Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ಬಾಲಕಿಯರಿಗಾಗಿಯೇ ನೂರಾರು ಸೈನಿಕ ಶಾಲೆ ತೆರೆಯಬೇಕಿದೆ

Monday, 25.12.2017, 3:03 AM       No Comments

ಚನ್ನಮ್ಮ ಕಿತ್ತೂರು: ಭಾರತದಲ್ಲಿ ಬಾಲಕಿಯರಿಗಾಗಿ ಏಕೈಕ ಸೈನಿಕ ವಸತಿ ಶಾಲೆ ಕಿತ್ತೂರಿನಲ್ಲಿದೆ. ಇದು ನಮ್ಮ ಹೆಮ್ಮೆ. ಇಂಥ ನೂರು ಸೈನಿಕ ಶಾಲೆಗಳನ್ನು ದೇಶಾದ್ಯಂತ ತೆರೆಯುವ ಅವಶ್ಯಕತೆ ಇದೆ. ಹಾಗಾಗಿ, ಹೆಣ್ಣು ಮಕ್ಕಳ ಮೇಲೆ ಅಭಿಮಾನ ಇರುವ, ದೂರದೃಷ್ಟಿ ಹೊಂದಿರುವ ಪ್ರಧಾನಿ ಅವರನ್ನು ಈ ಶಾಲೆಗೆ ಆಹ್ವಾನಿಸಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಶಾಲಾ ಆಡಳಿತ ಮಂಡಳಿಗೆ ಸಲಹೆ ಮಾಡಿದರು.

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಸೈನಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ 49ನೇ ವಾರ್ಷಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಭೇಟಿ ನೀಡಿದಲ್ಲಿ ಶಾಲೆಗೆ ಆರ್ಥಿಕ ನೆರವು ಸೇರಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸುತ್ತಾರೆ. ಜತೆಗೆ ಈ ಮಾದರಿ ಶಾಲೆಗಳನ್ನು ದೇಶಾದ್ಯಂತ ತೆರೆಯಲು ಮುಂದಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

25 ವರ್ಷಗಳ ಹಿಂದೆ ಶಾಲೆಗೆ ಬಂದಾಗ ಅಷ್ಟೊಂದು ಸೌಕರ್ಯವಿರಲಿಲ್ಲ. ಈಗ ಉತ್ಕೃಷ್ಟ ದರ್ಜೆ ಸೌಲಭ್ಯದೊಂದಿಗೆ ಮುನ್ನಡೆಯುತ್ತಿದೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿಯರು ಐಎಎಸ್, ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪಾಕಿಸ್ತಾನವೂ ಸೇರಿ ವಿಶ್ವದ ವಿವಿಧ ದೇಶದ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಣ್ಣು ಹುಟ್ಟಿದಾಗ ತಂದೆ-ತಾಯಿ, ನಂತರ ಪತಿ ಹಾಗೂ ವೃದ್ಧಾಪ್ಯದಲ್ಲಿ ಮಕ್ಕಳ ಆಸರೆಯಲ್ಲೇ ಬಾಳಬೇಕಾದ ದುರ್ಗತಿ ನಮ್ಮ ಸಮಾಜಕ್ಕೆ ಬಂದಿದೆ. ಆಕೆ ಉನ್ನತ ಶಿಕ್ಷಣ ಪಡೆದರೆ ಯಾರನ್ನೂ ಅವಲಂಬಿಸದೇ ಸುಖವಾಗಿ ಬಾಳಬಹುದು ಎಂದ ಅವರು, ಈ ಶಾಲೆಯಲ್ಲಿ ಕಲಿತ ಪ್ರತಿ ಹೆಣ್ಣು ತನ್ನ ಬದುಕಲ್ಲಿ ಸ್ವಾವಲಂಬಿಯಾಗಿ ನಿಂತಿದ್ದಾಳೆ ಎಂದರು.

