Saturday, 18th November 2017  

Vijayavani

1. ಜಯಾ ನಿವಾಸದಲ್ಲಿ ಐಟಿ ಇಂಚಿಂಚೂ ಶೋಧ- ಪೋಯೆಸ್​ ಗಾರ್ಡನ್​​ನಲ್ಲಿ ದಾಖಲೆಗಳ ಪರಿಶೀಲನೆ- ಚೆನ್ನೈನಲ್ಲಿ ಕಳೆದ ರಾತ್ರಿಯಿಂದಲೂ ಹೈಡ್ರಾಮಾ 2. ಬೆಂಗಳೂರಿನಲ್ಲಿ ವ್ಯಕ್ತಿಯ ಪುಂಡಾಟ- ನಡುರೋಡಲ್ಲೇ ಟ್ರಾಫಿಕ್​​ ಪೊಲೀಸ್​ ಮೇಲೆ ಹಲ್ಲೆ- ದೊಣ್ಣೆ ಹಿಡಿದ ವ್ಯಕ್ತಿ ಈಗ ಖಾಕಿ ಅತಿಥಿ 3. ಒಂದಲ್ಲ… ಎರಡಲ್ಲ… ಬರೋಬ್ಬರಿ ಮೂರು- ಬೀಗರ ಊಟದಲ್ಲೇ ಸಿಕ್ಕಿಬಿದ್ದ ರಸಿಕ ಮಹಾಶಯ- ಹಾಸನದ ಗೊರೂರಿನಲ್ಲಿ ಬಿತ್ತು ಸಖತ್ ಗೂಸಾ 4. ಪಿಒಕೆ ವಶಪಡಿಸಿಕೊಳ್ಳಲು ಪಾಕ್​ ತೆರಿಗೆ ಹುನ್ನಾರ- ಕೋಳಿ, ಕುರಿ, ಹಸುವಿಗೂ ಟ್ಯಾಕ್ಸ್​- ಪಾಕ್​ ವಿರುದ್ಧ ಗಿಲ್ಗಿಟ್​​​ನಲ್ಲಿ ಆಕ್ರೋಶ 5. ಸಿಂಹಳೀಯರ ದಾಳಿಗೆ ಭಾರತ ತತ್ತರ- ಮೊದಲ ಇನ್ನಿಂಗ್ಸ್​​​ನಲ್ಲಿ 172ಕ್ಕೆ ಆಲೌಟ್​- ಶ್ರೀಲಂಕಾ ರಕ್ಷಣಾತ್ಮಕ ಆಟ
Breaking News :

ಬಾಲಿವುಡ್​ಗೆ ಹಾರ್ತಾರೆ ದುಲ್ಖಾರ್ ಸಲ್ಮಾನ್

Sunday, 13.08.2017, 3:00 AM       No Comments

ಲಯಾಳಂ ‘ಸೂಪರ್ ಸ್ಟಾರ್’ ಮಮ್ಮೂಟ್ಟಿ ಪುತ್ರ ನಟ ದುಲ್ಖಾರ್ ಸಲ್ಮಾನ್ ಈಗಾಗಲೇ ತಮ್ಮ ಜನಪ್ರಿಯತೆ ಎಷ್ಟಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾ ನೀಡಿರುವ ದುಲ್ಖಾರ್, ಮಲಯಾಳಂ-ತಮಿಳು ಭಾಷೆಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ತಮ್ಮ ಸಿನಿವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಅವರು, ನೇರವಾಗಿ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ನಿರ್ವಪಕ ರೋನಿ ಸ್ಕ್ರೂವ್​ವಾಲಾ ಪ್ರೊಡಕ್ಷನ್​ನಲ್ಲಿ ನಿರ್ವಣವಾಗಲಿರುವ ಈ ಸಿನಿಮಾದಲ್ಲಿ ದುಲ್ಖಾರ್ ಜತೆಗೆ ಇರ್ಫಾನ್ ಖಾನ್ ಕೂಡ ಬಣ್ಣ ಹಚ್ಚಲಿದ್ದಾರೆ. ವೆಬ್ ಸರಣಿಗಳ ಮೂಲಕ ಫೇಮಸ್ ಆಗಿರುವ ನಟಿ ಮಿಥಿಲಾ ಪಾಲ್ಕರ್ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ. ಚೊಚ್ಚಲ ಬಾರಿಗೆ ಆಕರ್ಷ್ ಖುರಾನಾ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ, ದುಲ್ಖಾರ್ ನಿರ್ವಹಿಸಲಿರುವ ಪಾತ್ರವನ್ನು ಇದಕ್ಕೂ ಮೊದಲು ಅಭಿಷೇಕ್ ಬಚ್ಚನ್ ಮಾಡಬೇಕಿತ್ತು. ಡೇಟ್ಸ್ ಸಿಗದ ಕಾರಣ ಅವರಿಲ್ಲಿ ನಟಿಸುತ್ತಿಲ್ಲ. ಹೀಗಾಗಿ, ಬಚ್ಚನ್ ಪುತ್ರನಿಗೆ ನೀಡಿದ್ದ ಆಫರ್ ಈಗ ಮಮ್ಮೂಟ್ಟಿ ಪುತ್ರನ ಪಾಲಿಗೆ ಒಲಿದಿದೆ. ಮೂಲಗಳ ಪ್ರಕಾರ, ಇದೊಂದು ರೋಡ್ ಜರ್ನಿ ಕಥೆಯನ್ನು ಹೊಂದಿದ ಸಿನಿಮಾವಂತೆ. ದುಲ್ಖಾರ್-ಇರ್ಫಾನ್ ಸ್ನೇಹಿತರಾಗಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ ಕೊನೇ ವಾರದಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದ್ದು, ಬಹುತೇಕ ಚಿತ್ರೀಕರಣ ಕೇರಳದಲ್ಲೇ ನಡೆಯಲಿದೆ. -ಏಜೆನ್ಸೀಸ್

 

 

 

Leave a Reply

Your email address will not be published. Required fields are marked *

Back To Top