Thursday, 19th April 2018  

Vijayavani

ಬಿಜೆಪಿ ಕಚೇರಿಯಲ್ಲಿ ಅಮಿತ್‌ ಷಾ ಮೀಟಿಂಗ್ - ಸೋಶಿಯಲ್‌ ಮೀಡಿಯಾ ಬಗ್ಗೆ ಫುಲ್‌ ಮಾರ್ಕ್ಸ್‌ - ಎಚ್ಚರಿಕೆ ಹೆಜ್ಜೆ ಇಡಲು ಸಲಹೆ        ಒಂಟಿಸಲಗದ ಮನೆಗೆ ಬಂತು ಬಿ ಫಾರಂ ​​ - ಅಂಬಿ ಷರುತ್ತುಗಳಿಗೆ ಒಪ್ಪಿದ ಪರಂ - ಪಕ್ಷದ ನಡೆ ಬಗ್ಗೆ ರೆಬೆಲ್‌ಸ್ಟಾರ್‌ ಗರಂ        ಕೈ ಟಿಕೆಟ್​ ತಪ್ಪಿದ್ದಕ್ಕೆ ಶಶಿಕುಮಾರ್ ಅಸಮಾಧಾನ​ - ದೇವೆಗೌಡರ ಭೇಟಿಯಾದ ಕೊಲ್ಲೂರ ಕಾಳ - ಪದ್ಮನಾಭ ನಗರದ ನಿವಾಸದಲ್ಲಿ ಜೆಡಿಸ್​ ಸೇರ್ಪಡೆ        ಟಿಕೆಟ್​ಗಾಗಿ ಹೆಚ್ಚಿದ ಕಣ್ಣೀರಧಾರೆ - ಮಾಯಕೊಂಡದಲ್ಲಿ ಕಣ್ಣೀರಿಟ್ಟ ಮಾಜಿ ಶಾಸಕ - ತರೀಕೆರೆಯಲ್ಲಿ ಶಿವಶಂಕರಪ್ಪ ಭಾವುಕ        ಭವಾನಿ ಸೋಲಿಸಿ ಎಂದಿದ್ದು ನನ್ನನ್ನಲ್ಲ - ಕೈ ಅಭ್ಯರ್ಥಿ ವಿರುದ್ಧ ಮಾತನಾಡಿದ್ದಾರೆ - ಭವಾನಿ ವಿಡಿಯೋ ಬಗ್ಗೆ ಸಾ.ರಾ ಮಹೇಶ್‌ ಸ್ಪಷ್ಟನೆ        ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ - 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಗ್ರೀನ್​ಸಿಗ್ನಲ್ - ಚುನಾವಣಾ ಆಯೋಗದಿಂದ ಒಪ್ಪಿಗೆ       
Breaking News

ಬೆಂಗಳೂರಿಗೆ ಶಿವಮೊಗ್ಗ ಕಡಿವಾಣ

Tuesday, 12.09.2017, 3:03 AM       No Comments

| ಅವಿನಾಶ್ ಜೈನಹಳ್ಳಿ

ಮೈಸೂರು: ವೇಗಿಗಳಾದ ಆದಿತ್ಯ ಸೋಮಣ್ಣ (21 ಕ್ಕೆ 3) ಮತ್ತು ಟಿ. ಪ್ರದೀಪ್ (35ಕ್ಕೆ 2) ಮಾರಕ ದಾಳಿಯ ನಡುವೆಯೂ ಪವನ್ ದೇಶಪಾಂಡೆ (47 ರನ್, 36 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಮಂಜೇಶ್ ರೆಡ್ಡಿ (37ರನ್, 43 ಎಸೆತ, 2 ಬೌಂಡರಿ, 1 ಸಿಕ್ಸರ್) ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡ 6ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟಿ20 ಟೂರ್ನಿಯಲ್ಲಿ ನಮ್ಮ ಶಿವಮೊಗ್ಗ ತಂಡದ ವಿರುದ್ಧ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ.

ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ 6 ವಿಕೆಟ್​ಗೆ 142 ರನ್ ಪೇರಿಸಿತು.

