Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಬಾಹು ಪರಾಕ್ರಮ ದಾಖಲೆಗಳು ಬಲಿ

Saturday, 20.05.2017, 3:00 AM       No Comments

ನೂರು ಕೋಟಿ ರೂ. ಕ್ಲಬ್ ಸೇರುವುದೇ ಇದುವರೆಗಿನ ಬಾಲಿವುಡ್ ಸಿನಿಮಾಗಳ ಸಾಧನೆಯಾಗಿತ್ತು. ಶತಕೋಟಿ ಗಳಿಸಿಬಿಟ್ಟರೆ, ಆ ಚಿತ್ರಕ್ಕೆ ವಿಶೇಷ ಮನ್ನಣೆ ಸಿಗುತ್ತಿತ್ತು ಮತ್ತು ಅಂತಹ ಸಾಧನೆಗಳನ್ನು ಹಿಂದಿ ಸಿನಿಮಾಗಳು ಮಾತ್ರ ಹೆಚ್ಚು ಮಾಡುವುದು ಎಂಬ ನಂಬಿಕೆ ಇತ್ತು. ಆದರೆ ತೆಲುಗಿನ ‘ಬಾಹುಬಲಿ 2’ ಅವೆಲ್ಲ ಕಲ್ಪನೆಗಳನ್ನು ಚಚ್ಚಿ ಬೀಸಾಕಿದೆ. ನಂಬಿ, ವಿಶ್ವ ಸಿನಿಮಾರುಕಟ್ಟೆಯಲ್ಲಿ ಈ ಚಿತ್ರ ಗಳಿಸಿರುವುದು ಬರೋಬ್ಬರಿ 1500 ಕೋಟಿ ರೂ.! ಹಿಂದಿ ಡಬ್ ವರ್ಷನ್​ನಿಂದಲೇ 460 ಕೋಟಿ ರೂ. ಗಳಿಕೆಯಾಗಿದ್ದು, ಈ ಪ್ರಮಾಣದ ಕಲೆಕ್ಷನ್ ಮಾಡುವುದಕ್ಕೆ ಹಿಂದಿ ಸಿನಿಮಾಗಳಿಗೇ ಸಾಧ್ಯವಾಗಿಲ್ಲ!! ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಬಿಡುಗಡೆಗೊಂಡ ಮೊದಲ ದಿನವೇ 121 ಕೋಟಿ ರೂ. ಕಲೆಹಾಕುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಭಾರತದ ಒಂದು ಸಾವಿರ ಕೋಟಿ ರೂ. ಕಲೆಕ್ಷನ್ ಮಾಡುವ ಸಿನಿಮಾ ಇದಾಗಲಿದೆ ಎಂಬ ಊಹೆ ಬಾಕ್ಸ್​ಆಫೀಸ್ ಪಂಡಿತರಲ್ಲಿತ್ತು. ಆದರೆ, ಈ ಚಿತ್ರ ಅಂತಹ ನಿರೀಕ್ಷೆಗಳನ್ನು ಮೀರಿ ಗಳಿಕೆ ಮಾಡಿದೆ. ಇದೀಗ ಚಿತ್ರತಂಡವೇ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ‘ಬಾಹುಬಲಿ 2’ ಒಟ್ಟು 1500 ರೂ. ಗಳಿಸಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳ ಆವೃತ್ತಿಯಿಂದ ಇದುವರೆಗೂ ಭಾರತದಲ್ಲಿ 1225 ಕೋಟಿ ರೂ. ಬಂದಿದ್ದರೆ, ವಿದೇಶದಿಂದ 275 ಕೋಟಿ ರೂ. ಹರಿದುಬಂದಿದೆಯಂತೆ. ಇನ್ನು, ‘ಬಾಹುಬಲಿ 2’ಗೆ ಪೈಪೋಟಿಯೊಡ್ಡಲು ‘ದಂಗಲ್’ ಕಸರತ್ತು ಮಾಡುತ್ತಿದೆ. ಇತ್ತೀಚೆಗಷ್ಟೇ ಚೀನಿ ಭಾಷೆಗೆ ಡಬ್ ಆಗಿರುವ ಈ ಚಿತ್ರ 500 ಕೋಟಿ ರೂ.ಗೂ ಅಧಿಕ ಹಣ ಗಳಿಸಿದೆಯಂತೆ. -ಏಜೆನ್ಸೀಸ್

 

Leave a Reply

Your email address will not be published. Required fields are marked *

Back To Top