Sunday, 21st October 2018  

Vijayavani

ಅರ್ಜುನ್‌ ಸರ್ಜಾಕಡೆಯಿಂದ ಬೆದರಿಕೆ ಕರೆ - ಕಾನೂನು ಹೋರಾಟದ ಬಗ್ಗೆ ದಾಖಲೆ ಸಂಗ್ರಹ - ಸುದ್ದಿಗೋಷ್ಠಿಯಲ್ಲಿ ಶ್ರುತಿ ಗಂಭೀರ ಆರೋಪ        ಭಾವೈಕ್ಯತೆ ಶ್ರೀಗಳಿಗೆ ಕಣ್ಣೀರ ವಿದಾಯ - ಕ್ರಿಯಾಸಮಾಧಿಯಲ್ಲಿ ಸಿದ್ದಲಿಂಗ ಶ್ರೀ ಲೀನ - ಭಕ್ತಸಾಗರದಿಂದ ತೋಂಟದಾರ್ಯರಿಗೆ ಅಂತಿಮ ನಮನ        ಡಿಕೆಶಿ ಶೋ ಮಾಡೋದು ಬಿಡ್ಬೇಕು - ಪಕ್ಷದ ಪರ ಕೆಲಸ ಮಾಡ್ಬೇಕು - ಬಳ್ಳಾರಿ ಪ್ರಚಾರದಲ್ಲಿ ಬಯಲಾಯ್ತು ಜಾರಕಿಹೊಳಿ ಸಿಟ್ಟು        ಸಿಎಂ ಎಚ್‌ಡಿಕೆ ಮತ್ತೆ ಟೆಂಪಲ್‌ರನ್‌ - ಶಕ್ತಿ ದೇವತೆ ಸನ್ನಿಧಿಗೆ ಕುಮಾರಸ್ವಾಮಿ - ಮಹಾರಾಷ್ಟ್ರದ ತುಳಜಾ ಭವಾನಿ ದೇಗುಲಕ್ಕೆ ಭೇಟಿ        ಶಿರಡಿ ಸಾಯಿ ಸಮಾಧಿ ಶತಮಾನೋತ್ಸವ ಹಿನ್ನೆಲೆ - ಸಾಯಿ ಸನ್ನಿಧಿಗೆ ಭಕ್ತ ಸಾಗರ - ನಾಲ್ಕು ದಿನದಲ್ಲಿ 5 ಕೋಟಿ ರೂಪಾಯಿ ಕಾಣಿಕೆ        ರೋಡ್ ರೋಲರ್​ನ್ನೂ ಬಿಡದ ಕಳ್ಳರು - ವರ್ತೂರು ಬಳಿ ನಿಲ್ಲಿಸಿ ಎಸ್ಕೇಪ್ ಆದ ಚೋರರು - ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ       
Breaking News