ಆರಂಭಿಕ ಕಡಿವಾಣ: ಬ್ಲಾಸ್ಟರ್ಸ್ ತಂಡಕ್ಕೆ ಆದಿತ್ಯ ಮತ್ತು ಪ್ರದೀಪ್ ಆರಂಭದಲ್ಲೇ ಕಡಿವಾಣ ಹಾಕಿದರು. ಪ್ರದೀಪ್ ಮೊದಲ ಓವರ್​ನಲ್ಲೇ ಆರ್. ಸಮರ್ಥ್(1) ವಿಕೆಟ್ ಪಡೆದರೆ, ಸೋಮಣ್ಣ 2ನೇ ಓವರ್​ನಲ್ಲಿ ವಿಶ್ವನಾಥ್(5) ವಿಕೆಟ್ ಪಡೆದು ಬ್ಲಾಸ್ಟರ್ಸ್ ಗೆ ಸವಾಲಾದರು. 23 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡ ಬ್ಲಾಸ್ಟರ್ಸ್ ಸಂಕಷ್ಟ ಎದುರಿಸಿತು. ನಂತರ ಜತೆಯಾದ ಮಂಜೇಶ್ ಮತ್ತು ಪವನ್ ದೇಶಪಾಂಡೆ ಜೋಡಿ 4ನೇ ವಿಕೆಟ್​ಗೆ 58 ಪೇರಿಸಿ ಚೇತರಿಕೆ ನೀಡಿತು. ಮಂಜೇಶ್ ರೆಡ್ಡಿ ನಿರ್ಗಮದ ನಂತರ ಪವನ್ ಜೊತೆಗೂಡಿದ ರಾಜು ಭಟ್ಕಳ್ (28* ರನ್, 14 ಎಸೆತ, 3 ಸಿಕ್ಸರ್) 5ನೇ ವಿಕೆಟ್​ಗೆ 38 ರನ್ ಪೇರಿಸಿ ತಂಡ ಉತ್ತಮ ಮೊತ್ತ ದಾಖಲಿಸಲು ನೆರವಾದರು.

ಬೆಂಗಳೂರು ಬ್ಲಾಸ್ಟರ್ಸ್: 6 ವಿಕೆಟ್​ಗೆ 142 (ಪವನ್ ದೇಶಪಾಂಡೆ 47, ಮಂಜೇಶ್ ರೆಡ್ಡಿ 37, ರಾಜು ಭಟ್ಕಳ್ 28*, ಸಮರ್ಥ್ 1, ಶಿಶಿರ್ ಭವಾನಿ, ಆದಿತ್ಯ ಸೋಮಣ್ಣ 21 ಕ್ಕೆ 3, ಪ್ರದೀಪ್ 35ಕ್ಕೆ 2, ಕಾಜಿ 26ಕ್ಕೆ 1).

ಇಂದಿನ ಪಂದ್ಯ

ಬೆಳಗಾವಿ ಪ್ಯಾಂಥರ್ಸ್-ಬಳ್ಳಾರಿ ಟಸ್ಕರ್ಸ್

ಎಲ್ಲಿ: ಒಡೆಯರ್ ಮೈದಾನ, ಮೈಸೂರು

ಆರಂಭ: ಸಂ. 7 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1

 

ಇಂದು ಮೈಸೂರು ಚರಣದ ಕಡೇ ಪಂದ್ಯ

ಎಂಟು ದಿನಗಳಿಂದ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ಆರನೇ ಆವೃತ್ತಿಯ ಕೆಪಿಎಲ್ ಟೂರ್ನಿಯ 2ನೇ ಚರಣದ ಕಡೇ ಪಂದ್ಯ ಮಂಗಳವಾರ ನಡೆಯಲಿದೆ. ಬೆಳಗಾವಿ ಪ್ಯಾಂಥರ್ಸ್ ಮತ್ತು ಹಾಲಿ ಚಾಂಪಿಯನ್ ಬಳ್ಳಾರಿ ಟಸ್ಕರ್ಸ್ ಪಂದ್ಯದೊಂದಿಗೆ ಮೈಸೂರು ಚರಣ ಸಮಾಪ್ತಿಗೊಳ್ಳಲಿದೆ. ಗುರುವಾರದಿಂದ ಹುಬ್ಬಳ್ಳಿ ಚರಣದ ಪಂದ್ಯಗಳು ನಡೆಯಲಿವೆ.

Leave a Reply

Your email address will not be published. Required fields are marked *

Back To Top