Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ಬನ್ನಿ… ಬಾಯಿ ಖಾರ ಮಾಡೋಣ

Wednesday, 11.07.2018, 3:02 AM       No Comments

ಸ್ಪರ್ಧೆಯಲ್ಲಿ ಗೆಲ್ಲಲೇಬೇಕು ಎಂಬ ದೃಢಸಂಕಲ್ಪ ಮಾಡಿದವರು, ಅದಕ್ಕಿರುವ ನಿಯಮಗಳನ್ನು ಅನುಸರಿಸಲು ಹಿಂದೆ-ಮುಂದೆ ನೋಡುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿರುವ ಈ ಘಟನೆ ಚೀನಾದಿಂದ ವರದಿಯಾಗಿದೆ.

ಮಧ್ಯ ಚೀನಾದಲ್ಲಿ ಹುನಾನ್ ಎಂಬ ಪ್ರಾಂತ್ಯವಿದ್ದು, ಇಲ್ಲಿನವರಿಗೆ ಸಾಂಬಾರ ಪದಾರ್ಥಗಳೆಂದರೆ ಬಲು ಇಷ್ಟವಂತೆ. ಪ್ರತಿವರ್ಷ ಇಲ್ಲಿ ಮೆಣಸಿನಕಾಯಿ ಉತ್ಸವ ನಡೆಯುವುದು ವಾಡಿಕೆ. ಅದರ ಅಂಗವಾಗಿ ಈ ಬಾರಿ ಮೆಣಸಿನಕಾಯಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಭಾಗವಹಿಸಿದ್ದ 10 ಸ್ಪರ್ಧಿಗಳ ತಟ್ಟೆಯಲ್ಲೂ ‘ಟಬಾಸ್ಕೊ’ ಪ್ರಭೇದದ ಬರೋಬ್ಬರಿ 50 ಕೆಂಪು ಮೆಣಸಿನಕಾಯಿಗಳನ್ನು ಪೇರಿಸಿಡಲಾಗಿತ್ತು. ‘ಓಕೆ, ಸ್ಟಾರ್ಟ್’ ಎಂಬ ಸೂಚನೆ ಸಿಗುತ್ತಿದ್ದಂತೆ, ಈ ಉರಿಗಾಯಿಗೆ ಬಾಯಿಹಾಕಿದ ಸ್ಪರ್ಧಿಗಳು ಕಣ್ಣಿನಲ್ಲಿ, ಮೂಗಿನಲ್ಲಿ, ಮುಖದಲ್ಲಿ ನೀರು ಸುರಿಸುತ್ತ ಮೆಣಸಿನಕಾಯಿ ಅಗಿಯತೊಡಗಿದರು. ಆ ಪೈಕಿ, ಟ್ಯಾಂಗ್ ಶುವೈಹುವೈ ಎಂಬ ಬಾಲಕ ಕೇವಲ 68 ಸೆಕೆಂಡುಗಳಲ್ಲಿ ತನ್ನ ತಟ್ಟೆಯನ್ನೆಲ್ಲ ಖಾಲಿ ಮಾಡಿದ, ಅಂದ್ರೆ ಬರೋಬ್ಬರಿ 50 ಮೆಣಸಿನಕಾಯಿಗಳನ್ನು ‘ಗುಳುಂ’ ಮಾಡಿದ! ಈ ಪರಾಕ್ರಮಕ್ಕೆಂದು ಅವನಿಗೆ ದಕ್ಕಿದ ಬಹುಮಾನ- 3 ಗ್ರಾಂ ತೂಗುವ 24 ಕ್ಯಾರಟ್ ಚಿನ್ನದ ನಾಣ್ಯ! ಹಬ್ಬ-ಹರಿದಿನ, ಉತ್ಸವ-ಸಂಭ್ರಮಾಚರಣೆಗಳ ಸಂದರ್ಭದಲ್ಲಿ, ‘ಬನ್ನಿ, ಬಾಯಿಸಿಹಿ ಮಾಡೋಣ’ ಎಂದು ಆಹ್ವಾನಿಸಿ ಸಿಹಿತಿನಿಸು ಬಾಯಿಗಿಟ್ಟು ನಲಿಯುವುದು ವಾಡಿಕೆ. ಆದರೆ ಹೇಳಿಕೇಳಿ ಅದು ಮೆಣಸಿನಕಾಯಿ ಉತ್ಸವವಾದ್ದರಿಂದ, ‘ಬನ್ನಿ, ಬಾಯಿ ಖಾರ ಮಾಡೋಣ’ ಎನ್ನುತ್ತ ಮೆಣಸನ್ನೇ ಬಾಯಿಗಿಟ್ಟುಕೊಳ್ಳೋ ಪರಿಸ್ಥಿತಿ ಒದಗಿತೇನೋ?!

Leave a Reply

Your email address will not be published. Required fields are marked *

Back To Top