Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಬಹುಸಂಖ್ಯಾತ ವೀರಶೈವ ಲಿಂಗಾಯತರಿಗೆ ಅನ್ಯಾಯ

Wednesday, 27.12.2017, 3:01 AM       No Comments

ರಾಯಚೂರು: ಅಲ್ಪಸಂಖ್ಯಾತರ ಹೆಸರಿನಲ್ಲಿ ಬಹುಸಂಖ್ಯಾತರಾದ ವೀರಶೈವ ಲಿಂಗಾಯತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದ್ದಾರೆ. ಮಂಗಳವಾರ ಕಿಲ್ಲೇ ಬೃಹನ್ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಧರ್ಮ ಕುರಿತು ಅಲ್ಪಸಂಖ್ಯಾತರ ಆಯೋಗಕ್ಕೆ ಶಿಫಾರಸು ಮಾಡಲು ತಂಡ ರಚನೆ ಸಾಂವಿಧಾನಿಕವಲ್ಲ. ಸಮುದಾಯದ ವ್ಯಕ್ತಿಗಳು, ಧರ್ಮಪೀಠಗಳು, ಮಹಾಸಭಾವನ್ನು ಸಂರ್ಪಸದೆ ಸಿಎಂ ಆತುರದ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಡಿ.27ರಂದು ಶಿವಯೋಗಿ ಮಂದಿರದಲ್ಲಿ ಪಂಚಪೀಠದ ಜಗದ್ಗುರುಗಳು ಹಾಗೂ ವೀರಕ್ತಮಠದ ಜಗದ್ಗುರುಗಳು, ಸಮುದಾಯದ ಮುಖಂಡರು ಸೇರಿ ಒಂದು ನಿರ್ಧಾರಕ್ಕೆ ಬಂದು ವಿವಾದಕ್ಕೆ ತೆರೆ ಎಳೆಯಲಾಗುವುದು ಎಂದರು.

ಬಸವರಾಜ ಹೊರಟ್ಟಿ ಹಾಗೂ ಎಂ.ಬಿ. ಪಾಟೀಲ್ ಅವರ ಪಂಚಪೀಠಗಳಿಗೆ ಜನ ಬೆಂಬಲ ಕಡಿಮೆಯಾಗಿದೆ ಎನ್ನುವ ಹೇಳಿಕೆ ತಪ್ಪು. ಹಿಂದಿಗಿಂತಲೂ ಈಗ ಹೆಚ್ಚಿಗೆ ಜನ ಬೆಂಬಲವಿದೆ ಎಂದ ಅವರು, ವಿಜಯಪುರದ ದಲಿತ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಘಟನೆ ದುರದೃಷ್ಟಕರ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಬಾಲಕಿ ಕುಟುಂಬಕ್ಕೆ ಅಗತ್ಯ ನೆರವು ನೀಡಬೇಕು ಎಂದು ತಿಳಿಸಿದರು. ಧರ್ಮಕ್ಕೆ ರಾಜಕೀಯ ತರಬೇಡಿ

ಗದಗ: ಧರ್ಮದ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಧಾರ್ವಿುಕ ವಿಚಾರದಲ್ಲಿ ಜನ ಸೇರಿಸುವುದು ದೊಡ್ಡದಲ್ಲ. ಒಂದೇ ಸೂರಿನಡಿ ವೀರಶೈವ ಮತ್ತು ಲಿಂಗಾಯತ ಎರಡು ಧರ್ಮ ಸೇರುವುದು ಅಸಾಧ್ಯ. ವೀರಶೈವವು ಶೈವದ ಭಾಗ ಎಂದು ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಆರಂಭದಿಂದಲೂ ಅಪರಿಚಿತರಿಂದ ಜೀವ ಬೆದರಿಕೆ ಕರೆಗಳು ಹಾಗೂ ಪತ್ರಗಳು ಬರುತ್ತಿವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ವೀರಶೈವ ಲಿಂಗಾಯತ ಸಮಾಜಕ್ಕೆ ಸರ್ಕಾರ ಪ್ರತ್ಯೇಕ ಮೀಸಲು ನೀಡಲು ಬರುವುದಿಲ್ಲ. ಹಿಂದುಳಿದ ವರ್ಗಗಳ ಆಯೋಗಕ್ಕೆ ಅರ್ಜಿ ನೀಡಿದರೆ ಆಯೋಗ ಪರಿಶೀಲಿಸಿ ವರದಿ ನೀಡಲಿದೆ.

| ಸಿದ್ದರಾಮಯ್ಯ ಮುಖ್ಯಮಂತ್ರಿ

ಪ್ರತ್ಯೇಕ ಧರ್ಮ ವಿಚಾರವಾಗಿ ಮುಕ್ತ ಚರ್ಚೆ ಬಗ್ಗೆ ಮಾಜಿ ಸಚಿವರ ಪ್ರಸ್ತಾಪವನ್ನು ನಾವು ಒಪ್ಪಿಕೊಂಡಿದ್ದು, ಅವರೇ ಹೇಳಿರುವಂತೆ ಡಿ.30 ಅಥವಾ 31ಕ್ಕೆ ಸಮಯ ನಿಗದಿ ಮಾಡಲಿ. ಪಂಚ ಪೀಠಾಧೀಶರು, ವಿರಕ್ತ ಮಠಾಧೀಶರು, ಸಾಹಿತಿಗಳು ಸೇರಿ ಬರುತ್ತೇವೆ. ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡುವವರೂ ಬರಲಿ.

| ಬಾಳೆಹೊಸೂರ ಶ್ರೀ ದಿಂಗಾಲೇಶ್ವರ ಸ್ವಾಮೀಜಿ

Leave a Reply

Your email address will not be published. Required fields are marked *

Back To Top