ಮುಂದಿನ ದಿನಗಳಲ್ಲಿ ಪ್ರಧಾನಿ ಅವರನ್ನು ಶಾಲೆಗೆ ಆಹ್ವಾನಿಸಲಾಗುವುದು ಎಂದು ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿ ಅಧ್ಯಕ್ಷೆ ಡಾ. ದಾಕ್ಷಾಯಿಣಿ ಜಂಗಮಶೆಟ್ಟಿ ಹೇಳಿದರು.

ಶೈಕ್ಷಣಿಕ ಸಾಧನೆ ಮತ್ತು ಕ್ರೀಡಾಕೂಟಗಳಲ್ಲಿ ವಿಜೇತರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಡಾ.ವಿಜಯ ಸಂಕೇಶ್ವರ ಅವರು ಸ್ಟ್ಟೂಡೆಂಟ್ ನ್ಯೂಸ್ ಲೆಟರ್ ಸಂಚಿಕೆ ಬಿಡುಗಡೆಗೊಳಿಸಿದರೆ, ಶ್ರೀಮತಿ ಲಲಿತಾ ಸಂಕೇಶ್ವರ ಪಾಸಿಟಿವ್ ಡಿಸಿಪ್ಲಿನ್ ಕಿರುಹೊತ್ತಿಗೆ ಬಿಡುಗಡೆಗೊಳಿಸಿದರು. ಶಾಲೆ ವತಿಯಿಂದ ಸಂಕೇಶ್ವರ ದಂಪತಿಯನ್ನು ಆತ್ಮೀಯವಾಗಿ ಸತ್ಕರಿಸಲಾಯಿತು.

ಸಂಸ್ಥೆ ಚೇರ್ಮನ್ ಡಾ. ಮಹೇಂದ್ರ ಕಂಠಿ, ಉಪಾಧ್ಯಕ್ಷ ಮಹಾಂತಪ್ಪ ಪಟ್ಟಣಶೆಟ್ಟರ್, ಸದಸ್ಯ ಕಾರ್ಯದರ್ಶಿ ಮಹಾಂತೇಶ ಕೌಜಲಗಿ, ಪ್ರಭಾರ ಪ್ರಾಚಾರ್ಯು ಕಮಲಾ ನಾಯಕ ಉಪಸ್ಥಿತರಿದ್ದರು. ಆಕರ್ಷಕ ಪರೇಡ್

ಸಭಾ ಕಾರ್ಯಕ್ರಮಕ್ಕೂ ಮುನ್ನ ಶಾಲೆಯ ಕವಾಯತು ಮೈದಾನದಲ್ಲಿ ವಿದ್ಯಾರ್ಥಿನಿಯರಿಂದ ಆಕರ್ಷಕ ಪರೇಡ್ ನಡೆಯಿತು. ಡಾ.ವಿಜಯ ಸಂಕೇಶ್ವರ ಅವರು ತೆರೆದ ಜೀಪ್​ನಲ್ಲಿ ತೆರಳಿ ಕೆಡೆಟ್​ಗಳಿಂದ ಗೌರವ ವಂದನೆ ಸ್ವೀಕರಿಸಿದರು. ಆಕರ್ಷಕ ಪರೇಡ್ ನೆರೆದವರ ಮನಸೂರೆಗೊಂಡಿತು. ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದ ಯೋಗದ ವಿವಿಧ ಭಂಗಿಗಳು, ಕುದುರೆ ಸವಾರಿ, ಕೈ ಮತ್ತು ತಲೆಯಿಂದ ಇಟ್ಟಿಗೆ ಒಡೆಯುವ ಕರಾಟೆ ಪಟ್ಟು, ಡಂಬಲ್ಸ್ ನೃತ್ಯ, ಓಡಿಬಂದು ಬೆಂಕಿಯ ರಿಂಗ್​ನಲ್ಲಿ ಜಿಗಿಯುವ ಕಸರತ್ತು, ಸ್ಕಿಪ್ಪಿಂಗ್ ಗಮನಸೆಳೆದವು.

Leave a Reply

Your email address will not be published. Required fields are marked *

Back To Top