Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಬಾಡಿಗೆಮನೆ ಹುಡುಕೋದು ಹೇಗೆ?

Saturday, 09.09.2017, 3:00 AM       No Comments

| ಶ್ರುತಿ ಜೈನ್ ರೆಂಜಾಳ, ಪತ್ರಿಕೋದ್ಯಮ ವಿಭಾಗ, ಎಸ್.ಡಿ.ಎಂ ಕಾಲೇಜು, ಉಜಿರೆ

ಉದ್ಯೋಗ ಅರಸಿ ಬೆಂಗಳೂರಿಗೆ ಬರುವವರಿಗೆ ಬಾಡಿಗೆ ಮನೆಯೇ ಪುಟ್ಟ ಪ್ರಪಂಚ. ದೊಡ್ಡ ನಗರದಲ್ಲಿ ಬಾಡಿಗೆ ಮನೆಗಳಿಗೆ ಕೊರತೆ ಇಲ್ಲವಾದರೂ, ಅಪೇಕ್ಷೆಗೆ ತಕ್ಕಂತಹ ಮನೆ ಹುಡುಕುವುದು ಸವಾಲಿನ ಕೆಲಸ. ಮನೆ ಚೆನ್ನಾಗಿದ್ದರೆ, ಏರಿಯಾ ಸರಿಯಿಲ್ಲ, ಎಲ್ಲವೂ ಅಚ್ಚು ಕಟ್ಟಿದ್ದರೆ, ವಿಪರೀತ ಬಾಡಿಗೆ… ಇನ್ನು ಅಡ್ವಾನ್ಸ್​ನ ಕಥೆ ಹೇಳುವುದೇ ಕಷ್ಟ. ಹೀಗೆ ಬೆಂಗಳೂರಲ್ಲಿ ಬಾಡಿಗೆ ಮನೆ ಹುಡಿಕಿದವರೆಲ್ಲ ಅದೊಂದು ನರಕಯಾತನೆ ಎಂದು ಬಣ್ಣಿಸದೇ ಇರಲಾರರು. ರಾಜಧಾನಿಯಲ್ಲಿ ಮನೆ ಬಾಡಿಗೆ ಪಡೆಯುವ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿವೆ.

ಬಾಡಿಗೆಮನೆ ಹೇಗಿದ್ದರೆ ಚಂದ?

ಬಾಡಿಗೆಮನೆಯನ್ನು ಆಯ್ಕೆ ಮಾಡುವಾಗ ಮಕ್ಕಳ ಶಾಲೆ ಅಥವಾ ಕೆಲಸದ ಜಾಗಕ್ಕೆ ಸಮೀಪ ಇರುವ ಮನೆಯ ಆಯ್ಕೆ ಉತ್ತಮ. ದಿನಬಳಕೆಯ ವಸ್ತುಗಳು ಸಮೀಪದಲ್ಲೇ ದೊರೆಯುವಂತಿದ್ದರೆ ಉತ್ತಮ. ಉಸಿರುಗಟ್ಟುವ, ಗಾಳಿ-ಬೆಳಕು ಸಂಚಾರವಿಲ್ಲದ ಮನೆಯಿಂದ ದೂರವಿರಿ. ಪ್ರಮುಖವಾಗಿ ಸಾಕಷ್ಟು ಬೆಳಕು ಇರುವ ಮನೆಗಳ ಆಯ್ಕೆ ಆದ್ಯತೆಯಾಗಿರಬೇಕು. ಮನೆಯ ವಾತಾವರಣ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ, ಕೆಲಸ ಮುಗಿಸಿ ವಾಪಸ್ ಮನೆಗೆ ಬಂದಾಗ ಇಂತಹ ವಾತಾವರಣ ಇದ್ದರೆ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ರ್ಪಾಂಗ್ ವ್ಯವಸ್ಥೆ ಇಂದಿನ ಮೂಲ ಅವಶ್ಯಕತೆ. ಹೀಗಾಗಿ ಕನಿಷ್ಠ ಬೈಕ್ ರ್ಪಾಂಗ್​ಗೆ ಅವಕಾಶ ಇರುವ ಮನೆಗಳನ್ನೇ ಆಯ್ಕೆ ಮಾಡಿಕೊಳ್ಳಿ. ಅದರಲ್ಲೂ ಒಂಟಿ ಹುಡುಗಿಯರು ಮನೆ ಹುಡುಕುವಾಗ ಮೊದಲು ನೋಡಬೇಕಾದದ್ದು ಸೇಫ್ಟಿ. ಜತೆಗೆ ಅಕ್ಕಪಕ್ಕದ ಮನೆಯಲ್ಲಿ ಯಾರಿದ್ದಾರೆ? ಎಂಬುದನ್ನೂ ಸೂಚ್ಯವಾಗಿ ತಿಳಿದುಕೊಳ್ಳಿ. ಮನೆ ಇರುವ ಪ್ರದೇಶದಲ್ಲಿ ಯಾವ ಭಾಷೆಯ ಜನರಿದ್ದಾರೆ ಎಂಬ ಬಗ್ಗೆಯೂ ಗಮನ ಹರಿಸುವುದು ಸೂಕ್ತ.

