Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಬಾಕ್ಸರ್ ದರ್ಶನ್?

Wednesday, 30.08.2017, 3:03 AM       No Comments

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಸದ್ಯ 50ನೇ ಚಿತ್ರ ‘ಕುರುಕ್ಷೇತ್ರ‘ದ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಹೈದರಾಬಾದ್​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಹಾಕಿರುವ ಭರ್ಜರಿ ಸೆಟ್​ಗಳ ನಡುವೆ ಚಿತ್ರದ ಕೆಲಸಗಳು ನಡೆಯತ್ತಿವೆ. ಇತ್ತ ಗಾಂಧಿನಗರದಲ್ಲಿ ದರ್ಶನ್ ಅವರ 51ನೇ ಚಿತ್ರದ ಬಗ್ಗೆ ಕುತೂಹಲಕಾರಿ ವಿಚಾರಗಳು ಹೊರಬೀಳುತ್ತಿವೆ. ನಿರ್ದೇಶಕ ಪವನ್ ಒಡೆಯರ್ ಆಕ್ಷನ್-ಕಟ್ ಹೇಳಲಿರುವ ಈ ಚಿತ್ರಕ್ಕೆ ‘ಒಡೆಯರ್’ ಎಂಬ ಟೈಟಲ್ ಫಿಕ್ಸ್ ಆಗಿದೆ. ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ದರ್ಶನ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ದರ್ಶನ್ ಕರಿಯರ್​ನಲ್ಲೇ ಇಂಥದ್ದೊಂದು ವಿಶಿಷ್ಟವಾದ ಪಾತ್ರ ಮಾಡುತ್ತಿ ರುವುದು ಮತ್ತು ಕ್ರೀಡೆಯನ್ನಾಧರಿಸಿದ ಸಿನಿಮಾ ಇದೇ ಮೊದಲು ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಭರ್ಜರಿಯಾದ ಬಾಕ್ಸಿಂಗ್ ದೃಶ್ಯಗಳಿರಲಿದ್ದು, ಕ್ಲೈಮ್ಯಾಕ್ಸ್ ದೃಶ್ಯವನ್ನು ಅದ್ದೂರಿಯಾಗಿ ಚಿತ್ರೀಕರಿಸುವ ಪ್ಲಾ್ಯನ್ ಹಾಕಿಕೊಂಡಿದೆಯಂತೆ ಚಿತ್ರತಂಡ. ಸದ್ಯ ದರ್ಶನ್ ‘..ಕುರುಕ್ಷೇತ್ರ’ದಲ್ಲಿ ಬಿಜಿ ಆಗಿದ್ದಾರೆ. ಅದು ಮುಗಿಯುತ್ತಿದ್ದಂತೆಯೇ ‘ಒಡೆಯರ್’ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಬಾಕ್ಸರ್ ಪಾತ್ರ ಮಾಡುತ್ತಿರುವುದರಿಂದ ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಅವರು ಮಾಡಿಕೊಳ್ಳಲಿದ್ದಾರೆ. ಬಾಕ್ಸಿಂಗ್ ಇದೆ ಎಂದಮಾತ್ರಕ್ಕೆ ಚಿತ್ರದಲ್ಲಿ ಲವ್​ಸ್ಟೋರಿ ಇಲ್ಲವೆಂದಲ್ಲ. ಒಂದು ಮುದ್ದಾದ ಪ್ರೇಮಕಥೆ ಸಿನಿಮಾದಲ್ಲಿರಲಿದ್ದು, ದರ್ಶನ್ ಜತೆ ಇಬ್ಬರು ನಾಯಕಿಯರು ತೆರೆಹಂಚಿಕೊಳ್ಳಲಿದ್ದಾರೆ ಎನ್ನುವುದು ವಿಶೇಷ. ಅಂದಹಾಗೆ, ಆ ಇಬ್ಬರು ನಟಿಯರು ಯಾರು ಎಂಬ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಎಲ್ಲ ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಅಥವಾ ಜನವರಿಯಲ್ಲಿ ಚಿತ್ರ ಸೆಟ್ಟೇರಲಿದೆ.

 

Leave a Reply

Your email address will not be published. Required fields are marked *

Back To Top