ಬಿಡಿಎ ಆಸ್ತಿಗಳಿಗೂ ಡಿಜಿಟಲ್ ನಂಬರ್

Saturday, 19.05.2018, 3:02 AM       No Comments

| ಗಿರೀಶ್ ಗರಗ ಬೆಂಗಳೂರು

ಬೆಂಗಳೂರಲ್ಲೂ ವಿಳಾಸ ಹುಡುಕುವ ಜಂಜಾಟ ಹಾಗೂ ಪ್ರತಿ ಆಸ್ತಿಗೂ ಶಾಶ್ವತ ಗುರುತಿನ ಸಂಖ್ಯೆ ನೀಡುವ ಡಿಜಿ 7 ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಸ್ತಿಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಭೂಕಬಳಿಕೆ ತಡೆಯುವ ಜತೆಗೆ ಕಂಡ ಕಂಡವರಲ್ಲಿ ವಿಳಾಸ ಕೇಳಿ, ಗೂಗಲ್ ಮ್ಯಾಪ್ ಹಾಕಿಕೊಂಡು ಹುಡುಕುವ ಕಿರಿಕಿರಿಗೆ ಈ ಯೋಜನೆಯಿಂದ ಫುಲ್​ಸ್ಟಾಪ್ ಬೀಳಲಿದೆ. ಬಿಬಿಎಂಪಿ ಸಿದ್ಧಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಇದ್ದರೆ ಸಾಕು ವಿಳಾಸ ಸಲೀಸಾಗಿ ಸಿಗುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ 19 ಲಕ್ಷ ಆಸ್ತಿಗಳನ್ನು ಜಿಐಎಸ್ ಮ್ಯಾಪಿಂಗ್ ಮಾಡುವ ಮೂಲಕ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಿರುವ ಅಧಿಕಾರಿಗಳು, ಇದೀಗ ಆ ಆಸ್ತಿಗಳಿಗೆ 7 ಅಂಕಿಯ ಡಿಜಿಟಲ್ ಮನೆ ಸಂಖ್ಯೆ ನೀಡುವ ಮೂಲಕ ಆಸ್ತಿಗಳ ಸುಲಭ ಪತ್ತೆಗೆ ಕ್ರಮ ಕೈಗೊಂಡಿದೆ. ಅದೇ ರೀತಿ ಬಿಡಿಎ ಆಸ್ತಿಗಳಿಗೂ ಡಿಜಿಟಲ್ ಸಂಖ್ಯೆ ನೀಡಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆ.

ಬಿಡಿಎ ಆಸ್ತಿ ಬಗ್ಗೆ ನಿಖರ ಮಾಹಿತಿಯೇ ಇಲ್ಲ. ಆದ್ದರಿಂದ ಬಿಡಿಎ ಆಸ್ತಿಗಳಿಗೂ ಡಿಜಿ 7 ಸಂಖ್ಯೆ ಕೊಟ್ಟರೆ ಭೂಕಬಳಿಕೆಯಂಥ ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ. ಬಡಾವಣೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಬಿಡಿಎ ನಗರದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಮಾಲೀಕರಿಗೆ ಆರ್ಥಿಕ ಪರಿಹಾರ ವಿತರಿಸಿದೆ. ಆದರೆ, ಈ ಭೂಮಿಯಲ್ಲಿ 2.888 ಎಕರೆಗೂ ಅಧಿಕ ಜಮೀನು ಬಳಕೆಯಾಗದೆ ಉಳಿದಿದೆ. ಇದರ ನಿಖರ ಮಾಹಿತಿ ಇಲ್ಲ. ಇದರಲ್ಲಿ ಅಕ್ರಮ ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಡಿಜಿಟಲ್ ಸಂಖ್ಯೆ ನೀಡಿದರೆ ಅವ್ಯವಹಾರಕ್ಕೆ ಆಸ್ಪದವೇ ಇರುವುದಿಲ್ಲ.

ಆಸ್ತಿ ಪತ್ತೆ ಸುಲಭ

ಇನ್ನು, ‘ಡಿಜಿ 7’ ಮೊಬೈಲ್ ಅಪ್ಲಿಕೇಷನ್​ನಲ್ಲಿ ಎಲ್ಲ ಆಸ್ತಿಗಳ ಡಿಜಿಟಲ್ ಡೋರ್ ಸಂಖ್ಯೆಯನ್ನು ನಮೂದಿಸಲಾಗಿದೆ. ಹೀಗಾಗಿ ಮೊಬೈಲ್ ಅಪ್ಲಿಕೇಷನ್​ನಲ್ಲಿ ಡಿಜಟಲ್ ಡೋರ್ ಸಂಖ್ಯೆ ನಮೂದಿಸಿದರೆ, ಆಸ್ತಿ ಎಲ್ಲಿದೆ ಎಂಬುದು ಪತ್ತೆಯಾಗಲಿದೆ. ಅದನ್ನಾಧರಿಸಿ ಗೂಗಲ್ ನ್ಯಾವಿಗೇಷನ್ ಮೂಲಕ ಆಸ್ತಿ ಇರುವಲ್ಲಿಗೆ ಹೋಗಬಹುದಾಗಿದೆ. ಅದರಲ್ಲಿ ಯಾವುದೇ ಗೊಂದಲವಿರುವುದಿಲ್ಲ.

ಪಡೆಯುವ ವಿಧಾನ ಹೇಗೆ?

