Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ಬಳ್ಳಾರಿಯಲ್ಲಿ ಚತುರ್ವಳಿ, ಶಿವಮೊಗ್ಗದಲ್ಲಿ ತ್ರಿವಳಿ ಜನನ!

Sunday, 30.07.2017, 3:00 AM       No Comments

ಶಿವಮೊಗ್ಗ:  ಸಂತಾನಭಾಗ್ಯ ಇಲ್ಲ ಎಂದು ಕೊರಗುತ್ತಿದ್ದ ಮಹಿಳೆಗೆ ತ್ರಿವಳಿಗಳ ಭಾಗ್ಯ! ಹೌದು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು ಶುಕ್ರವಾರ ಮೂರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಶಿಶುಗಳು ಆರೋಗ್ಯದಿಂದಿವೆ. ತೀರ್ಥಹಳ್ಳಿ ತಾಲೂಕಿನ ಹೊನ್ನೆಕೆರೆ ಗ್ರಾಮದ ಸುಧಾಕರ್ ಶೆಟ್ಟಿ ಹಾಗೂ ಉಷಾ ದಂಪತಿಗೆ ಜನಿಸಿವೆ. ಮೂರು ಶಿಶುಗಳಲ್ಲಿ ಎರಡು 2.5 ಕೆಜಿ ಇದ್ದರೆ, ಮತ್ತೊಂದು 1.5 ಕೆಜಿ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೂರೂ ಶಿಶುಗಳನ್ನು ಇನ್​ಕ್ಯುಬೇಟರ್​ನಲ್ಲಿಡಲಾಗಿದೆ. ಒಂದು ತಿಂಗಳಿನಿಂದ ಉಷಾ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

 

ಅಪರೂಪದ ಪ್ರಕರಣ

ಸಾಮಾನ್ಯವಾಗಿ 6400ರಲ್ಲಿ ಒಬ್ಬರಿಗೆ ತ್ರಿವಳಿ ಜನನವಾಗುತ್ತವೆ. ಆದರೆ, 4 ಮಕ್ಕಳ ಜನನ ತುಂಬಾ ಅಪರೂಪ. ಇದು 6 ಲಕ್ಷದಲ್ಲಿ ಒಂದು ಪ್ರಕರಣವಾಗಿದೆ. ಒಂದಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ಅವಧಿಪೂರ್ವ ಹೆರಿಗೆ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ಹಿನ್ನೆಲೆಯಲ್ಲಿ ಮೊದಲಿನಿಂದಲೂ ಸೂಕ್ತ ಚಿಕಿತ್ಸೆ ಪಡೆಯುವಂತೆ ಗರ್ಭಿಣಿ ಹಾಗೂ ಕುಟುಂಬದವರಿಗೆ ಸೂಚಿಸಲಾಗಿತ್ತು. ಮೂರು ವಾರಗಳಿಂದ ಗರ್ಭಿಣಿಯನ್ನು ವಿಮ್ಸ್​ನಲ್ಲಿ ದಾಖಲು ಮಾಡಲಾಗಿತ್ತು ಎಂದು ವಿಮ್್ಸ ಸಹ ಪ್ರಾಧ್ಯಾಪಕ ಡಾ.ರಾಮರಾಜ್ ತಿಳಿಸಿದರು.

 

ನಾಲ್ಕು ಮಕ್ಕಳ ಹೆತ್ತ ತಾಯಿ!

ಬಳ್ಳಾರಿ: ತಾಲೂಕಿನ ಎಮ್ಮಿಗನೂರು ಗ್ರಾಮದ ಹುಲಿಗೆಮ್ಮ, ವಿಮ್್ಸ ಆಸ್ಪತ್ರೆಯಲ್ಲಿ ಗುರುವಾರ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅದರಲ್ಲಿ ಎರಡು ಹೆಣ್ಣು ಮತ್ತು ಎರಡು ಗಂಡು ಮಕ್ಕಳು. ಶಿಶುಗಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಶಿಶುಗಳ ತೂಕ ಸಾಮಾನ್ಯಕ್ಕಿಂತ ಕಡಿಮೆ ಇರುವುದರಿಂದ ನವಜಾತ ಮಕ್ಕಳ ತೀವ್ರ ನಿಗಾ ಘಟಕ(ಎನ್​ಐಸಿಯು)ದಲ್ಲಿರಿಸಲಾಗಿದೆ. ಎರಡು ಮಕ್ಕಳು ತಲಾ 1.2 ಕಿಲೋ ಹಾಗೂ ಮತ್ತೆರಡು ಮಕ್ಕಳು ತಲಾ ಒಂದು ಕಿಲೋ ಇವೆ.

 

Leave a Reply

Your email address will not be published. Required fields are marked *

Back To Top