Friday, 19th January 2018  

Vijayavani

ರಾಜ್ಯದಲ್ಲಿ ಶುರುವಾಗಿದೆ ಪಕ್ಷಾಂತರ ಪರ್ವ - ಮೂರು ಪಕ್ಷದೊಳಗೆ ಆಪರೇಶನ್​​ ಪಾಲಿಟಿಕ್ಸ್​​ - ಗೆಲುವಿಗಾಗಿ ಹೊಂದಾಣಿಕೆಗೂ ಸೈ ಎಂದ ನಾಯಕರು        ಮತ್ತೆ ಅನಂತಕುಮಾರ್​ ಹೆಗಡೆ ಉದ್ಧಟತನ - ಮಹಾಭಾರತದ ಜತೆ ವಿರೋಧಿಗಳ ಹೋಲಿಕೆ - ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹ        ಪ್ಲಾಸ್ಟಿಕ್​​ ಕವರ್​​ನಲ್ಲಿ ರಾಶಿ ರಾಶಿ ತಲೆ ಬುರುಡೆ - ಮೈಸೂರಿನ ರಸ್ತೆ ಬದಿ ತಲೆಬುರುಡೆಗಳು ಪತ್ತೆ - ಬುರುಡೆಗಳ ರಾಶಿ ಕಂಡು ಜನರಲ್ಲಿ ಆತಂಕ        ಗಡಿಯಲ್ಲಿ ಪಾಕ್​​ ಮತ್ತೆ ಪುಂಡಾಟ - ಅಪ್ರಚೋದಿತ ದಾಳಿಗೆ ಇಬ್ಬರು ಸಾವು - ಭಾರತದ ಯೋಧರಿಂದಲೂ ಪ್ರತಿ ದಾಳಿ         ಪದ್ಮಾವತ್​ ಚಿತ್ರಕ್ಕೆ ತಪ್ಪದ ಸಂಕಷ್ಟ - ಒವೈಸಿಯಿಂದಲೂ ಚಿತ್ರ ಬಿಡುಗಡೆಗೆ ವಿರೋಧ - ಚಿತ್ರತಂಡದ ಅರ್ಜಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್​​​​       
Breaking News :

ಬೆಂಗಳೂರು-ಚೆನ್ನೈ ಕಾರಿಡಾರ್ ಕನಸಿಗೆ ಚೀನಾ ಅಡ್ಡಗಾಲು

Monday, 16.10.2017, 3:05 AM       No Comments

ಉತ್ತಮ ವ್ಯಕ್ತಿಗಳು ದೀಪಗಳಿದ್ದಂತೆ. ತಮ್ಮನ್ನು ಸುಟ್ಟುಕೊಳ್ಳುವ ಮೂಲಕ ಇತರರಿಗೆ ಬೆಳಕು ನೀಡುತ್ತಾರೆ. ನಾವು ಉತ್ತಮರಾಗಲು ಪ್ರಯತ್ನಿಸೋಣ.

ನವದೆಹಲಿ: ದಕ್ಷಿಣ ಭಾರತದ ಪ್ರಮುಖ ನಗರಗಳಾದ ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಪರ್ಕ ಕಲ್ಪಿಸುವ ಹೈಸ್ಪೀಡ್ ರೈಲಿನ ಕಾರಿಡಾರ್ ಯೋಜನೆಯ ಕನಸಿಗೆ ಚೀನಾ ತಣ್ಣೀರೆರೆಚಿದೆ. ಡೋಕ್ಲಂ ಗಡಿ ಬಿಕ್ಕಟ್ಟಿನ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗಕ್ಕೀಡಾದ ಚೀನಾ ಭಾರತದ ಎದುರು ತಲೆ ತಗ್ಗಿಸಿದ ಬಳಿಕ ಆ ರಾಷ್ಟ್ರದ ಸಿಆರ್​ಇಇಸಿ ಕಂಪನಿ ಯೋಜನೆ ಬಗ್ಗೆ ನಿರಾಸಕ್ತಿ ವಹಿಸಿರುವುದು ಚಿಂತೆಗೀಡು ಮಾಡಿದೆ.