  • ಡಿಜಿ 7 ಆಪ್​ನ್ನು ಮೊದಲಿಗೆ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್​ನಿಂದ ಡೌನ್​ಲೋಡ್ ಮಾಡಬೇಕು.
  • ಆಪ್​ನಲ್ಲಿ ಮೊಬೈಲ್ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
  • ಎಸ್​ಎಎಸ್ ಫಾರಂ ಸಂಖ್ಯೆ ಅಥವಾ ಹೊಸ ಪಿಐಡಿ ಸಂಖ್ಯೆ ನಮೂದಿಸಿ ಡಿಜಿಟಲ್ ಸಂಖ್ಯೆ ಪಡೆಯಬಹುದು.
  • ಪಾಲಿಕೆಯ ಕಾಲ್ ಸೆಂಟರ್ 080 22660000 ಸಂರ್ಪಸಿ ಸಹ ಸಂಖ್ಯೆ ಪಡೆಯಲು ಅವಕಾಶವಿದೆ.

ಡಿಜಿ7 ಆಪ್ ಅನುಕೂಲವೇನು?

  • ನಗರದಲ್ಲಿ ವಿಳಾಸ ಹುಡುಕಲು ಸುಲಭ ವಿಧಾನ.
  • ಆಸ್ತಿ ಮಾಲೀಕರು ವಿಳಾಸವಾಗಿ ಡಿಜಿ 7 ಸಂಖ್ಯೆ ಬಳಸಬಹುದು.
  • ಪಾಲಿಕೆಗೆ ದೂರು ಅಥವಾ ಸಲಹೆ ನೀಡಿದಾಗ ಡಿಜಿ7 ನೀಡಿದರೆ ಸಾಕು.
  • ಡಿಜಿ 7 ಸಂಖ್ಯೆ ಬಳಸಿ ನ್ಯಾವಿಗೇಟ್ ಸಹಾಯದಿಂದ ಬೇಕಾದ ಸ್ಥಳಕ್ಕೆ ಶೀಘ್ರ ತಲುಪಬಹುದು.
  • ಆಸ್ತಿಯ ಶಾಶ್ವತ ಗುರುತಿನ ಸಂಖ್ಯೆಯಾಗಿರಲಿದೆ.

ಎಸ್​ಎಂಎಸ್ ಮೂಲಕವೂ ಸಿಗತ್ತೆ

ಆಸ್ತಿ ಮಾಲೀಕರು ತಮ್ಮ ಆಸ್ತಿಯ ಡಿಜಿಟಲ್ ಸಂಖ್ಯೆಯನ್ನು ಒಂದು ಎಸ್​ಎಂಎಸ್ ಮೂಲಕ ಪಡೆಯಬಹುದಾಗಿದೆ. ಅದರಂತೆ ತಮ್ಮ ಮೊಬೈಲ್​ನಿಂದ ಆಂಗ್ಲ ಭಾಷೆಯಲ್ಲಿ ಬಿಬಿಎಂಪಿ (ಸ್ಪೇಸ್) ಪಿಐಡಿ (ಸ್ಪೇಸ್) ಪಿಐಡಿ ಸಂಖ್ಯೆಯನ್ನು ನಮೂದಿಸಿ 161 ಸಂಖ್ಯೆಗೆ ಕಳುಹಿಸಿದರೆ, ಆಸ್ತಿಗಳ ಡಿಜಿಟಲ್ ಸಂಖ್ಯೆ ಪಡೆಯಬಹುದಾಗಿದೆ. ಈಗಾಗಲೆ ಬಿಬಿಎಂಪಿಯ ಎಲ್ಲ ಆಸ್ತಿಗಳ ಸ್ಥಳವನ್ನು ‘ಡಿಜಿ 7’ ಮೊಬೈಲ್ ಅಪ್ಲಿಕೇಷನ್​ನಲ್ಲಿ ಅಳವಡಿಸಿದ್ದು, ಅದರ ಮೂಲಕ ಆಸ್ತಿಗಳ ನಿಖರ ಸ್ಥಳವನ್ನು ಪತ್ತೆ ಮಾಡಬಹುದಾಗಿದೆ.

Leave a Reply

Your email address will not be published. Required fields are marked *

Back To Top