ಎಚ್ಚರಿಕೆಯ ಸಂವಹನ ಇರಲಿ

ಹಳ್ಳಿಗರು ಇಂದಿಗೂ ನೆರೆ ಹೊರೆಯವರ ಜೊತೆ ಒಳ್ಳೆಯ ಒಡನಾಟ ಇಟ್ಟುಕೊಂಡಿರುತ್ತಾರೆ. ಊರಿನಲ್ಲಿ ಯಾರ ಮನೆ ಎಲ್ಲಿದೆ? ಎನ್ನುವ ಸಂಪೂರ್ಣ ಮಾಹಿತಿ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಆದರೆ ನಗರಗಳಲ್ಲಿ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದೇ ತಿಳಿದಿರುವುದಿಲ್ಲ. ಒಂದರ್ಥದಲ್ಲಿ ನಗರಗಳಲ್ಲಿ ಇಂದಿನ ದಿನಕ್ಕೆ ಆ ರೀತಿಯ ಜೀವನ ಸಮಂಜಸ ಕೂಡ. ಪಕ್ಕದ ಮನೆಯವರೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತು-ಕತೆಯಿದ್ದರೆ ಉತ್ತಮ. ಇಲ್ಲದಿದ್ದರೆ ಅನಗತ್ಯ ವಿಚಾರಗಳ ಚರ್ಚೆಯಿಂದ ಮನಸ್ತಾಪಗಳುಂಟಾಗುವ ಸಾಧ್ಯತೆಗಳು ಹೆಚ್ಚು.

ಮಾಲೀಕರೊಂದಿಗೆ ಸಂಪರ್ಕದಲ್ಲಿರಿ

ಮನೆ ಮಾಲೀಕರ ಷರತ್ತುಗಳನ್ನು ಮುರಿಯುವ ಯತ್ನ ಒಳ್ಳೆಯದಲ್ಲ. ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ಸುರಕ್ಷಿತ ದಾರಿ. ಮನೆ ಬಾಡಿಗೆಯನ್ನು ಕ್ಲಪ್ತ ಸಮಯಕ್ಕೆ ಸಲ್ಲಿಸಿ. ಸಮಯಕ್ಕೆ ಸರಿಯಾಗಿ ಮಾಲೀಕರೊಂದಿಗೆ ಮಾಡಲಾಗಿರುವ ಕರಾರು ಪತ್ರವನ್ನು ಪುನರ್​ನವೀಕರಿಸಿ. ಮನೆ ಖಾಲಿ ಮಾಡುವುದಾದರೆ, ಒಂದಷ್ಟು ಸಮಯ ಮುಂಚಿತವಾಗಿಯೇ ತಿಳಿಸಿ.

ಬಾಡಿಗೆದಾರರ ಜವಾಬ್ದಾರಿಗಳೇನು?

ಮನೆ ಒಳಗೆ ಹಾಗೂ ಹೊರಾಂಗಣವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಇಂತಹ ಅಭ್ಯಾಸ ಆರೋಗ್ಯಕ್ಕೂ ಉತ್ತಮ. ಒಂದು ವೇಳೆ ಮನೆಗೆ ಸಂಬಂಧಪಟ್ಟ ವಸ್ತುಗಳು ದುರಸ್ತಿಗೆ ಬಂದರೆ ಕೂಡಲೇ ಮನೆ ಮಾಲೀಕರ ಗಮನಕ್ಕೆ ತನ್ನಿ. ವಿದ್ಯುತ್, ನೀರಿನ ಬಳಕೆ ಮಿತವಾಗಿದ್ದರೆ ನಮ್ಮ ಜೇಬಿನ ಆರೋಗ್ಯವೂ ಚೆನ್ನಾಗಿರುತ್ತದೆ. ಮಾಲೀಕರಿಗೂ ರಗಳೆ-ಕಿರಿಕಿರಿಗಳಿರುವುದಿಲ್ಲ. ಇದರೊಂದಿಗೆ ಎಲ್ಲರೊಂದಿಗೂ ಆರೋಗ್ಯಕರ ಸಂಬಂಧವನ್ನು ಬೆಳೆಸಿಕೊಂಡು, ನಮ್ಮ ಇತಿಮಿತಿಯೊಳಗೆ ಜೀವಿಸಲು ಕಲಿತರೆ ನೆಮ್ಮದಿಯ ಕಿರಿಕಿರಿಮುಕ್ತ ಬಾಡಿಗೆದಾರರಾಗಿರಬಹುದು.

