೋಪ 3. ಉಸ್ತುವಾರಿ ಎದುರಲ್ಲೇ ಕಾಂಗ್ರೆಸ್​ ಗಲಾಟೆ – ಕೈಗೆ ಸಿಕ್ಕ ಕುರ್ಚಿಗಳು ಪೀಸ್ ಪೀಸ್​- ಚಿತ್ರದುರ್ಗದಲ್ಲಿ ಮನೆ ಮನೆ ಪ್ರಚಾರದ ವೇಳೆ ಕಿತ್ತಾಟ 4. ಜನರಕ್ಷಾ ಯಾತ್ರೆಗೆ ಅಂತಿಮ ತೆರೆ – ಸಾವಿರಾರು ಕಾರ್ಯಕರ್ತರೊಂದಿಗೆ ಚಾಣಕ್ಯ ಪಾದಯಾತ್ರೆ -ತಿರುವನಂತಪುರಂನಲ್ಲಿ ಬಿಜೆಪಿ ಬೃಹತ್​ Rally  5. ಸಾರಥಿಗೆ ಸಂದ ಬ್ರಿಟನ್​ ಗೌರವ – ಚಕ್ರವರ್ತಿಗೆ ಬಂದಿದೆ ಆಹ್ವಾನ – ಅ.19 ರಂದು ಲಂಡನ್​ನಲ್ಲಿ ಸನ್ಮಾನ
Breaking News :

ಸಿಲಿಕಾನ್ ವ್ಯಾಲಿ ಹಿಂದಿಕ್ಕಿದ ಬೆಂಗಳೂರು, ನಂ.1 ಡೈನಮಿಕ್ ಸಿಟಿ

Wednesday, 18.01.2017, 3:28 PM       No Comments

ಬೆಂಗಳೂರು: ಸಿಲಿಕಾನ್ ವ್ಯಾಲಿಯನ್ನು ಹಿಂದಿಕ್ಕಿದ ಬೆಂಗಳೂರು ವಿಶ್ವದ ನಂ.1 ಡೈನಮಿಕ್ ಸಿಟಿ ಎಂಬ ಖ್ಯಾತಿ ಮುಡಿಗೇರಿಸಿಕೊಂಡಿದೆ. ಜಾನ್ಸ್ ಲ್ಯಾಂಗ್ ಲಾಸೆಲ್ಲೆ(ಜೆಎಲ್​ಎಲ್) ಎಂಬ ರಿಯಲ್ ಎಸ್ಟೇಟ್ ಸೇವಾ ಸಂಸ್ಥೆ ಈ ಕುರಿತು ಸಮೀಕ್ಷೆ ನಡೆಸಿ ವರದಿ ಮಾಡಿದೆ.

ಇದೇ ಮೊದಲ ಬಾರಿಗೆ ಬೆಂಗಳೂರು ಟಾಪ್ ಸ್ಥಾನ ಪಡೆದಿದ್ದು, ವಿಯೇಟ್ನಾಂನ ಹೋ ಚಿ ಮಿನ್ನ್ ಸಿಟಿ, ಅಮೆರಿಕದ ಸಿಲಿಕಾನ್ ವ್ಯಾಲಿ ನಂತರ ಟಾಪ್​ದ ಸ್ಥಾನದಲ್ಲಿವೆ. ಹೈದರಾಬಾದ್ 5ನೇ ಸ್ಥಾನ ಪಡೆದಿದ್ದು, ಇದೇ ಮೊದಲ ಬಾರಿಗೆ ರಾಷ್ಟ್ರದ 2 ನಗರಗಳು ಟಾಪ್ 10 ಡೈನಮಿಕ್ ಸಿಟಿ ಪಟ್ಟಿ ಸೇರಿದಂತಾಗಿದೆ.

ಅತ್ಯಂತ ವೇಗವಾಗಿ ಬದಲಾಗುತ್ತಿರುವ ವಿಶ್ವದ ಟಾಪ್​ 30 ಸಿಟಿಗಳ ಬಗ್ಗೆ ಜೆಎಲ್​ಎಲ್ ಸಿದ್ಧಪಡಿಸಿರುವ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ವೇಗದ ಬದಲಾವಣೆಗೆ ಪ್ರಮುಖ ಕಾರಣ ತಂತ್ರಜ್ಞಾನವಾಗಿದೆ. ಈ ನಗರಗಳಲ್ಲಿ ಹೊಸ ಆವಿಷ್ಕಾರಗಳಿಗೆ ಉತ್ತಮವಾಗಿವೆ. ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿವೆ ಎಂದಿದೆ.

ಜೆಎಲ್​ಎಲ್ ವರದಿ ಕುರಿತು ಸ್ವಿಜರ್ಲೆಂಡ್​ನ ಡಾವೊಸ್​ನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಚರ್ಚೆ ನಡೆಸಲಾಗಿದೆ. ಚೀನಾ ರಾಷ್ಟ್ರವನ್ನು ಹಿಂದಿಕ್ಕಿ ಭಾರತ ಮುನ್ನಡೆಯುತ್ತಿದೆ. ವಿಶ್ವದ ಅತ್ಯಂತ ಡೈನಮಿಕ್ ನಗರಗಳ ಪೈಕಿ ಭಾರತದ ನಗರಗಳು ಸೇರುವ ಮೂಲಕ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗಮನ ಸೆಳೆದಿವೆ.

-ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿ)

Leave a Reply

Your email address will not be published. Required fields are marked *

Back To Top