Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಬಿ-ಟೌನ್ ಅಂಗಳದಲ್ಲಿ ಪ್ರಣೀತಾ

Wednesday, 13.06.2018, 3:05 AM       No Comments

<<ಹಿಂದಿ ವಿಡಿಯೋ ಸಾಂಗ್​ನಲ್ಲಿ ಕನ್ನಡದ ಹುಡುಗಿ>>

ಬೆಂಗಳೂರು: ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ ಪ್ರಣೀತಾ ಸುಭಾಷ್, ತೆಲುಗು, ತಮಿಳು ಚಿತ್ರರಂಗದಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿದ್ದರು. ಈಗ ಅವರು ಸದ್ದಿಲ್ಲದೆ ಬಾಲಿವುಡ್​ನತ್ತ ಪಯಣ ಬೆಳೆಸಿದ್ದಾರೆ! ಹಾಗಂತ ಅವರು ಯಾವುದೇ ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಅವರು ಬಣ್ಣ ಹಚ್ಚುತ್ತಿರುವುದು ಹಿಂದಿ ಆಲ್ಬಂ ಸಾಂಗ್​ನಲ್ಲಿ.

ವಿದ್ಯಾ ಬಾಲನ್ ನಟನೆಯ ‘ತುಮಾರಿ ಸುಲು’ ಚಿತ್ರದ ನಿರ್ದೇಶಕ ಸುರೇಶ್ ತ್ರಿವೇಣಿ ‘ಚನ್ ಕಿತ್ತನ್’ ಹೆಸರಿನ ಮ್ಯೂಸಿಕ್ ವಿಡಿಯೋ ಸಿದ್ಧಪಡಿಸುತ್ತಿದ್ದಾರೆ. ಈ ಹಾಡಿನಲ್ಲಿ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಲೀಡ್ ರೋಲ್​ನಲ್ಲಿ ನಟಿಸುತ್ತಿದ್ದಾರೆ. ಕಾಪ್ ಅವತಾರದಲ್ಲಿ ಎದುರಾಗಲಿದ್ದು, ಅವರಿಗೆ ಜೋಡಿಯಾಗಿ ಪ್ರಣೀತಾ ಕಾಣಿಸಿಕೊಳ್ಳಲಿದ್ದಾರಂತೆ. ಮುಗ್ಧ ಹುಡುಗಿಯ ಪಾತ್ರ ಎಂದು ಹೇಳಲಾಗುತ್ತಿದೆಯಾದರೂ, ಅವರ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ವಿಶೇಷ ಎಂದರೆ ಈ ಹಾಡನ್ನು ಲಡಾಕ್​ನಲ್ಲಿರುವ ಖರ್ದುಂಗ್ಲಾ ಪಾಸ್, ಸಿಕ್ಕಿಂನ ತ್ಸೋಂಗಮೋ ಲೇಕ್, ಗ್ಯಾಂಗ್​ಟಕ್, ತಾಶಿ ನಾಮ್್ಯಾಲ್ ಅಕಾಡೆಮಿ ಮುಂತಾದ ಪ್ರದೇಶಗಳಲ್ಲಿ ಶೂಟಿಂಗ್ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಶೂಟಿಂಗ್ ಆರಂಭಗೊಂಡಿದ್ದು, ಪ್ರಣೀತಾ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರೀಕರಣ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕುಮಾರ್ ಕಂಪೋಸ್ ಮಾಡಿ, ರೋಚಕ್ ಕೊಹ್ಲಿ ಸಂಗೀತ ಸಂಯೋಜನೆ ಮಾಡಿರುವ ಪಂಜಾಬಿ ಗಜಲ್ ಹಾಡನ್ನು ಮರುಸೃಷ್ಟಿ ಮಾಡಿದ್ದಾರೆ ಸುರೇಶ್. ಈ ಹಾಡಿನಲ್ಲಿ ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಆಯುಷ್ಮಾನ್ ಪ್ರೇಕ್ಷಕರೆದುರು ಬರಲಿದ್ದಾರಂತೆ. ಕನ್ನಡದ ‘ಪೊರ್ಕಿ’ ಚಿತ್ರದ ಮೂಲಕ ಸಿನಿಮಾ ಬದುಕು ಆರಂಭಿಸಿದ ಪ್ರಣೀತಾ, ಸ್ಯಾಂಡಲ್​ವುಡ್ ನಟರಾದ ಶಿವರಾಜ್​ಕುಮಾರ್, ಗಣೇಶ್, ಉಪೇಂದ್ರ ಟಾಲಿವುಡ್ ನಟರಾದ ಮಹೇಶ್ ಬಾಬು, ಪವನ್ ಕಲ್ಯಾಣ್ ಮುಂತಾದವರ ಜತೆ ತೆರೆ ಹಂಚಿಕೊಂಡಿದ್ದರು. ಈಗ ಇದೇ ಮೊದಲ ಬಾರಿಗೆ ಬಾಲಿವುಡ್​ನಲ್ಲಿ ನಟಿಸುತ್ತಿರುವ ಖುಷಿಯಲ್ಲಿದ್ದಾರೆ. ಸದ್ಯ ಪ್ರಣೀತಾ ಕನ್ನಡದಲ್ಲಿ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ತೆಲುಗಿನಲ್ಲಿ ‘ಹೆಲೋ ಗುರು ಪ್ರೇಮ ಕೋಸಮೆ’ ಚಿತ್ರದಲ್ಲಿ ರಾಮ್ ಪೊತಿನೇನಿ ಜತೆ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top