ಡೋಕ್ಲಂ ಬಿಕ್ಕಟ್ಟಿನ ಬಳಿಕ ಚೀನಾದ ಸಿಆರ್​ಇಇಸಿ ಸಂಸ್ಥೆ ಯಾವುದೇ ಸಂವಹನಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಅಂಶ ರೈಲ್ವೆ ಮಂಡಳಿಯ ಮೊಬಿಲಿಟಿ ಡೈರೆಕ್ಟರೇಟ್​ನ ಆಂತರಿಕ ಟಿಪ್ಪಣಿಯಲ್ಲಿ ಉಲ್ಲೇಖವಾಗಿದೆ. ನಾಲ್ಕು ವರ್ಷಗಳ ಹಿಂದೆ ಯೋಜನೆ ಬಗ್ಗೆ ಚರ್ಚೆ ನಡೆದಿತ್ತು. ಅದಾದ ಎರಡು ವರ್ಷದ ಬಳಿಕ ಚೀನಾ, ಜರ್ಮನಿ, ಜಪಾನ್ ಸೇರಿ ಹಲವು ರಾಷ್ಟ್ರಗಳ ಕಂಪನಿಗಳು ಯೋಜನೆ ಬಗ್ಗೆ ಆಸಕ್ತಿ ತೋರಿಸಿದ್ದವಲ್ಲದೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದವು. ಬಳಿಕ ಯೋಜನೆ ಮೇಲೆ ಹೂಡಿಕೆ, ಕಾಮಗಾರಿ ಗುತ್ತಿಗೆ ಮತ್ತು ಒಪ್ಪಂದಗಳ ಕುರಿತು ಮಾತುಕತೆ ನಡೆಸಲು ಉತ್ಸಾಹ ತೋರಿದ್ದವು. ಹಾಗೆಯೇ ಇತರೆ ಎಂಟು ಹೈಸ್ಪೀಡ್ ರೈಲು ಯೋಜನೆಗಳಲ್ಲಿ ಭಾಗಿಯಾಗುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದವು. ಆದರೆ, ಅಹಮದಾಬಾದ್- ಮುಂಬೈ ಹೈಸ್ಪೀಡ್ ರೈಲು ಯೋಜನೆಯನ್ನು ಜಪಾನ್ ಗಿಟ್ಟಿಸಿಕೊಂಡ ಬಳಿಕ ಚೀನಾ ಕಂಪನಿಯ ಉತ್ಸಾಹ ಹಂತ ಹಂತವಾಗಿ ಕಡಿಮೆಯಾಯಿತು

ಎಂದೂ ಹೇಳಲಾಗುತ್ತಿದೆ.

2014ರಲ್ಲಿ ರೈಲ್ವೆ ಮಾರ್ಗ ಸಮೀಕ್ಷೆ

2016ರಲ್ಲಿ ಅಧ್ಯಯನ ವರದಿ ಸಲ್ಲಿಸಿದ ಚೀನಾ ಕಂಪನಿ

510 ಕಿ.ಮೀ. ಉದ್ದದ ಕಾರಿಡಾರ್

150 ಕಿ.ಮೀ. (ಮೈಸೂರು- ಬೆಂಗಳೂರು) ಪಯಣಕ್ಕೆ 30 ನಿಮಿಷ (ಅಂದಾಜು)

360 ಕಿ.ಮೀ.(ಬೆಂಗಳೂರು- ಚೆನ್ನೈ) ಪಯಣಕ್ಕೆ 60

ನಿಮಿಷ (ಅಂದಾಜು)

190 ನಿಮಿಷ (ಮೈಸೂರು-ಬೆಂಗಳೂರು) ಪಯಣಕ್ಕೆ ಸದ್ಯ ತಗಲುವ ಸಮಯ, 420 ನಿಮಿಷ (ಬೆಂಗಳೂರು-ಚೆನ್ನೈ) ಪಯಣಕ್ಕೆ ಸದ್ಯ ತಗಲುವ ಸಮಯ

200 ಕೋಟಿ ರೂ.-ಪ್ರತಿ ಕಿ.ಮೀ ಕಾಮಗಾರಿಗೆ ತಗುಲುವ ವೆಚ್ಚ

Leave a Reply

Your email address will not be published. Required fields are marked *

Back To Top