ಇವಿಷ್ಟು ಇದ್ದರೆ ಒಳ್ಳೆಯದು

# ಫರ್ನಿಚರ್​ಗಳು ಅಳವಡಿಸಿರುವ ಮನೆಗಳಿಗೆ ಆದ್ಯತೆ ನೀಡಿ

# ಫ್ಯಾನ್, ಲೈಟ್ ಇತ್ಯಾದಿ ವಸ್ತುಗಳ ಅಳವಡಿಸಿವೆಯೇ ಪರಿಶೀಲಿಸಿ

# ಬಿಲ್ಟ್ ಇನ್ ವಾರ್ಡ್​ರೋಬ್​ಗಳು ಇದ್ದರೆ ಉತ್ತಮ

# ಬ್ಯಾಚುಲರ್ಸ್​ಗಳಾದಲ್ಲಿ ಟೆರೇಸ್ ಅಥವಾ ಕೊನೇ ಮಹಡಿ ಆದ್ಯತೆ ನೀಡುವುದು ಖುಷಿ ನೀಡುತ್ತದೆ.

# ಬಾಡಿಗೆ ಮನೆಯಾದರೂ ಸಮಯಕ್ಕೆ ಸರಿಯಾಗಿ ಸುಣ್ಣ ಬಣ್ಣ ಹೊಡೆಸಲು ಮಾಲಿಕರಿಗೆ ತಿಳಿಸಿ

# ಮಾಲಿಕರೊಂದಿಗೆ ಅನಗತ್ಯ ವಾಕ್ಸಮರ ಬೇಡ

# ವಿದ್ಯುತ್ ಹಾಗೂ ನೀರಿನ ಬಿಲ್ ಪಾವತಿಗೆ ಬಗ್ಗೆ ಮೊದಲೇ ಮಾಲಿಕರೊಂದಿಗೆ ಮಾತುಕತೆ ನಡೆಸಿ

 

ಷರತ್ತುಗಳು

ಬಾಡಿಗೆ ಮನೆ ಸಿಕ್ಕುವುದೇ ಪ್ರಯಾಸದ ಕೆಲಸವಾದರೆ, ಮನೆ ಸಿಕ್ಕ ಬಳಿಕ ಶುರುವಾಗುವುದೇ ಅಸಲಿ ಕಥೆ. ಮನೆ ಮಾಲೀಕರ ಷರತ್ತುಗಳೆಂಬ ಅಸ್ತ್ರಗಳನ್ನು ಎದುರಿಸುತ್ತ ಬದುಕುವ ಬವಣೆ ಬಾಡಿಗೆದಾರರದ್ದಾಗುತ್ತದೆ. ಹಾಗೆಂದು ಅದು ತಪ್ಪು ಅಂತೇನಲ್ಲ. ಪ್ರತಿಯೊಬ್ಬರಿಗೂ ಅವರವರ ಮನೆ ಮೇಲೆ ಕಾಳಜಿ-ಪ್ರೀತಿ ಇದ್ದೇ ಇರುತ್ತದೆ. ಆದರೆ ಆ ಕಾಳಜಿ ಬಾಡಿಗೆದಾರರಿಗೆ ಕಿರಿಕಿರಿ ಉಂಟಾಗಬಾರದು. ನೀರು ಜಾಸ್ತಿ ಬಳಸುವುದು ಕಡ್ಡಾಯ ನಿಷಿದ್ಧ. ನಾಯಿ-ಬೆಕ್ಕು ಸಾಕಬಾರದು.ಮನೆಗೆ ಬರುವ ಸಂಬಂಧಿಕರು, ಸ್ನೇಹಿತರಿಗೆ ರಾತ್ರಿ ಉಳಿದುಕೊಳ್ಳಬಾರದು. ಮನೆ ಗೋಡೆಗೆ ಮೊಳೆ ಹೊಡೆಯಬಾರದು, ಪೋಸ್ಟರ್ ಅಂಟಿಸಬಾರದು… ಹೀಗೆ ಅನೇಕ ಷರತ್ತುಗಳಿಗೆ ಒಪ್ಪಿಕೊಳ್ಳಬೇಕಾಗುತ್ತದೆ.

Leave a Reply

Your email address will not be published. Required fields are marked *

Back To Top